ಸಿಂದಗಿ: ಸಾಧನೆ ಮಾಡಬೇಕಾದರೆ ತಪಸ್ಸು ಮುಖ್ಯ. ತಪಸ್ಸು ಎಂದರೆ ನಂಬಿಕೆ. ವಿದ್ಯಾರ್ಥಿಗಳು ಶ್ರದ್ಧೆಯಿಂದ ಅಧ್ಯಯನ ಮಾಡಬೇಕು. ಅಂದಾಗ ಮಾತ್ರ ಏನಾದರೂ ಸಾಧಿಸಲು ಸಾಧ್ಯ ಎಂದು ಕಲಬುರ್ಗಿ ಕೇಂದ್ರೀಯ ವಿಶ್ವವಿದ್ಯಾಲಯ ಕುಲಸಚಿವ ಡಾ.ಆರ್.ಆರ್. ಬಿರಾದಾರ ಹೇಳಿದರು.
ಪಟ್ಟಣದ ಪಿ.ಇ.ಎಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಂಡ ಪಠ್ಯಪೂರಕ ಚಟುವಟಿಕೆಗಳ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜೀವನದಲ್ಲಿ ಸಣ್ಣಪುಟ್ಟ ಗುರಿಗಳು ಉನ್ನತ ಮಟ್ಟದ ಗುರಿಗೆ ದಾರಿಯಾಗುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಗುರಿಗಳತ್ತ ಹೆಜ್ಜೆ ಹಾಕಬೇಕು. ಜೀವನದಲ್ಲಿ ಗುರಿ ಮುಟ್ಟಬೇಕಾದರೆ ಹಲವು ದಾರಿಗಳಿವೆ. ಏನೇ ಅಡೆತಡೆಗಳು ಬಂದರೂ ಸಹ ಯಶಸ್ಸಿನ ದಡ ಸೇರುತ್ತೇನೆ ಎಂಬ ದೃಢ ನಿರ್ಧಾರ ನಿಮ್ಮಲ್ಲಿ ಬೇಕಾಗುತ್ತದೆ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಒಂದೊಂದು ಪ್ರತಿಭೆ ಇರುತ್ತದೆ ಅದನ್ನು ಉಪನ್ಯಾಸಕರು ಗುರುತಿಸಿ ಅವರಿಗೆ ಪ್ರೋತ್ಸಾಹಿಸಬೇಕು. ಮಕ್ಕಳು ಶಿಕ್ಷಕರ ಮಾರ್ಗದರ್ಶನದಲ್ಲಿ ಸಾಗಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ.ಸಂತೋಷಕುಮಾರ ಕರ್ಜಗಿ ಅಧ್ಯಕ್ಷೀಯ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಪಿ.ಇ.ಎಸ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಆಯ್.ಬಿ.ಬಿರಾದಾರ ನಿವೃತ್ತ ದೈಹಿಕ ಶಿಕ್ಷಕ ಕೆ.ಎಚ್.ಸೋಮಾಪೂರ, ಎಸ್.ವಾಯ್.ಬೀಳಗಿ, ಪಿ.ಎಮ್.ಮಡಿವಾಳರ, ಎಂ.ಎಸ್. ಚಾಂದಕವಠೆ ಪ್ರಾಚಾರ್ಯ ಆರ್.ಬಿ.ಗೋಡಕರ ವಿದ್ಯಾರ್ಥಿ ಪ್ರತಿನಿಧಿ ಮಲ್ಲಮ್ಮ ಸೊನ್ನದ ಸೇರಿದಂತೆ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಾಚಾರ್ಯ ಜಿ.ಎಸ್.ಕಡಣಿ ನಿರೂಪಿಸಿದರು. ಆರ್.ಬಿ.ಯಂಕಂಚಿ ಸ್ವಾಗತಿಸಿದರು. ಅಮೀರ ಮೊಪಗಾರ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

