ಮುದ್ದೇಬಿಹಾಳ: ತಾಲೂಕಿನ ಬಸರಕೋಡ ಗ್ರಾಮದ ಶ್ರೀ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನದ ನೂತನ ಶ್ರೀ ಮಾರುತೇಶ್ವರ ಹಾಗೂ ನವಗ್ರಹಗಳ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಅ.೯ ಮತ್ತು ೧೦ರಂದು ಹಮ್ಮಿಕೊಳ್ಳಲಾಗಿದೆ.
೯ರಂದು ಬೆಳಿಗ್ಗೆ ೧೦ಕ್ಕೆ ಗ್ರಾಮದ ಸುಮಂಗಲೆಯರಿಂದ ಕುಂಭ ಮೇಳ ಹಾಗೂ ಸಕಲ ವಾದ್ಯ ವೈಭವಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯೊಂದಿಗೆ ಕುಂಟೋಜಿ ಸಂಸ್ಥಾನ ಹಿರೇಮಠದ ಪ.ಪೂ ಡಾ.ಚನ್ನವೀರ ಶಿವಾಚಾರ್ಯರ ನೇತೃತ್ವದಲ್ಲ್ಲಿ ದೇವಸ್ಥಾನದ ಆವರಣಕ್ಕೆ ಬರುವದು. ನಂತರ ನಿಡಗುಂದಿಯ ರುದ್ರೇಶ್ವರ ಮಠದ ರುದ್ರಮುನಿ ಶಿವಾಚಾರ್ಯರಿಂದ ಆಶೀರ್ವಚನ ಮದ್ಯಾಹ್ನ ಮಹಾಪ್ರಸಾದ. ಅ೧೦ ರಂದು ಬೆಳಿಗ್ಗೆ ೮ಕ್ಕೆ ರುದ್ರಾಭಿಷೇಕ ಹಾಗೂ ಮಹಾ ಮಂಗಳಾರುತಿಯೊಂದಿಗೆ ಕಾರ್ಯಸಿದ್ಧಿ ಆಂಜನೇಯ ಮತ್ತು ನವಗ್ರಹಗಳ ಗರ್ಭಗುಡಿಯಲ್ಲಿ ಪೀಠಾರೋಹಣ ಮದ್ಯಾಹ್ನ ಮಹಾಪ್ರಸಾದ, ಸಂಜೆ ದಾನಿಗಳಿಗೆ ಸನ್ಮಾನ ಕಾರ್ಯಕ್ರಗಳು ಜರುಗಲಿದ್ದು ಸಾರ್ವಜನಿಕರು ಆಗಮಿಸಿ ಆಂಜನೇಯನ ಕೃಪೆಗೆ ಪಾತ್ರರಾಗುವಂತೆ ಪ್ರಕಟಣೆ ತಿಳಿಸಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
