ಮುದ್ದೇಬಿಹಾಳ: ಮಹಾರಾಷ್ಟ್ರದ ಗಾಜಾಪುರದಲ್ಲಿ ಜೆಎಸ್‌ಆರ್ ಸಂಘಟನೆಯವರು ಪಾರ್ಥನಾ ಸ್ಥಳವನ್ನು ಜಖಂ ಮತ್ತು ಮುಸ್ಲಿಂ ಸಮುದಾಯದ ಜನರಿಗೆ ದೈಹಿಕ ಹಾಗೂ ಮಾನಸಿಕ ಹಲ್ಲೆ ಹಾಗೂ ಆಸ್ತಿ ಪಾಸ್ತಿ ನಷ್ಟ ಮಾಡಿದ್ದು ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪಟ್ಟಣದ ಬಾಗವಾನ ಜಮಾತ್ ವತಿಯಿಂದ ಇಲ್ಲಿನ ತಹಶೀಲ್ದಾರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಘಟನೆಯಲ್ಲಿ ಮಸೀದಿ ಧ್ವಂಸಗೊಳಿಸಿ, ಕುರಾನ್ ಪ್ರತಿಗಳನ್ನು ಅಗ್ನಿಗಾಹುತಿ ಮಾಡಿ ತಡೆಯಲು ಬಂದ ಮುಸ್ಲಿಂ ಸಮುದಾಯದವರ ಮೇಲೆ ಹಲ್ಲೆ ಮಾಡಿ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡಿದ್ದನ್ನು ಖಂಡಿಸುತ್ತೇವೆ. ರಾಜ್ಯ ಸಭೆಯ ಸದಸ್ಯ ಸಂಬಾಜಿರಾವ್ ಛತ್ರಪತಿ ವಿಶಾಲಘಡದಲ್ಲಿ ಯುವಕರನ್ನುದ್ದೇಶಿಸಿ ಪ್ರಚೋದನಾತ್ಮಕ ಭಾಷಣ ಮಾಡಿದ್ದರ ಪರಿಣಾಮ ಜೆಎಸ್‌ಆರ್ ಸಂಘಟನೆಯ ಯುವಕರು ಈ ಕೃತ್ಯ ಎಸಗಿದ್ದಾರೆ. ಪ್ರಚೋದನಾತ್ಮಕ ಭಾಷಣ ಮಾಡಿದ್ದ ಸಂಬಾಜಿರಾವ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಮತ್ತು ಹಲ್ಲೆಗೊಳಗಾದ ಮುಸ್ಲಿಂ ಸಮುದಾಯದ ಜನರಿಗೆ ಪುನರ್ವಸತಿ ಮತ್ತು ಪರಿಹಾರವನ್ನು ಮಹಾರಾಷ್ಟ್ರ ಸರ್ಕಾರ ನೀಡಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಮನವಿ ಪತ್ರಕ್ಕೆ ಎಚ್.ಆರ್.ಬಾಗವಾನ, ಡಿ.ಡಿ.ಬಾಗವಾನ, ಎಂ.ಕೆ.ಹಳ್ಳೂರ, ಜೆ.ಎನ್.ಬಾಗವಾನ, ಎ.ಡಿ.ಹುಂಚಾಳ, ಎ.ಎಚ್.ಬಾಗವಾನ, ಎಚ್.ಬಿ.ಸಾಲಿಮನಿ, ಎ.ಎ.ಹಳ್ಳೂರ, ಎ.ಎಂ.ಬಾಗವಾನ, ಎಂ.ಕೆ.ಬಾಗವಾನ, ಎಂ.ಎ.ಮೋಮಿನ್, ಎಂ.ಎಂ.ಚೌದರಿ, ಎಸ್.ಎಂ.ಬಾಗವಾನ, ಟಿ.ಎ.ಬಾಗವಾನ ಸೇರಿದಂತೆ ಮತ್ತೀತರರು ಸಹಿ ಮಾಡಿದ್ದಾರೆ.
Subscribe to Updates
Get the latest creative news from FooBar about art, design and business.
ಗಾಜಾಪುರ ಗಲಾಟೆ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಬಾಗವಾನ ಜಮಾತ್ ಆಗ್ರಹ
Related Posts
Add A Comment

