ವಿಜಯಪುರ: ತಾಳಿಕೋಟಿ ತಾಲೂಕಿನ ಆಸ್ಕಿ, ಬೆಕಿನಾಳ, ಹಾಗೂ ಬೂದಿಹಾಳ ಪಿ.ಟಿ ಕೆರೆಗಳಿಗೆ ಶಾಶ್ವತವಾಗಿ ನೀರು ತುಂಬಿಸಬೇಕು, ಇದರಿಂದ ಈ ಭಾಗದ ನೂರಾರು ರೈತರಿಗೆ ಹಾಗೂ ಜನ ಜಾನುವಾರುಗಳಿಗೆ ಕುಡಿಯಲು ನೀರಿನ ಅನುಕೂಲವಾಗಲಿದ್ದು, ಈ ಕೆರೆಗಳು ತುಂಬುವುದರಿಂದ ಅಕ್ಕಪಕ್ಕದ ಜಲಮೂಲಗಳು ಅಭಿವೃದ್ಧಿಯಾಗಿ ಬಾವಿ, ಬೊರವೆಲಗಳಲ್ಲಿ ನೀರು ಹೆಚ್ಚಾಗುವುದರಿಂದ ಎಲ್ಲರಿಗೂ ಅನುಕೂಲವಾಗಲಿದೆ ಆದ್ದರಿಂದ ತುರ್ತಾಗಿ ಈ ೩ ಕೆರೆಗಳನ್ನು ತುಂಬಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಎ.ಇ ಸಂಗಮೇಶ ಮುಂಡಾಸ ಅವರಿಗೆ ಮನವಿ ಸಲ್ಲಿಸಿ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಅವರು ಮಾತನಾಡಿದರು.
ಈಗಾಗಲೇ ಹಲವಾರು ಬಾರಿ ತಾಳಿಕೋಟಿ ತಹಶಿಲ್ದಾರರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ, ಆಸ್ಕಿ ಕೆರೆಯಲ್ಲಿಯೇ ಧರಣಿ ಸತ್ಯಾಗ್ರಹ ಮಾಡಲಾಗಿದ್ದು, ತಾಳಿಕೋಟಿ ತಹಶೀಲ್ದಾರರು ಮಧ್ಯ ಪ್ರವೇಶ ಮಾಡಿ ಚುನಾವಣಾ ಸಂದರ್ಭ ಇದೆ, ನಂತರದಲ್ಲಿ ಇಲಾಖೆಯ ಅಧಿಕಾರಿಗಳೊಡನೆ ಸಭೆ ಕರೆದು ನಿರ್ಣಯಿಸೋಣ ಎಂದು ಹೋರಾಟಗಾರರಿಗೆ ಮನವೊಲಿಸಿ ಧರಣಿ ಕೈಬಿಡುವಂತೆ ಮನವಿ ಮಾಡಿದ್ದರಿಂದ ಧರಣಿ ಮುಗಿಸಲಾಗಿತ್ತು. ಈಗ ಶಾಶ್ವತ ಪರಿಹಾರಕ್ಕಾಗಿ ಬೂದಿಹಾಳ -ಪೀರಾಪುರ ಏತನೀರಾವರಿ ಯೋಜನೆಯಡಿ ಪಕ್ಕದಲ್ಲಿಯೇ ಹಾಯ್ದಿರುವ ದೊಡ್ಡ ಪೈಪಗಳ ಮೂಲಕ ಈ ಕೆರೆ ತುಂಬಿಸುವಂತೆ ತಾಳಿಕೋಟಿ ಘನಮಟೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಿವಶಂಕ್ರಪ್ಪ ಸಜ್ಜನ ಅವರು ಮಾತನಾಡಿದರು.
ಸಂಗಮೆಶ ಮುಂಡಾಸ ಮತ್ತು ರೈತ ಸಂಘದ ತಾಲೂಕು ಅಧ್ಯಕ್ಷ ಶ್ರೀಶೈಲ ವಾಲಿಕಾರ ಮಾತನಾಡಿದರು.
ಈ ವೇಳೆ ಜಿಲ್ಲಾ ಸಂಚಾಲಕ ರಾಮನಗೌಡ ಪಾಟೀಲ(ಬ್ಯಾಲ್ಯಾಳ), ನಿಡಗುಂದಿ ತಾ, ಅಧ್ಯಕ್ಷ ಕೆ.ಎಂ ಗುಡ್ನಾಳ, ಗೌರವಾಧ್ಯಕ್ಷರಾದ ಅಲ್ಲಾಭಕ್ಷ ಲಷ್ಕರಿ, ಚಾಂದಸಾಬ ನಧಾಫ, ಹಣಮಗೌಡ ಬಿರಾದಾರ, ದೇವರೆಡ್ಡಿ ಬಿರಾದಾರ, ರಮೇಶ ವಡ್ಡೊಡಗಿ, ಈರಯ್ಯ ಆಲಾಳಮಠ, ಈರಣ್ಣ ಶಿವಸಂಪಗೇರ, ದೇವಿಂದ್ರ ಕುಲಕರ್ಣಿ, ಸೋಮನಗೌಡ ಕರಕಳ್ಳಿ, ಶ್ರೀಶೈಲ ಸಜ್ಜನ, ರಾಜುರೆಡ್ಡಿ ಕರಕಳ್ಳಿ, ಪ್ರಭುಗೌಡ ಪಾಟೀಲ, ನಿಂಗಣ್ಣ ಸಲಾದಳ್ಳಿ, ಮಲ್ಲಪ್ಪ ಸಜ್ಜನ, ಕಾಸಯ್ಯ ಹಿರೇಮಠ, ಮಲ್ಲಪ್ಪ ಮುದನೂರ ಸೇರಿದಂತೆ ಅನೇಕರು ಇದ್ದರು.
ಆಸ್ಕಿ, ಬೆಕಿನಾಳ, ಬೂದಿಹಾಳ (ಪಿ.ಟಿ) ಕೆರೆ ನೀರು ತುಂಬಿಸುವಂತೆ ಈ ಬಾಗದ ರೈತರು ಹಲಾವಾರು ಬಾರಿ ಮನವಿ ಹಾಗೂ ಧರಣಿ ಸಹ ಮಾಡಿರುವುದು ಗಮನಕ್ಕೆ ಬಂದಿದೆ, ಬೂದಿಹಾಳ-ಪೀರಾಪುರ ಏತನೀರಾವರಿ ಯೋಜನೆಯಲ್ಲಿ ಕೆರೆಯ ಸಮೀಪದಲ್ಲಿ ಒಂದು ವಾಲಗಳನ್ನು ಕೂಡಿಸುವ ಕುರಿತು ಸಮೀಕ್ಷೆ ಮಾಡಿ, ಒಟ್ಟಾರೆಯಾಗಿ ನೀರು ತುಂಬಿಸಲು ಶತಪ್ರಯತ್ನ ಮಾಡುತ್ತೆನೆ, ನಾವೂ ಯವಾಗಲೂ ರೈತರ ಪರ ಕೆಲಸ ಮಾಡುತ್ತೇವೆ.”

