ಸಿಂದಗಿ: ಪಟ್ಟಣದ ಆರ್.ಬಿ.ಬೂದಿಹಾಳ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ (ಪದವಿಪೂರ್ವ) ಇಲಾಖೆ ವಿಜಯಪುರ, ಶ್ರೀ ಪದ್ಮರಾಜ ಮಹಿಳಾ ಸ್ವತಂತ್ರ ಪಪೂ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ೨೦೨೪-೨೫ನೆಯ ಸಾಲಿನ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ವಿನಯ ವಿಶ್ವಕರ್ಮ ಗುಂಡು ಎಸೆತದಲ್ಲಿ ಪ್ರಥಮ, ಚಕ್ರ, ಸರ್ಪಳಿ ಗುಂಡು ಎಸೆತದಲ್ಲಿ ದ್ವಿತೀಯ, ಆಕಾಶ ನಾವಿ ೧೦ಸಾವಿರ ಮೀ.ಓಟದಲ್ಲಿ ತೃತೀಯ, ನಡಿಗೆಯಲ್ಲಿ ಪ್ರಥಮ, ೩ಸಾವಿರ ಮೀ. ಓಟದಲ್ಲಿ ಭೀಮಣ್ಣ ತಳವಾರ ದ್ವಿತೀಯ, ಅಸ್ಲಾಂ ಪಟೇಲ ತ್ರಿವಿಧಿ ಜಿಗತದಲ್ಲಿ ತೃತೀಯ, ಪೂಜಾ ಜಾಧವ ತ್ರಿವಿಧಿ ಜಿಗಿತದಲ್ಲಿ ದ್ವಿತೀಯ, ಉದ್ದ ಜಿಗಿತ ದ್ವಿತೀಯ, ಯಶೋಧ ಗುಡಿಮನಿ ೩ಸಾವಿರ ಮೀ.ಒಟದಲ್ಲಿ ದ್ವಿತೀಯ, ದಾನೇಶ್ವರಿ ಕಣ್ಣಿ ನಡೆಗೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಮತ್ತು ಮಾರ್ಗದರ್ಶಕ ದೈಹಿಕ ಉಪನ್ಯಾಸಕ ಸತೀಶ ಬಸರಕೋಡ ಅವರಿಗೆ ಸಂಸ್ಥೆಯ ಅಧ್ಯಕ್ಷ, ಶಾಸಕ ಅಶೋಕ ಮನಗೂಳಿ, ಆಡಳಿತ ಮಂಡಳಿ ನಿರ್ದೇಶಕರು, ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ, ಉಪನ್ಯಾಸಕರಾದ ಮುಕ್ತಾಯಕ್ಕ ಕತ್ತಿ, ಸತೀಶ, ಪಾಟೀಲ, ಆರ್.ಬಿ.ಹೊಸಮನಿ, ಬಿ.ಎಸ್.ಬಿರಾದಾರ, ಎಮ್.ಎನ್,ಅಜ್ಜಪ್ಪ, ಶಾಂತೂ ಬಿರಾದಾರ, ಎಫ್.ಎ.ಹಾಲಪ್ಪನವರ, ಎ.ಬಿ.ಪಾಟೀಲ, ಡಾ.ಎಸ್.ಎಸ್.ಚವ್ಹಾಣ, ಎಸ್.ಸಿ.ಕಿಣಗಿ, ಎ.ಆರ್.ಸಿಂದಗಿಕರ್, ಸುರೇಶ ಮಂಗೊಂಡಿ, ಗಂಗಾರಾಮ್ ಪವಾರ, ಜ್ಯೋತಿ ಸೇರಿದಂತೆ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

