Author: editor.udayarashmi@gmail.com

ಹ್ಯಾಟ್ರಿಕ್ ಗೆಲುವು ಸೂಚಿಸಿದ ಎಕ್ಸಿಟ್ ಪೋಲ್‌ಗಳು | ಎಲ್ಲಾ ಫಲಿತಾಂಶಗಳಲ್ಲಿಯೂ ಬಿಜೆಪಿ ನೇತೃತ್ವದ ಎನ್‌ಡಿಎಗೆ ಗೆಲುವು |ಧನ್ಯವಾದ ಹೇಳಿದ ಪ್ರಧಾನಿ ನವದೆಹಲಿ: ಲೋಕಸಭೆ ಚುನಾವಣೆಯ ಏಳನೇ ಹಂತದ ಮತದಾನ ಮುಕ್ತಾಯವಾದ ಬೆನ್ನಲ್ಲೇ ಎಕ್ಸಿಟ್ ಪೋಲ್‌ಗಳ ಫಲಿತಾಂಶ ಬಿಡುಗಡೆಯಾಗಿವೆ. ಎಲ್ಲಾ ಫಲಿತಾಂಶಗಳಲ್ಲಿಯೂ ಬಿಜೆಪಿ ನೇತೃತ್ವದ ಎನ್‌ಡಿಎಗೆ ಗೆಲುವು ಖಚಿತ ಎನ್ನಲಾಗಿದೆ. ಹೀಗಾಗಿ ಬಿಜೆಪಿ ಮೂರನೇ ಬಾರಿಗೆ ಅಧಿಕಾರಕ್ಕೆ ಏರುವುದು ಪಕ್ಕಾ ಆಗಿದೆ.ಎಕ್ಸಿಟ್ ಪೋಲ್‌ಗಳ ಫಲಿತಾಂಶ ಪ್ರಕಟವಾದ ಬೆನ್ನಲ್ಲೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಮತದಾರರಿಗೆ ಧನ್ಯವಾದ ಹೇಳಿದ್ದಾರೆ.ಟ್ವಿಟರ್‌ನಲ್ಲಿ ಈ ಬಗ್ಗೆ ಪೋಸ್ಟ್‌ ಮಾಡಿರುವ ಅವರು, ಮತದಾರರ ಬದ್ಧತೆ ಮತ್ತು ಸಮರ್ಪಣೆ ಭಾರತದ ಪ್ರಜಾಪ್ರಭುತ್ವದ ಮನೋಭಾವವನ್ನು ಹೆಚ್ಚಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಕ್ಕಾಗಿ ಮಹಿಳೆಯರು ಮತ್ತು ಯುವಕರಿಗೆ ಪ್ರಧಾನಿ ಮೋದಿ ಧನ್ಯವಾದ ಹೇಳಿದ್ದಾರೆ. “ಭಾರತ ಮತ ಹಾಕಿದೆ! ತಮ್ಮ ಹಕ್ಕನ್ನು ಚಲಾಯಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ಸಕ್ರಿಯ ಪಾಲ್ಗೊಳ್ಳುವಿಕೆ ನಮ್ಮ ಪ್ರಜಾಪ್ರಭುತ್ವದ ಮೂಲಾಧಾರವಾಗಿದೆ. ನಿಮ್ಮ ಬದ್ಧತೆ ಮತ್ತು ಸಮರ್ಪಣೆ ನಮ್ಮ ದೇಶದಲ್ಲಿ…

Read More

ಬಸವನಬಾಗೇವಾಡಿ: ರಾಜ್ಯದಲ್ಲಿ ವಿಧಾನಪರಿಷತ್ತಿನ ೧೩ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷದ ವರಿಷ್ಠರು ಜಿಲ್ಲೆಯಲ್ಲಿ ಯಾರಿಗಾದರೂ ಇದರಲ್ಲಿ ಒಂದು ಸ್ಥಾನ ನೀಡಬೇಕು ವಿಜಯಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಅನೇಕ ನಿಷ್ಠಾವಂತ ಕಾರ್ಯಕರ್ತರು ನಿರಂತರವಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದಾರೆ. ಇಂತಹ ಕಾರ್ಯಕರ್ತರನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಗುರುತಿಸಿ ಅವರಿಗೆ ವಿಧಾನಪರಿಷತ್ತಿನ ಟಿಕೆಟ್ ನೀಡಿದರೆ ವಿಜಯಪುರ ಜಿಲ್ಲೆಗೆ ಒಂದು ಸ್ಥಾನ ನೀಡಿದಂತಾಗುತ್ತದೆ. ಯಾವುದೇ ಸಮಾಜ ಬಾಂಧವರಿಗೆ ಟಿಕೆಟ್ ನೀಡುವದರಿಂದಾಗಿ ಜಿಲ್ಲೆಯಲ್ಲಿ ಪಕ್ಷಕ್ಕೆ ಇನ್ನಷ್ಟು ಬಲ ಬರಲಿದೆ. ಇದು ಜಿಲ್ಲೆಗೆ ಮತ್ತಷ್ಟು ಅನುಕೂಲವಾಗುತ್ತದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳದ ಮುಖ್ಯ ಸಂಘಟಕ ರಮಜಾನ ಹೆಬ್ಬಾಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಬಸವನಬಾಗೇವಾಡಿ: ರಾಜ್ಯದಲ್ಲಿ ವಿಧಾನಪರಿಷತ್ತಿನ ೧೩ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷದ ವರಿಷ್ಠರು ಜಿಲ್ಲೆಯಲ್ಲಿ ಯಾರಿಗಾದರೂ ಇದರಲ್ಲಿ ಒಂದು ಸ್ಥಾನ ನೀಡಬೇಕು ವಿಜಯಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಅನೇಕ ನಿಷ್ಠಾವಂತ ಕಾರ್ಯಕರ್ತರು ನಿರಂತರವಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದಾರೆ. ಇಂತಹ ಕಾರ್ಯಕರ್ತರನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಗುರುತಿಸಿ ಅವರಿಗೆ ವಿಧಾನಪರಿಷತ್ತಿನ ಟಿಕೆಟ್ ನೀಡಿದರೆ ವಿಜಯಪುರ ಜಿಲ್ಲೆಗೆ ಒಂದು ಸ್ಥಾನ ನೀಡಿದಂತಾಗುತ್ತದೆ. ಯಾವುದೇ ಸಮಾಜ ಬಾಂಧವರಿಗೆ ಟಿಕೆಟ್ ನೀಡುವದರಿಂದಾಗಿ ಜಿಲ್ಲೆಯಲ್ಲಿ ಪಕ್ಷಕ್ಕೆ ಇನ್ನಷ್ಟು ಬಲ ಬರಲಿದೆ. ಇದು ಜಿಲ್ಲೆಗೆ ಮತ್ತಷ್ಟು ಅನುಕೂಲವಾಗುತ್ತದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳದ ಮುಖ್ಯ ಸಂಘಟಕ ರಮಜಾನ ಹೆಬ್ಬಾಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಬಸವನಬಾಗೇವಾಡಿ: ಪಟ್ಟಣದ ಗಣಪತಿ ವೃತ್ತದಲ್ಲಿ ಆರೋಗ್ಯ ಇಲಾಖೆಯಿಂದ ಶನಿವಾರ ವಿಶ್ವ ತಂಬಾಕು ಮುಕ್ತ ದಿನಾಚರಣೆಯಂಗವಾಗಿ ಸಾರ್ವಜನಿಕರಿಗೆ ಕರಪತ್ರಗಳನ್ನು ವಿತರಿಸಲಾಯಿತು. ನಂತರ ವೀರಭದ್ರೇಶ್ವರ ದೇವಸ್ಥಾನದಲ್ಲಿ ವಿಶ್ವ ತಂಬಾಕು ಮುಕ್ತ ದಿನಾಚರಣೆ ಕಾರ್ಯಕ್ರಮ ಜರುಗಿಸಲಾಯಿತು.ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಮಹಾದೇವಿ ಬೇವನೂರ ಮಾತನಾಡಿ, ತಂಬಾಕು ಸೇವನೆಯಿಂದ ಜಗತ್ತಿನಲ್ಲಿ ವರ್ಷಕ್ಕೆ ಎಂಟು ದಶಲಕ್ಷದಷ್ಟು ಜನರು ಬಲಿಯಾಗುತ್ತಿದ್ದಾರೆ. ಸಿಗರೇಟು, ಬೀಡಿ ಸೇರಿದಂತೆ ತಂಬಾಕು ಜಗಿಯುವದರಿಂದ ಕ್ಯಾನ್ಸರ್ ಹಾಗೂ ಪಾರ್ಶ್ವವಾಯು ಅಂತಹ ರೋಗಗಳಿಗೆ ಜನರು ತುತ್ತಾಗಬೇಕಾಗುತ್ತದೆ. ಮಹಿಳೆಯರು ತಂಬಾಕು ತಿನ್ನುವದರಿಂದ ಕಡಿಮೆ ತೂಕದ ಮಕ್ಕಳು ಹುಟ್ಟುತ್ತಾರೆ. ಮಗುವಿನಲ್ಲಿ ದೈಹಿಕ ಮಾನಸಿಕ ವೈಫಲ್ಯತೆಗಳು ಕಂಡುಬರುತ್ತವೆ. ಗರ್ಭೀಣಿಯರಲ್ಲಿ ಗರ್ಭಪಾತ ಸಂಭವಿಸುವ ಲಕ್ಷಣಗಳು ಸಾಧ್ಯತೆಯಿದೆ. ಯಾರೇ ಆಗಲಿ ತಂಬಾಕು ತಿನ್ನಬಾರದು. ಇದನ್ನು ತ್ಯಜಿಸುವುದು ತುಂಬಾ ಅಗತ್ಯವಿದೆ. ಆರೋಗ್ಯ ವರ್ಧಕ ಹಣ್ಣು-ಹಂಪಲಗಳನ್ನು ತಿನ್ನುವದು ಉತ್ತಮ ಎಂದರು.ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಅಶೋಕ ಗುಳೇದ, ಶಾಂತಪ್ಪ ಪಡಶೆಟ್ಟಿ, ವಿವೇಕಾನಂದ ಕಲ್ಯಾಣಶೆಟ್ಟಿ, ಶ್ರೀಶೈಲ ಜಾಡರ, ಮಲಕಾಜಪ್ಪ ಸೂರುಗೋಳಿ, ಶ್ರೀಶೈಲ ಶಿರಗುಪ್ಪಿ, ಭಾಗವ್ವ ಹಂಜಗಿ, ಗಂಗಾಬಾಯಿ ನಾಗೂರ,…

Read More

– ಬಸವರಾಜ ನಂದಿಹಾಳಬಸವನಬಾಗೇವಾಡಿ: ಮುಂಗಾರು ಹಂಗಾಮಿನ ಆರಂಭದ ಮುನ್ನವೇ ಕೆಲ ದಿನಗಳ ಹಿಂದೆ ಅಲ್ಪಸ್ವಲ್ಪ ಮಳೆರಾಯನ ದರ್ಶನವಾಗುತ್ತಿದ್ದಂತೆ ರೈತ ಬಾಂಧವರು ಬಿತ್ತನೆ ಕಡೆಗೆ ಮುಖ ಮಾಡುತ್ತಿದ್ದಾರೆ. ರೈತ ಬಾಂಧವರು ಬಿತ್ತನೆಗೆ ಬೇಕಾದ ಬೀಜಗಳನ್ನು ಖರೀದಿಸುವುದರಲ್ಲಿ ತಲ್ಲೀನರಾಗಿದ್ದಾರೆ.ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ರೈತರು ಬೀಜ ಪಡೆಯಲು ಸರದಿಯಲ್ಲಿ ನಿಂತು ಮೊದಲು ಟೋಕನ್ ಪಡೆದುಕೊಂಡ ನಂತರ ತಮ್ಮ ಆಧಾರ ಕಾರ್ಡ್ ನೀಡಿ ತಮಗೆ ಅಗತ್ಯವಿರುವ ಬೀಜಗಳಿಗೆ ರಸೀದಿ ಮಾಡಿಸಿಕೊಂಡು ಹಣ ಪಾವತಿ ಮಾಡಿದ ನಂತರ ಬೀಜ ವಿತರಣೆ ಕಾರ್ಯ ಮಾಡುತ್ತಿರುವದು ಕಂಡುಬಂದಿತ್ತು.ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಶನಿವಾರ ಕೃಷಿ ಅಧಿಕಾರಿ ಚಿದಾನಂದ ಹಿರೇಮಠ ಅವರು ಬೀಜ ವಿತರಿಸಿದರು.ಈ ಸಂದರ್ಭದಲ್ಲಿ ಅರವಿಂದ ಮುರಾಳ, ಪ್ರದೀಪ ಕತ್ನಳ್ಳಿ ಹಣಮಂತ ನಾಗರಾಳ, ರಾಮಣ್ಣ ಹೊಸಮನಿ, ಕಾಜಅಹ್ಮದ ಮುಜಾವರ, ಶಂಕರ ಬಾಗೇವಾಡಿ, ಶಿವಾನಂದ ಕಾರಜೋಳ, ಇಮಾಮ ಚಪ್ಪರಬಂದ, ಆನಂದ ಮ್ಯಾಗೇರಿ ಇತರರು ಇದ್ದರು.ಮುಂಗಾರು ಹಂಗಾಮಿನಲ್ಲಿ ಅಖಂಡ ಬಸವನಬಾಗೇವಾಡಿ ತಾಲೂಕಿನಲ್ಲಿರುವ ರೈತ ಸಂಪರ್ಕ ಕೇಂದ್ರಗಳಲ್ಲಿ ವಿವಿಧ ಬೀಜಗಳ ಬೇಡಿಕೆ ವಿವರ: ಬಸವನಬಾಗೇವಾಡಿ…

Read More

ಮುದ್ದೇಬಿಹಾಳದ ಮಾರುತಿ ನಗರದ ನಿವಾಸಿಗಳಿಂದ ಪುರಸಭೆಗೆ ಮುತ್ತಿಗೆ ಮುದ್ದೇಬಿಹಾಳ: ನಮ್ಮ ವಾರ್ಡನಲ್ಲಿ ಕುಡಿಯುವ ನೀರು ಸೇರಿದಂತೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಸ್ಥಗಿತಗೊಳಿಸಲಾದ ಬೋರ್‌ವೆಲ್ ಕಾರ್ಯ ಕೂಡಲೇ ಪ್ರಾರಂಭಿಸಬೇಕು ಮತ್ತು ನಮ್ಮ ಎಲ್ಲ ಸಮಸ್ಯೆಗಳನ್ನು ಕೂಡಲೇ ಸರಿಪಡಿಸಬೇಕು ಎಂದು ಆಗ್ರಹಿಸಿ ಪುರಸಭೆ ಸದಸ್ಯ ಸದಾಶಿವ ಮಾಗಿ ಸೇರಿದಂತೆ ಪಟ್ಟಣದ ಮಾರುತಿ ನಗರದ ನಿವಾಸಿಗಳು ಪುರಸಭೆ ಮುಖ್ಯದ್ವಾರದಲ್ಲಿ ಅಡ್ಡಲಾಗಿ ಕುಳಿತು ಶನಿವಾರ ದಿಢೀರ ಪ್ರತಿಭಟನೆ ನಡೆಸಿದರು.ನಮ್ಮ ಬಡಾವಣೆಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಚರಂಡಿಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸುತ್ತಿಲ್ಲ. ಮಳೆಯಾದರೆ ಸಾಕು ರಸ್ತೆ ತುಂಬೆಲ್ಲ ಚರಂಡಿಯ ಕೊಳಕು ನೀರು ಬಂದು ತಿರುಗಾಡಲು ಬಾರದಷ್ಟು ಸಮಸ್ಯೆ ತಂದೊಡ್ಡುತ್ತದೆ. ಹಿಂದಿನ ಶಾಸಕರ ಅವಧಿಯಲ್ಲಿ ರಸ್ತೆ ಮಾಡಲೆಂದು ಅಗೆದಿದ್ದ ರಸ್ತೆಯನ್ನು ಇನ್ನೂ ದುರಸ್ತಿ ಮಾಡಿಲ್ಲ. ಕುಡಿಯಲು ನೀರು ಸರಿಯಾಗಿ ಬರಲ್ಲ. ಹೀಗೆ ಒಂದಲ್ಲ ಎರಡಲ್ಲ ಸಾಕಷ್ಟು ಸಮಸ್ಯೆಗಳನ್ನು ನಾವು ಎದುರಿಸುತ್ತಿದ್ದೇವೆ. ನಮಗೆ ಕೂಡಲೇ ಎಲ್ಲ ಸಮಸ್ಯೆಗಳಿಗೆ ಪರಿಹಾರ ಬೇಕು ಎಂದು ಪಟ್ಟು ಹಿಡಿದರು.ತಮ್ಮ ಆರೋಗ್ಯದಲ್ಲಿ ಏರುಪೇರಾದ ನಿಮಿತ್ಯ ಕಚೇರಿಗೆ ಮುಖ್ಯಾಧಿಕಾರಿ ಆಗಮಿಸಿಲ್ಲ…

Read More

ದೇವರಹಿಪ್ಪರಗಿ: ಮಕ್ಕಳ ಬಾಳಿಗೆ ಬೆಳಕಾಗಿ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ, ಈಗ ಸೇವೆಯಿಂದ ನಿವೃತ್ತರಾಗುತ್ತಿರುವ ಶಿಕ್ಷಕರ ಮುಂದಿನ ಜೀವನ ಸುಖಮಯವಾಗಿರಲಿ ಎಂದು ಯಲಗೋಡ ವಲಯದ ಸಿಆರ್‌ಪಿ ವೀರಭದ್ರಯ್ಯ ಕರಕಳ್ಳಿಮಠ ಹೇಳಿದರು.ತಾಲ್ಲೂಕಿನ ಯಲಗೋಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಸೇವಾ ನಿವೃತರಾದ ಉರ್ದು, ವೆಂಕಟೇಶ್ವರ ಶಾಲೆಗಳ ಶಿಕ್ಷಕರನ್ನು ಸನ್ಮಾನಿಸಿ, ಶುಭಕೋರಿ ಮಾತನಾಡಿದರು. ನಿವೃತ್ತರು ತಮ್ಮ ಅತ್ಯಮೂಲ್ಯ ಅನುಭವ, ಮಾರ್ಗದರ್ಶನವನ್ನು ಶಿಕ್ಷಣ ಇಲಾಖೆ ಹಾಗೂ ಸಮಾಜಕ್ಕೆ ನೀಡುವುದರ ಮೂಲಕ ವಿಶ್ರಾಂತ ಜೀವನ ಆನಂದಿಸಲಿ ಎಂದರು.ಸೇವಾನಿವೃತ್ತರಾದ ಯಲಗೋಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಎ.ಎಚ್.ಮುಲ್ಲಾ, ಸಹಶಿಕ್ಷಕ ಎನ್.ಎಸ್.ಲಮಾಣಿ, ವೆಂಕಟೇಶ್ವರ ಪ್ರೌಢಶಾಲೆಯ ಸಿ.ಬಿ.ಬೂದಿಹಾಳ, ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯಗುರು ಎಸ್.ಎಮ್.ಗುಬ್ಬೇವಾಡ ಅವರನ್ನು ಎಸ್‌ಡಿಎಮ್‌ಸಿ ಹಾಗೂ ಶಿಕ್ಷಕರ ಬಳಗದಿಂದ ಸನ್ಮಾನಿಸಲಾಯಿತು.ಎಸ್‌ಡಿಎಮ್‌ಸಿ ಅಧ್ಯಕ್ಷ ಮಹಾಂತೇಶ ಕೂಟನೂರ, ಶಿಕ್ಷಕರಾದ ಸಿ.ಜಿ.ಕಾಂಬಳೆ, ಎ.ಎ.ಕುರಿ, ಸುರೇಶ ಬಡಿಗೇರ, ಮಲ್ಲಿಕಾರ್ಜುನ ಅಂಕಲಗಿ, ರಾಘವೇಂದ್ರ ಉಂಡಿಗೇರ, ದಸ್ತಗೀರಸಾಬ್ ಬಗಲಿ, ವಿದ್ಯಾವತಿ ಹನುಮರೆಡ್ಡಿ, ಮಂಗಳಾಬಾಯಿ ಅಲ್ಮದ ಸೇರಿದಂತೆ ಬಿಸಿಯೂಟ ಸಿಬ್ಬಂದಿ, ಮಕ್ಕಳು, ಗ್ರಾಮಸ್ಥರು…

Read More

ದೇವರಹಿಪ್ಪರಗಿ: ವ್ಯಸನಮುಕ್ತ ಬದುಕಿನಿಂದ ಮಾತ್ರ ನಾವೆಲ್ಲ ಸುಂದರ ಜೀವನ ಹಾಗೂ ಸಮಾಜ ಕಟ್ಟಿಕೊಳ್ಳಬಹುದಾಗಿದೆ ಎಂದು ವಿಶ್ರಾಂತ ಪ್ರಾಧ್ಯಾಪಕ ಎಸ್.ಎನ್.ಬಸವರೆಡ್ಡಿ ಹೇಳಿದರು.ತಾಲ್ಲೂಕಿನ ಜಾಲವಾದ ಗ್ರಾಮದ ಶಂಕರಲಿಂಗೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಡಿಯಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಇಗೀಗ ಶಾಲಾ ವಿದ್ಯಾರ್ಥಿಗಳ ಬ್ಯಾಗಗಳಲ್ಲಿ ಗುಟುಕಾ ಚಿಟ್ಸ್ ದೊರೆಯುತ್ತಿರುವ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ. ಇಂಥ ವ್ಯಸನಗಳ ಕುರಿತು ಯುವಕರು, ವಿದ್ಯಾರ್ಥಿಗಳು ಜಾಗೃತರಾಗಬೇಕು. ಕರ್ನಾಟಕ ತಂಬಾಕು ಮುಕ್ತ ನಾಡಾಗಬೇಕು. ಅದಕ್ಕಾಗಿ ತಂಬಾಕು ಉತ್ಪನ್ನಗಳಾದ ಗುಟುಕಾ, ಮಾವಾ, ನಿಕೋಟಿನ್ ಮಿಶ್ರಿತ ಕಿಮಾಮ್‌ಗಳ ಸೇವನೆಯಿಂದ ಯುವಪೀಳಿಗೆ ಹೊರಬರಬೇಕು. ಅದಕ್ಕಾಗಿ ಮನೆಯಲ್ಲಿ ಮಾತೆಯರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು ಎಂದರು.ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಪಿ.ಎಸ್.ಮಿಂಚನಾಳ ಮಾತನಾಡಿ, ತಂಬಾಕು ಸೇವನೆಯಿಂದ ಆರೋಗ್ಯದ ಮೇಲಾಗುವ ಗಂಭೀರ ಪರಿಣಾಮಗಳ ಕುರಿತು ಸಮಗ್ರ ಮಾಹಿತಿ ನೀಡಿ, ವಿಶೇಷವಾಗಿ ಗ್ರಾಮೀಣ ಪ್ರದೇಶದ ಜನ ತಂಬಾಕು ಸೇವನೆಯ ವ್ಯಸನದಿಂದ ದೂರ ಉಳಿಯಬೇಕು ಎಂದರು. ವಲಯ ಮೇಲ್ವಿಚಾರಕ ಬಾಬುರಾವ್ ಗೋಣಿ…

Read More

ವಿಜಯಪುರ: ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಹಾಗೂ ಭವನಕ್ಕೆ ಹೆಚ್ಚುವರಿ ಜಾಗ ನೀಡಲು ಒತ್ತಾಯಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದ ವತಿಯಿಂದ ನಡೆಯುತ್ತಿರುವ ಧರಣಿ ಸ್ಥಳಕ್ಕೆ ಮಹಾನಗರ ಪಾಲಿಕೆ ಸದಸ್ಯರು ಹಾಗೂ ಬಿಜೆಪಿ ನಗರ ಮಂಡಲ ಪದಾಧಿಕಾರಿಗಳು ಶನಿವಾರ ಭೇಟಿ ನೀಡಿ ಬೆಂಬಲ ಸೂಚಿಸಿದರು.ಮಹಾನಗರ ಪಾಲಿಕೆ ಸದಸ್ಯರಾದ ವಿಠ್ಠಲ ಹೊಸಪೇಟೆ, ಜವಾಹಾರ ಗೋಸಾವಿ, ಪ್ರೇಮಾನಂದ ಬಿರಾದಾರ, ರಾಜಶೇಖರ ಕುರಿಯವರ, ಮಹೇಶ ಒಡೆಯರ, ವಿಡಿಎ ಮಾಜಿ ಸದಸ್ಯ ಮಡಿವಾಳ ಯಾಳವಾರ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ, ಎಸ್.ಸಿ ಮೋರ್ಚಾ ಅಧ್ಯಕ್ಷ ಪ್ರಕಾಶ ಚವ್ಹಾಣ ಸೇರಿದಂತೆ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದ ಪದಾಧಿಕಾರಿಗಳು, ಮತ್ತಿತರರು ಇದ್ದರು.

Read More

ಸಿಂದಗಿ: ಪಟ್ಟಣದ ಅಖಿಲ ಭಾರತೀಯ ಸೋಮವಂಶ ಆರ್ಯ ಕ್ಷತ್ರೀಯ ಸಮಾಜ ಟ್ರಸ್ಟ್ (ನಾಸಿಕನ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಸಿಂದಗಿ ನಗರದ ಹಿರಿಯ ನ್ಯಾಯವಾದಿ ಅಶೋಕ ಗಾಯಕವಾಡ ಅವರನ್ನು ಜ್ವಾಜಾ ಸೈಫನ್ ಮುಲ್ಕ್ ಟ್ರಸ್ಟ್ ಹಾಗೂ ಹಿರೋಡೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು, ನಾಸಿಕನ ಅಖಿಲ ಭಾರತೀಯ ಸೋಮವಂಶ ಆರ್ಯ ಕ್ಷತ್ರೀಯ ಸಮಾಜ ಟ್ರಸ್ಟ್ (ನಾಸಿಕ) ನ ಉಪಾಧ್ಯಕ್ಷರಾಗಿ ಸಮಾಜದ ಟ್ರಸ್ಟ್ಗೆ ಅವಿರೋಧವಾಗಿ ಆಯ್ಕೆ ಮಾಡಿದ್ದು ಸಂತಸ ತಂದಿದೆ. ಸಮಾಜದ ಹಿತ ರಕ್ಷಣೆಗೆ ಸದಾ ಬೆನ್ನುಲುಬಾಗಿ ನಿಲ್ಲುವೆ. ಕ್ಷತ್ರೀಯ ಸಮಾಜವನ್ನು ಶೈಕ್ಷಣಿಕ, ಸಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಶ್ರಮಿಸುವೆ ಎಂದರು.ಈ ವೇಳೆ ದರ್ಗಾದ ಅಧ್ಯಕ್ಷ ಮಹಾದೇವಪ್ಪ ಗಾಯಕವಾಡ, ಅಂಬಾಜಿ ಗಾಯಕವಾಡ, ಅಶೋಕ ಸುಲ್ಪಿ, ಸೇರಿದಂತೆ ಸಿಂದಗಿಯ ಸೋಮವಂಶ ಕ್ಷತ್ರೀಯ ಸಮಾಜ ಬಾಂಧವರು ಮತ್ತು ಇತರರು ಇದ್ದರು.

Read More