ಕೊಲ್ಹಾರ: ಅವಳಿ ಜಿಲ್ಲೆಯ ಜನರ ಋಣ ವಿಶೇಷವಾಗಿ ಕೊಲ್ಹಾರ ಜನತೆಯ ಪ್ರೀತಿ, ವಿಶ್ವಾಸ ನನ್ನ ಮೇಲೆ ಅಪಾರವಾಗಿದ್ದು ನನ್ನ ಜೀವಿತ ಅವಧಿಯ ಕೊನೆಯವರೆಗೂ ತೀರಿಸಲಾರದಷ್ಟು ಹೊರೆ ಎನಿಸುತ್ತಿದೆ ಎಂದು ಮಾಜಿ ಸಚಿವ ಎಸ್ ಆರ್ ಪಾಟೀಲ ಹೇಳಿದರು.
ಪಟ್ಟಣದ ಡಾ, ಎಪಿಜೆ ಅಬ್ದುಲ್ ಕಲಾಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಉಸ್ಮಾನಸಾಬ್ ಪಟೇಲ್ ಏರ್ಪಡಿಸಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡುತ್ತಿದ್ದರು. ಬಾಡಗಂಡಿಯಲ್ಲಿ ಪ್ರಾರಂಭಿಸಿರುವ ಎಸ್.ಆರ್.ಪಾಟೀಲ್ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ, ಹಾಗೂ ಸಂಶೋಧನ ಕೇಂದ್ರವು ಜನೆತೆಗೆ ಉತ್ತಮ ಆರೋಗ್ಯವನ್ನು ಒದಗಿಸುವ, ಪ್ರಾಣವನ್ನು ಕಾಪಾಡುವ ಸೇವಾ ಕೇಂದ್ರವಾಗಲಿ ಎನ್ನುವ ಸದುದ್ದೇಶದಿಂದ ಅವಳಿ ಜಿಲ್ಲೆಯ ಮದ್ಯವರ್ತಿ ಸ್ಥಳವಾದ ನನ್ನ ಹುಟ್ಟೂರು ಬಾಡಗಂಡಿಯಲ್ಲಿ ಪ್ರಾರಂಭಿಸಲಾಗಿದ್ದು, ಇದರ ಸದುಪಯೋಗವನ್ನು ನಾಡಿನ ಜನತೆ ಪಡೆದುಕೊಳ್ಳಬೇಕೆಂದು ಹೇಳಿದರು.
ಹೃದಯ ಸಂಬಂದಿ, ರಕ್ತ ಸುದ್ದಿಕರಣ (ಡಯಲಿಸಿಸ್), ಮೆದುಳು ರೋಗ ನಿಯಂತ್ರಣ ಮತ್ತು ಕ್ಯಾನ್ಸರ್ ತರಹದ ನೂರಾರು ಮಾರಕ ರೋಗಗಳನ್ನು ನಿಯಂತ್ರಿಸುವ ಅನುಭವಿ ವೈದ್ಯರನ್ನು ನೇಮಕ ಮಾಡಿ, ಕೇಂದ್ರಗಳನ್ನು ಪ್ರಾರಂಭಿಸಬೇಕೆನ್ನುವ ಮಹತ್ವಕಾಂಕ್ಷೆ ಹೊಂದಿದ್ದೇನೆ. ಮಣಿಪಾಲ ಆಸ್ಪತ್ರೆಯ ಮಾದರಿಯ ಉತ್ತಮ ಆರೋಗ್ಯ ಸೇವೆ ಒದಗಿಸುವ ವೈಧ್ಯಕೀಯ ಮಹಾವಿದ್ಯಾಲಯ ಈ ಭಾಗದಲ್ಲಿ ಕಾರ್ಯನಿರ್ವಹಿಸಬೇಕು ಎನ್ನುವ ವಿಚಾರಧಾರೆಯಿಂದ, ಗ್ರಾಮೀಣ ಪ್ರದೇಶದಲ್ಲಿ ತಲೆ ಎತ್ತಲು ನಿಮ್ಮೆಲ್ಲರ ಆಶೀರ್ವಾದವೇ ಕಾರಣ, ಅದನ್ನು ಬೆಳೆಸುವ ಹೊಣೆ ನಿಮ್ಮದಾಗಿದೆ ಎಂದು ಜನತೆಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಎಸ್ ಆರ್ ಪಾಟೀಲ್ ರವರ ೭೫ ನೇ ಜನ್ಮದಿನಾಚರಣೆಯನ್ನು ಸಿಹಿ ಹಂಚುವ ಮೂಲಕ ಕೊಲ್ಹಾರದ ಜನತೆ ಅವರ ಸಮ್ಮುಖದಲ್ಲೇ ಗೌರವಿಸಿ ಆಚರಣೆ ಮಾಡಿರುವದು ವಿಶೇಷವಾಗಿತ್ತು, ಎಸ್.ಆರ್.ಪಾಟೀಲ್ ರವರ ಜನಪರ ಕಾರ್ಯಗಳ ಕುರಿತು ಬಿಜೆಪಿ ಮುಖಂಡ ಟಿ.ಟಿ.ಹಗೆದಾಳ್, ಉಸ್ಮಾನ್‌ಸಾಬ್ ಪಟೇಲ್, ಚಂದ್ರಶೇಖರಯ್ಯ್ ಗಣಕುಮಾರ, ಪ್ರಾಚಾರ್ಯ ಶ್ರೀಮತಿ ಬ್ಯಾನರ್ಜಿ, ಸಲೀಮ್ ಅತ್ತಾರ ಮಾತನಾಡಿದರು.
ಈ ಸಂದರ್ಭದಲ್ಲಿ ಸತ್ಯಪ್ಪ ಮೇಲ್ನಾಡ, ಈರಣಗೌಡ.ಬ.ಕೊಮಾರ, ರಫೀಕ್ ಪಕಾಲಿ, ಶಂಕ್ರಯ್ಯ ಚಿಕ್ಕಮಠ, ಕೆ.ವಿ.ಶ್ಯಾವಿಗೊಂಡ, ಇಸ್ಮಾಯಿಲ್‌ಸಾಬ್ ತಹಸೀಲ್ದಾರ್, ಶ್ರೀಮತಿ ಮುಸ್ಕಾನಾ ಶಿರಬೂರ, ಅನೇಕ ಪ್ರಮುಖರು ಉಪಸ್ಥಿತರಿದ್ದರು. ಪರಶುರಾಮ.ಬ.ಗಣಿ ಸ್ವಾಗತಿಸಿ, ನಿರೂಪಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

