ವಿಜಯಪುರ: ದೇಶಕ್ಕೆ ಮಾರಕವಾದ ವಕ್ಫ್ ಕಾಯ್ದೆ ತಿದ್ದುಪಡಿ ಮಸೂದೆ ಮಂಡನೆಗೆ ಆಕ್ಷೇಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ, ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು ಅಂಕಿ-ಅಂಶಗಳು ಮತ್ತು ವಿವರಣೆಯೊಂದಿಗೆ ಎಕ್ಸ್ ನಲ್ಲಿ ಟ್ವಿಟ್ ಮೂಲಕ ಟಾಂಗ್ ನೀಡಿದ್ದಾರೆ.
ಕಾನೂನು ತಜ್ಞರು ಹಾಗೂ ಸಂವಿಧಾನ ತಜ್ಞರಾದ ಶ್ರೀಯುತ ಸಿದ್ದರಾಮಯ್ಯನವರೇ ನಿಮಗೆ ಗೊತ್ತೇ ?
ವಕ್ಫ್ ಬೋರ್ಡ್ ಬಳಿ ಸುಮಾರು 8.66 ಲಕ್ಷ ಆಸ್ತಿಗಳಿವೆ, 8.02 ಲಕ್ಷ ಎಕರೆ ಒಡೆತನದ ಆಸ್ತಿ ವಕ್ಫ್ ಬಳಿ ಇದೆ (ಅಂದರೆ 30 ಚಂಡೀಗಢ ದಷ್ಟು)
ವಕ್ಫ್ ಟ್ರಿಬ್ಯೂನಲ್ ನಲ್ಲಿ ನೀಡಿದ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯದಲ್ಲೂ ಪ್ರಶ್ನಿಸುವಂತಿಲ್ಲ. ಮುಸಲ್ಮಾನ ಬಹುಸಂಖ್ಯಾತ ರಾಷ್ಟ್ರಗಳಲ್ಲೇ ವಕ್ಫ್ ಎಂಬ ಪರಿಕಲ್ಪನೆ ಇಲ್ಲ.
ರಕ್ಷಣಾ ಇಲಾಖೆ ಹಾಗೂ ಭಾರತೀಯ ರೈಲ್ವೆ ಬಿಟ್ಟರೆ ಭಾರತದಲ್ಲಿ ಅತಿ ಹೆಚ್ಚು ಭೂಮಿಯ ಒಡೆತನ ಇರುವುದು ವಕ್ಫ್ ನಲ್ಲಿ. ಈ ಕಾಯ್ದೆಯಿಂದ ಅತಿ ಹೆಚ್ಚು ಅನ್ಯಾಯಕ್ಕೆ ಒಳಪಟ್ಟಿರುವುದು ಹಿಂದೂಗಳು.
ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯ, ತಿರುಚೆಂಥುರೈ ಹಳ್ಳಿಯಲ್ಲಿರುವ 1,500 ವರ್ಷಗಳ ಇತಿಹಾಸವಿರುವ ಸುಂದರೇಶ್ವರ ಸ್ವಾಮಿ ದೇವಸ್ಥಾನದ ಮೇಲೂ ವಕ್ಫ್ ಮಂಡಳಿಯ ‘ಕಾಕ ದೃಷ್ಟಿ’ ಬಿದ್ದಿದ್ದು, ದೇವಸ್ಥಾನದ 369 ಎಕರೆ ಸಂಪೂರ್ಣವಾಗಿ ವಕ್ಫ್ ಗೆ ಸೇರಿದ್ದು ಎಂದು ಹೇಳಿತ್ತು.
ಈ ರೀತಿಯಾದ ಏಕಪಕ್ಷೀಯವಾದ ಕಾನೂನು ಸಂವಿಧಾನದ ಆಶಯಗಳಿಗೆ ವಿರುದ್ಧವಾದದ್ದು ಎಂಬುದು ನಿಮಗೆ ಗೊತ್ತಿಲ್ಲವೇ ? ಅಥವಾ, ಗೊತ್ತಿದ್ದರೂ ಮೈನಾರಿಟಿ ವೋಟ್ ಬ್ಯಾಂಕ್ ಗೆ ಅಂಜಿಕೊಂಡು ವಕ್ಫ್ ಪರ ಹೇಳಿಕೆ ನೀಡುತಿದ್ದೀರಾ ?
ಒಬ್ಬ ಮುಖ್ಯ ಮಂತ್ರಿಗಳಾಗಿ You should further democracy, Not Hypocrisy
ಎಂದು ಬರೆದುಕೊಂಡಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

