Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೨೦೨೬-೨೭ನೇ ಸಾಲಿನಲ್ಲಿ ಯುಪಿಎಸ್‌ಸಿ ಮುಖ್ಯ ಪರೀಕ್ಷಾ ತರಬೇತಿ ಪಡೆಯಲು ಅಲ್ಪ ಸಂಖ್ಯಾತರ ಸಮುದಾಯದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಆಯ್ಕೆಯಾದ ಅಭ್ಯರ್ಥಿಗಳಿಗೆ ಬೆಂಗಳೂರಿನ ಅಲ್ಪಸಂಖ್ಯಾತರ ನಿರ್ದೇಶನಾಲಯದಿಂದ ತರಬೇತಿ ನೀಡಲಾಗುವುದು. ಈ ತರಬೇತಿಗೆ ಅಲ್ಪ ಸಂಖ್ಯಾತರ ಸಮುದಾಯದ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.ಜು.೧೦ ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸುವವರು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. ಅಲ್ಪಸಂಖ್ಯಾತರ ಸಮುದಾಯದಾಯಕ್ಕೆ ಸೇರಿದವರಾಗಿರಬೇಕು (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ), ಅಭ್ಯರ್ಥಿಯು ಯುಪಿಎಸ್‌ಸಿ ೨೦೦೬-೨೭ನೇ ಸಾಲಿನ ಅಧಿಸೂಚನೆಯ ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.ಈ ಅರ್ಹತೆಗಳಿರುವ ಅರ್ಜಿದಾರರು ಅಲ್ಪಸಂಖ್ಯಾತರ ನಿರ್ದೇಶನಾಲಯದ ಜಾಲತಾಣ :mehttps://dom.karnataka.gov.in/ Googlelink ttps://forms.gle/hjnh&Hwp@uTHyYme ಇಲ್ಲಿ ಲಭ್ಯವಿರುವ ಅರ್ಜಿ ನಮೂನೆಯಲ್ಲಿ ಮಾರ್ಗ ಸೂಚಿಗಳನ್ನಯ ಅರ್ಜಿ ಸಲ್ಲಿಸಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ವಿಜಯಪುರ ಕಚೇರಿಗೆ ಮತ್ತು ಅಲ್ಪ ಸಂಖ್ಯಾತರ ಮಾಹಿತಿ ಕೇಂದ್ರಗಳಲ್ಲಿ ಮಾಹಿತಿಯನ್ನು ಪಡೆಯಬಹುದು ಹಾಗೂ ಅಲ್ಪಸಂಖ್ಯಾತರ ಸಹಾಯವಾಣಿ ಸಂಖ್ಯೆ :೮೨೭೭೭೯೯೯೯೦ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಸತತ ೨೪ ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಎಮ್‌ಎಸಿಪಿ ನಾಯಕ ಸುಭೇದಾರನಾಗಿ ಸೇವೆ ಸಲ್ಲಿಸಿ ನಿವೃತ್ತಿಯ ನಂತರ ಹಂಚಲಿ ಗ್ರಾಮಕ್ಕೆ ಆಗಮಿಸುತ್ತಿರುವ ಕಾಶೀರಾಯ ಕಾಮನಕೇರಿ ಇವರ ಸ್ವಾಗತ ಹಾಗೂ ಸನ್ಮಾನ ಸಮಾರಂಭ ಇಂದು (ಭಾನುವಾರ) ಜರುಗಲಿದೆ.ತಾಲ್ಲೂಕಿನ ಹಂಚಲಿ ಗ್ರಾಮದ ಹನುಮಾನ ದೇವಸ್ಥಾನ ಆವರಣದಲ್ಲಿ ಮಧ್ಯಾನ್ಹ ೨ ಘಂಟೆಗೆ ಆರಂಭಗೊಳ್ಳಲಿರುವ ಕಾರ್ಯಕ್ರಮದ ಸಾನಿಧ್ಯವನ್ನು ತಾಳಿಕೋಟಿ ಖಾಸ್ಗತೇಶ್ವರಮಠದ ಸಿದ್ಧಲಿಂಗ ದೇವರು, ಬೋರಗಿ ಪುರದಾಳಮಠದ ಮಹಾಲಿಂಗೇಶ್ವರ ಸ್ವಾಮೀಜಿ ಹಾಗೂ ಸ್ಥಳೀಯ ಶರಣಯ್ಯ ಮಠ ವಹಿಸಲಿದ್ದಾರೆ.ತಹಶೀಲ್ದಾರ ವಿನಯಾ ಹೂಗಾರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುದ್ದೇಬಿಹಾಳ ಕ್ಷೇತ್ರ ಸಮನ್ವಯ ಅಧಿಕಾರಿ ಆರ್.ಬಿ.ದಮ್ಮೂರಮಠ ಉಪನ್ಯಾಸ ನೀಡಲಿದ್ದಾರೆ.ಈ ಸಂದರ್ಭದಲ್ಲಿ ಗ್ರಾಮದ ಪಂಚಾಯಿತಿ ಸದಸ್ಯರು, ಹಿರಿಯರು ಭಾಗವಹಿಸಲಿದ್ದಾರೆ ಎಂದು ಮಾಜಿ ಸೈನಿಕರ ಸಂಘ ಹಾಗೂ ಕಾರ್ಗಿಲ್ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಜೀವನದ ಮೌಲ್ಯಗಳ ಮೂಲಕ ಆತ್ಮವಿಶ್ವಾಸ ಬೆಳೆಸಿ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಕಾರಣರಾಗುವವರೇ ಶಿಕ್ಷಕರು ಅರ್ಥಾತ ಗುರುಗಳು ಎಂದು ನಿವೃತ್ತ ತಹಶೀಲ್ದಾರ ಆರ್.ಆರ್,ಮಣೂರ ಹೇಳಿದರು.ಪಟ್ಟಣದ ಗೆಳೆಯರ ಬಳಗದಿಂದ ಶನಿವಾರ ಬಿಎಲ್‌ಡಿಇ ಸಂಸ್ಥೆಯ ದೇವರಹಿಪ್ಪರಗಿ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸಿ ೩೯ ವರ್ಷಗಳ ಹಿಂದೆ ನಿವೃತ್ತರಾದ ಬಿ.ಎಸ್.ಪಾಟೀಲ (ಜಾಲವಾದ)ರವರ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಮಾನವನ ಜೀವನದಲ್ಲಿ ಗುರುವಿನ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಈಗಲೂ ತಮ್ಮ ೯೯ ನೇ ವಯಸ್ಸಿನಲ್ಲಿ ಚಟುವಟಿಕೆಯಿಂದ ಇದ್ದು ಎಲ್ಲರಿಗೂ ಮಾರ್ಗದರ್ಶನ ನೀಡುವ ಗುರುಗಳ ಸಾಧನೆ ನಿಜವಾಗಿಯೂ ಇಂದಿನ ಎಲ್ಲರಿಗೂ ಆದರ್ಶಪ್ರಾಯ ಎಂದರು.ಸನ್ಮಾನಿತ ಬಿ.ಎಸ್.ಪಾಟೀಲ ಶಿಕ್ಷಕರು ಮಾತನಾಡಿ, ತಾವು ಕಲಿಸಿದ ವಿದ್ಯಾರ್ಥಿಗಳು ಇಂದು ತಾವು ಸಹ ನಿವೃತ್ತರಾಗಿ ನಂತರ ನಿವೃತ್ತ ಗುರುವನ್ನು ಸನ್ಮಾನಿಸಿದ್ದು ಇದು ಅತ್ಯಂತ ಸಂತೋಷಕರ ಹಾಗೂ ವಿರಳ ಸಂದರ್ಭ. ಇದು ಎಲ್ಲರಿಗೂ ದೊರೆಯದು. ಎಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು.ಬಸವಶರಣ ಸಂಗಮ ಸೇವಾ ಸಮಿತಿ ಅಧ್ಯಕ್ಷ ಸಂಗಪ್ಪ ತಡವಲ್, ನಿವೃತ್ತ ನೌಕರರ ಸಂಘದ ತಾಲ್ಲೂಕು…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ತಾಲ್ಲೂಕಿನ ಯಾಳವಾರ ಗ್ರಾಮದ ಶ್ರೀಸೋಮೇಶ್ವರ ವಿದ್ಯಾವರ್ಧಕ ಸಂಘದ ಪ್ರೌಢಶಾಲೆ ನೂತನ ಕಟ್ಟಡ ಹಾಗೂ ವಿದ್ಯಾರ್ಥಿ ನಿಲಯ ಉದ್ಘಾಟನೆ ಮತ್ತು ಸುವರ್ಣ ಮಹೋತ್ಸವದ ಅಂಗವಾಗಿ ಸ್ಮರಣ ಸಂಚಿಕೆ ಬಿಡುಗಡೆ, ಗುರುವಂದನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಇಂದು(ಭಾನುವಾರ) ಜರುಗಲಿವೆ ಎಂದು ಸಂಸ್ಥೆಯ ಅಧ್ಯಕ್ಷ ರಾಜುಗೌಡ ನಾಡಗೌಡ್ರ ತಿಳಿಸಿದ್ದಾರೆ.ಗ್ರಾಮದ ಶ್ರೀ ಸೋಮೇಶ್ವರ ವಿದ್ಯಾವರ್ಧಕ ಸಂಘದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿ, ಬಾಳೆಹೊನ್ನುರ ರಂಭಾಪುರಿ ಜಗದ್ಗುರು ಡಾ.ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯರ ದಿವ್ಯ ಸಾನಿಧ್ಯದಲ್ಲಿ ನಡೆಯಲಿವೆ. ಯಾಳವಾರ ಗುರುಮಠದ ದಾರುಕಲಿಂಗಶ್ರೀಗಳು ಹಾಗೂ ಆಲಮೇಲ ಗುರು ಸಂಸ್ಥಾನ ಹಿರೇಮಠದ ಚಂದ್ರಶೇಖರ ಶ್ರೀಗಳು ನೇತೃತ್ವ ವಹಿಸುವವರು. ಹರಳಕಟ್ಟೆಯ ನಿಜಗುಣ ಸ್ವಾಮೀಜಿ, ಕಡಕೋಳ ಸಂಸ್ಥಾನಮಠದ ರಾಜಗುರು ಮಹಾಲಿಂಗ ಸ್ವಾಮಿಜೀ ಉಪಸ್ಥಿತರಿರುವರು.ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ, ಸಂಸದ ರಮೇಶ ಜಿಗಜಿಣಗಿ ಜ್ಯೋತಿ ಬೆಳಗಿಸುವರು. ಕೆ.ಎಸ್.ಐ.ಡಿ.ಎಲ್ ಅಧ್ಯಕ್ಷ ಸಿ.ಎಸ್.ನಾಡಗೌಡ, ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಹಾಗೂ ಸ್ಥಳೀಯ ಶಾಸಕ ರಾಜುಗೌಡ ಪಾಟೀಲ (ಕುದರಿಸಾಲವಾಡಗಿ) ಸ್ಮರಣಸಂಚಿಕೆ ಬಿಡುಗಡೆಗೊಳಿಸುವರು.ಮಾಜಿ ಶಾಸಕರುಗಳಾದ ಎಸ್.ಎಂ.ದೇಸಾಯಿ, ಶರಣಪ್ಪ ಸುಣಗಾರ…

Read More

ಮತ್ತಿಗೋಡು ಕ್ಯಾಂಪ್ ನಲ್ಲಿ ಮರದ ದಿಮ್ಮಿ ಸಾಗಿಸುವಾಗ ನಡೆದ ಘಟನೆ ಉದಯರಶ್ಮಿ ದಿನಪತ್ರಿಕೆ ಎಚ್ ಡಿ ಕೋಟೆ: ಮೈಸೂರು ದಸರಾದಲ್ಲಿ ಚಿನ್ನದ ಅಂಬಾರಿ ಹೊರುವ ಮೂಲಕ ಜಗತ್ಪ್ರಸಿದ್ಧವಾಗಿರುವ ಅಭಿಮನ್ಯು ಆನೆಯ ಎಡಭಾಗದ ದಂತ ಮುರಿದಿದೆ. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಮತ್ತಿಗೋಡು ಕ್ಯಾಂಪ್ ನಲ್ಲಿ ಮರದ ದಿಮ್ಮಿಗಳನ್ನು ಸ್ಥಳಾಂತರಿಸುವಾಗ 59 ವರ್ಷದ ಅಭಿಮನ್ಯುವಿನ ಎಡಭಾಗದ ದಂತದ ಮುಂದಿನ ಭಾಗ ತುಂಡಾಗಿದೆ. ದುಬಾರೆ ಆನೆ ಕಾಳಗ ದುರಂತದ ಬಳಿಕ ಸಾಕಾನೆ ಶಿಬಿರಗಳಿಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿತ್ತು. ಹೀಗಾಗಿ ಮತ್ತಿಗೋಡು ಕ್ಯಾಂಪ್​ನಲ್ಲಿ ಮರದ ದಿಮ್ಮಿಗಳನ್ನು ಸ್ಥಳಾಂತರಿಸುವ ಕಾರ್ಯಚರಣೆ ನಡೆಸಲಾಗುತ್ತಿತ್ತು. ಮರದ ದಿಮ್ಮಿ ಮೇಲೆತ್ತುವ ಸಂದರ್ಭದಲ್ಲಿ ಅಭಿಮನ್ಯುವಿನ ಎಡಭಾಗದ ದಂತದ ಮುಂದಿನ ಭಾಗ ಸ್ವಲ್ಪ ತುಂಡಾಗಿದೆ.ಘಟನೆ ನಡೆದ ಕೂಡಲೇ ಅಭಿಮನ್ಯು ಆರೋಗ್ಯ ಪರಿಶೀಲನೆ ನಡೆಸಿದ ಪಶುವೈದ್ಯರು, ಯಾವುದೇ ಆತಂಕವಿಲ್ಲ. ಗಾಯ ಗಂಭೀರವಲ್ಲ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. 2020ರಿಂದಲೂ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿ ಹೊತ್ತಿದ್ದ ಅಭಿಮನ್ಯುವನ್ನು ಕಾಡಾನೆಗಳ ಕಾರ್ಯಾಚರಣೆಗಳಿಗೂ ಬಳಸಲಾಗುತ್ತಿತ್ತು. ಬಲಭಾಗಕ್ಕೆ ಬಾಗಿದಂತೆ ಕಾಣುತ್ತಿದ್ದ…

Read More

ಉದಯರಶ್ಮಿ ದಿನಪತ್ರಿಕೆ ತಾಳಿಕೋಟೆ: ಪಟ್ಟಣದ ರಾಜವಾಡೆಯಲ್ಲಿರುವ ಪುರಾತನ ಭಾವಿಯಾದ ಭೀಮನಭಾವಿಯನ್ನು ಪುರಸಭೆ ವತಿಯಿಂದ ಶನಿವಾರರಂದು ಸ್ವಚ್ಚತಾ ಕಾರ್ಯವನ್ನು ಆರಂಬಿಸಲಾಯಿತು.ತಾಳಿಕೋಟೆ ಪಟ್ಟಣದಲ್ಲಿ ಇದೇ ದಿ.೧೭ ರಿಂದ ಪ್ರಾರಂಭಗೊಳ್ಳಲಿರುವ ಶ್ರೀ ಗ್ರಾಮದೇವತೆ ದ್ಯಾವವ್ವದೇವಿಯ ಜಾತ್ರಾ ಮಹೋತ್ಸವ ಹಾಗೂ ದಿ. ೧೯ ರಿಂದ ಪ್ರಾರಂಭಗೊಳ್ಳಲಿರುವ ಶ್ರೀ ಖಾಸ್ಗತೇಶ್ವರ ಜಾತ್ರಾ ಮಹೋತ್ಸವದಲ್ಲಿ ಇದೇ ಪುರಾತನ ಭೀಮನಭಾವಿಯಲ್ಲಿ ಗಂಗಸ್ಥಳ ಹಾಗೂ ವಿವಿಧ ಪೂಜಾ ಕಾರ್ಯಕ್ರಮಗಳು ನೆರವೇರುವದರಿಂದ ಈ ಪುರಾತನ ಭೀಮನಭಾವಿಯನ್ನು ಸ್ವಚ್ಚತೆ ಕೈಗೊಳ್ಳಲಾಗುತ್ತಿದೆ ಎಂದು ಪುರಸಭೆ ಮುಖ್ಯಾಧಿಕಾರಿ ವಸಂತ ಪವಾರ ಅವರು ತಿಳಿಸಿದರು.ಭಾವಿಯಲ್ಲಿ ಬಿದ್ದ ಕಲ್ಲು, ಮಣ್ಣು, ಚಿಪ್ಪು ಅಲ್ಲದೇ ಬೆಳೆದ ಮುಳ್ಳಿನ ಗಿಡಗಂಟಿಗಳನ್ನು ಕತ್ತರಿಸಲಾಗಿದೆ. ಭಾವಿಯಲ್ಲಿಯ ನೀರಿನ ಸ್ವಚ್ಚತೆಗೆ ಬ್ಲಿಚಿಂಗ್ ಪೌಡರ್ ಬಳಿಸಿ ಭಾವಿಗೆ ಗಂಗಸ್ಥಳಕ್ಕೆ ಆಗಮಿಸುವ ಭಕ್ತರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ಅದರಂತೆ ರಾಜವಾಡೆಯಲ್ಲಿ ಕೆಲವೆಡೆ ನೀರು ನಿಂತುಕೊಳ್ಳುವದನ್ನು ತಡೆಯಲು ಸಿಮೇಂಟ್ ಕಾಂಕ್ರೇಟ್‌ನಿಂದ ನೀರು ಚರಂಡಿಗೆ ಹರಿದು ಹೊಗುವಂತೆ ಅಲ್ಲದೇ ಚರಂಡಿಗಳ ಸ್ವಚ್ಚತೆಗೆ ಆದ್ಯತೆ ನೀಡಲಾಗಿದೆ. ಮೆರವಣಿಗೆಯ ದಾರಿಯುದ್ದಕ್ಕೂ ರಸ್ತೆ ಚರಂಡಿ ದುರಸ್ಥಿಯ ಜೊತೆಗೆ ಹೆಚ್ಚಿನ ರೀತಿಯಲ್ಲಿ…

Read More

ಮೋರಟಗಿ ಗ್ರಾಮದಲ್ಲಿ ಖಾಕಿ ಕಾಯಕದ ಜತೆಗೆ ಕೃಷಿ | ವರ್ಷಕ್ಕೆ ರೂ.೬ ಲಕ್ಷಕಿಂತಲೂ ಅಧಿಕ ಲಾಭ ಉದಯರಶ್ಮಿ ದಿನಪತ್ರಿಕೆ ವರದಿ: ಸಿದ್ದು ಕೆರಿಗೊಂಡಮೋರಟಗಿ: ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕಾರ್ಯ ನಿರ್ವಹಿತ್ತಿರುವ ಸಮೀಪದ ನಾಗಾವಿ ತಾಂಡಾದ ಭೀಮು ಲಮಾಣಿ ತಮ್ಮ ಗದ್ದೆಯಲ್ಲಿ ಕಾಶ್ಮೀರ ಸೇಬು ಬೆಳೆದು ಗುಮ್ಮಟ ನಗರಿ ಜಿಲ್ಲೆಯಲ್ಲಿ ಸದ್ದು ಮಾಡಿದ್ದಾರೆ.ಮೋರಟಗಿ ಹೊರ ಠಾಣೆಯಲ್ಲಿ ಪೊಲೀಸ್ ಪೇದೆಯ ಹುದ್ದೆಯಲ್ಲಿ ಶಿಸ್ತಿನ ಸಿಪಾಯಿ ಎಂದೆನಿಸಿ ಬಿಡುವಿನ ವೇಳೆಯಲ್ಲಿ ವೃಥಾ ಕಾಲಹರಣ ಮಾಡದೇ ಸ್ವತಃ ಅಗಿ ನೆಡೆಸಿ, ನೀರು ಉಣಿಸಿ, ತೆಂಗಿನ ಮರ, ಮಾವಿನ ಮರಗಳ ಜತೆಗೆ ಇತರ ಸಸಿ ನೆಡಿಸಿ ಪರಿಸರ ಪ್ರೇಮಿಯಾಗಿ ಕೂಡ ಇವರು ಹೆಸರುವಾಸಿಯಾಗಿದ್ದಾರೆ.ಮೋರಟಗಿ ಪೊಲೀಸ್ ಹೊರ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತ ಸಿಕ್ಕ ಸಮಯದಲ್ಲಿ ನಾಲ್ಕು ಎಕರೆ ಜಮೀನಿನಲ್ಲಿ ತೆಂಗಿನ ಮರ, ಸೇಬುಹಣ್ಣು, ತರಕಾರಿ ಸೇರಿದಂತೆ ಅನೇಕ ಸಸಿಗಳನ್ನು ಬೆಳೆಸಿ ವರ್ಷಕ್ಕೆ ೬ ಲಕ್ಷಕಿಂತಲೂ ಅಧಿಕ ಲಾಭ ಪಡೆದು, ಪ್ರಗತಿಪರ ರೈತರ ಗಮನ ಸೆಳೆಯುವಂತೆ ಮಾಡಿದ ಪೊಲೀಸ್ ಪೇದೆ…

Read More

ಲೇಖನ- ಡಾ. ಶಾಲಿನಿ ರಜನೀಶ್ಸರ್ಕಾರದ ಮುಖ್ಯ ಕಾರ್ಯದರ್ಶಿ ಉದಯರಶ್ಮಿ ದಿನಪತ್ರಿಕೆ ಜಲ ಸಂರಕ್ಷಣೆಪ್ರತಿ ಹನಿಯೂ ಅಮೂಲ್ಯ: ಪ್ರತಿಯೊಬ್ಬ ಜೀವಿಯ ಬದುಕಿಗೆ ನೀರು ಅತ್ಯಗತ್ಯ. ಭೂಮಿಯ ಶೇಕಡಾ ೭೦ ರಷ್ಟು ಭಾಗ ನೀರಿನಿಂದ ಕೂಡಿದ್ದರೂ, ಕುಡಿಯಲು ಯೋಗ್ಯವಾದ ಸಿಹಿ ನೀರು ಇರುವುದು ಕೇವಲ ಶೇಕಡಾ ೨ ರಷ್ಟು ಮಾತ್ರ. ಜಲ ಸಂರಕ್ಷಣೆ ಎಂದರೆ ಲಭ್ಯವಿರುವ ಈ ಶುದ್ಧ ನೀರನ್ನು ಸಮರ್ಥವಾಗಿ ಬಳಸುವುದು.ಇಂದು ಹೆಚ್ಚುತ್ತಿರುವ ಜನಸಂಖ್ಯೆ, ಮಾಲಿನ್ಯ ಮತ್ತು ನಿರ್ಲಕ್ಷ್ಯದ ಬಳಕೆಯಿಂದಾಗಿ ಜಲಕ್ಷಾಮವು ಜಾಗತಿಕ ಸಮಸ್ಯೆಯಾಗಿ ಮಾರ್ಪಟ್ಟಿದೆ. ಈಗಾಗಲೇ ಎಲ್‌ನಿನೊ ಹವಾಮಾನ ವೈಪರೀತ್ಯದ ಪರಿಣಾಮದಿಂದಾಗಿ ವಿಶ್ವದಾದ್ಯಂತ ಸಾಮಾನ್ಯ ಹವಾಮಾನ ಮಾದರಿಗಳು ವ್ಯತ್ಯಯಗೊಳ್ಳುತ್ತಿದ್ದು, ದೇಶದಲ್ಲಿ ಅತಿವೃಷ್ಟಿ, ಪ್ರವಾಹ ಮತ್ತು ಬರಗಾಲದಂತಹ ತೀವ್ರ ಪರಿಸ್ಥಿತಿಗಳು ತಲೆದೋರುತ್ತಿವೆ. ಮಳೆಯ ಕೊರತೆಯಿಂದಾಗಿ ನಮ್ಮ ರೈತರ ಕೃಷಿ ಉತ್ಪಾದನೆಯ ಮೇಲೂ ತೀವ್ರ ಪರಿಣಾಮ ಬೀರುತ್ತಿದೆ. ವೇಗವಾದ ನಗರೀಕರಣ ಮತ್ತು ಹೆಚ್ಚುತ್ತಿರುವ ಜನಸಂಖ್ಯೆಯು ಜಲ ಸಂಪನ್ಮೂಲಗಳ ಮೇಲೆ ಹೆಚ್ಚಿನ ಒತ್ತಡ ಉಂಟುಮಾಡುತ್ತಿರುವುದರಿಂದ, ಭವಿಷ್ಯದ ಪೀಳಿಗೆಗೆ ನೀರನ್ನು ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.ನೀರನ್ನು ಉಳಿಸುವ…

Read More

ಉದಯರಶ್ಮಿ ದಿನಪತ್ರಿಕೆ ಅಥಣಿ: ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೆಟ್ರಿಕ ನಂತರದ ಬಾಲಕ ಮತ್ತು ಬಾಲಕೀಯರ ವಿದ್ಯಾರ್ಥಿನಿಲಯಗಳಲ್ಲಿ ಪದವಿ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಕಲ್ಪಿಸಲು ಆನ ಲೈನ ಅರ್ಜಿ ಅಹ್ವಾನಿಸಲಾಗಿದೆಪ್ರವೇಶ ಬಯಸುವ ಪ್ರವರ್ಗ-೧, ೨ಎ, ೨ಬಿ, ೩ಎ, ೩ಬಿ ಪ.ಜಾ ಮತ್ತು ಪ.ವರ್ಗದ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ೨೦೨೬-೨೭ ನೇ ಸಾಲಿಗೆ ಆನ ಲೈನ ಮೂಲಕ ಪಟ್ಟಣದ ಸತ್ತಿ ರಸ್ತೆಯ ಎಲ್ ಐ ಸಿ ಕಚೇರಿ ಎದುರಿಗೆ ಇರುವ ಮೆಟ್ರಿಕ ನಂತರದ ಬಾಲಕೀಯರ ವಸತಿನಿಲಯ ಅಥಣಿ ಭಾಗ ೧ ಮತ್ತು ಪಟ್ಟಣದ ಕನಕ ನಗರ ಸಿಎಸ್ ಕೆ ಪ್ರೌಢ ಶಾಲೆ ಎದುರುಗಡೆ ಇರುವ ಭಾಗ ೨ ಹಾಗೂ ಮೆಟ್ರಿಕ ನಂತರದ ಬಾಲಕರ ನಿಲಯ ಕೊಕಟನೂರ ಇಲ್ಲಿಗೆ ಅರ್ಜಿ ಆಹ್ವಾನಿಸಲಾಗಿದೆ.ವಿದ್ಯಾರ್ಥಿಯ ಪೋಷಕರ ವಾರ್ಷಿಕ ಆದಾಯ ಮಿತಿ ಪ್ರವರ್ಗ-೧, ಎಸ್.ಸಿ. ಎಸ್.ಟಿ ರೂ.೨.೫೦ ಲಕ್ಷ ಮತ್ತುಪ್ರವರ್ಗ- ೨ಎ, ೨ಬಿ, ೩ಎ, ೩ಬಿ ಗಳಿಗೆ ರೂ.೧.೦೦ ಲಕ್ಷಹೊಸ ವಿದ್ಯಾರ್ಥಿಗಳು ಪ್ರವೇಶ ಕೋರಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಪ್ತಪತಿ ಫೌಂಡೇಶನ್ ಮಂಗಳಸೂತ್ರ ಫೌಂಡೇಶನ್ ಹಾಗೂ ಶ್ರೀ ಶಿವಚಿದಂಬರ ಸೇವಾ ಸಮಿತಿ ಅಖಿಲ ಭಾರತ ಬ್ರಾಹ್ಮಣ ಮಹಾಸಭಾ ಸಹಯೋಗದಲ್ಲಿ ಇದೇ ಜುಲೈ೧೧-೧೨ ರಂದು ನಗರದ ರಿಂಗ್ ಮನಗೂಳಿ ರಸ್ತೆಯಲ್ಲಿರುವ ಶ್ರೀ ಚಿದಂಬರೇಶ್ವರ ಸಾಂಸ್ಕೃತಿಕ ಭವನದಲ್ಲಿ ರಾಜ್ಯಮಟ್ಟದ ತ್ರಿಮತಸ್ಥ ಬ್ರಾಹ್ಮಣ ವಧು-ವರರ ವರಾನ್ವಷೇಷಣಾ ಸಮಾವೇಶ ಹಾಗೂ ಲೋಕಕಲ್ಯಾಣಾರ್ಥವಾಗಿ ಶ್ರೀ ಗಿರಿಜಾ ಕಲ್ಯಾಣೋತ್ಸವ ಮಹಾ ಸಂಕಲ್ಪ ಜರುಗಲಿದೆ ಎಂದು ಸಪ್ತಪದಿ ಫೌಂಡೇಶನ್ ಟ್ರಸ್ಟನ ಸಂಚಾಲಕ ಶ್ರೀನಿವಾಸ ಭಾರದ್ವಾಜ ತಿಳಿಸಿದರು.ರಾಜ್ಯದಲ್ಲಿನ ಎಲ್ಲ ಬ್ರಾಹ್ಮಣ ವಧು-ವರರಿಗೆ ಮದುವೆ ಆಗಬೇಕೆಂಬ ಉದ್ದೇಶದಿಂದ ವಿಜಯಪುರ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳು ಜನರಿಗೆ ಅನುಕೂಲ ಆಗಲು ಅಲ್ಲಿಯೇ ಮದುವೆ ಹೊಂದಾಣಿಕೆ ನಡೆಸಲು ಉದ್ದೇಶಿಸಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಸಮಾರಂಭವನ್ನು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.ದಿವ್ಯ ಸಾನ್ನಿಧ್ಯವನ್ನು ಪಂಡಿತ ಮಧ್ವಾಚಾರ್ಯ ಮೋಕಾಶಿ, ಅಗಡಿ ಆನಂದವನದ ವಿಶ್ವನಾಥ ಚಕ್ರವರ್ತಿ, ಶ್ರೀನಿವಾಸನ್ ಗುರೂಜಿ, ಕೃಷ್ಣ ಭಟ್ ಗಲಗಲಿ, ಸತೀಶಚಂದ್ರ ಕುಲಕರ್ಣಿ, ಚಿದಂಬರೇಶ್ವರ ಸೇವಾ ಸಮಿತಿ ಅಧ್ಯಕ್ಷ…

Read More