ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಅವರು ವಿಜಯಪುರ ಹಾಗೂ ಬಾಗಲಕೋಟ ಜಿಲ್ಲೆಗಳಲ್ಲಿ ದಿ.29 ರವಿವಾರ ಮತ್ತು ದಿ.30 ಸೋಮವಾರ ರಂದು ಪ್ರವಾಸ ಕೈಗೊಳ್ಳಲಿದ್ದಾರೆ.
ದಿ.29, ರವಿವಾರ ಬಾಗಲಕೋಟ ವಿಧಾನಸಭೆ ಉಪಚುನಾವಣೆ ನಿಮಿತ್ತ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಅವರ ಪರವಾಗಿ ಪ್ರಚಾರ ಕೈಗೊಳ್ಳಲಿದ್ದಾರೆ.
ಅಂದು ಬೆ.11ಗಂ ನವನಗರ ಜಿಲ್ಲಾ ಕಾಂಗ್ರೆಸ್ ಕಚೇರಿ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಲಿದ್ದಾರೆ.
ಮ.12ಗಂ. ಸೆಕ್ಟರ್ ನಂಬರ್ 27, ಆರ್ಯಭಟ್ ಶಾಲೆ ಹತ್ತಿರ ನವನಗರ ಶರಣಪ್ಪ ಕುದರಿಕನ್ನೂರ ಅವರ ಮನೆಯಲ್ಲಿ ಸಮಾಜ ಮುಖಂಡರ ಸಭೆ ನಡೆಸಲಿದ್ದಾರೆ.
ಮ.1ಗಂ ವಿದ್ಯಾಗಿರಿಯಲ್ಲಿರುವ ಮುತ್ತು ಜೋಳದ ಅವರ ಮನೆಯಲ್ಲಿ ಸಮಾಜ ಮುಖಂಡರ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಮ.3ಗಂ.ಹರಿಪ್ರೀಯಾ ಹೊಟೇಲ ಹತ್ತಿರ, ಎಪಿಎಂಸಿ ಸರ್ಕಲ್ ಹತ್ತಿರದ ಅಬ್ದುಲರಜಾಕ ಬಾಳಿಕಾಯಿ ಅವರ ಮನೆಯಲ್ಲಿ ಸಮಾಜ ಮುಖಂಡರೊಂದಿಗೆ ಸಭೆ ನಡೆಸಲಿದ್ದಾರೆ.
ಮ.4ಗಂ.ಬೆನಕಟ್ಟಿ ಗ್ರಾಮ, ಸಂ.5ಗಂ.ಹಳ್ಳೂರ ಗ್ರಾಮ ಮತ್ತು ಸಂ.6ಗಂ.ಬೇವೂರ ಗ್ರಾಮಗಳಲ್ಲಿ ಮತಯಾಚಿಸಲಿದ್ದಾರೆ.
ನಂತರ ಎನ್.ಎಚ್ 50 ಆಲಮಟ್ಟಿ-ನಿಡಗುಂದಿ ಮಾರ್ಗವಾಗಿ ಪ್ರಯಾಣಿಸಿ ವಿಜಯಪುರ ವಾಸ್ತವ್ಯ ಮಾಡಲಿದ್ದಾರೆ.
ದಿ.30 ಸೋಮವಾರ ಬೆ.10-11ಗಂ. ವಿಜಯಪುರ ಸಚಿವರ ನಿವಾಸದಲ್ಲಿ ಸಾರ್ವಜನಿಕರ ಕುಂದು ಕೊರತೆ ಆಲಿಸಲಿದ್ದಾರೆ. ಬೆ.11ಗಂ. ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ ಭಗವಾನ್ ಶ್ರೀ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ನಂತರ ಬೆಂಗಳೂರಿಗೆ ಪ್ರಯಾಣಿಸಲಿದ್ದಾರೆ.

