ಉದಯರಶ್ಮಿ ದಿನಪತ್ರಿಕೆ
ಯಡ್ರಾಮಿ: ಪಟ್ಟಣದ ಆರಾಧ್ಯ ದೈವ ಬಸವೇಶ್ವರ ಜಾತ್ರೆ ಸಹಸ್ರಾರು ಭಕ್ತರ ಜಯ ಘೋಷಗಳ ನಡುವೆ ಶನಿವಾರ ಸಡಗರ ಸಂಭ್ರಮದಿಂದ ಜರುಗಿತು.
ಸಂಜೆ ಆರು ಗಂಟೆಗೆ ಪಟ್ಟಣದ ವಿರಕ್ತ ಮಠದ ಪರಮ ಪೂಜ್ಯರಾದ ಸಿದ್ದಲಿಂಗ ಮಹಾಸ್ವಾಮಿಗಳು ರಥೋತ್ಸವಕ್ಕೆ ಚಾಲನೆ ನೀಡಿದರು .
ಕಬ್ಬು, ಹೂ, ಬಾಳೆದಿಂಡು, ನಿಶಾನೆಗಳಿಂದ, ಅಲಂಕಾರಗೊಂಡ ರಥವನ್ನು ಎಳೆಯಲು ಚಾಲನೆ ನೀಡುತ್ತಿದ್ದಂತೆ ಭಕ್ತರ ಸಮುದಾಯದಿಂದ ಜಯ ಘೋಷಗಳು ಮುಗಿಲು ಮುಟ್ಟಿತು. ರಥೋತ್ಸವದ ಮಾರ್ಗದುದ್ದಕ್ಕೂ ಭಕ್ತರು ಚಪ್ಪಾಳೆ ಮೂಲಕ ಸಂಭ್ರಮಿಸಿದರು. ಮಾರ್ಗದ ಎರಡು ಬದಿಯಲ್ಲಿ ನಿಂತಿದ ಭಕ್ತರು ರಥಕ್ಕೆ ಉತ್ತತ್ತಿ, ಕೊಬ್ಬರಿ, ಬಾಳೆಹಣ್ಣು ಅರ್ಪಿಸಿ ಭಕ್ತಿ ಮೆರೆದರು.
ರಥವು ಪಾದಗಟ್ಟೆ ತಲುಪುತ್ತಿದ್ದಂತೆ ಭಕ್ತರ ಜಾತ್ರಾ ಸಂಭ್ರಮ ಇಮ್ಮಡಿಗೊಂಡು ಬಸವೇಶ್ವರ ಮಹಾರಾಜಕಿ ಜೈ..ಎನ್ನುವ ಘೋಷಣೆ ಮುಳುಗಿತು. ಜಾತ್ರೆಯ ನಿಮಿತ್ತ ಬೆಳಗಿನಿಂದಲೇ ದೇವಸ್ಥಾನದಲ್ಲಿ ವಿಶೇಷ ಪೂಜೆ,ಅಭಿಷೇಕ,ಆರತಿ,ಸೇರಿದಂತೆ ವಿವಿಧ ಪೂಜೆ ಕಾರ್ಯಗಳು ಸಡಗರದಿಂದ ಜರಗಿದವು. ಭಕ್ತರು ಹೋಳಿಗೆ, ಕಡಬು, ಉಗ್ಗಿ,ಹಾಗೂ ವಿವಿಧ ಬಗೆಯ ಖಾದ್ಯಗಳು ಮಾಡಿ ನೈವೇದ್ಯ ಸಮರ್ಪಿಸಿದರು ಜಾತ್ರೆ ಅಂಗವಾಗಿ ದೇವಸ್ಥಾನಕ್ಕೆ ವಿದ್ಯುತ್ ಅಲಂಕಾರ ಮಾಡಲಾಯಿತು. ಪಟ್ಟಣದ ಹಾಗೂ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಬೆಳಗಿನದಲ್ಲಿ ದೇವಸ್ಥಾನಕ್ಕೆ ಆಗಮಿಸಿ, ಬಸವೇಶ್ವರ ದರ್ಶನ ಪಡೆದುಕೊಂಡರು. ಸಂಜೆ ನಡೆದ ಮಹಾ ರಥೋತ್ಸವ ದಲ್ಲಿ ಮಕ್ಕಳು, ಮಹಿಳೆಯರು, ಸೇರಿದಂತೆ ಹೆಚ್ಚಿನ ಸಂಖ್ಯೆಯ ಭಕ್ತರು ಪಾಲ್ಗೊಂಡರು.
ಕಳೆದ 15 ದಿನಗಳ ಕಾಲ ವಿರಕ್ತಮಠದ ಪೂಜ್ಯ ಸಿದ್ಧಲಿಂಗ ಸ್ವಾಮೀಜಿ ಅವರ ಅಮೃತ ವಾಣಿಯಿಂದ ಪುರಾಣ ಕಾರ್ಯಕ್ರಮ ಜರುಗಿತು. ಬಸವೇಶ್ವರ ಜಾತ್ರೆಯಲ್ಲಿ ಅಪಾರ ಭಕ್ತ ಸಮೂಹ ಭಕ್ತಿಯಲ್ಲಿ ಮೆರೆದರು. ಪ್ರತಿ ವರ್ಷ ಯುಗಾದಿಯ 9 ದಿನಗಳ ನಂತರ ಜಾತ್ರೆ ಜರುಗುತ್ತದೆ.
ಹಾಲುಮತದ ಸಮಾಜದವರಿಂದ ಡೊಳ್ಳು ಕುಣಿತ ದೊಂದಿಗೆ ಬೆಳಗಿನ ಜಾವ ಸರ್ಕಾರ ರವರ ಮನೆಯಿಂದ ಕಳಸ, ಹಾಲುಮತದ ಸಮಾಜದ ಮುತ್ತಪ್ಪ ಪೂಜಾರಿ ಶಿವಸೇನಾ ತಾಲೂಕ ಉಪಾಧ್ಯಕ್ಷರು, ಇವರು ಹೊತ್ತುಕೊಂಡು ರಥಕ್ಕೆ ಬಂದು ಕಳಸಾರೋಹಣ ನೆರವೇರಿಸಿದರು. ಮುಖಂಡರಾದ ಎನ್ ಆರ್ ಪಾಟೀಲ, ಚಂದ್ರಶೇಖರ ಪುರಾಣಿಕ, ಮಲ್ಲಿಕಾರ್ಜುನ್ ಹಲಕರ್ಟಿ, ಸಿದ್ದನಗೌಡ ಮಾಲಿಪಾಟೀಲ್, ಅಪ್ಪುಗೌಡ ಮಾಲಿಪಾಟೀಲ್, ಇಬ್ರಾಮ್ ಸಾಬ್ ಉಸ್ತಾದ್, ಮಾನಿಂಗಪ್ಪಗೌಡ ಬಂಡೆಪ್ಪಗೋಳ, ಗುರು ಸಂಗಪ್ಪ ಸಣ್ಣಹಳ್ಳಿ, ಚನ್ನವೀರಪ್ಪ ಗೌಡ ಬಂಡೆಪ್ಪಗೋಳ, ಅಣ್ಣಯ್ಯ ಹಿರೇಮಠ, ಹಯ್ಯಾಳಪ್ಪ ಗಂಗಾಕರ್,ಮಲ್ಲಿಕಾರ್ಜುನ್ ಹೂಗಾರ್, ಈರಣ್ಣ ಸುಂಕದ್, ರಾಚು ತಳವಾರ್, ಭಾಗ್ಯವಂತ ಪವಾರ್, ಗಣೇಶ್ ದೇವರಮನಿ, ರಜಾಕ್ ಮನಿಯರ್,ಅಮರ್ ಕುಸ್ತಿ, ಮಲ್ಲು ಕನಕ, ಮಡಿವಾಳಪ್ಪ ತಳವಾರ್, ಬಸವರಾಜ್ ಪವಾರ್, ಚಿದಾನಂದ ಮುಳ್ಳೋಳ್ಳಿ, ಹಾಗೂ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವೈಭವದ ರಥೋತ್ಸವ ಜರುಗಿತು.

