ಉದಯರಶ್ಮಿ ದಿನಪತ್ರಿಕೆ
ಇಂಡಿ: ಹಿಂದಿ ವಿಷಯದಲ್ಲಿ ಶಾಲಾ ಶಿಕ್ಷಣ ಇಲಾಖೆ ತೆಗೆದುಕೊಂಡ ಹೊಸ ನಿಯಮವನ್ನು ದೇಶದ ಏಕತೆ ಹಾಗೂ ದೇಶೀಯ ಭಾಷೆಗಳ ಹಿತರಕ್ಷಣೆಯ ದೃಷ್ಟಿಯಿಂದ ಈ ನಿರ್ಧಾರವನ್ನು ಮರು ಪರಿಶೀಲಿಸಬೇಕು ಎಂದು ಸರ್ವಜ್ಞ ಕರಿಯರ್ ಅಕಾಡೆಮೆ ಸಂಸ್ಥಾಪಕ ಅಧ್ಯಕ್ಷ ನಾಗೇಶ ಹೆಗಡ್ಯಾಳ ಒತ್ತಾಯಿಸಿದರು.
ಶನಿವಾರ ನಗರದ ಖಾಸಗಿ ಹೋಟೆಲ್ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ೨೦೨೬ರ ಪರೀಕ್ಷೆಯಿಂದಲೇ ಅನ್ವಯವಾಗುವಂತೆ ಹಿಂದಿ ಸೇರಿದಂತೆ ತೃತೀಯ ಭಾಷಾ ವಿಷಯಗಳಿಗೆ ಅಂಕ ನೀಡುವ ಪದ್ಧತಿ ಕೈಬಿಟ್ಟು, ಗ್ರೇಡ್ ಎ, ಬಿ, ಸಿ, ಡಿ ಎಂದು ನಮೂದಿಸಲು ಶಾಲಾ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಹಿಂದಿ ಭಾಷೆಯ ಶಿಕ್ಷಕರ ಭವಿಷ್ಯದ ದೃಷ್ಟಿಯಿಂದ ಹಾಗೂ ಮಕ್ಕಳ ಸರ್ವಾಂಗಿಣ ವಿಕಸನದ ದೃಷ್ಟಿಯಿಂದ ಸರ್ಕಾರವು ಈ ನಿರ್ಧಾರವನ್ನು ಕೈಬಿಡಬೇಕು ಎಂದರು.
ನಮ್ಮ ರಾಜ್ಯದ ಮಕ್ಕಳು ಮುಂದೆ ಐಎಎಸ್, ಐಪಿಎಲ್, ಐಎಫ್‌ಎಸ್ ನಂತಹ ದೊಡ್ಡ ಹುದ್ದೆಗಳಿಗೆ ಆಯ್ಕೆಯಾದ ನಂತರ ದೇಶದ ಯಾವುದೇ ಭಾಗದಲ್ಲಿ ಸೇವಿ ಸಲ್ಲಿಸಲು ಹೋದಾಗ ಹಿಂದಿ ಓದಲು, ಬರೆಯಲು, ಮಾತನಾಡಲು ಅಡಚಣೆಯಾಗುತ್ತದೆ ಆ ನಿಟ್ಟಿನಲ್ಲಿ ಸರಕಾರ ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಲು ಹೆಗಡ್ಯಾಳ ತಿಳಿಸಿದರು.

