ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪಟ್ಟಣದ ಪಂಚಾಯಿತಿಯಲ್ಲಿ ಸಂತೆ ಕರ ವಸೂಲಿಗಾಗಿ (ಲಿಲಾವು ಗಾಗಿ) ಸಭೆ ಜರುಗಿತು.
ಪಂಚಾಯಿತಿ ಕಾರ್ಯಾಲಯದಲ್ಲಿ ಗುರುವಾರದಂದು ಅಧ್ಯಕ್ಷೆ ಜಯಶ್ರೀ ದೇವಣಗಾಂವ, ಉಪಾಧ್ಯಕ್ಷ ರಮೇಶ ಮಸಬಿನಾಳ ಮುಖ್ಯಾಧಿಕಾರಿ ಅಪ್ರೋಜ್ ಅಹ್ಮದ್ ಪಟೇಲ ಅವರ ಉಪಸ್ಥಿತಿಯಲ್ಲಿ ಜರುಗಿದ ಸಭೆಯಲ್ಲಿ ಕಳೆದ ವರ್ಷದಿಂದ ನಡೆಯದ ಇರುವ ಲಿಲಾವಿನ ಕುರಿತು ಚರ್ಚಿಸಿ ನಂತರ ಸಾರ್ವಜನಿಕರ ಸಮ್ಮುಖದಲ್ಲಿ ಭಾಗವಹಿಸಿದ ಅಬ್ದುಲ್ ಜಬ್ಬರ್ ಚೌಧರಿ ಎಂಬುವವರಿಗೆ ವಾರ್ಷಿಕ ೯,೦೫೦೦೦( ೯ ಲಕ್ಷ ಐದು ಸಾವಿರ) ರೂ.ಗಳಂತೆ ಲಿಲಾವು ನೀಡಲಾಯಿತು.
ಸದಸ್ಯರಾದ ಕಾಸುಗೌಡ ಬಿರಾದಾರ(ಜಲಕತ್ತಿ), ಕಾಶೀನಾಥ ಬಜಂತ್ರಿ, ಸಿಂಧೂರ ಡಾಲೇರ, ಹುಸೇನ್ ಕೊಕಟನೂರ, ಸಿಬ್ಬಂದಿ ಮುತ್ತುರಾಜ ಹಿರೇಮಠ, ಸೋಮು ಭೋವಿ, ಎಸ್.ಎಸ್.ಪೂಜಾರಿ, ಬಿ.ಪಿ.ಹಜೇರಿ, ನಬಿರಸೂಲ್ ಮಣೂರ, ಅಬ್ದುಲ್ ಚೌಧರಿ, ಬಾಪುಸಾಬ್ ಯಲಗಾರ, ಖಾಜಾ ಬಂದೇನವಾಜ್ ಯಲಗಾರ ಇದ್ದರು.

