ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ವಿಪ್ರ ಸಮುದಾಯದ ಚಿದಂಬರ ಸೇವಾ ಸಮಿತಿ ಪದಾಧಿಕಾರಿಗಳ ಆಯ್ಕೆ ಅವಿರೋಧವಾಗಿ ಜರುಗಿತು.
ಪಟ್ಟಣದ ವಿಠ್ಠಲ ಮಂದಿರದ ಆವರಣದಲ್ಲಿ ಗುರುವಾರ ಜರುಗಿದ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ನರೇಂದ್ರ ನಾಡಗೌಡ, ಉಪಾದ್ಯಕ್ಷರಾಗಿ ವೆಂಕಟೇಶ ಕುಲಕರ್ಣಿ ಹಾಗೂ ಕಾರ್ಯದರ್ಶಿಯಾಗಿ ಚಿದಂಬರ ಕುಲಕರ್ಣಿ(ಹಂಚಲಿ) ಅವಿರೋಧವಾಗಿ ಆಯ್ಕೆಯಾದರು. ಸಮಿತಿಯ ಉಳಿದ ಪದಾಧಿಕಾರಿಗಳನ್ನು ಹನುಮ ಜಯಂತಿ ದಿನದಂದು ಆಯ್ಕೆ ಮಾಡಲಾಗುವುದು ಎಂದು ಸಮಿತಿ ತಿಳಿಸಿತು.
ಸೇವಾ ಸಮಿತಿ ಮಾಜಿಅಧ್ಯಕ್ಷ ಡಾ.ಆರ್.ಆರ್.ನಾಯಿಕ್, ಪಾಂಡುರಂಗ ದೇಶಪಾಂಡೆ, ಮಾಜಿಕಾರ್ಯದರ್ಶಿ ಗುರುರಾಜ ಕುಲಕರ್ಣಿ, ಶರತ್ ಕುಲಕರ್ಣಿ, ಡಿ.ಜಿ.ದೇಶಪಾಂಡೆ, ಪ್ರಮೋದ ನಾಡಗೌಡ, ಶ್ರೀಪಾದ ಜೋಷಿ, ಸುಧೀರ ಪಾಟೀಲ, ರಾಘವೇಂದ್ರ ಕುಲಕರ್ಣಿ, ಶ್ರೀನಿವಾಸ ಕುಲಕರ್ಣಿ, ಪಿ.ಕೆ.ಕುಲಕರ್ಣಿ, ಆನಂದ ಕುಲಕರ್ಣಿ, ಶ್ರೀಧರ ನಾಡಗೌಡ ಇದ್ದರು.

