ಉದಯರಶ್ಮಿ ದಿನಪತ್ರಿಕೆ
ಚಡಚಣ: ಶ್ರೀ ಬಸವೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ ವಿಜಯಪುರದ ಇಂಗ್ಲೀಷ್ ವಿಭಾಗದ ಉಪನ್ಯಾಸಕರಾದ ಶ್ರೀಮತಿ ಗುರುದೇವಿ ಹಳ್ಳೂರ (ನಂದಿನಿ ಮ. ಬಿರಾದಾರ) ಶಿಕ್ಷಣ ಶಾಸ್ತ್ರ ವಿಭಾಗದಲ್ಲಿ ಮಂಡಿಸಿದ ಪ್ರಬಂಧಕ್ಕೆ ಪಿ ಎಚ್ ಡಿ ಪದವಿ ಪ್ರದಾನ ಮಾಡಲಾಗಿದೆ.
ಇವರು ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯಕ್ಕೆ ಶಿಕ್ಷಣ ಶಾಸ್ತ್ರವಿಷಯದಲ್ಲಿ “ಎ ಸ್ಟಡಿ ಆಫ್ ಲರ್ನಿಂಗ್ ಟೀಚಿಂಗ್ ಅಂಡ್ ಥಿಂಕಿಂಗ್ ಸ್ಟೈಲ ಆಫ್ ಪ್ರಾಸ್ಪೆಕ್ಟಿವ್ ಟೀಚರ್ಸ್ ಇನ್ನ ರಿಲೇಶನ್ ಟು ದೇಆರ್ ಟೀಚಿಂಗ್ ಕಾಂಪಿಟನ್ಸ” ಎಂಬ ವಿಷಯದ ಮೇಲೆ ಸಂಶೋಧನೆ ನಡೆಸಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿ ಎಚ್ ಡಿ ಪದವಿ ಪ್ರದಾನ ಮಾಡಲಾಗಿದೆ.
ಇವರಿಗೆ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರದ ಮೌಲ್ಯಮಾಪನ ಕುಲ ಸಚಿವರಾದ ಹಾಗೂ ಶಿಕ್ಷಣ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಬಿ.ಎಲ್. ಲಕ್ಕಣ್ಣನವರು ಮಾರ್ಗದರ್ಶನ ಮಾಡಿದ್ದರು.

