Author: editor.udayarashmi@gmail.com

ವಿಜಯಪುರ: ಶ್ರೀ ಚಿದಂಬರ ಸೇವಾ ಸಮಿತಿ, ವಿಜಯಪುರ ವತಿಯಿಂದ ಶ್ರಾವಣ ಮಾಸದದ ೪೮ನೇ ವರ್ಷದ ಶ್ರೀ ಶಿವಚಿದಂಬರ ಅಪ್ರಕಾಶಿತ ಲೀಲಾಗ್ರಂಥ ಪಠಣದ ಮಂಗಲ ಮಹೋತ್ಸವ ಕಾರ್ಯಕ್ರಮವು ಜರುಗುವುದು.ಆ.೩೧ ರಂದು ಶೋಭಾ ಯಾತ್ರೆ ಸಂಜೆ ೪ ಗಂಟೆಗೆ ನಗರದ ಇಬ್ರಾಹಿಂಪೂರ ವೆಂಕಟೇಶ್ವರ ದೇವಸ್ಥಾನದಿಂದ ಚಿದಂಬರೇಶ್ವರ ದೇವಸ್ಥಾನದ ವರೆಗೆ ಶೋಭಾಯಾತ್ರೆ ನಂತರ ಸಭೆ, ಸೆ.೧ರಂದು ಮಂಗಳ ಮಹೋತ್ಸವ ದಿವ್ಯ ಸಾನ್ನಿಧ್ಯ ಮುರಗೋಡ ಕೆಂಗೇರಿಯ ಶಿವಚಿದಂಬರೇಶ್ವರ ಮಠ ಪೀಠಾಧಿಪತಿ ದಿವಾಕರ ದೀಕ್ಷಿತ ಶಂಕರ ದೀಕ್ಷಿತ ಗುರುಮಹಾರಾಜರು ಅವರ ದಿವ್ಯ ಸಾನ್ನಿಧ್ಯ. ಬೆಳಿಗ್ಗೆ ೬ ಗಂಟೆಗೆ ಕಾಕಡಾರತಿ ೭ ಗಂಟೆಗೆ ಕ್ಷೀರಾಭಿಷೇಕ ಹಾಗೂ ರುದ್ರಾಭಿಷೇಕ ೮ ಗಂಟೆಗೆ ಶ್ರೀಮದ್ ಯೋಘೀಶ್ವರ ಯಾಜ್ಞವಲ್ಕ ಮಹರ್ಷಿಗಳ ಅಷ್ಟೊತ್ತರ. ೧೦ ಗಂಟೆಗೆ ಸತ್ಯ ಚಿದಂಬರ ವ್ರತ ಮತ್ತು ಕಥೆ, ಮಧ್ಯಾಹ್ನ ೧೨ ಗಂಟೆಗೆ ಸಭಾ ಕಾರ್ಯಕ್ರಮದ ಸಾನಿಧ್ಯವನ್ನು ಮುರಗೋಡ ಕೆಂಗೇರಿಯ ಶಿವಚಿದಂಬರೇಶ್ವರ ಮಠ ಪೀಠಾಧಿಪತಿಗಳಾದ ದಿವಾಕರ ದೀಕ್ಷಿತ ಶಂಕರ ದೀಕ್ಷಿತ ಗುರುಮಹಾರಾಜರು ಹಾಗೂ ಬ್ರಹ್ಮಾನಂದ ಮಹಾಸ್ವಾಮಿಗಳು ದ್ವಾದಶ ಪೀಠಾಧಿಕಾರಿಗಳಾ ಶ್ರೀ ಜ್ಞಾನೇಶ್ವರ…

Read More

ವಿಜಯಪುರ: ಸರ್ಕಾರಿ ಶಾಲೆಯಲ್ಲಿ ಅಕ್ಷರ ದಾಸೋಹ ಯೋಜನೆಯಡಿಯಲ್ಲಿ ವಿಧ್ಯಾರ್ಥಿಗಳು ಮದ್ಯಾಹ್ನ ಬಿಸಿಊಟ ಸೇವಿಸುತ್ತಿರುವ ಸಮಯದಲ್ಲಿ ಹಾರಿ ಬಂದ ರಾಷ್ಟ್ರಪಕ್ಷಿ ನವಿಲು ಮಕ್ಕಳೊಂದಿಗೆ ಬಿಸಿಊಟ ಸವಿದು ಮಕ್ಕಳಿಗೆ ಮನೊಲ್ಲಾಸ ಹೆಚ್ಚಿಸಿದ ಘಟನೆ ಸೋಮವಾರ ನಡೆದಿದೆ.ತಾಲ್ಲೂಕಿನ ಜಂಬಗಿ (ಆ) ಗ್ರಾಮದ ಕೆರೂರವಸ್ತಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳು ಬಿಸಿಊಟ ಸೇವಿಸುವಾಗ ಹಾರಿ ಬಂದ ರಾಷ್ಟ್ರ ಪಕ್ಷಿ ಮಕ್ಕಳು ತಟ್ಟೆಯಲ್ಲಿ ಅನ್ನ ಹಾಕಿಕೊಂಡು ಪ್ರಾರ್ಥನೆ ಮಾಡುತ್ತಾ ಕುಳಿತಾಗ ಅನ್ನದ ತಟ್ಟೆಗೆ ಕಡೆಗೆ ಹೆಜ್ಜೆ ಹಾಕುತ್ತಾ ಸಾಗಿದೆ. ಈ ಸಮಯದಲ್ಲಿ ವಿಧ್ಯಾರ್ಥಿಯೋರ್ವಳು ತನ್ನ ತಟ್ಟೆಯನ್ನು ನವಿಲಿಗೆ ಕೊಟ್ಟು ಬೇರೊಂದು ತಟ್ಟೆ ತೆಗೆದುಕೊಂಡಿದ್ದಾಳೆ.ಶಾಲಾ ಆವರಣವು ಹಚ್ಚ ಹಸಿರಿನ ಗಿಡಗಳ ಮಧ್ಯೆ ಸುಂದರ ಪ್ರಕೃತಿ ಸೌಂದರ್ಯ ಹೊಂದಿದ್ದು, ಪ್ರತಿದಿನ ಮಕ್ಕಳು ಈ ಪ್ರಕೃತಿ ಮಡಿಲಲ್ಲಿ ಊಟ ಸೇವಿಸುತ್ತಾರೆ. ಹಸಿರು ತುಂಬಿದ ವಾತಾವರಣದಲ್ಲಿ ರಾಷ್ಟ್ರಪಕ್ಷಿ ಆಗಮಿಸಿದ್ದರಿಂದ ವಿಧ್ಯಾರ್ಥಿಗಳು ಖುಷ್ ಆಗಿದ್ದಾರೆ. ಈ ಸಂದರ್ಭದಲ್ಲಿ ಊಟ ಸವಿಯುತ್ತಾ ಮುಖ್ಯೋಪಾಧ್ಯಾಯ ಪಿ.ಪಿ.ನಾಯಕ ಮಕ್ಕಳಿಗೆ ರಾಷ್ಟ್ರಪಕ್ಷಿಯ ಕುರಿತು ಸಂಪೂರ್ಣ ವಿವರ ನೀಡಿ ಮಕ್ಕಳಿಗೆ ಪಕ್ಷಿ…

Read More

ಶುಶ್ರೂಷಕ ಶಶಿಕಾಂತ ಆತ್ಮಹತ್ಯೆ :ನ್ಯಾಯಕ್ಕಾಗಿ ಎಸ್ಸಿ-ಎಸ್ಟಿ ನೌಕರರ ಆಗ್ರಹ ವಿಜಯಪುರ: ಸರಕಾರಿ ಆಸ್ಪತ್ರೆಯಲ್ಲಿ ಸ್ಟಾಪನರ್ಸ್ ಅಂತಾ ಕಾರ್ಯನಿರ್ವಹಿಸುತ್ತಿರುವ ಶಶಿಕಾಂತ ತಂ ಮನೋಹರ ಬನ್ನೂರ ಇವರ ಆತ್ಮಹತ್ಯೆಗೆ ಕಾರಣರಾದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ರಾಜ್ಯ ಎಸ್.ಸ್ಸಿ / ಎಸ್ಟಿ ನೌಕರರ ಸಮನ್ವಯ ಸಮಿತಿ, ಜಿಲ್ಲಾ ಘಟಕ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಸಮನ್ವಯ ಸಮಿತಿಯ ಜಿಲ್ಲಾದ್ಯಕ್ಷ ಬಿ.ಎಚ್. ನಾಡಗಿರಿ ಮಾತನಾಡಿ, ತಾಳಿಕೋಟಿ ತಾಲೂಕಾ ಆರೋಗ್ಯ ಸಮುದಾಯ ಕೇಂದ್ರದಲ್ಲಿ ಸ್ಟಾಪ್ ನರ್ಸ ನೌಕರನಾಗಿ ಸೇವೆ ಸಲ್ಲಿಸುತ್ತಿದ್ದ ಶಶಿಕಾಂತ ಇವರು ಆ.೨೧ ರಂದು ಆತ್ಮಹತ್ಯೆಗೆ ಮುಂಚೆ ತನ್ನ ಸಾವಿಗೆ ಕಾರಣ ಯಾರೆಂದು ವ್ಯಾಟ್ಸ್ಫ್ ಸ್ಟೇಟಸ್‌ನಲ್ಲಿ ಹೆಸರು ಬರೆದು ಹಾಕಿದ್ದಾರೆ. ಕಾರಣ ಈತನ ಸಾವಿಗೆ ಮೂಲ ಕಾರಣರಾದ (೧) ಈರಣ್ಣ ವಡವಡಗಿ (೨) ಶ್ರೀಮತಿ ಜ್ಯೋತಿ ಕೋಳೂರಗಿ (೩) ಶ್ರೀಮತಿ ಶ್ರೀದೇವಿ ಬಗಲಿ ಈ ಮೂವರು ಅದೇ ಆಸ್ಪತ್ರೆಯಲ್ಲಿ ಸೇವೆಸಲ್ಲಿಸುತ್ತಿದ್ದು, ದಿನನಿತ್ಯ ಜಾತಿ ನಿಂದನೆ ದಬ್ಬಾಳಿಕೆ ಕಿರುಕುಳದಿಂದ ಬೇಸತ್ತು…

Read More

– ಜಯಶ್ರೀ.ಜೆ. ಅಬ್ಬಿಗೇರಿ,ಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ. ಮೊ: ೯೪೪೯೨೩೪೧೪೨ ಜೀವನ ನಮ್ಮನ್ನು ಸುಖಮಯ ದಾರಿಯಲ್ಲಿ ಕರೆದುಕೊಂಡು ಹೊರಟಾಗ ನಾವು ಮೇಲ್ಮೆöÊಯಲ್ಲೇ ಬದುಕಿ ಬಿಡುತ್ತೇವೆ. ಬದುಕು ನಾವು ಅಂದುಕೊಂಡದಕ್ಕಿಂತ ಸ್ನೇಹಮಯಿಯಾಗಿದೆ ಅಂತ ಜ್ಞಾನದ ಮೂಸೆಯಿಂದ ಒಂದು ಮಾತು ಬರೋದೇ ಇಲ್ಲ. ಆದರೆ ಯಾತನೆಗಳು ಸುತ್ತುವರಿದಾಗ ಬದುಕಿನ ಜಟಕಾ ಬಂಡಿ ಓಡಿಸುವುದು ತುಂಬಾ ದುಸ್ತರವೆನಿಸುತ್ತದೆ. ಕಂಡ ಕಂಡವರ ಮುಂದೆ ಗೋಳಿಡುತ್ತೇವೆ. ಸುಖದ ಬೆಳಕಿನಲ್ಲಿ ಕಣ್ಮುಚ್ಚಿದ್ದ ನಮಗೆ ಕಷ್ಟ ಬಂದಾಗ ಬದುಕಿನಾಳ ತಿಳಿಯುತ್ತದೆ. ಕಷ್ಟ ನಮ್ಮವರು ಯಾರೆಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಎಂಬ ಜ್ಞಾನವಿದ್ದರೂ ಕ್ರಿಯೆಯಲ್ಲಿ ತರಲು ಸಾಧ್ಯವಾಗುವುದಿಲ್ಲ. ಕಷ್ಟದ ಕತ್ತಲಲ್ಲಿ ತಡಕಾಡುತ್ತಿರುವಾಗ ಸುಖದ ಕಿಟಕಿಯಿಂದ ಒಂದೇ ಒಂದು ಕಿರಣ ಒಳನುಸುಳಿದರೂ ಸಾಕು ಅದನ್ನು ಗಬಕ್ಕನೇ ಹಿಡಿಕೊಳ್ಳಲು ಕಾತರಿಸುತ್ತೇವೆ. ಸುಖವನ್ನು ಸುಖವಾಗಿ ಕಳೆಯುತ್ತೇವೆ. ಮತ್ತೊಬ್ಬರ ಭಾವನೆಗಳನ್ನು ಅಗತ್ಯಗಳನ್ನು ಲೆಕ್ಕಿಸದೇ ಕಳೆದುಬಿಡುತ್ತೇವೆ. ಆದರೆ ಕಷ್ಟವನ್ನು ಸಹಿಸಿಕೊಳ್ಳಲಾಗುವುದಿಲ್ಲ. ಬದುಕಿನ ಕೊನೆಯ ಕ್ಷಣವೇ ಬಂದಂತೆ ಕ್ಷಣ ಕ್ಷಣವೂ ವಿಲ ವಿಲ ಒದ್ದಾಡುತ್ತೇವೆ. ಹಬ್ಬಕ್ಕೆ ತೊಡಬೇಕೆಂದು ತಂದ ಹೊಸ ಧಿರಿಸೊಂದು ಕೊಳೆಯಲ್ಲಿ ಬಿದ್ದರೆ…

Read More

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಜೈಲಿನಲ್ಲಿ ನಟ ದರ್ಶನ್ ಗೆ ರಾಜಾತಿಥ್ಯ ಫೋಟೋ ವೈರಲ್ ಆದ ಬೆನ್ನಲ್ಲೇ ಇದೀಗ ನಟನಿಗೆ ಸಂಕಷ್ಟ ಎದುರಾಗಿದೆ. ದರ್ಶನ್ ರನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವಂತೆ ಕೋರ್ಟ್ ಆದೇಶ ನೀಡಿದೆ.ನಟ ದರ್ಶನ್ ಸೇರಿದಂತೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಹಲವು ಆರೋಪಿಗಳನ್ನು ಸಹ ಇದೀಗ ಬೇರೆ ಬೇರೇ ಜೈಲಿಗೆ ಸ್ಥಳಾಂತರಿಸುವಂತೆ ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಆದೇಶಿಸಿದೆ. ಅದರಂತೆ ದರ್ಶನ್ ರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗುತ್ತದೆ. ನ್ಯಾಯಾಲಯದ ಆದೇಶದ ಪ್ರತಿ ಸಿಗುತ್ತಿದ್ದಂತೆ ಜೈಲು ಸಿಬ್ಬಂದಿ ದರ್ಶನ್ ರನ್ನು ಸ್ಥಳಾಂತರಿಸಲಿದ್ದಾರೆ. ದರ್ಶನ್​ ಶಿಫ್ಟ್​ ಆಗಲಿರುವ ಬಳ್ಳಾರಿ ಜೈಲಿನಲ್ಲಿ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಇದೆ. ಹೀಗಾಗಿ ಮುಂದೆ ನ್ಯಾಯಾಲಯದ ವಿಚಾರಣೆಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಒಳಪಡಿಸಲಾಗುತ್ತದೆ.ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿನ ಪವನ್, ರಾಘವೇಂದ್ರ, ನಂದೀಶ್ ಮೈಸೂರು ಜೈಲಿಗೆ ಶಿಫ್ಟ್​ ಆಗಬೇಕಿದೆ. ಜಗದೀಶ್​, ಲಕ್ಷ್ಮಣ ಶಿವಮೊಗ್ಗ ಜೈಲು, ಧನರಾಜ್​ಗೆ ಧಾರವಾಡ ಜೈಲು ಗತಿಯಾಗಿದೆ. ವಿಜಯಪುರ ಜೈಲಿಗೆ ವಿನಯ್​ ಸ್ಥಳಾಂತರ…

Read More

ಮುಖ್ಯಮಂತ್ರಿ, ಸಚಿವರು, ಶಾಸಕರು ಹಾಗೂ ಸಂಸದರ ಉಪಸ್ಥಿತಿ | ಹೆಚ್ಡಿಕೆ ವಿರುದ್ದ ಡಿಸಿಎಂ ಡಿ.ಕೆ.ಶಿವಕುಮಾರ್ ಕಿಡಿ ಬೆಂಗಳೂರು: ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ, ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಜನಾರ್ದನ ರೆಡ್ಡಿ, ಶಶಿಕಲಾ ಜೊಲ್ಲೆ ಸೇರಿದಂತೆ ರಾಜ್ಯಪಾಲರ ಮುಂದೆ ಬಾಕಿ ಇರುವ ಹಲವರ ಪ್ರಕರಣಗಳ ವಿಚಾರಣೆಗೆ ಅನುಮತಿ ನೀಡುವಂತೆ ಆಗ್ರಹಿಸಿ ಕಾಂಗ್ರೆಸ್ ವತಿಯಿಂದ ಆಗಸ್ಟ್ 31ರಂದು ‘ರಾಜಭವನ ಚಲೋ’ ಹಮ್ಮಿಕೊಳ್ಳಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,”ಆಗಸ್ಟ್ 31ರ ಬೆಳಗ್ಗೆ 10 ಗಂಟೆಗೆ ವಿಧಾನಸೌಧದ ಗಾಂಧಿ ಪ್ರತಿಮೆಯಿಂದ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು. ಈ ವೇಳೆ ಮುಖ್ಯಮಂತ್ರಿ, ಎಲ್ಲಾ ಸಚಿವರು, ಕಾಂಗ್ರೆಸ್‌ನ ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ಸಂಸದರು ಉಪಸ್ಥಿತರಿರಲಿದ್ದಾರೆ” ಎಂದು ಹೇಳಿದರು.“ಬೇರೆ ನಾಯಕರ ವಿರುದ್ಧ ಪ್ರಾಥಮಿಕ ತನಿಖೆ ನಡೆದು ವಿಚಾರಣೆಗೆ ಅನುಮತಿ ಕೇಳಿದ್ದರೂ ರಾಜ್ಯಪಾಲರು ನೀಡಿಲ್ಲ. ಆದರೆ, ಯಾವುದೇ ಪ್ರಾಥಮಿಕ ತನಿಖೆ ನಡೆಯದಿದ್ದರೂ ಮುಖ್ಯಮಂತ್ರಿಗಳ ವಿರುದ್ಧ ವಿಚಾರಣೆಗೆ ತರಾತುರಿಯಲ್ಲಿ…

Read More

ಕೊಲ್ಹಾರ: ತಾಲೂಕಿನ ಹಣಮಾಪೂರ ಹಾಗೂ ಬಳೂತಿ ಗ್ರಾಮಗಳ ಆರಾಧ್ಯ ದೈವ ಸುಕ್ಷೇತ್ರ ಬಾಂವಿ ಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡ ರಥೋತ್ಸವವು ಅಪಾರ ಸಂಖ್ಯೆಯ ಭಕ್ತ ಸಮೂಹದ ಮದ್ಯದಲ್ಲಿ ಬಹಳ ವಿಜೃಂಭಣೆಯಿಂದ ಜರುಗಿತು.ಸೋಮವಾರ ಬಾವಿ ಬಸವೇಶ್ವರ ಅರ್ಚಕರಾದ ಸಂಗಯ್ಯ ಚಿಕ್ಕಮಠರವರಿಂದ ಬೆಳಿಗ್ಗೆ ೮ಗಂಟೆಯಿಂದ ೧೦ಗಂಟೆವರೆಗೆ ಬಾಂವಿ ಬಸವೇಶ್ವರನಿಗೆ ರುದ್ರಾಭಿಷೇಕ ಜರುಗಿತು.ನಂತರ ಬಳೂತಿ ಗ್ರಾಮದಿಂದ ದೇವಸ್ಥಾನದವರೆಗೆ ಸಕಲ ವಾದ್ಯ ವೈಭವಗಳೊಂದಿಗೆ ಬಸವೇಶ್ವರ ಬೆಳ್ಳಿ ಮೂರ್ತಿಯನ್ನು ಮೆರವಣಿಗೆ ಮೂಲಕ ಬರಮಾಡಿಕೊಂಡು ಮೂಲ ನಂದಿಶ್ವರನಿಗೆ ಬೆಳ್ಳಿ ಮೂರ್ತಿಯನ್ನು ತೋಡಿಸಲಾಯಿತು. ಮದ್ಯಾಹ್ನ ೩ ಗಂಟೆಯಿಂದ ಹಣಮಾಪೂರ ಗ್ರಾಮದ ಸಕಲ ಸದ್ಭಕ್ತರಿಂದ ಬಹು ವರ್ಷಗಳ ನಂತರ ನಿರ್ಮಿಸಿದ ನಂದಿಕೋಲು ಹಾಗೂ ರಥೋತ್ಸವದ ಹಗ್ಗ ಹಾಗೂ ಕಳಸಗಳನ್ನು ಸಕಲ ವಾದ್ಯ ವೈಭವಗಳೊಂದಿಗೆ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಕರೆ ತರಲಾಯಿತು. ನಂತರ ಕಳಸ ಹಾಗೂ ಹಗ್ಗಗಳಿಗೆ ಪೂಜೆ ಸಲ್ಲಿಸಿ ದೇವಸ್ಥಾನ ಹಾಗೂ ರಥೋತ್ಸವದ ಮೇಲೆ ಕಳಸಗಳನ್ನು ಪ್ರತಿಷ್ಟಾಪನೆ ಮಾಡಲಾಯಿತು. ನಂತರ ಹಣಮಾಪೂರ, ಬಳೂತಿ, ಕೊಲ್ಹಾರ, ಮಟ್ಟಿಹಾಳ ಸೇರಿದಂತೆ ಅನೇಕ ಸುತ್ತ ಮುತ್ತಲಿನ…

Read More

ಮುದ್ದೇಬಿಹಾಳ: ತಾಲೂಕಿನ ನಾಲತವಾಡ ಪಟ್ಟಣದಲ್ಲಿ ಸೋಮವಾರ ರಾತ್ರಿ ಸರಣಿ ಕಳ್ಳತನವಾಗಿದೆ.ಚನ್ನಬಸಪ್ಪ ಗುರಿಕಾರ ಅವರ ಮನೆಯ ಬೀರು ಮುರಿದು ೨ ತೊಲಿ ಬಂಗಾರ ಹಾಗೂ ೨೦ ಸಾವಿರ ನಗದು ಎಗರಿಸಿದ ಖದೀಮರು ತಮ್ಮ ಕೈಚಳಕವನ್ನು ತೋರಿಸಿದ್ದಾರೆ. ಬಸವರಾಜ ಹೌಶಟ್ಟಿ ಅವರ ಮನೆಯ ಬಾಗಿಲು ಮುರಿದು ಮನೆಯ ತುಂಬ ಹುಡಿಕಾಡಿದ್ದಾರೆ ಆದರೆ ಮನೆಯಲ್ಲಿ ಬಂಗಾರ ಹಾಗೂ ನಗದು ಹಣ ಇಲ್ಲದಿರುವದರಿಂದ ಬೆಲೆಬಾಳುವ ೨ ಸೀರೆಯನ್ನು ಹೊತ್ತಿದ್ದಾರೆ. ಗುರುಲಿಂಗಪ್ಪ ಕುಂಬಾರ ಹಾಗೂ ಅಬ್ದುಲಸಾಬ ಹಣಗಿ ಅವರ ಮನೆಯ ಬಾಗಿಲು ಮುರಿದು ಕಳ್ಳತನಕ್ಕೆ ವಿಫಲ ಪ್ರಯತ್ನ ನಡೆಸಿದ್ದಾರೆ.ಘಟನಾ ಸ್ಥಳಕ್ಕೆ ಮುದ್ದೇಬಿಹಾಳ ಠಾಣೆಯ ಪಿಎಸ್‌ಐ ಸಂಜೀವ ತಿಪರೆಡ್ಡಿ, ಕ್ರೈಂ ಪಿಎಸ್‌ಐ ಆರ್.ಎಲ್.ಮನ್ನಾಬಾಯಿ ಭೇಟಿ ನೀಡಿ ಪರಿಶೀಲಿದ್ದು ಕಲ್ಳರ ಹೆಡೆಮುರಿ ಕಟ್ಟುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Read More

ಮುದ್ದೇಬಿಹಾಳ: ಜಗತ್ತು ನಿಂತಿರೋದು ತಾಯಂದಿರ ತಾಕತ್ತು, ಶಕ್ತಿ, ಸಾಮರ್ಥ್ಯದ ಮೇಲೆ ಎಂದು ಹಿರೂರಿನ ಅನ್ನದಾನೇಶ್ವರಿ ಸಂಸ್ಥಾನ ಹಿರೇಮಠದ ಜಯಸಿದ್ದೇಶ್ವರ ಮಹಾಸ್ವಾಮಿಗಳು ನುಡಿದರು.ಪಟ್ಟಣದ ಹೇಮರಡ್ಡಿ ಕಲ್ಯಾಣ ಮಂಟಪದಲ್ಲಿ ಶ್ರೀ ವರದಾನೇಶ್ವರಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಉಡಿ ತುಂಬುವ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದ ಅವರು ಎಲ್ಲಿ ಸ್ತ್ರೀಯರಿಗೆ ಗೌರವಿದೆಯೋ ಅಲ್ಲಿ ದೇವಾನು ದೇವತೆಗಳು ವಾಸವಿರುತ್ತಾರೆ ಎಂದರು.ಸೋಮನಾಳದ ಭ್ರಮರಾಂಬ ಸಮೇತ ಮಲ್ಲಿಕಾರ್ಜುನ ಆಶ್ರಮದ ರುದ್ರಮುನಿ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಒಟ್ಟು ೧೫೦೧ ಮುತೈದೆಯರಿಗೆ ಉಡಿ ತುಂಬಲಾಯಿತು.ಈ ವೇಳೆ ಭೂದಾನಿ ಸಿದ್ದಯ್ಯ ಕಲ್ಯಾಣಮಠ ದಂಪತಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಪುರಸಭೆ ಸದಸ್ಯ ಚನ್ನಪ್ಪ ಕಂಠಿ, ಸಮಾಜ ಸೇವಕಿ ರೂಪಾ ದೇಸಾಯಿ, ಟ್ರಸ್ಟ್ ನ ಗೌರವಾಧ್ಯಕ್ಷ ಎಸ್.ಎಲ್.ಗುರವ ವೇದಿಕೆ ಮೇಲಿದ್ದರು. ಮಹಾಂತೇಶ ಮಠಪತಿ, ಮಹಾಂತೇಶ ಮೋಟಗಿ, ಬಸನಗೌಡ ಬಿರಾದಾರ ಸೇರಿದಂತೆ ಮತ್ತೀತರರು ಇದ್ದರು.

Read More

ಬಸವನಬಾಗೇವಾಡಿ: ಇಂದಿನ ತಂತ್ರಜ್ಞಾನ ಯುಗದ ಸಾಮಾಜಿಕ ಜಾಲತಾಣದ ಅಬ್ಬರದಲ್ಲಿ ವೃತ್ತರಂಗಭೂಮಿ ನಶಿಸಿ ಹೋಗುವ ಸಾಧ್ಯತೆ ಇರುವದರಿಂದಾಗಿ ಇದರ ಸಂರಕ್ಷಣೆ ಮಾಡುವ ಕಾರ್ಯವಾಗಬೇಕೆಂದು ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಹೇಳಿದರು.ಪಟ್ಟಣದ ಬಸ್ ನಿಲ್ದಾಣ ಪಕ್ಕದಲ್ಲಿರುವ ಇಂದಿರಾ ಕ್ಯಾಂಟೀನ್ ಹಿಂಭಾಗದ ಜಾಗೆಯಲ್ಲಿ ಸ್ಥಳೀಯ ಮೂಲನಂದೀಶ್ವರ(ಬಸವೇಶ್ವರ) ಜಾತ್ರಾಮಹೋತ್ಸವದಂಗವಾಗಿ ಜೇವರ್ಗಿಯ ಪಂಚಾಕ್ಷರ ನಾಟ್ಯಸಂಘ ಹಾಕಿರುವ ರಂಗಸಜ್ಜಿಕೆಯಲ್ಲಿ ಸೋಮವಾರ ಸಂಜೆ ಕುಂಟ ಕೋಣ ಮೂಕ ಜಾಣ ಎಂಬ ನಾಟಕದ ಪ್ರದರ್ಶನಕ್ಕೆ ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ನಾಟಕ, ಚಲನಚಿತ್ರಗಳು ಮನುಷ್ಯನ ಬದುಕನ್ನು ಬದಲಾವಣೆ ಮಾಡುವ ಶಕ್ತಿಯನ್ನು ಹೊಂದಿವೆ. ಎಷ್ಟೋ ಜನರು ನಾಟಕ, ಚಲನಚಿತ್ರದಲ್ಲಿನ ಉತ್ತಮ ಸಂದೇಶ ನೀಡಿದ ನಟರ ಅಭಿನಯ ಕಂಡು ಅವರು ತಮ್ಮ ಜೀವನದಲ್ಲಿ ಬದಲಾವಣೆಯಾಗಿರುವದನ್ನು ಕಾಣುತ್ತೇವೆ. ಇಂದು ಸಾಮಾಜಿಕ ಜಾಲತಾಣ ಬೆನ್ನುಹತ್ತಿರುವ ಯುವಜನಾಂಗ ಸೇರಿದಂತೆ ಅನೇಕರು ಹಾಳಾಗಿರುವದನ್ನು ಕಾಣುತ್ತೇವೆ. ನಾಟಕ, ಚಲನಚಿತ್ರಗಳನ್ನು ವೀಕ್ಷಿಸಿ ಅದಲ್ಲಿರುವ ಉತ್ತಮ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಜೀವನ ನಮ್ಮದಾಗಿಸಿಕೊಳ್ಳಬಹುದು ಎಂದರು.ವ್ಹಿಪಿಕೆಪಿಎಸ್ ಬ್ಯಾಂಕಿನ ಅಧ್ಯಕ್ಷ…

Read More