ಮುದ್ದೇಬಿಹಾಳ: ಜಗತ್ತು ನಿಂತಿರೋದು ತಾಯಂದಿರ ತಾಕತ್ತು, ಶಕ್ತಿ, ಸಾಮರ್ಥ್ಯದ ಮೇಲೆ ಎಂದು ಹಿರೂರಿನ ಅನ್ನದಾನೇಶ್ವರಿ ಸಂಸ್ಥಾನ ಹಿರೇಮಠದ ಜಯಸಿದ್ದೇಶ್ವರ ಮಹಾಸ್ವಾಮಿಗಳು ನುಡಿದರು.
ಪಟ್ಟಣದ ಹೇಮರಡ್ಡಿ ಕಲ್ಯಾಣ ಮಂಟಪದಲ್ಲಿ ಶ್ರೀ ವರದಾನೇಶ್ವರಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಉಡಿ ತುಂಬುವ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದ ಅವರು ಎಲ್ಲಿ ಸ್ತ್ರೀಯರಿಗೆ ಗೌರವಿದೆಯೋ ಅಲ್ಲಿ ದೇವಾನು ದೇವತೆಗಳು ವಾಸವಿರುತ್ತಾರೆ ಎಂದರು.
ಸೋಮನಾಳದ ಭ್ರಮರಾಂಬ ಸಮೇತ ಮಲ್ಲಿಕಾರ್ಜುನ ಆಶ್ರಮದ ರುದ್ರಮುನಿ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಒಟ್ಟು ೧೫೦೧ ಮುತೈದೆಯರಿಗೆ ಉಡಿ ತುಂಬಲಾಯಿತು.
ಈ ವೇಳೆ ಭೂದಾನಿ ಸಿದ್ದಯ್ಯ ಕಲ್ಯಾಣಮಠ ದಂಪತಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಪುರಸಭೆ ಸದಸ್ಯ ಚನ್ನಪ್ಪ ಕಂಠಿ, ಸಮಾಜ ಸೇವಕಿ ರೂಪಾ ದೇಸಾಯಿ, ಟ್ರಸ್ಟ್ ನ ಗೌರವಾಧ್ಯಕ್ಷ ಎಸ್.ಎಲ್.ಗುರವ ವೇದಿಕೆ ಮೇಲಿದ್ದರು. ಮಹಾಂತೇಶ ಮಠಪತಿ, ಮಹಾಂತೇಶ ಮೋಟಗಿ, ಬಸನಗೌಡ ಬಿರಾದಾರ ಸೇರಿದಂತೆ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
ತಾಯಂದಿರ ಸಾಮರ್ಥ್ಯದ ಮೇಲೆ ಜಗತ್ತು ನಿಂತಿದೆ :ಜಯಸಿದ್ದೇಶ್ವರ ಶ್ರೀ
Related Posts
Add A Comment

