೫೦೦ ಕ್ಕೂ ಹೆಚ್ಚು ಅಂಕಗಳಿಸಿದ ೬೩ ವಿದ್ಯಾರ್ಥಿಗಳು | ಚನ್ನವಿರೇಶ ಕುಂಬಾರವರ ಗೆ ೬೫೧ ಅಂಕಗಳು
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಹಲವು ಅಡ್ಡಿ ಆತಂಕಗಳ ಕರಗಿ ಬಹು ನಿರೀಕ್ಷಿತ ೨೦೨೬ನೇ ಸಾಲಿನ ನೀಟ್ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಎಕ್ಸಲಂಟ್ ವಿಜ್ಞಾನ ಪದವಿಪೂರ್ವ ಕಾಲೇಜು ಮತ್ತೊಮ್ಮೆ ಐತಿಹಾಸಿಕ ಫಲಿತಾಂಶವನ್ನು ನೀಡುವಲ್ಲಿ ಯಶಸ್ವಿಯಾಗಿದೆ.
೭೨೦ ಅಂಕಗಳಿಗೆ ಚನ್ನವಿರೇಶ ಕುಂಬಾರವರ ೬೫೧ ಅಂಕಗಳಿಸಿದರೆ ಸಲ್ಮಾನ ಗೋಡಿಹಾಳ ೬೩೧, ಗಂಗಾಧರ ಮುತ್ತಗಿ ೬೧೩, ಮಹೇಶ ಉಳ್ಳಾಗಡ್ಡಿ ೬೧೨, ರುಮೇಜ್ ಶೇಖ್ ೬೦೦ ಸೇರಿದಂತೆ ೫ ವಿದ್ಯಾರ್ಥಿಗಳು ೬೦೦ ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿರುತ್ತಾರೆ.
ಅದರಂತೆ ಬಸನಗೌಡ ಎ ಬೈರವಾಡಗಿ (೫೮೨), ಪವಿತ್ರಾ ಹೆಚ್ ಹನಗಂಡಿ (೫೮೦), ಅನುಷ್ಕಾ ಎ ಮಹಿಶಾಳೆ(೫೭೯), ಸ್ನೇಹಾ ಎಂ ಪಟ್ಟಣಶೆಟ್ಟಿ(೫೭೭), ಪ್ರಜ್ವಲ್ ಅವಟಿ(೫೭೬), ದೃಶ್ಯಾ ವಿರೇಶ ಶೆಟ್ಟಿ(೫೭೪), ಪ್ರತೀಕ್ ಪಿ. ಚವ್ಹಾಣ (೫೭೧), ಭೂಮಿಕಾ ಎಸ್ ಹಳ್ಳಿ (೫೭೧), ಸಾಗರ ಮಲ್ಲಪ್ಪ ಬನಹಟ್ಟಿ (೫೭೧), ಆಕಾಶ ಎಸ್ ಸತ್ತಿಗೇರಿ (೫೭೦), ವಿನಾಯಕ ಎಸ್ ಪಾಯಣ್ಣವರ(೫೬೮), ಸೃಷ್ಠಿ ಎಸ್. ಜತ್ತಿ(೫೬೪), ಮಲ್ಲಿಕಾರ್ಜುನ ಕೆ ಹೂಗಾರ(೫೬೨), ಪೂರ್ವಿ ಜಿ ಮಂಟೂರ(೫೬೧), ಧೈರ್ಯಶೀಲ ಬಾಳಾಸಾಹೇಬ ಹವಾಲ್ದಾರ(೫೫೮) ಸೇರಿದಂತೆ ೬೩ ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ೫೦೦ ಕ್ಕೂ ಹೆಚ್ಚಿನ ಅಂಕಗಳನ್ನು ಪಡೆದು ಎಕ್ಸಲಂಟ್ ಶಿಕ್ಷಣ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ಫಲಿತಾಂಶದ ಕುರಿತು ಮಾತನಾಡಿ ಹರ್ಷವ್ಯಕ್ತಪಡಿಸಿದ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಚೇರ್‌ಮನ್ ಬಸವರಾಜ್ ಕೌಲಗಿ; ಗೊಂದಲಗಳ ಮಧ್ಯದಲ್ಲಿಯೇ ನಮ್ಮ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜು ಹಾಗೂ ನೀಟ್ ಅಕಾಡೆಮಿಯ ವಿದ್ಯಾರ್ಥಿಗಳಲ್ಲಿ ೦೫ ವಿದ್ಯಾರ್ಥಿಗಳು ೬೦೦ ಕ್ಕೂ ಹೆಚ್ಚು ಹಾಗೂ ೬೩ ಕ್ಕೂ ಅಧಿಕ ವಿದ್ಯಾರ್ಥಿಗಳು ೫೦೦ ಕ್ಕೂ ಹೆಚ್ಚು ಅಂಕಗಳನ್ನು ಪಡೆಯುವುದರ ಮೂಲಕ ಐತಿಹಾಸಿಕ ಸಾಧನೆಗೆ ಸಾಕ್ಷಿಯಾಗಿದ್ದಾರೆ. ಅವರ ಫಲಿತಾಶಂದ ಅನ್ವಯ ಉತ್ತಮ ಕಾಲೇಜುಗಳಲ್ಲಿ ಸೀಟು ಸಿಗುವುದರೊಂದಿಗೆ ಅವರ ಭವಿಷ್ಯವೂ ಉಜ್ವಲವಾಗುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಅದೇ ರೀತಿ ಈ ಫಲಿತಾಂಶವು ಪ್ರಸ್ತುತ ನೀಟ್ ಪರೀಕ್ಷೆ ಬೆರೆಯಬೇಕು ಎಂದುಕೊಂಡಿರುವ ವಿದ್ಯಾರ್ಥಿಗಳಲ್ಲಿ ಚೈತನ್ಯ ಮೂಡಿಸುವುದರ ಜೊತೆಗೆ ಇನ್ನೂ ಹೆಚ್ಚಿನ ಸಾಧನೆ ಮಾಡುವುದಕ್ಕೆ ಪ್ರೇರಣೆಯಾಗಲಿ ಎಂದು ಹಾರೈಸಿದರು.
ಕಾಲೇಜಿನ ಆಡಳಿತ ಮಂಡಳಿಯ ಸರ್ವ ಸದಸ್ಯರು, ಕಾಲೇಜಿನ ಪ್ರಾಚಾರ್ಯ ಮಂಜುನಾಥ ಮ. ಜುನಗೊಂಡ, ಶೈಕ್ಷಣಿಕ ಸಂಯೋಜಕ ಮಂಜುನಾಥ ತುಮ್ಮರಮಟ್ಟಿ ಸೇರಿದಂತೆ ಸರ್ವ ಬೋಧಕ ಬೋಧಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದರು.

” ಮೊದಲ ಬಾರಿಗೆ ಬರೆದ ಪರೀಕ್ಷೆಯು ರದ್ದಾದಾಗ ವಿದ್ಯಾರ್ಥಿಗಳಲ್ಲಿ ಆತಂಕ ಮನೆ ಮಾಡಿತ್ತು. ಇಷ್ಟು ಚನ್ನಾಗಿ ಬರೆದ ಪರೀಕ್ಷೆ ರದ್ದಾಯಿತು ಮುಂದೇನಾಗುತ್ತದೆಯೋ ಎಂದುಕೊಂಡಿದ್ದರು. ಅನಿವಾರ್ಯತೆಯನ್ನು ಅರಿತುಕೊಂಡು ಹಗಲು ರಾತ್ರಿ ಓದಿದ ವಿದ್ಯಾರ್ಥಿಗಳು ಕೊನೆಗೂ ತಾವಂದುಕೊಂಡ ಫಲಿತಾಂಶ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.”
– ಬಸವರಾಜ್ ಕೌಲಗಿ
ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಚೇರ್‌ಮನ್

