ವಿಜಯಪುರ: ಶ್ರೀ ಚಿದಂಬರ ಸೇವಾ ಸಮಿತಿ, ವಿಜಯಪುರ ವತಿಯಿಂದ ಶ್ರಾವಣ ಮಾಸದದ ೪೮ನೇ ವರ್ಷದ ಶ್ರೀ ಶಿವಚಿದಂಬರ ಅಪ್ರಕಾಶಿತ ಲೀಲಾಗ್ರಂಥ ಪಠಣದ ಮಂಗಲ ಮಹೋತ್ಸವ ಕಾರ್ಯಕ್ರಮವು ಜರುಗುವುದು.
ಆ.೩೧ ರಂದು ಶೋಭಾ ಯಾತ್ರೆ ಸಂಜೆ ೪ ಗಂಟೆಗೆ ನಗರದ ಇಬ್ರಾಹಿಂಪೂರ ವೆಂಕಟೇಶ್ವರ ದೇವಸ್ಥಾನದಿಂದ ಚಿದಂಬರೇಶ್ವರ ದೇವಸ್ಥಾನದ ವರೆಗೆ ಶೋಭಾಯಾತ್ರೆ ನಂತರ ಸಭೆ, ಸೆ.೧ರಂದು ಮಂಗಳ ಮಹೋತ್ಸವ ದಿವ್ಯ ಸಾನ್ನಿಧ್ಯ ಮುರಗೋಡ ಕೆಂಗೇರಿಯ ಶಿವಚಿದಂಬರೇಶ್ವರ ಮಠ ಪೀಠಾಧಿಪತಿ ದಿವಾಕರ ದೀಕ್ಷಿತ ಶಂಕರ ದೀಕ್ಷಿತ ಗುರುಮಹಾರಾಜರು ಅವರ ದಿವ್ಯ ಸಾನ್ನಿಧ್ಯ. ಬೆಳಿಗ್ಗೆ ೬ ಗಂಟೆಗೆ ಕಾಕಡಾರತಿ ೭ ಗಂಟೆಗೆ ಕ್ಷೀರಾಭಿಷೇಕ ಹಾಗೂ ರುದ್ರಾಭಿಷೇಕ ೮ ಗಂಟೆಗೆ ಶ್ರೀಮದ್ ಯೋಘೀಶ್ವರ ಯಾಜ್ಞವಲ್ಕ ಮಹರ್ಷಿಗಳ ಅಷ್ಟೊತ್ತರ. ೧೦ ಗಂಟೆಗೆ ಸತ್ಯ ಚಿದಂಬರ ವ್ರತ ಮತ್ತು ಕಥೆ, ಮಧ್ಯಾಹ್ನ ೧೨ ಗಂಟೆಗೆ ಸಭಾ ಕಾರ್ಯಕ್ರಮದ ಸಾನಿಧ್ಯವನ್ನು ಮುರಗೋಡ ಕೆಂಗೇರಿಯ ಶಿವಚಿದಂಬರೇಶ್ವರ ಮಠ ಪೀಠಾಧಿಪತಿಗಳಾದ ದಿವಾಕರ ದೀಕ್ಷಿತ ಶಂಕರ ದೀಕ್ಷಿತ ಗುರುಮಹಾರಾಜರು ಹಾಗೂ ಬ್ರಹ್ಮಾನಂದ ಮಹಾಸ್ವಾಮಿಗಳು ದ್ವಾದಶ ಪೀಠಾಧಿಕಾರಿಗಳಾ ಶ್ರೀ ಜ್ಞಾನೇಶ್ವರ ಮಠ ಲೋಕಾಪೂರದ ಶ್ರೀಗಳ ಇವರ ಸಾನ್ನಿಧ್ಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಹಾಗೂ ಭಕ್ತ ಸಮೂಹಕ್ಕೆ ಆರ್ಶೀವಚಿಸಲಿದ್ದಾರೆ. ಮಧ್ಯಹಾನ ೧ ಗಂಟೆಗೆ ಶ್ರೀ ಶಿವಚಿದಂಬರ ಮಹಾಸ್ವಾಮಿ ರಥೋತ್ಸವ. ಮಧ್ಯಾಹ್ನ ೨ ಗಂಟೆಗೆ ರಜತ ನಾಗಭೂಷಣ ಶ್ರೀ ಶಿವಚಿದಂಬರೇಶ್ವರ ಮಹಾಸ್ವಾಮಿಗೆ ಮಹಾಮಂಗಳಾರತಿ. ನಂತರ ಮಹಾ ಪ್ರಸಾದ. ಸಾಯಂಕಾಲ ೭ ಗಂಟೆಗೆ ಸಾಂಪ್ರದಾಯಿಕ ಶ್ರೀ ಚಿದಂಬರ ಭಜನೆ ಮಹಾಮಂಗಳಾರತಿ ಮಂತ್ರಪುಷ್ಪ ಜರುಗಲಿವೆ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತನು, ಮನ, ಧನದಿಂದ ಸಹಾಯ ಸಲ್ಲಿಸಿ ಚಿದಂಬರ ಮಹಾಸ್ವಾಮೀಯ ಕೃಪೆಗೆ ಪಾತ್ರರಾಗಲು ಶ್ರೀ ಶಿವಚಿದಂಬರ ಸೇವಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

