ಶುಶ್ರೂಷಕ ಶಶಿಕಾಂತ ಆತ್ಮಹತ್ಯೆ :ನ್ಯಾಯಕ್ಕಾಗಿ ಎಸ್ಸಿ-ಎಸ್ಟಿ ನೌಕರರ ಆಗ್ರಹ
ವಿಜಯಪುರ: ಸರಕಾರಿ ಆಸ್ಪತ್ರೆಯಲ್ಲಿ ಸ್ಟಾಪನರ್ಸ್ ಅಂತಾ ಕಾರ್ಯನಿರ್ವಹಿಸುತ್ತಿರುವ ಶಶಿಕಾಂತ ತಂ ಮನೋಹರ ಬನ್ನೂರ ಇವರ ಆತ್ಮಹತ್ಯೆಗೆ ಕಾರಣರಾದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ರಾಜ್ಯ ಎಸ್.ಸ್ಸಿ / ಎಸ್ಟಿ ನೌಕರರ ಸಮನ್ವಯ ಸಮಿತಿ, ಜಿಲ್ಲಾ ಘಟಕ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಮನ್ವಯ ಸಮಿತಿಯ ಜಿಲ್ಲಾದ್ಯಕ್ಷ ಬಿ.ಎಚ್. ನಾಡಗಿರಿ ಮಾತನಾಡಿ, ತಾಳಿಕೋಟಿ ತಾಲೂಕಾ ಆರೋಗ್ಯ ಸಮುದಾಯ ಕೇಂದ್ರದಲ್ಲಿ ಸ್ಟಾಪ್ ನರ್ಸ ನೌಕರನಾಗಿ ಸೇವೆ ಸಲ್ಲಿಸುತ್ತಿದ್ದ ಶಶಿಕಾಂತ ಇವರು ಆ.೨೧ ರಂದು ಆತ್ಮಹತ್ಯೆಗೆ ಮುಂಚೆ ತನ್ನ ಸಾವಿಗೆ ಕಾರಣ ಯಾರೆಂದು ವ್ಯಾಟ್ಸ್ಫ್ ಸ್ಟೇಟಸ್‌ನಲ್ಲಿ ಹೆಸರು ಬರೆದು ಹಾಕಿದ್ದಾರೆ. ಕಾರಣ ಈತನ ಸಾವಿಗೆ ಮೂಲ ಕಾರಣರಾದ (೧) ಈರಣ್ಣ ವಡವಡಗಿ (೨) ಶ್ರೀಮತಿ ಜ್ಯೋತಿ ಕೋಳೂರಗಿ (೩) ಶ್ರೀಮತಿ ಶ್ರೀದೇವಿ ಬಗಲಿ ಈ ಮೂವರು ಅದೇ ಆಸ್ಪತ್ರೆಯಲ್ಲಿ ಸೇವೆಸಲ್ಲಿಸುತ್ತಿದ್ದು, ದಿನನಿತ್ಯ ಜಾತಿ ನಿಂದನೆ ದಬ್ಬಾಳಿಕೆ ಕಿರುಕುಳದಿಂದ ಬೇಸತ್ತು ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದು, ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಗೌರವಾಧ್ಯಕ್ಷ ಬಸವಂತ ಗುಣದಾಳ ಮಾತನಾಡಿ, ಈರಣ್ಣ ವಡವಡಗಿ ಈತನು ನಿವೃತ್ತಿ ಹೊಂದಿದರೂ ಸಹ ತಾಲೂಕಾ ವೈದ್ಯಾಧಿಕಾರಿಗಳು, ಉದ್ದೇಶಪೂವರ್ಕವಾಗಿ ಈತನ ಹುದ್ದೆಯಲ್ಲಿ ಮುಂದುವರೆಸಿರುದು ಕಾನೂನು ಬಾಹಿರವಾಗಿದೆ. ಈ ಜಾತಿ ನಿಂದನೆ, ದಬ್ಬಾಳಿಕೆ ಕಿರುಕುಳ ನೀಡಿ ಸಾವಿಗೆ ಕಾರಣರಾದ ಮೂರು ಜನರನ್ನು ಸೂಕ್ತ ಕಾನೂನಡಿಯಲ್ಲಿ ನೌಕರಿಯಿಂದ ವಜಾಗೊಳಿಸಿ ಬಂಧಿಸಿ ಕ್ರಮಕೈಗೊಳ್ಳಬೇಕು. ಇಂತಹ ಪ್ರಕರಣಗಳು ಮರುಕಳಿಸದಂತೆ ಮಾನ್ಯ ಸರಕಾರವು ಶೀಘ್ರದಲ್ಲಿ ಕಾನೂನು ಜಾರಿ ಮಾಡಬೇಕು. ಇಲ್ಲದೇ ಹೋದಲ್ಲಿ ರಾಜ್ಯಾದ್ಯಂತ ಪ್ರತಿಭಟನೆಗೆ ಹಮ್ಮಿಕೊಳ್ಳಲಾಗುವದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ವಿಜಯಕುಮಾರ ಸೂರ್ಯವಂಶಿ, ಸೂರ್ಯಕಾಂತ ಹೊಸಮನಿ, ವಿನೋದ ರತ್ನಾಕರ, ಮಲ್ಲಿಕಾರ್ಜುನ ಮಾದರ, ಬಿ.ಟಿ. ವಾಗ್ಮೋರೆ, ಮಂಜುನಾಥ ಆರೇಶಂಕರ, ಜಿ.ಎಮ್. ಚಲವಾದಿ, ಕೃಷ್ಣಾ ರಾಠೋಡ, ಮಹೇಶ ಹೊನ್ನಕಟ್ಟಿ, ಡಿ.ಎಸ್.ಖಜಾಪುರ, ರವಿ ಯಲ್ಲಂಡಗಿ, ಎಸ್.ಎಮ್.ಡೋಣಿ, ಇನ್ನಿತರರು ಇದ್ದರು.

