ಮುದ್ದೇಬಿಹಾಳ: ತಾಲೂಕಿನ ನಾಲತವಾಡ ಪಟ್ಟಣದಲ್ಲಿ ಸೋಮವಾರ ರಾತ್ರಿ ಸರಣಿ ಕಳ್ಳತನವಾಗಿದೆ.
ಚನ್ನಬಸಪ್ಪ ಗುರಿಕಾರ ಅವರ ಮನೆಯ ಬೀರು ಮುರಿದು ೨ ತೊಲಿ ಬಂಗಾರ ಹಾಗೂ ೨೦ ಸಾವಿರ ನಗದು ಎಗರಿಸಿದ ಖದೀಮರು ತಮ್ಮ ಕೈಚಳಕವನ್ನು ತೋರಿಸಿದ್ದಾರೆ. ಬಸವರಾಜ ಹೌಶಟ್ಟಿ ಅವರ ಮನೆಯ ಬಾಗಿಲು ಮುರಿದು ಮನೆಯ ತುಂಬ ಹುಡಿಕಾಡಿದ್ದಾರೆ ಆದರೆ ಮನೆಯಲ್ಲಿ ಬಂಗಾರ ಹಾಗೂ ನಗದು ಹಣ ಇಲ್ಲದಿರುವದರಿಂದ ಬೆಲೆಬಾಳುವ ೨ ಸೀರೆಯನ್ನು ಹೊತ್ತಿದ್ದಾರೆ. ಗುರುಲಿಂಗಪ್ಪ ಕುಂಬಾರ ಹಾಗೂ ಅಬ್ದುಲಸಾಬ ಹಣಗಿ ಅವರ ಮನೆಯ ಬಾಗಿಲು ಮುರಿದು ಕಳ್ಳತನಕ್ಕೆ ವಿಫಲ ಪ್ರಯತ್ನ ನಡೆಸಿದ್ದಾರೆ.
ಘಟನಾ ಸ್ಥಳಕ್ಕೆ ಮುದ್ದೇಬಿಹಾಳ ಠಾಣೆಯ ಪಿಎಸ್‌ಐ ಸಂಜೀವ ತಿಪರೆಡ್ಡಿ, ಕ್ರೈಂ ಪಿಎಸ್‌ಐ ಆರ್.ಎಲ್.ಮನ್ನಾಬಾಯಿ ಭೇಟಿ ನೀಡಿ ಪರಿಶೀಲಿದ್ದು ಕಲ್ಳರ ಹೆಡೆಮುರಿ ಕಟ್ಟುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

