ಬಸವನಬಾಗೇವಾಡಿ: ಇಂದಿನ ತಂತ್ರಜ್ಞಾನ ಯುಗದ ಸಾಮಾಜಿಕ ಜಾಲತಾಣದ ಅಬ್ಬರದಲ್ಲಿ ವೃತ್ತರಂಗಭೂಮಿ ನಶಿಸಿ ಹೋಗುವ ಸಾಧ್ಯತೆ ಇರುವದರಿಂದಾಗಿ ಇದರ ಸಂರಕ್ಷಣೆ ಮಾಡುವ ಕಾರ್ಯವಾಗಬೇಕೆಂದು ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಹೇಳಿದರು.
ಪಟ್ಟಣದ ಬಸ್ ನಿಲ್ದಾಣ ಪಕ್ಕದಲ್ಲಿರುವ ಇಂದಿರಾ ಕ್ಯಾಂಟೀನ್ ಹಿಂಭಾಗದ ಜಾಗೆಯಲ್ಲಿ ಸ್ಥಳೀಯ ಮೂಲನಂದೀಶ್ವರ(ಬಸವೇಶ್ವರ) ಜಾತ್ರಾಮಹೋತ್ಸವದಂಗವಾಗಿ ಜೇವರ್ಗಿಯ ಪಂಚಾಕ್ಷರ ನಾಟ್ಯಸಂಘ ಹಾಕಿರುವ ರಂಗಸಜ್ಜಿಕೆಯಲ್ಲಿ ಸೋಮವಾರ ಸಂಜೆ ಕುಂಟ ಕೋಣ ಮೂಕ ಜಾಣ ಎಂಬ ನಾಟಕದ ಪ್ರದರ್ಶನಕ್ಕೆ ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ನಾಟಕ, ಚಲನಚಿತ್ರಗಳು ಮನುಷ್ಯನ ಬದುಕನ್ನು ಬದಲಾವಣೆ ಮಾಡುವ ಶಕ್ತಿಯನ್ನು ಹೊಂದಿವೆ. ಎಷ್ಟೋ ಜನರು ನಾಟಕ, ಚಲನಚಿತ್ರದಲ್ಲಿನ ಉತ್ತಮ ಸಂದೇಶ ನೀಡಿದ ನಟರ ಅಭಿನಯ ಕಂಡು ಅವರು ತಮ್ಮ ಜೀವನದಲ್ಲಿ ಬದಲಾವಣೆಯಾಗಿರುವದನ್ನು ಕಾಣುತ್ತೇವೆ. ಇಂದು ಸಾಮಾಜಿಕ ಜಾಲತಾಣ ಬೆನ್ನುಹತ್ತಿರುವ ಯುವಜನಾಂಗ ಸೇರಿದಂತೆ ಅನೇಕರು ಹಾಳಾಗಿರುವದನ್ನು ಕಾಣುತ್ತೇವೆ. ನಾಟಕ, ಚಲನಚಿತ್ರಗಳನ್ನು ವೀಕ್ಷಿಸಿ ಅದಲ್ಲಿರುವ ಉತ್ತಮ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಜೀವನ ನಮ್ಮದಾಗಿಸಿಕೊಳ್ಳಬಹುದು ಎಂದರು.
ವ್ಹಿಪಿಕೆಪಿಎಸ್ ಬ್ಯಾಂಕಿನ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ ಮಾತನಾಡಿ, ವೃತ್ತಿರಂಗಭೂಮಿ ಕಲಾವಿದರ ಬದುಕು ತುಂಬಾ ಕಷ್ಟಕರದಲ್ಲಿದೆ. ಸರ್ಕಾರ ಈ ಕಲಾವಿದರಿಗೆ ಹೆಚ್ಚು ನೆರವು ನೀಡುವಂತಾಗಬೇಕು. ಸರ್ಕಾರ ಪ್ರತಿ ತಾಲೂಕು ಮಟ್ಟದಲ್ಲಿ ರಂಗಮಂದಿರ ನಿರ್ಮಿಸಿದರೆ ಕಲಾವಿದರಿಗೆ ತುಂಬಾ ಅನುಕೂಲವಾಗುತ್ತದೆ ಎಂದರು.
ಅಧ್ಯಕ್ಷತೆಯನ್ನು ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ಗುರಲಿಂಗ ಬಸರಕೋಡ ವಹಿಸಿದ್ದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಸವಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ, ಎಪಿಎಂಸಿ ಮಾಜಿ ಅಧ್ಯಕ್ಷ ಶೇಖರ ಗೊಳಸಂಗಿ, ಟಿಎಪಿಎಂಸಿ ಅಧ್ಯಕ್ಷ ಚಂದ್ರಶೇಖರಗೌಡ ಪಾಟೀಲ, ನಿವೃತ್ತ ಶಿಕ್ಷಕರಾದ ಎಂ.ಜಿ.ಆದಿಗೊಂಡ, ಎಂ.ಬಿ.ತೋಟದ, ಕೆ.ಗಂಗಾಧರ, ಪುರಸಭೆ ಮಾಜಿ ಅಧ್ಯಕ್ಷ ಬಸಣ್ಣ ದೇಸಾಯಿ, ಮುಖಂಡರಾದ ಭರತ್ ಅಗರವಾಲ, ಬಸವರಾಜ ಹಾರಿವಾಳ, ಸಂಗಮೇಶ ಓಲೇಕಾರ, ರವಿ ರಾಠೋಡ, ರವಿಗೌಡ ಚಿಕ್ಕೊಂಡ, ಸಂಗಣ್ಣ ಕಲ್ಲೂರ, ಬಸವರಾಜ ಕೋಟಿ, ಸಂಕನಗೌಡ ಪಾಟೀಲ ಇತರರು ಇದ್ದರು. ಪ್ರಾಸ್ತವಿಕವಾಗಿ ರಾಜಣ್ಣ ಜೇವರ್ಗಿ ಮಾತನಾಡಿದರು.
ಕೊಟ್ರೇಶ ಹೆಗ್ಡಾಳ ಸ್ವಾಗತಿಸಿ,ನಿರೂಪಿಸಿದರು. ಪ್ರಭಾಕರ ಖೇಡದ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

