ವಿಜಯಪುರ: ಸರ್ಕಾರಿ ಶಾಲೆಯಲ್ಲಿ ಅಕ್ಷರ ದಾಸೋಹ ಯೋಜನೆಯಡಿಯಲ್ಲಿ ವಿಧ್ಯಾರ್ಥಿಗಳು ಮದ್ಯಾಹ್ನ ಬಿಸಿಊಟ ಸೇವಿಸುತ್ತಿರುವ ಸಮಯದಲ್ಲಿ ಹಾರಿ ಬಂದ ರಾಷ್ಟ್ರಪಕ್ಷಿ ನವಿಲು ಮಕ್ಕಳೊಂದಿಗೆ ಬಿಸಿಊಟ ಸವಿದು ಮಕ್ಕಳಿಗೆ ಮನೊಲ್ಲಾಸ ಹೆಚ್ಚಿಸಿದ ಘಟನೆ ಸೋಮವಾರ ನಡೆದಿದೆ.
ತಾಲ್ಲೂಕಿನ ಜಂಬಗಿ (ಆ) ಗ್ರಾಮದ ಕೆರೂರವಸ್ತಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳು ಬಿಸಿಊಟ ಸೇವಿಸುವಾಗ ಹಾರಿ ಬಂದ ರಾಷ್ಟ್ರ ಪಕ್ಷಿ ಮಕ್ಕಳು ತಟ್ಟೆಯಲ್ಲಿ ಅನ್ನ ಹಾಕಿಕೊಂಡು ಪ್ರಾರ್ಥನೆ ಮಾಡುತ್ತಾ ಕುಳಿತಾಗ ಅನ್ನದ ತಟ್ಟೆಗೆ ಕಡೆಗೆ ಹೆಜ್ಜೆ ಹಾಕುತ್ತಾ ಸಾಗಿದೆ. ಈ ಸಮಯದಲ್ಲಿ ವಿಧ್ಯಾರ್ಥಿಯೋರ್ವಳು ತನ್ನ ತಟ್ಟೆಯನ್ನು ನವಿಲಿಗೆ ಕೊಟ್ಟು ಬೇರೊಂದು ತಟ್ಟೆ ತೆಗೆದುಕೊಂಡಿದ್ದಾಳೆ.
ಶಾಲಾ ಆವರಣವು ಹಚ್ಚ ಹಸಿರಿನ ಗಿಡಗಳ ಮಧ್ಯೆ ಸುಂದರ ಪ್ರಕೃತಿ ಸೌಂದರ್ಯ ಹೊಂದಿದ್ದು, ಪ್ರತಿದಿನ ಮಕ್ಕಳು ಈ ಪ್ರಕೃತಿ ಮಡಿಲಲ್ಲಿ ಊಟ ಸೇವಿಸುತ್ತಾರೆ. ಹಸಿರು ತುಂಬಿದ ವಾತಾವರಣದಲ್ಲಿ ರಾಷ್ಟ್ರಪಕ್ಷಿ ಆಗಮಿಸಿದ್ದರಿಂದ ವಿಧ್ಯಾರ್ಥಿಗಳು ಖುಷ್ ಆಗಿದ್ದಾರೆ. ಈ ಸಂದರ್ಭದಲ್ಲಿ ಊಟ ಸವಿಯುತ್ತಾ ಮುಖ್ಯೋಪಾಧ್ಯಾಯ ಪಿ.ಪಿ.ನಾಯಕ ಮಕ್ಕಳಿಗೆ ರಾಷ್ಟ್ರಪಕ್ಷಿಯ ಕುರಿತು ಸಂಪೂರ್ಣ ವಿವರ ನೀಡಿ ಮಕ್ಕಳಿಗೆ ಪಕ್ಷಿ ಹಾಗೂ ಪ್ರಾಣಿ ಪ್ರೀಯತೆಯನ್ನು ಹೆಚ್ಚಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

