Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ತಾಲೂಕಿನ ಸಿದ್ದನಾಥ ಗ್ರಾಮದಲ್ಲಿ ಮಂಗಳವಾರ ಮಳೆಗಾಗಿ ಗ್ರಾಮಸ್ಥರು ಗುರ್ಜಿ ಪೂಜೆಗೆ ಮೊರೆ ಹೋಗಿದ್ದು, ಗ್ರಾಮದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.ವಿಜಯಪುರ ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಇದುವರೆಗೂ ಸಮರ್ಪಕ ಮಳೆಯಾಗದೇ ಇರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿತ್ತಿದ ಬೆಳೆಗಳ ಭವಿಷ್ಯ ಏನು ಎಂಬ ಆತಂಕ ರೈತರನ್ನು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಮಳೆಯಿಗಾಗಿ ಗ್ರಾಮಸ್ಥರು ಪಾರಂಪರಿಕ ಗುರ್ಜಿ ಪೂಜೆಯನ್ನು ನೆರವೇರಿಸಿದರು.ಮಳೆ ಬಾರದೆ ಇದ್ದಾಗ ಪೂರ್ವಜರ ಕಾಲದಿಂದಲೂ ಗ್ರಾಮೀಣ ಪ್ರದೇಶಗಳಲ್ಲಿ ಶತಮಾನಗಳಿಂದ ಆಚರಣೆಯಲ್ಲಿರುವ ಈ ಗುರ್ಜಿ ಪೂಜೆ ವಿಶಿಷ್ಟವಾಗಿದೆ. ಈ ಪೂಜೆಯಲ್ಲಿ ವ್ಯಕ್ತಿ ಅಥವಾ ಬಾಲಕನ ತಲೆಯ ಮೇಲೆ ತವೆ ಇಟ್ಟು, ಅದರ ಮೇಲೆ ಆಕಳ ಸಗಣೆಯಿಂದ ತಯಾರಿಸಿದ ಗುರ್ಜಿ ಇಡಲಾಗುತ್ತದೆ.ನಂತರ, ಗುರ್ಜಿ ಹೊತ್ತ ವ್ಯಕ್ತಿಯ ಹಿಂದೆ ಗ್ರಾಮಸ್ಥರು “ಗುರ್ಜಿ ಗುರ್ಜಿ ಯಲ್ಲಾಡಿ ಬಂದಿ, ಹಳ್ಳ ಕೊಳ್ಳ ತಿರಗಾಡಿ ಬಂದಿ, ಬಾ ಮಳಿಯ ಬಾ ಮಳಿಯ” ಎಂದು ಹಾಡುತ್ತಾ ಗ್ರಾಮದ ಪ್ರತಿಯೊಂದು ಮನೆ ಮುಂದೆ ತೆರಳಿ ನಿಲ್ಲುತ್ತಾರೆ. ಮನೆಮಂದಿ ಬಂದು ಗುರ್ಜಿ ಹೊತ್ತವನ…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ೨೦೨೫-೨೬ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಲಾದಂತೆ ಕೊಲ್ಹಾರ ಪಟ್ಟಣದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರ (ಸಿ.ಎಚ್.ಸಿ)ವಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಸರಕಾರದ ಆದೇಶ ಸಂಖ್ಯೆ ಆಕೂಕ ೩೮೭ ಸಿಜೆಎಮ್ ೨೦೨೫, ದಿನಾಂಕ ೦೪-೦೭-೨೦೨೬ರ ಪ್ರಕಾರ ಇಂದಿನಿಂದ ಇದು ಸಮುದಾಯ ಆರೋಗ್ಯ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ ಎಂದು ಶಾಸಕ ಶಿವಾನಂದ ಪಾಟೀಲರ ಆಪ್ತ ಸಹಾಯಕ ಈರಣ್ಣ ಕೊಪ್ಪಳ ತಿಳಿಸಿದ್ದಾರೆ.ಗ್ರಾಮೀಣ ಪ್ರದೇಶಗಳ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅನುದಾನದಲ್ಲಿ ನಿರ್ಮಿಸಲಾದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಇದರಡಿ ಕೊಲ್ಹಾರದಲ್ಲಿನ ಕೇಂದ್ರವನ್ನು ೫೦ ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯಾಗಿ ಅಭಿವೃದ್ಧಿಪಡಿಸಲು ಅನುಮೋದನೆ ನೀಡಲಾಗಿದೆ.ಈ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ, ಒಪಿಡಿ, ಒಬಿಜಿ ಸೇವೆಗಳು, ಔಷಧ ವಿತರಣೆ, ಅಲ್ಟ್ರಾಸೌಂಡ್, ಎಕ್ಸರೇ, ದಂತ ಚಿಕಿತ್ಸಾ ಘಟಕ, ನವಜಾತ ಶಿಶು ಆರೈಕೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಜೊತೆಗೆ ಪುರುಷ ಮತ್ತು ಮಹಿಳಾ ವಾರ್ಡುಗಳು, ಸಣ್ಣ ಆಪರೇಷನ್ ಥಿಯೇಟರ್, ಆಡಳಿತ ಕಚೇರಿ ಮತ್ತು ಬಹುಉದ್ದೇಶ…
ಉದಯರಶ್ಮಿ ದಿನಪತ್ರಿಕೆ ತಾಳಿಕೋಟೆ: ನಗರದ ರಜಪೂತ ಸಮಾಜದ ಇಂದಿರಾಬಾಯಿ ಭವನಸಿಂಗ್ ಹಜೇರಿ ಜೆಇಇ ಪರಿಕ್ಷೆಯಲ್ಲಿ ೨೨೭ನೇ ರ‍್ಯಾಂಕ್ ಪಡೆಯುವ ಮೂಲಕ ಉತ್ತಮ ಸಾಧನೆ ತೋರಿದ್ದಕ್ಕೆ ರಜಪೂತ ಸಮಾಜದ ವತಿಯಿಂದ ಸೋಮವಾರರಂದು ಸನ್ಮಾನಿಸಿ ಗೌರವಿಸಿ ಪ್ರೋತ್ಸಾಹಿಸಲಾಯಿತು.ರಜಪೂತ ಸಮಾಜದ ಅಧ್ಯಕ್ಷ ಹರಿಸಿಂಗ್ ಮೂಲಿಮನಿ ಮಾತನಾಡಿ, ಇಂದಿರಾಬಾಯಿ ಭವನಸಿಂಗ್ ಹಜೇರಿ ಚಿಕ್ಕವಳಿದ್ದಾಗಿನಿಂದಲೂ ಶಿಕ್ಷಣದ ಮೇಲಿನ ತನ್ನ ಆಸಕ್ತಿ ಹೆಚ್ಚಿಸಿಕೊಳ್ಳುತ್ತಾ ಬಂದವಳಾಗಿದ್ದಳು. ಅವಳ ಓದಿನೊಂದಿಗೆ ಸಾಧಸಬೇಕೆಂಬ ಛಲ ದೇಶದ ಅತ್ಯುನ್ನತ ಪರೀಕ್ಷೆ ಜೆಇಇಯಲ್ಲಿ ದೇಶಕ್ಕೆ ೨೨೭ನೇ ರ‍್ಯಾಂಕ್ ಪಡೆಯುವದರೊಂದಿಗೆ ಹೆತ್ತವರ ಮತ್ತು ಕಲಿಸಿದ ಶಿಕ್ಷಣ ಸಂಸ್ಥೆಯ ಜೊತೆಗೆ ರಜಪೂತ ಸಮಾಜದ ಹೆಸರನ್ನು ಬೆಳಗಿಸಿದ್ದಾಳೆ. ಅವರ ಈ ಸಾಧನೆ ಮುಂದುವರೆಯಲಿ ಮತ್ತು ಅವಳ ಛಲ ರಾಜ್ಯಕ್ಕೆ ಒಳ್ಳೆಯ ಕೊಡುಗೆಯಾಗಿ ಬೆಳೆಯಲಿ ಎಂದರು.ರಜಪೂತ ಸಮಾಜದ ಉಪಾಧ್ಯಕ್ಷ ರತನಸಿಂಗ್ ಕೊಕಟನೂರ ಮಾತನಾಡಿ, ಇಂದಿರಾಬಾಯಿ ಹಜೇರಿ ಸಾಧನೆಯು ಯಾರ ಸ್ವತ್ತಲ್ಲಾವೆಂಬುದನ್ನು ತನ್ನ ಕಲಿಕೆಯ ಶಿಕ್ಷಣದ ಮೂಲಕ ತೋರಿಸಿಕೊಟ್ಟಿದ್ದಾಳೆ ಮತ್ತು ಇತರರಿಗೆ ಮಾದರಿಯಾಗಿದ್ದಾಳೆ. ಜೆಇಇ ಅತ್ಯುನ್ನತ ಪರಿಕ್ಷೆಯಲ್ಲಿ ಉತ್ತಮ ಸಾಧನೆ ತೋರಿ ಮಾದರಿಯ ಹಾದಿಯಲ್ಲಿ…
S* ಅರ್ಹ ಮತದಾರರ ಹೆಸರು ಕೈಬಿಡದಂತೆ ಎಚ್ಚರ ವಹಿಸಲು ಕರೆ | ಶಾಸಕ ವಿಠ್ಠಲ ಕಟಕಧೋಂಡ ಆರೋಪ B* ಉದಯರಶ್ಮಿ ದಿನಪತ್ರಿಕೆ ಚಡಚಣ: ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ನೆಪದಲ್ಲಿ ಅರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡುವ ಮೂಲಕ ಬಿಜೆಪಿ ಸರ್ಕಾರ ಉದ್ದೇಶಪೂರ್ವಕವಾಗಿ ರಾಜಕೀಯ ಕುತಂತ್ರ ನಡೆಸುತ್ತಿದೆ. ಪ್ರಜಾಪ್ರಭುತ್ವದ ಮೂಲ ಹಕ್ಕಾದ ಮತದಾನದ ಹಕ್ಕನ್ನು ಯಾರೂ ಕಸಿದುಕೊಳ್ಳದಂತೆ ಕಾಂಗ್ರೆಸ್ ಕಾರ್ಯಕರ್ತರು ಜಾಗರೂಕರಾಗಿ ಕಾರ್ಯನಿರ್ವಹಿಸಬೇಕು ಎಂದು ನಾಗಠಾಣ ಮತಕ್ಷೇತ್ರದ ಶಾಸಕ ವಿಠ್ಠಲ ಕಟಕಧೋಂಡ ಕರೆ ನೀಡಿದರು.ಪಟ್ಟಣದ ಅಂಜುಮನ್ ಇಸ್ಲಾಂ ಕಮಿಟಿಯ ಶಾದಿ ಮಹಲ್‌ನಲ್ಲಿ ಸೋಮವಾರ ನಡೆದ ನಾಗಠಾಣ ಮತಕ್ಷೇತ್ರದ ಚಡಚಣ ಬ್ಲಾಕ್ ಕಾಂಗ್ರೆಸ್ ಬಿಎಲ್‌ಎ ಗಳ (ಬೂತ್ ಲೆವೆಲ್ ಏಜೆಂಟ್) ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಭಾರತದ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಪ್ರತಿಯೊಬ್ಬ ನಾಗರಿಕನಿಗೂ ಮತದಾನದ ಹಕ್ಕು ನೀಡಿದ್ದಾರೆ. ದೇಶದ ವಿವಿಧ ರಾಜ್ಯಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿರುವ ಸಂದರ್ಭದಲ್ಲಿ ಕರ್ನಾಟಕದ ಮೇಲೆ ಬಿಜೆಪಿ ವಿಶೇಷ ಗಮನ…
ಉದ್ಯೋಗ ಕೊಡಿಸುವ ನೆಪದಲ್ಲಿ ಲಕ್ಷಾಂತರ ರೂ. ವಂಚನೆ | ವಿಜಯಪುರ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಮಾರ್ಗದರ್ಶನದಲ್ಲಿ ಸೆರೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತಾನು ಡಿಎಸ್‌ಪಿ ಎಂದು ಹೇಳಿಕೊಂಡು ಖಾಕಿ ಸಮವಸ್ತ್ರ ಧರಿಸಿ ನಿರುದ್ಯೋಗಿ ಯುವಕರಿಗೆ ಪೊಲೀಸ್ ಹಾಗೂ ಪಿಎಸ್‌ಐ ಸೇರಿದಂತೆ ವಿವಿಧ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚನೆ ನಡೆಸಿದ ಆರೋಪದಲ್ಲಿ ಸುಮಾರು 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಿಜಯಪುರ ಜಿಲ್ಲಾ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.ಬಂಧಿತನನ್ನು ಗ್ಯಾನನಗೌಡ @ ಜ್ಞಾನಗೌಡ @ ಗಣೇಶ @ ಸಿ. ಸಂಪತ್‌ಕುಮಾರ (31), ವರಗೋಡದಿನ್ನಿ ಗ್ರಾಮ, ಹುನಗುಂದ ತಾಲೂಕು, ಬಾಗಲಕೋಟೆ ಜಿಲ್ಲೆ ಎಂದು ಗುರುತಿಸಲಾಗಿದೆ.ಪೊಲೀಸರ ಮಾಹಿತಿ ಪ್ರಕಾರ, 2014ರ ಮಾರ್ಚ್ 29ರಂದು ವಿಜಯಪುರ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಅಪಹರಣ, ಕೊಲೆ ಯತ್ನ ಹಾಗೂ ವಂಚನೆ ಪ್ರಕರಣ ದಾಖಲಾಗಿತ್ತು. 2012ರಲ್ಲಿ ಕಾಖಂಡಕಿ ಗ್ರಾಮದ ವಿಠ್ಠಲ ಛಾಯಾಗೋಳ ಅವರ ಸಂಬಂಧಿಕನಿಗೆ ಪೊಲೀಸ್ ಉದ್ಯೋಗ ಕೊಡಿಸುವುದಾಗಿ ಹೇಳಿ ಆರೋಪಿಯು ಸುಮಾರು ₹1.20 ಲಕ್ಷ ಪಡೆದುಕೊಂಡಿದ್ದನು.…
ಬಿಎಲ್‌ಒಗಳಿಗೆ ಸಹಕಾರ ನೀಡಲು ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ಡಾ. ಆನಂದ ಕೆ. ಕರೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್)-೨೦೨೬ರ ಅಂಗವಾಗಿ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒಗಳು) ಮನೆ-ಮನೆಗೆ ತೆರಳಿ ಗಣತಿ ನಮೂನೆಗಳನ್ನು ವಿತರಿಸುವ ಕಾರ್ಯದಲ್ಲಿ ನಿರತರಾಗಿದ್ದು, ಸಾರ್ವಜನಿಕರು ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಅವರಿಗೆ ಅಗತ್ಯ ಸಹಕಾರ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ಹೇಳಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಎಸ್‌ಐಆರ್-೨೦೨೬ ಕುರಿತು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮುಖ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಬಿಎಲ್‌ಒಗಳು ಮನೆ-ಮನೆಗೆ ತೆರಳಿ ಗಣತಿ ನಮೂನೆಗಳನ್ನು ವಿತರಿಸುವ ಕಾರ್ಯ ಕೈಗೊಂಡಿದ್ದಾರೆ. ಈ ಕಾರ್ಯವನ್ನು ಯಶಸ್ವಿಗೊಳಿಸಲು ಸಾರ್ವಜನಿಕರು ಸಹಕರಿಸಬೇಕಿದ್ದು, ಯಾವುದೇ ರೀತಿಯ ಗೊಂದಲಗಳಿಗೆ ಅವಕಾಶ ನೀಡಬಾರದು ಎಂದು ಹೇಳಿದರು. ಮತದಾರರ ಪಟ್ಟಿಯಲ್ಲಿರುವವರು ಮೃತಪಟ್ಟಿದ್ದರೆ, ಸ್ಥಳಾಂತರಗೊಂಡಿದ್ದರೆ ಅಥವಾ ಬೇರೆ ಕಾರಣಗಳಿಂದ ಮತದಾರರ ಪಟ್ಟಿಯಲ್ಲಿ ತಿದ್ದುಪಡಿ ಅಗತ್ಯವಿದ್ದರೆ, ಸಂಬಂಧಿಸಿದ ಬಿಎಲ್‌ಒಗಳಿಗೆ ಮಾಹಿತಿ ನೀಡಬೇಕು. ಮೃತಪಟ್ಟಿರುವ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಗೆ ವಂತಿಕೆ ಪಾವತಿಸುವ ಸಂಘಟಿತ ಕಾರ್ಮಿಕರ ಮಕ್ಕಳಿಗೆ ೨೦೨೬–೨೭ನೇ ಸಾಲಿನ ಶೈಕ್ಷಣಿಕ ಪ್ರೋತ್ಸಾಹ ಧನ ಸಹಾಯಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಪ್ರಸ್ತುತ ಸ್ನಾತಕೋತ್ತರ, ಪದವಿ, ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಶಿಕ್ಷಣ ಪಡೆಯುತ್ತಿರುವ ಅರ್ಹ ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಪಡೆದುಕೊಳ್ಳಲು ಮುಂಬರುವ ಡಿಸೆಂಬರ್ ೩೧ ರೊಳಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ. ಈ ಯೋಜನೆಯಡಿ ಸೌಲಭ್ಯ ಪಡೆಯಲು ಕೆಲವು ಪ್ರಮುಖ ಅರ್ಹತೆಗಳನ್ನು ನಿಗದಿಪಡಿಸಲಾಗಿದ್ದು, ಅರ್ಜಿ ಸಲ್ಲಿಸುವ ಕಾರ್ಮಿಕ ಪೋಷಕರ ಮಾಸಿಕ ವೇತನವು ೩೫,೦೦೦ ರೂ. ಮೀರಿರಬಾರದು. ಇದರೊಂದಿಗೆ ಒಂದೇ ಕುಟುಂಬದ ಒಬ್ಬ ವಿದ್ಯಾರ್ಥಿಗೆ ಮಾತ್ರ ಈ ಶೈಕ್ಷಣಿಕ ಧನಸಹಾಯ ಲಭ್ಯವಿರಲಿದ್ದು, ಸಾಮಾನ್ಯ ವರ್ಗದ ವಿದ್ಯಾರ್ಥಿ ಶೇಕಡಾ ೫೦ ರಷ್ಟು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವರ್ಗದವರಾಗಿದ್ದರೆ ಶೇಕಡಾ ೪೫ ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರುವುದು ಕಡ್ಡಾಯವಾಗಿದೆ. ಅರ್ಹ ಹಾಗೂ ಆಸಕ್ತ ವಿದ್ಯಾರ್ಥಿಗಳು ಮಂಡಳಿಯ ಅಧಿಕೃತ ವೆಬ್‌ಸೈಟ್ www.klwbapps.karnataka.gov.inಮೂಲಕ ಆನ್‌ಲೈನ್‌ನಲ್ಲಿ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.…
ಲೇಖನ- ಅವಿನಾಶ ಸೆರೆಮನಿಬೈಲಹೊಂಗಲಜಿಲ್ಲೆ: ಬೆಳಗಾವಿ ಉದಯರಶ್ಮಿ ದಿನಪತ್ರಿಕೆ ಸಮಯ ನಮ್ಮ ಜೀವನದ ನಿಶ್ಶಬ್ದ ಗುರು. ಅದು ಮಾತಾಡುವುದಿಲ್ಲ, ಆದರೆ ಪ್ರತಿಯೊಂದು ಕ್ಷಣದಲ್ಲೂ ನಮಗೆ ಪಾಠ ಕಲಿಸುತ್ತಿರುತ್ತದೆ.ಸಂತೋಷ ಬಂದಾಗ ಸಮಯವು ನಗುವಿನ ಮೌಲ್ಯವನ್ನು ತಿಳಿಸುತ್ತದೆ; ದುಃಖ ಬಂದಾಗ ತಾಳ್ಮೆಯ ಮಹತ್ವವನ್ನು ಕಲಿಸುತ್ತದೆ. ಕೆಲವೊಮ್ಮೆ ನಮ್ಮ ಹತ್ತಿರದವರು ದೂರವಾಗಬಹುದು, ಪರಿಸ್ಥಿತಿಗಳು ಬದಲಾಗಬಹುದು, ಆದರೆ ಸಮಯ ಮಾತ್ರ ತನ್ನ ಪಯಣವನ್ನು ನಿಲ್ಲಿಸುವುದಿಲ್ಲ. ಅದಕ್ಕಾಗಿಯೇ ಸಮಯದೊಂದಿಗೆ ಹೊಂದಿಕೊಂಡು ಬದುಕುವವರು ಜೀವನದಲ್ಲಿ ಹೆಚ್ಚು ಶಾಂತಿ ಮತ್ತು ಯಶಸ್ಸನ್ನು ಪಡೆಯುತ್ತಾರೆ. ಮಾನವನ ಸಂಬಂಧಗಳು ಸಹ ಸಮಯದ ಮೇಲೆ ನಿಂತಿವೆ. ಕುಟುಂಬದವರೊಂದಿಗೆ ಕಳೆಯುವ ಸಮಯ ಪ್ರೀತಿಯನ್ನು ಗಾಢಗೊಳಿಸುತ್ತದೆ. ಸ್ನೇಹಿತರೊಂದಿಗೆ ಕಳೆದ ಕ್ಷಣಗಳು ನೆನಪುಗಳಾಗಿ ಉಳಿಯುತ್ತವೆ. ಮಕ್ಕಳಿಗೆ ಪಾಲಕರು ಕೊಡುವ ಸಮಯವೇ ಅವರ ಭವಿಷ್ಯವನ್ನು ರೂಪಿಸುತ್ತದೆ. ಇಂದು ಅನೇಕರು ಹಣ ಸಂಪಾದನೆಗಾಗಿ ಓಡಾಡುತ್ತಾ ತಮ್ಮ ಪ್ರಿಯಜನರಿಗೆ ಸಮಯ ನೀಡುವುದನ್ನು ಮರೆತಿದ್ದಾರೆ. ಆದರೆ ಕೊನೆಯಲ್ಲಿ ಮನುಷ್ಯನಿಗೆ ನೆನಪಾಗುವುದು ಸಂಪಾದಿಸಿದ ಹಣವಲ್ಲ; ತನ್ನವರೊಂದಿಗೆ ಕಳೆದ ಅಮೂಲ್ಯ ಕ್ಷಣಗಳೇ.ಸಮಯವು ಒಬ್ಬೊಬ್ಬರ ಜೀವನದಲ್ಲಿ ಬೇರೆಬೇರೆ ರೀತಿಯಲ್ಲಿ ಪರಿಣಾಮ ಬೀರುತ್ತದೆ.…
ಲೇಖನ- ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)ವಿಜಯಪುರ ‘ ಉದಯರಶ್ಮಿ ದಿನಪತ್ರಿಕೆ ‘ಗುರ್ಜಿ ಗುರ್ಜಿ ಎಲ್ಲಾಡಿ ಬಂದೆ, ಹಳ್ಳ-ಕೊಳ್ಳ ಸುತ್ತಾಡಿ ಬಂದೆ, ಕಾರ ಮಳೆಯೋ ಕಪಟ ಮಳೆಯೋ, ಸುರಿ ಸುರಿಯೋ ಮಳೆರಾಯ’ ಎಂಬ ವರುಣದೇವನನ್ನು ಮಳೆಗಾಗಿ ಪ್ರಾರ್ಥಿಸುವ ಈ ಜಾನಪದ ಹಾಡನ್ನು ತಾವೆಲ್ಲರೂ ಕೇಳಿರಬಹುದು. ಮಳೆಗಾಗಿ ದೇವರಲ್ಲಿ ಮೊರೆ ಹೋಗುವುದು ಮತ್ತು ದೇವರಲ್ಲಿ ಪ್ರಾರ್ಥಿಸುವುದು ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದ ನಂಬಿಕೆ. ಉತ್ತಮ ಮಳೆ, ಬೆಳೆ ಮತ್ತು ಅನ್ನದಾತರ ಸಮೃದ್ಧಿಗಾಗಿ ಜನತೆ ಮನೆಯಲ್ಲಿ ಯಾವುದೇ ಅಡುಗೆ ಮಾಡದೇ ವಾರ (ಉಪವಾಸ) ಮಾಡುವುದು, ಪೂಜೆ ಸಲ್ಲಿಸುವುದು ಮತ್ತು ಕತ್ತೆ ಮದುವೆ ಮಾಡುವುದು ಮತ್ತು ಗುರ್ಜಿ ಮಾಡಿ ದೇವರಲ್ಲಿ ವಿಶೇಷ ಪ್ರಾರ್ಥನೆ ಮಾಡುತ್ತಾರೆ. ವರುಣ ದೇವನಲ್ಲಿ (ಮಳೆರಾಯ) ಭೂಮಿಗೆ ಜೀವಜಲವನ್ನು ಕರುಣಿಸಿ, ಬರಗಾಲವನ್ನು ದೂರ ಮಾಡುವಂತೆ ಭಕ್ತಿ-ಭಾವದಿಂದ ನಿವೇದನೆ ಮಾಡಿಕೊಳ್ಳುತ್ತಾರೆ.ಮಾನವ ಸಂಸ್ಕೃತಿಯ ತಾಯಿಬೇರು ಜನಪದ ಪರಂಪರೆಕಣ್ಣು ಮುಚ್ಚಿ ಕುಳಿತೆನೋ ವರುಣ ದೇವ, ಬೆಳೆ ಒಣಗಿ ಬಸವಳಿಯಿತು ಜೀವ, ಕಾರ ಮಳೆಯ ಸುರಿಸಿ,…
ಲೇಖನ- ಸುಮಲತಾ ಗಡಿಯಪ್ಪನವರಬಿದರಕುಂದಿತಾ: ಮುದ್ದೇಬಿಹಾಳ ಉದಯರಶ್ಮಿ ದಿನಪತ್ರಿಕೆ ಪ್ರತಿದಿನ ಬೆಳಗಿನ ಜಾವ ಕಿಟಕಿಯಿಂದ ಆಚೆ ನೋಡಿದಾಗ ಪ್ರಕೃತಿಯ ಅರುಣೋದಯ ಪ್ರತಿಯೊಬ್ಬರನ್ನೂ ಕೈಬೀಸಿ ಕರೆಯುತ್ತದೆ. ಹಕ್ಕಿಗಳ ಚಿಲಿಪಿಲಿ ಕಲರವಕ್ಕೆ ಕಿವಿಯಾಗುತ್ತಾ, ತಣ್ಣನೆಯ ಮುಂಜಾವಿನ ಗಾಳಿಯಲ್ಲಿ ಒಂದಿಷ್ಟು ಹೊತ್ತು ತನಗಾಗಿ ನಡಿಗೆಯನ್ನು (Morning Walk) ಮಾಡಬೇಕು, ಆ ಪ್ರಕೃತಿಯ ಮಡಿಲಲ್ಲಿ ಮನಸ್ಸನ್ನು ಹಗುರಗೊಳಿಸಿಕೊಳ್ಳಬೇಕು ಎಂಬ ಹಂಬಲ ಇಂದು ಪ್ರತಿಯೊಬ್ಬ ಮಹಿಳೆಗೂ ಇರುತ್ತದೆ. ಆದರೆ, ಆ ಆಸೆಗೆ ಕಣ್ಣು ತೆರೆಯುವಷ್ಟರಲ್ಲೇ ಮನಸ್ಸು ಮತ್ತು ದೇಹ ಎರಡೂ ಆಯಾಸದ ಭಾರಕ್ಕೆ ಕುಸಿದುಬಿಡುತ್ತವೆ.ಇಲ್ಲಿ ‘ಮುಂಜಾವಿನ ನಡಿಗೆ’ ಎಂಬುದು ಕೇವಲ ಒಂದು ಉದಾಹರಣೆಯಷ್ಟೇ. ಆಕೆಯ ಇಷ್ಟದ ಹವ್ಯಾಸಗಳು, ಆಸಕ್ತಿಯ ಕ್ಷೇತ್ರಗಳು ಮತ್ತು ಆಕೆಗಾಗಿಯೇ ಮೀಸಲಿಡಬೇಕಾದ ಪುಟ್ಟ ಸಮಯದ ಕಲ್ಪನೆಯೂ ಇಂದು ಗೃಹಕೃತ್ಯದ ಕಲ್ಲುಬಂಡೆಯಡಿಯಲ್ಲಿ ಸಿಲುಕಿ ನಲುಗಿಹೋಗಿದೆ.ಗಡಿಯಾರದ ಮುಳ್ಳಿನೊಂದಿಗೆ ನಿರಂತರ ಓಟಬಹುತೇಕ ಹೆಣ್ಣುಮಕ್ಕಳ ಪಾಲಿಗೆ ಸ್ವಂತಿಕೆ ಎಂಬುದು ಕೇವಲ ಒಂದು ಕನಸಷ್ಟೇ. ಏಕೆಂದರೆ, ಆ ನಸುಬೆಳಕಿನ ವೇಳೆಗಾಗಲೇ ಅವರು ಗೃಹಕೃತ್ಯದ ನೊಗಕ್ಕೆ ಹೆಗಲು ಕೊಟ್ಟಿರುತ್ತಾರೆ. ಮನೆಯವರೆಲ್ಲರ ಇಷ್ಟ-ಕಷ್ಟಗಳನ್ನು ಅರಿತು, ತಿಂಡಿ-ಡಬ್ಬಿಗಳನ್ನು ಹದವಾಗಿ…
