ಉದಯರಶ್ಮಿ ದಿನಪತ್ರಿಕೆ
ಚಡಚಣ: ಹಿಂದೆ ನಮ್ಮ ತಂದೆ/ತಾಯಿ, ಅಜ್ಜ /ಅಜ್ಜಿಯರ ಸಮಯದಲ್ಲಿ ಪ್ರಾಣಿ ಪಕ್ಷಿಗಳ ಸಂತಾನ ಹೆಚ್ಚಾಗಿ ಮನೆಗಳಲ್ಲಿ ಕಾಣುತಿದ್ದೆವು, ಆದರೆ ಇವಾಗ ಜಗತ್ತಿನಲ್ಲಿ ಮೊಬೈಲ್, ಸೆಟಲೈಟ್, ವಾಹನಗಳ ಮಾಲಿನ್ಯಕ್ಕೆ ಪಕ್ಷಿಗಳ ಸಂತಾನ ಕ್ಷಿಣಿಸುತ್ತಿದೆ, ಇದಕ್ಕೆಲ್ಲ ನಾವು ಮನುಜರು ಮನಸ್ಸು ಮಾಡಿದರೆ ಪಕ್ಷಿಗಳ ಸಂತಾನ ಉಳಿಸಲು ಸಾಧ್ಯ ಎಂದು ವಿಜಯಪುರ ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ರಾಘವೇಂದ್ರ ಕಾಪಸೆ ಹೇಳಿದರು.
ಬೇಸಿಗೆ ಸಮಯದಲ್ಲಿ ಚಡಚಣ ತಾಲೂಕಿನ ಹತ್ತಳ್ಳಿ ಗ್ರಾಮದ ಕೆರೆಯಲ್ಲಿ ಸಾವಿರಾರು ಪಕ್ಷಿಗಳು ನಾಶವಾದ ವಿಷಯ ಕಂಡು ಝಳಕಿ ಗ್ರಾಮದಲ್ಲಿ ವಿಜಯಪುರ ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷರು ರಾಘವೇಂದ್ರ ಕಾಪಸೆ ಹಾಗೂ ಗೆಳೆಯರ ಬಳಗದ ಸಹಯೋಗದಲ್ಲಿ ಪಕ್ಷಿಗಳಿಗೆ ನಿರುಣಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಹಿಂದೆ ಸಲೀಮ್ ಅಲಿ ಅಂತಹ ಪ್ರಾಣಿ, ಪಕ್ಷಿಗಳ ಪ್ರಿಯರು ಇತಿಹಾಸದಲ್ಲೇ ದಾಖಲೆಯಾಗಿದ್ದನ್ನು ಕಂಡಿದ್ದೇವೆ, ನಾವುಗಳು ಪಕ್ಷಿಗಳಿಗೆ ದಿನದ ಒಂದು ಅರ್ಧ ಗಂಟೆ ಮಾತ್ರ ಕಾರ್ಯಗತರಾಗೋಣ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಇಂಡಿ ತಾಲೂಕು ಉಪಾಧ್ಯಕ್ಷ ಪ್ರಕಾಶ ಬಿರಾದಾರ, ಝಳಕಿ ವಲಯ ಅಧ್ಯಕ್ಷ ರವಿಕುಮಾರ ಹೂಗಾರ, ಶಶಿಧರ ಪಾಟೀಲ,ಪಿಂಟುದಾದಾ ಹಾಡ್ಸoಗೆ, ಮಾಜಿ ಗ್ರಾ. ಪಂ. ಅಧ್ಯಕ್ಷ ಶ್ರೀಶೈಲ ಬನಸೋಡೆ, ವಿಠಲ ಕಾಗರ, ದಯಾನಂದ ಶಿವಣಗಿ, ಬಾಲಕೃಷ್ಣ ಭೋಸಲೆ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

