ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು, ಪಟ್ಟಣ ಪಂಚಾಯಿತಿಗಳ ಸಹಯೋಗದಲ್ಲಿ ಅಂಬೇಡ್ಕರ್ ಜಯಂತಿಯಂದು ವಿವಿಧ ಕಾರ್ಯಕ್ರಮ ಕೈಗೊಳ್ಳಲಾಗುತ್ತಿದೆ. ಎಲ್ಲರ ಸಹಕಾರ ಅಗತ್ಯ ಎಂದು ತಹಶೀಲ್ದಾರ ನಿಂಗಪ್ಪ ಬಿರಾದಾರ ಹೇಳಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಮಂಗಳವಾರ ಡಾ.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಮ್ ಜಯಂತಿಗಳ ಅಂಗವಾಗಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಜಯಂತಿ ಅಂಗವಾಗಿ ಹೂಗಳಿಂದ ಅಂಬೇಡ್ಕರ್ ವೃತ್ತದ ಅಲಂಕಾರ, ಸ್ತಬ್ಧಚಿತ್ರ, ಭಾವಚಿತ್ರ ಮೆರವಣಿಗೆ, ವಿಶೇಷ ಉಪನ್ಯಾಸ ಜೊತೆಗೆ ಉಪಹಾರ ವ್ಯವಸ್ಥೆ ಕಲ್ಪಿಸಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆರವೇರಿಸಲಾಗುತ್ತಿದೆ ಎಂದರು.
ದಲಿತ ಸಂಘರ್ಷ ಸಮಿತಿಯ ರಾವುತ ತಳಕೇರಿ, ಜಾನು ಗುಡಿಮನಿ, ರಾಜಕುಮಾರ ಸಿಂದಗೇರಿ ಜಯಂತಿ ರೂಪರೇಷೆಗಳ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲ್ಲೂಕು ಪಂಚಾಯಿತಿ ಇಓ ಭಾರತಿ ಚೆಲುವಯ್ಯ, ಸಮಾಜ ಕಲ್ಯಾಣ ಅಧಿಕಾರಿ ಭವಾನಿ ಪಾಟೀಲ, ಬಿಇಓ ಎಂ.ಬಿ.ಯಡ್ರಾಮಿ, ಕೃಷಿ ಇಲಾಖೆಯ ಶರಣಗೌಡ ಬಿರಾದಾರ, ಶಿರಸ್ತೇದಾರ ಸುರೇಶ ಮ್ಯಾಗೇರಿ, ಹೆಸ್ಕಾಂನ ಯು.ಎಲ್.ಪಟ್ಟಣ, ಪಶು ಅಸ್ಪತ್ರೆಯ ರಾಮು ರಾಠೋಡ, ತೋಟಗಾರಿಕೆ ಇಲಾಖೆಯ ಸಚೀನ ಉಟಗಿ, ಸಿ.ಕೆ.ಕುದರಿ, ಎಸ್.ಎನ್.ಬಸವರೆಡ್ಡಿ, ಮುತ್ತುರಾಜ ಹಿರೇಮಠ, ಕಿರಣ ಪಾಟೀಲ, ಬಿ.ಬಿ. ಪಾಟೀಲ, ಸಿ.ಬಿ.ಗಡಗಿ, ಬಸವರಾಜ ತಳಕೇರಿ, ಕಾಶೀನಾಥ ಬಜಂತ್ರಿ, ನಿಜಲಿಂಗ ಮ್ಯಾಕೇರಿ ಸಹಿತ ತಾಲ್ಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

