Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಚಡಚಣ: ತಾಲೂಕಿನ ಮಣಂಕಲಗಿ ಗ್ರಾಮದಿಂದ ಅರ್ಜನಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಸಾರ್ವಜನಿಕ ರಸ್ತೆಯನ್ನು ಪಕ್ಕದ ಜಮೀನಿನ ಮಾಲೀಕರೊಬ್ಬರು ಬಂದ್ ಮಾಡಿರುವುದರಿಂದ ರೈತರು, ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಸಮಸ್ಯೆಯನ್ನು ತಕ್ಷಣ ಬಗೆಹರಿಸಿ ರಸ್ತೆ ಸಂಚಾರಕ್ಕೆ ಮುಕ್ತಗೊಳಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಮಂಗಳವಾರ ಚಡಚಣ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.ಗ್ರಾಮಗಳ ನಡುವಿನ ಪ್ರಮುಖ ಸಂಪರ್ಕ ರಸ್ತೆಯಾಗಿರುವ ಈ ಮಾರ್ಗ ಬಂದ್ ಆಗಿರುವ ಪರಿಣಾಮ ರೈತರು ತಮ್ಮ ಜಮೀನುಗಳಿಗೆ ಕೃಷಿ ಕಾರ್ಯಗಳಿಗಾಗಿ ತೆರಳಲು ಪರದಾಡುವಂತಾಗಿದೆ. ಅಲ್ಲದೆ ಪ್ರತಿದಿನ ಇದೇ ರಸ್ತೆಯನ್ನು ಬಳಸಿಕೊಂಡು ಶಾಲೆಗೆ ತೆರಳುವ ವಿದ್ಯಾರ್ಥಿಗಳು ಪರ್ಯಾಯ ಮಾರ್ಗ ಬಳಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಮಯ ಮತ್ತು ಶ್ರಮ ಎರಡೂ ವ್ಯರ್ಥವಾಗುತ್ತಿದೆ ಎಂದು ಗ್ರಾಮಸ್ಥರು ದೂರಿದರು.ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳು ವೇಗ ಪಡೆದುಕೊಂಡಿರುವ ಈ ಸಂದರ್ಭದಲ್ಲಿ ರಸ್ತೆ ಬಂದ್ ಆಗಿರುವುದು ರೈತರಿಗೆ ಮತ್ತಷ್ಟು ಸಂಕಷ್ಟ ಉಂಟುಮಾಡಿದೆ. ಕೃಷಿ ಯಂತ್ರೋಪಕರಣಗಳು, ಬಿತ್ತನೆ ಸಾಮಗ್ರಿ ಹಾಗೂ ಇತರ ಅಗತ್ಯ ವಸ್ತುಗಳನ್ನು…

Read More

ಸಂಸದ ರಮೇಶ ಜಿಗಜಿಣಗಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರ, ಕಲಬುರ್ಗಿ, ವಿಜಯಪುರ – ಹುಬ್ಬಳ್ಳಿ ರಸ್ತೆಯನ್ನು ಚತುಷ್ಪಥ ಮಾರ್ಗವನ್ನಾಗಿ ಪರಿವರ್ತನೆ ಹಿನ್ನೆಲೆಯಲ್ಲಿ ಸಂಸದ ರಮೇಶ ಜಿಗಜಿಣಗಿರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಮಹತ್ವದ ಸಮಾಲೋಚನಾ ಸಭೆ ನಡೆಸಿದರು.ವಿಜಯಪುರ ಮಹಾನಗರದಿಂದ ಕಲಬುರ್ಗಿ, ಹುಬ್ಬಳ್ಳಿ ಸೇರಿದಂತೆ ಅನೇಕ ಪ್ರಮುಖ ಮಹಾನಗರಗಳಿಗೆ ನಿತ್ಯ ಸಾವಿರಾರು ಜನರ ಓಡಾಟವಿದೆ, ಹೀಗಾಗಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಿ ವ್ಯವಸ್ಥಿತ ಸಂಚಾರಕ್ಕೆ ಅನುಕೂಲವಾಗಲು ವಿಜಯಪುರ- ಕಲಬುರ್ಗಿ, ವಿಜಯಪುರ -ಹುಬ್ಬಳ್ಳಿ ರಸ್ತೆ ಚತುಷ್ಪಥ ಮಾರ್ಗವಾಗಿ ಅಭಿವೃದ್ಧಿಗೊಳ್ಳಬೇಕಿದೆ ಎಂದು ಸಂಸದ ಜಿಗಜಿಣಗಿ ಹೇಳಿದರು.ಈ ಕಾಮಗಾರಿಗೆ ಸಂಬಂಧಿಸಿದಂತೆ ಪೂರಕ ಅಂದಾಜು, ಪ್ರಸ್ತಾವನೆ ಸೇರಿದಂತೆ ವಿವಿಧ ಅನುಷ್ಠಾನ ಸಂಬಂಧಿಸಿದ ಸಮಗ್ರ ವಿಷಯಗಳನ್ನು ಸಮಾಲೋಚನೆ ನಡೆಸಿ ಮಾಹಿತಿ ಪಡೆದುಕೊಂಡರು‌.ವಿಜಯಪುರ ಸೇರಿದಂತೆ ವಿವಿಧ ಭಾಗದ ರಾಷ್ಟ್ರೀಯ ಹೆದ್ದಾರಿಗಳಿಂದ ನೇರವಾಗಿ ವಿಜಯಪುರ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ವಿಶೇಷ ರಸ್ತೆ ಮಾರ್ಗ ನಿರ್ಮಾಣದ ಬಗ್ಗೆಯೂ ಚರ್ಚೆ ನಡೆಸಿದರು.ವಿಜಯಪುರ ಮಹಾನಗರದಿಂದ ವಿವಿಧ ಪಟ್ಟಣಗಳಿಗೆ…

Read More

ಲೇಖನ- ಸಂತೋಷ್ ರಾವ್ ಪೆರ್ಮುಡ.ಪಟ್ರಮೆ ಗ್ರಾಮ ಮತ್ತು ಅಂಚೆಬೆಳ್ತಂಗಡಿ ತಾಲೂಕುದ.ಕ ಜಿಲ್ಲೆ-೫೭೪೧೯೮ದೂ: ೯೭೪೨೮೮೪೧೬೦ ಉದಯರಶ್ಮಿ ದಿನಪತ್ರಿಕೆ ಒಂದು ಬೇಸಿಗೆಯ ಮಧ್ಯಾಹ್ನದ ವೇಳೆಗೆ ಹೆಬ್ಬುಲಿಯೊಂದು ಕಾಡು ಕೋಣವೊಂದನ್ನು ಭರ್ಜರಿ ಬೇಟೆಯಾಡಿ, ಹೊಟ್ಟೆ ತುಂಬುವಷ್ಟು ತಿಂದು ಮರವೊಂದರ ನೆರಳಿನಲ್ಲಿ ಹಾಯಾಗಿ ಮಲಗಿತ್ತು. ಆಗ ಹೆಬ್ಬುಲಿಯ ಕಿವಿಯ ಬಳಿ ನೊಣವೊಂದು ಗುಯ್ ಎನ್ನುತ್ತಾ ಹಾರಾಡತೊಡಗಿದಾಗ ಹುಲಿಗೆ ಎಚ್ಚರವಾಯಿತು. ಚೆನ್ನಾಗಿ ನಿದ್ರೆ ಮಾಡುತ್ತಿದ್ದ ಹುಲಿಗೆ ಇದರಿಂದ ಬಹಳ ಕೋಪ ಬಂತು. ನೊಣವನ್ನು ಓಡಿಸಲು ತನ್ನ ಮುಖ ಮತ್ತು ದೇಹವನ್ನು ಪಟಪಟನೇ ಕೊಡವಿತು. ಆಗ ಆ ನೊಣವು ಮೇಲಕ್ಕೆ ಹಾರಿ ಗರಗರನೇ ಸುತ್ತಿ ಬಂದು ಹುಲಿಯನ್ನು ಕೆರಳಿಸುವಂತೆ ಅದರ ಮೂಗಿನ ಮೇಲೆ ಕುಳಿತುಕೊಂಡಿತು. ನೊಣದ ಉದ್ಧಟತನವನ್ನು ಕಂಡ ಹೆಬ್ಬುಲಿಯ ಸಿಟ್ಟು ಹೆಚ್ಚಾಗಿ ತನ್ನ ಬಲಗಾಲನ್ನೆತ್ತಿ ನೊಣಕ್ಕೆ ಹೊಡೆಯಲು ಪ್ರಯತ್ನಿಸಿತು.ಆದರೆ ಜಾಣ ನೊಣವು ಅಲ್ಲಿಂದ ಪಾರಾಗಿ ಮೇಲಕ್ಕೆ ಹಾರಿದಾಗ ಹುಲಿಯ ಕಾಲು ಅದರ ಮುಖಕ್ಕೇ ಅಪ್ಪಳಿಸಿ ಅತಿಯಾದ ನೋವಾಯಿತು, ಹುಲಿಯ ಕಣ್ಣಲ್ಲಿ ನೀರು ಬಂದಿತು. ಇದನ್ನು ನೋಡಿದ ನೊಣವು ಗಹಗಹಿಸಿ…

Read More

ಲೇಖನ- ಜಯಶ್ರೀ.ಜೆ. ಅಬ್ಬಿಗೇರಿ.ಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಥಾಮಸ್ ಅಲ್ವಾ ಎಡಿಸನ್ ವಿದ್ಯುತ್ ದ್ವೀಪವನ್ನು ಕಂಡು ಹಿಡಿಯುವ ಮುನ್ನ ಸಾವಿರಾರು ಬಾರಿ ವಿಫಲರಾಗಿದ್ದರು. ಅವರು ಪ್ರತಿ ಬಾರಿಯೂ ಆತಂಕಪಟ್ಟು ಪ್ರಯತ್ನವನ್ನು ನಿಲ್ಲಿಸಿದ್ದರೆ ಇಂದು ಜಗತ್ತು ಕತ್ತಲಲ್ಲಿ ಮುಳುಗಿರುತ್ತಿತ್ತು. ವೈಫಲ್ಯಗಳಿಗೆ ಆತಂಕ ಪಟ್ಟು, ಪ್ರಯತ್ನಗಳಿಗೆ ಬೆನ್ನು ತೋರುವ ಬದಲು ಆತಂಕವನ್ನು ಹೊಸ ಪಾಠವೆಂದು ಸ್ವೀಕರಿಸಬೇಕು ಎಂಬ ಸಂದೇಶವನ್ನು ಎಡಿಸನ್ ಜೀವನದಿಂದ ಕಲಿಯಬೇಕು.ಆತಂಕವೆಂದರೆ…?ಆತಂಕ ಎನ್ನುವುದು ಭವಿಷ್ಯದಲ್ಲಿ ನಡೆಯಬಹುದಾದ ಕಾಲ್ಪನಿಕ ಅಪಾಯ ಅಥವಾ ತೊಂದರೆಯ ಬಗ್ಗೆ ಮನಸ್ಸಿನಲ್ಲಿ ಮೂಡುವ ಅತಿಯಾದ ಭಯ ಮತ್ತು ಒತ್ತಡದ ಸ್ಥಿತಿ. ಸ್ವಾಮಿ ವಿವೇಕಾನಂದರ ಪ್ರಕಾರ ಆತಂಕ ಎನ್ನುವುದು ಹೊರಗಿನ ಜಗತಿನಿಂದ ಬರುವುದಿಲ್ಲ. ನಮ್ಮ ಮನಸ್ಸು ಸೃಷ್ಟಿಸುವ ದುರ್ಬಲ ಆಲೋಚನೆಗಳೇ ಆತಂಕಕ್ಕೇ ಮೂಲ. ಅದಕ್ಕೆ ಅವರು ಹೇಳಿದ್ದು,’ ನಿಮ್ಮ ಆಲೋಚನೆಗಳೇ ನಿಮ್ಮ ಆತಂಕಕ್ಕೆ ಕಾರಣ.’ ಎಂದು. ಆತಂಕವೆಂದರೆ ‘ನಡೆಯದ ಘಟನೆಗಳ ಬಗ್ಗೆ ಮುಂಚಿತವಾಗಿಯೇ ಹೆದರುವುದು.’ ನನ್ನ ಜೀವನದಲ್ಲಿ ಸಾವಿರಾರು ಸಮಸ್ಯೆಗಳನ್ನು ಎದುರಿಸಿದ್ದೇನೆ, ಆದರೆ ಅವುಗಳಲ್ಲಿ ಬಹುಪಾಲು ಸಮಸ್ಯೆಗಳು ಕೇವಲ ನನ್ನ…

Read More

ಉದಯರಶ್ಮಿ ದಿನಪತ್ರಿಕೆ ಎಚ್ ಡಿ ಕೋಟೆ: ಕನ್ನಡ ರಾಷ್ಟ್ರೀಯ ಶಿಕ್ಷಣ ಒಕ್ಕೂಟದ ವತಿಯಿಂದ ತಾಲೂಕಿನ ಅಂಕನಾಥಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್ ಹಾಗೂ ಕಲಿಕಾ ಸಾಮಗ್ರಿಗಳನ್ನು ನೀಡಲಾಯಿತು.ತಾಲೂಕಿನ ನಿರ್ದೇಶಕ ಶಿವಕುಮಾರ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಓದುವ ಗ್ರಾಮೀಣ ಪ್ರದೇಶದ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಉಚಿತವಾಗಿ ವಿದ್ಯಾರ್ಥಿಗಳಿಗೆ ನೋಟ್‌ಬುಕ್, ಪೆನ್ನು, ಪೆನ್ಸಿಲ್‌ಗಳನ್ನು ವಿತರಣೆ ಮಾಡಿದ್ದೇವೆ. ವಿದ್ಯಾರ್ಥಿಗಳು ಇದರ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಶೈಕ್ಷಣಿಕವಾಗಿ ಪ್ರಗತಿ ಸಾಧನೆ ಮಾಡಿ ಸಮಾಜಕ್ಕೆ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕು. ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲೂ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸುವ ಕೆಲಸವನ್ನು ಶಿಕ್ಷಕರು, ಮನೆಯಲ್ಲಿ ಪೋಷಕರು ಮಾಡಬೇಕು, ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಲ್ಲೂ ಸಹ ಹೆಚ್ಚಿನ ಪ್ರತಿಭೆ ಇರುತ್ತದೆ ಅವರಿಗೆ ಸೂಕ್ತವಾದ ಮಾರ್ಗದರ್ಶನ ನೀಡಬೇಕು. ಸಂಘ-ಸಂಸ್ಥೆ, ದಾನಿಗಳು ನೀಡುವ ಕೊಡುಗೆಗಳನ್ನು ಸದ್ಬಳಕೆ ಮಾಡಿಕೊಂಡು ಜೀವನದಲ್ಲಿ ಸಾಧನೆ ಮಾಡಬೇಕು, ಆ ಮೂಲಕ ತಮ್ಮ ಉಜ್ವಲ ಭವಿಷ್ಯದ ಜತೆಗೆ ಸಮಾಜಕ್ಕೂ ಕೊಡುಗೆಯಾಗಬೇಕು ಎಂದು ಕಿವಿಮಾತು ಹೇಳಿದರು.ಈ…

Read More

ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಅವರ ‘ಶಿವಾನುಭವ’ ಪತ್ರಿಕೆಯ ಜನ್ಮ ಶತಮಾನೋತ್ಸವ ವರ್ಷ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೧೨ನೇ ಶತಮಾನದ ಬಸವಾದಿ ಶರಣರ ವಚನಗಳನ್ನು ಡಾ. ಫ.ಗು. ಹಳಕಟ್ಟಿ ಅವರು ಸಂಪಾದಿಸಿ ಪ್ರಕಟಿಸುತ್ತಿದ್ದ ‘ಶಿವಾನುಭವ’ ಪತ್ರಿಕೆಯ ಜನ್ಮಶತಮಾನೊತ್ಸವ ವರ್ಷವಿದು, ವಚನ ಸಾಹಿತ್ಯವನ್ನು ಸಂಗ್ರಹಿಸಿ, ಸಂಪಾದಿಸಿ ಪ್ರಕಟಿಸದೇ ಹೋಗಿದ್ದರೆ ವಚನ ಸಾಹಿತ್ಯದ ಸಮಗ್ರ ದರ್ಶನ ನಮಗಾಗುತ್ತಿರಲಿಲ್ಲ ಎಂದು ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಡಾ. ಎಂ.ಎಸ್. ಮದಭಾವಿ ಹೇಳಿದರು.ಅಖಿಲ ಭಾರತ ವೀರಶೈವ ಲಿಂಗಾಯತ ಸಾಂಸ್ಕೃತಿಕ ಸಭಾಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ೮೦ನೇ ಶಿವಾನುಭವ ಗೋಷ್ಠಿಯಲ್ಲಿ ಮಾತನಾಡಿದ ಅವರು ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಅವರು ತಮ್ಮ ಸಮಸ್ತ ಬದುಕನ್ನೆ ಶರಣ ಸಾಹಿತ್ಯದ ಪುನರುಜ್ಜೀವನಕ್ಕಾಗಿ ಮೀಸಲಿಟ್ಟು, ‘ಶಿವಾನುಭವ’ ಪತ್ರಿಕೆ ಮೂಲಕ ಮುವತ್ತೈದು ವರ್ಷಗಳ ಕಾಲ ಶರಣ ಸಾಹಿತ್ಯವನ್ನು ಅವ್ಯಾಹತವಾಗಿ ಪ್ರಕಟಿಸಿ ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಹೆಚ್ಚು ಮಾಡಿದರು. ಶಿವಶರಣರ ತತ್ವಗಳ ಉದ್ದೇಶವು ಶಿವನ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅಬಕಾರಿ ಇಲಾಖೆಯಲ್ಲಿ ಸ್ಥಗಿತಗೊಂಡಿರುವ ಹಾಗೂ ಮಂಜೂರಾಗದೇ ಬಾಕಿ ಇರುವ ನೋಂದಾಯಿತ ಬಿಡ್ಡದಾರರಿಗೆ ಜು. ೧೦ರಂದು ಬಾಗಲಕೋಟೆಯ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ತರಬೇತಿ ಹಾಗೂ ಇ-ಹರಾಜು ಆಯೋಜಿಸಲಾಗಿದೆ.ಪೋರ್ಟಲ್:hಣಣಠಿs://ತಿತಿತಿ.msಣಛಿeಛಿommeಡಿಛಿe.ಛಿom. ಆe ವಿಳಾಸದಲ್ಲಿ ಇ-ಹರಾಜಿಗೆ ನೋಂದಣಿ ಕಾರ್ಯ ಜು.೩ರಿಂದ ಆರಂಭಗೊಂಡಿದೆ. ಈ ಸಂಬಂಧ ಅಧಿಸೂಚನೆಯಲ್ಲಿ ಸೂಚಿಸಿದ ಎಲ್ಲಾ ರೀತಿಯ ಶುಲ್ಕುಗಳು ಹಾಗೂ ಷರತ್ತುಗಳಿಗೆ ಒಳಪಟ್ಟು ಇಚ್ಛೆವುಳ್ಳ ವ್ಯಕ್ತಿ /ಸಂಸ್ಥೆ / ಕಂಪನಿ ಇತ್ಯಾದಿಯವರು ಭಾಗವಹಿಸಬಹುದಾಗಿದೆ ಎಂದು ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.ಜಿಲ್ಲೆಗೆ ಸಂಬAಧಿಸಿದAತೆ ಭಾರತ ಸರ್ಕಾರದ ಸ್ವಾಮ್ಯದ ಸಂಸ್ಥೆಯಾದ ಎಂಎಸ್‌ಟಿಸಿ ಲಿಮಿಟೆಡ್ ಇ-ಹೋಟೆಲ್‌ನಲ್ಲಿ ವಿಜೆಪಿ೩೯/ಐಎನ್ ಡಿ೨೨೮/ಸಿಎಲ್೨ಎ/೦೦೧, ಬಸವನಬಾಗೇವಾಡಿ, ಗಿಎP೩೯/Iಓಆ೨೨೮/ಅಐ೨ಂ/೦೦೧, ಬಸವನಬಾಗೇವಾಡಿ, ಗಿಎP೩೯/ಃಂS೨೨೬/ಅಐ೨A/೦೦೧-ಜಿಇಎನ್, ಮುದ್ದೇಬಿಹಾಳ ಗಿಎP೩೯/ಒUಆ೨೨೯/ಅಐ೨ಂ/೦೦೧, ಸಿಂದಗಿ ಗಿಎP೩೯/SIಓ೨೩೦/ಅಐ೨ಂ/೦೦, ಬಸವನಬಾಗೇವಾಡಿ ಗಿಎP೩೯/ಃಂS೨೨೬/ಅಐ೨A/೦೦೨,ಮುದ್ದೇಬಿಹಾಳ ಗಿಎP೩೯/ಒUಆ೨೨೯/ಅಐ೨ಂ/೦೦೨, ಸಿಂದಗಿ ಗಿಎP೩೯/SIಓ೨೩೦/ಅ೨ಂ೦೦೨ ಈ ಸಿಎಲ್-೨(ಎ) ಸನ್ನದುಗಳ ಉಇಓ ಮೀಸಲಾತಿಗಳಾಗಿದ್ದು ಇವುಗಳ ಬೇಸಿಕ್ ಪ್ರೈಸ್ ಇಂಡಿ ೯೦ ಲಕ್ಷ, ಇಎಂಡಿ- ೧೮೦೦೦೦, ಉಳಿದ ಕ್ರ. ಸಂ:೨ ರಿಂದ ೭ ವರೆಗಿನ ಪ್ರತಿಯೊಂದು ಸನ್ನದುಗಳಿಗೆ ಬೇಸ್ ಪ್ರೈಸ್ ಇoಡಿ ೮೦…

Read More

ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಎಚ್ಚರಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಎಸ್ ಐಆರ್ ಗೆ ಸಂಬಂಧಿಸಿದಂತೆ ಇತ್ತೀಚಿಗೆ ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಬೇರೆ ಮತಕ್ಷೇತ್ರದಲ್ಲಿ ಮನೆ ಕಟ್ಟಿಕೊಂಡು ವಾಸವಿದ್ದರೂ ಎಸ್ ಐಆರ್ ಫಾರ್ಮನಲ್ಲಿ ಈ ಹಿಂದೆ ವಾಸವಿದ್ದ ತಮ್ಮ ಮೂಲ ಹಳೆಯ ಓಣಿಯ ವಿಳಾಸ ತುಂಬುವಂತೆ ತಿಳಿಸಿ ಪೋಸ್ಟ್ ಮಾಡಲಾಗುತ್ತಿದೆ. ಇದು ಕಾನೂನಿಗೆ ವಿರುದ್ಧವಾಗಿದ್ದು, ಅಂತಹ ವ್ಯಕ್ತಿಗಳನ್ನು ಕಠಿಣ ಶಿಕ್ಷೆಗೊಳಪಡಿಸಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ತಿಳಿಸಿದ್ದಾರೆ.ಈ ಕುರಿತು ಹೇಳಿಕೆ ನೀಡಿರುವ ಅವರು, ಪ್ರಜಾ ಪ್ರಾತಿನಿಧ್ಯ ಕಾಯ್ದೆ ೧೯೫೦ ರ ಕಲಂ ೧೭ ರಂತೆ ಒಬ್ಬ ವ್ಯಕ್ತಿಯ ಹೆಸರು ಒಂದಕ್ಕಿಂತ ಹೆಚ್ಚು ಮತಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಇರಬಾರದು. ಕಲಂ ೧೮ ರಂತೆ ಅರ್ಹತೆ ಇಲ್ಲದಿದ್ದರೂ ಅಥವಾ ತಪ್ಪು ಮಾಹಿತಿಯನ್ನು ನೀಡಿ ನೋಂದಣಿ ನಿಷೇಧಿಸಲಾಗಿದೆ. ಒಂದು ವೇಳೆ ಉದ್ದೇಶಪೂರ್ವಕವಾಗಿ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸುಳ್ಳು ಘೋಷಣೆ ಅಥವಾ ಸುಳ್ಳು ಮಾಹಿತಿ ನೀಡಿದರೆ ಸೆಕ್ಷನ್ ೩೧ ರಡಿ ಗರಿಷ್ಠ…

Read More

ಕಲ್ಬುರ್ಗಿ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಿಎಂ ಡಿ.ಕೆ ಶಿವಕುಮಾರ್ ಅಧಿಕಾರಿಗಳಿಗೆ ಎಚ್ಚರಿಕೆ ಕಲಬುರಗಿ: ರಾಜ್ಯವನ್ನು ಕಾಡುತ್ತಿರುವ ಬರಗಾಲ ಪರಿಸ್ಥಿತಿ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಡಿ ಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.ಕಲ್ಬುರ್ಗಿ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಂಗಳವಾರ ಪ್ರಸ್ತಾವಿಕ ಭಾಷಣ ಮಾಡಿದ ಸಿಎಂ ಅವರು, ಜನಪರ ಕೆಲಸ ಮಾಡದ ಅಧಿಕಾರಿಗಳನ್ನು ಸಹಿಸಿಕೊಳ್ಳುವುದಿಲ್ಲ ಎಂದರು. ಉತ್ತರ ಕರ್ನಾಟಕದ ಮೊದಲ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಕಲಬುರಗಿಯಲ್ಲಿ ಆಯೋಜಿಸಲಾಗಿತ್ತು.ಸರ್ವರನ್ನೂ ಒಳಗೊಂಡ ಪರಿಶುದ್ಧ ಆಡಳಿತ, ಅಭಿವೃದ್ಧಿ ಮತ್ತು ಕಟ್ಟಕಡೆಯ ವ್ಯಕ್ತಿಗೂ ಅವರ ನಾಗರಿಕ ಹಕ್ಕುಗಳನ್ನು ತಲುಪಿಸುವುದು ನನ್ನ ಸರ್ಕಾರದ ಪ್ರಮುಖ ಗುರಿ. ಈ ಗುರಿ ಸಾಧಿಸಲು ಅಧಿಕಾರಿ ವರ್ಗ ಅತ್ಯಂತ ಕ್ರಿಯಾಶೀಲ, ಜನಪರ ಮತ್ತು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು” ಎಂದು ತಿಳಿಸಿದರು.ನಾನು ಬಸವಾದಿ ಶರಣರ ಸಮಾನತೆಯ ತತ್ವವನ್ನು ನಂಬುವವನು. ಆದ್ದರಿಂದಲೇ ನನ್ನ ಮೊದಲ ಉತ್ತರ ಕರ್ನಾಟಕ ಪ್ರವಾಸವನ್ನು ಬಸವಕಲ್ಯಾಣದಿಂದ ಆರಂಭಿಸಿದ್ದೇನೆ. ಸಮಾನತೆ,…

Read More