ಉದಯರಶ್ಮಿ ದಿನಪತ್ರಿಕೆ
ಯಡ್ರಾಮಿ: ಪಟ್ಟಣದಲ್ಲಿರುವ ಜ್ಞಾನ ಸುಧಾ ವಿದ್ಯಾಪೀಠ ನರ್ಸರಿ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು.
ಸಮಾರಂಭದ ಅದ್ಯಕ್ಷ ತೆ ವಹಿಸಿದ ನಿವೃತ್ತ ಶಿಕ್ಷಕ ಸಿದ್ದಣ್ಣ ಬಂಡೆಪ್ಪಗೌಡ್ರ ಮಾತನಾಡಿ, ಮಕ್ಕಳು ಮೊಬೈಲ್ ಹಿಡಿಯವ ಬದಲು ಪುಸ್ತಕ ಹಿಡಿಯಬೇಕು. ಒಳ್ಳೆಯ ಶಿಕ್ಷಣದ ಜೊತೆಗೆ ಉನ್ನತ ಸಂಸ್ಕಾರ ಕಲಿಯಲು ಸಲಹೆ ನೀಡಿದರು.
ಪ್ರಾಸ್ತಾವಿಕ ಮಾತನಾಡಿದ ಸಂಸ್ಥೆಯ ನಿರ್ದೇಶಕ ಪ್ರಕಾಶ ಬೆಲ್ಲದ, ಅಜ್ಞಾನದ ಕತ್ತಲೆಯನ್ನು ಓಡಿಸಿ, ಸುಜ್ಞಾನದ ಬೆಳಕನ್ನು ಚೆಲ್ಲಿ, ಬದುಕಿನ ಸರಿಯಾದ ಹಾದಿಯನ್ನು ತೋರಿಸುವ ಪವಿತ್ರ ವೃತ್ತಿ ಎಂದರೆ ಅದು ಶಿಕ್ಷಕ ವೃತ್ತಿ. ಸಮಾಜಕ್ಕೆ ನೈತಿಕ ಹಾಗೂ ಬೌದ್ಧಿಕ ಅಡಿಪಾಯ ಹಾಕುವ ಗುರುಗಳನ್ನು ಸ್ಮರಿಸಿ, ಗೌರವಿಸುವ ಸುದಿನವೇ ಶಿಕ್ಷಕರ ದಿನಾಚರಣೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಲ್ಲ ಶಿಕ್ಷಕರಿಗೆ ನೆನಪಿನ ಕಾಣಿಕೆ ನೀಡಿ ಸತ್ಕರಿಸಲಾಯಿತು.
ಸಂಸ್ಥೆಯ ಕಾರ್ಯದರ್ಶಿ ಚನ್ನವೀರ ಬಂಡೆಪ್ಪಗೌಡ್ರ ಸೇರಿದಂತೆ ಶಾಲೆಯ ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು.
ಪ್ರಕಾಶ ಬೆಲ್ಲದ ಸ್ವಾಗತಿಸಿದರು.

