ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಕೃಷ್ಣ ಜಯಂತಿ ಆಧ್ಯಾತ್ಮೀಕ ಮಹತ್ವ ಸಾರುವ ಮಹತ್ವದ ದಿನವಾಗಿದೆ ಎಂದು ಶ್ರೀಸಿದ್ಧೇಶ್ವರ ಸ್ವಾಮೀಜಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ವಿ.ಕೆ.ಪಾಟೀಲ ಹೇಳಿದರು.
ಪಟ್ಟಣದ ಶ್ರೀಸಿದ್ಧೇಶ್ವರ ಸ್ವಾಮೀಜಿ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಜರುಗಿದ ಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಕ್ಕಳು ಕೇವಲ ವೇಷಭೂಷಣ ತೊಟ್ಟು ಕೃಷ್ಣನಂತೆ ಕಂಗೊಳಿಸದೇ ಅವನಂತೆ ಸದಾಚಾರ ರೂಪಿಸಿಕೊಳ್ಳುವಂತಾಗಬೇಕು. ಅದಕ್ಕಾಗಿ ಶಿಕ್ಷಕರೊಂದಿಗೆ ಪಾಲಕರು ಕೈಜೋಡಿಸಲಿ ಎಂದರು.
ಕೃಷ್ಣ ಜಯಂತಿ ಅಂಗವಾಗಿ ಮಕ್ಕಳು ಕೃಷ್ಣ ರಾಧೆಯರ ವೇಷಭೂಷಣ ಧರಿಸಿ ವಿಶಿಷ್ಟ ಹಾವಭಾವ ಮೂಲಕ ನೋಡುಗರ ಕಣ್ಮನ ಸೆಳೆದರು.
ಸಂಸ್ಥೆಯ ಆಡಳಿತಾಧಿಕಾರಿ ಕೆ.ಪಿ.ಮಾಲಿಪಾಟೀಲ, ಗೋಕುಲ ಗೋಪಿ, ದೀಪಾ ಬೆಳಗೌಡರ, ಪ್ರಿಯಾಂಕಾ ಲಮಾಣಿ, ಸುಜಾತಾ ಬಿರಾದಾರ, ಬಿಂದಿಯಾ, ಮಾನಸಿ ಬಾಬು, ಅಮೀನಾ ಶಾಬಾದಿ, ಶಮ್ರೀನ್ ಧಫೇದಾರ, ಜ್ಯೋತಿ ಮಡಿವಾಳರ, ಕಾವೇರಿ ಕುದರಿ ಇದ್ದರು.

