ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆ ಕೃಷಿಯೇತರ ಪತ್ತಿನ ಸಹಕಾರ ಸಂಘಗಳ ಹಾಗೂ ಸಹಕಾರಿಗಳ ಒಕ್ಕೂಟದ ೧೭ನೇಯ ವಾರ್ಷಿಕ ಸರ್ವ ಸದಸ್ಯರ ಸಭೆ ಕೆ ಸಿ ನಗರದ ಕಚೇರಿಯ ಸಭಾಂಗಣದಲ್ಲಿ ಜರುಗಿತು.
ವಿಜಯಪುರ
ಕೃಷಿಯೇತರ ಪತ್ತಿನ ಸಹಕಾರ ಸಂಘಗಳ ಧ್ವನಿಯಾಗಿ ಅತ್ಯಂತ ಪಾರದರ್ಶಕ ಹಾಗೂ ಪ್ರಾಮಾಣಿಕವಾಗಿ ಒಕ್ಕೂಟ ಕಾರ್ಯ ನಿರ್ವಹಿಸುತ್ತಿದೆ ಎಂದು ಕೃಷಿಯೇತರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನಿರ್ದೇಶಕ ಗುರುಶಾಂತ ನಿಡೋಣಿ ಹೇಳಿದರು.
ಉದ್ಘಾಟಕರಾಗಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕ ಸಂಜಯ ಪಾಟೀಲ ಕನಮಡಿ ಮಾತನಾಡಿ, ಸಹಕಾರ ಸಂಸ್ಥೆಗಳು ಸಹಕಾರ ಧ್ಯೇಯ ಮತ್ತು ಉದ್ದೇಶ ಅನ್ನೊಳಗೊಂಡ ಕಾರ್ಯ ಹಾಗೂ ಪರಸ್ಪರ ಸಹಕಾರ ಮನೋಭಾವದಿಂದ ಮುನ್ನಡೆದಾಗ ಮಾತ್ರ ಸಹಕಾರ ಚಳುವಳಿ ಇನ್ನಷ್ಟು ಅಭಿವೃದ್ಧಿ ಹೊಂದಿ ಸದಸ್ಯರಿಗೆ ಉತ್ತಮ ಸೇವೆ ನೀಡಲು ಸಾಧ್ಯ ಎಂದರು.
ಕಾನೂನು ಸಲಹೆಗಾರ ಕುಂಬಾರ ನೂತನ ಸಹಕಾರ ಕಾಯ್ದೆ ಕುರಿತು ಮಾಹಿತಿ ನೀಡಿದರು.
ಬಿ ಜಿ ಸಾಹುಕಾರ ನಿರೂಪಣೆ ಮಾಡಿದರು.
ಸಭೆಯಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ದೀಪಕ ಶಿಂತ್ರೆ , ಪರಶುರಾಮ ಚಿಂಚಲಿ, ಮಹಾನಗರ ಪಾಲಿಕೆ ಸದಸ್ಯ ರಾಜಶೇಖರ ಮಗಿಮಠ , S G ಪವಾರ್ , ಬಿ ಎಸ್ ಬಂಡಿ , ಏನ್ ಡಿ ಕರಜಗಿ , ಬಿ ಎಸ್ ಬಾಲಗೊಂಡ , ಸಿ ವಿ ಕಡೆಬಾಗಿಲ , ಬಿ ಎಂ ಇಸ್ಲಾಂಪುರ , ಐ ಎಸ್ ತಡಸದ ಸಂಘದ ಮುಖ್ಯ ಕಾರ್ಯನಿರ್ವಾಹಕ ಆಲಗೂರ , ಜಿಲ್ಲೆಯ ವಿವಿದ ಸಹಕಾರಿ ಸಂಘಗಳ ಪ್ರತಿನಿಧಿಗಳು ಅಧ್ಯಕ್ಷರು , ಆಡಳಿತ ಮಂಡಳಿಯ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು .

