ಉದಯರಶ್ಮಿ ದಿನಪತ್ರಿಕೆ
ವಿಜಯಪುರ :ವಿಜಯಪುರದ ಶ್ರೀ ಕೃಷ್ಣ ವಾದಿರಾಜ ಮಠದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ ವೈಭವದಿಂದ ನಡೆಯಿತು.
ಶ್ರೀ ಕೃಷ್ಣನ ವಿಗ್ರಹ ಮಾಡಿದ ವಿಶೇಷ ಹೂವಿನ ಅಲಂಕಾರ ಭಕ್ತರಲ್ಲಿ ಭಕ್ತಿ ಭಾವ ಮೂಡಿಸಿತು.
ನಂತರ ಶ್ರದ್ಧಾಭಕ್ತಿಪೂರ್ವಕವಾಗಿ ಪೂಜೆ ಸಲ್ಲಿಸಲಾಯಿತು. ಮಠದ ಮೂಲ ವಿಗ್ರಹಕ್ಕೆ ಬಣ್ಣಬಣ್ಣದ ಹೂವುಗಳಿಂದ ಸುಂದರ ಅಲಂಕಾರ ಮಾಡಲಾಗಿತ್ತು. ಚಿನ್ನದ ಕಿರೀಟ, ಹಣ್ಣುಗಳ ಹಾರ ಹಾಗೂ ವಿವಿಧ ಬಗೆಯ ಪುಷ್ಪಗಳಿಂದ ದೇವರನ್ನು ಶೃಂಗರಿಸಲಾಗಿತ್ತು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪಡೆದು ಪುಣ್ಯ ಸಂಪಾದಿಸಿದರು. ಮಠದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ದೇವಾಲಯಕ್ಕೆ ಭೇಟಿ ನೀಡಿ ಶ್ರೀ ಕೃಷ್ಣನ ದರ್ಶನಾಶೀರ್ವಾದ ಪಡೆದು ಪುನೀತರಾದರು.
ಶ್ರೀ ಮಠದ
ಗೌರವಾಧ್ಯಕ್ಷ ಗೋಪಾಲ್ ನಾಯಕ್, ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ, ಖಜಾಂಚಿ ಅಶೋಕ ರಾವ್, ಸದಸ್ಯರಾದ ಡಾ.ಆರ್.ಜಿ. ಮಂಗಲಗಿ, ಡಾ. ಎಸ್.ವಿ. ಮಲಘಾಣ, ವಿ.ಬಿ. ಕುಲಕರ್ಣಿ, ವಿ.ಸಿ. ಕುಲಕರ್ಣಿ, ಗೋವಿಂದ ಜೋಶಿ, ವಿಕಾಸ ಪದಕಿ, ವೆಂಕಟೇಶ್ ಗುಡಿ ಜಯತೀರ್ಥ ಮಂಗಲಗಿ, ವೇಣುಗೋಪಾಲ ಜೋಶಿ, ವಿಜಯ ಜೋಶಿ, ಪಂ.ವಾಸುದೇವ ಆಚಾರ್ ಅಗ್ನಿಹೋತ್ರಿ, ಪಂ. ಸಮೀರ್ ಆಚಾರ್, ಪಂ. ಶ್ರೀಧರಾಚಾರ್ಯ ಮುತ್ತಗಿ ಶ್ರೀ ಕೃಷ್ಣ ಜನ್ಮಾಷ್ಟಮಿಯಲ್ಲಿ ಪಾಲ್ಗೊಂಡು ಸೇವೆ ಸಮರ್ಪಿಸಿದರು.

