Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಗ್ರಾಪಂಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಿ ಆಡಳಿತ ಬಲಪಡಿಸಲು ಕ್ರಮ

ಮಾ.08 ರಂದು ಕಬ್ಬು ನುರಿಸುವ ಹಂಗಾಮ ಮುಕ್ತಾಯ ; ರೈತರಿಗೆ ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಕಾರ್ಖಾನೆಯ ಪ್ರಕಟಣೆ

ಜೇವೂರ ಗ್ರಾಮದ ಹಠಯೋಗಿ ಶ್ರೀ ರೇವಣಸಿದ್ಧೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ .

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಇಂದಾದರೂ ಭೂ ತಾಯಿಯನ್ನು ಗೌರವಿಸೋಣ
ವಿಶೇಷ ಲೇಖನ

ಇಂದಾದರೂ ಭೂ ತಾಯಿಯನ್ನು ಗೌರವಿಸೋಣ

By Updated:No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಇಂದು (ಏಪ್ರೀಲ್-೨೨, ಮಂಗಳವಾರ) “ವಿಶ್ವ ಭೂ ದಿನ”ದ ನಿಮಿತ್ಯ ಈ ವಿಶೇಷ ಲೇಖನ)

ಲೇಖನ
-ಮಲ್ಲಪ್ಪ. ಸಿ. ಖೊದ್ನಾಪೂರ
ತಿಕೋಟಾ
ವಿಜಯಪುರ ಜಿಲ್ಲೆ

ಉದಯರಶ್ಮಿ ದಿನಪತ್ರಿಕೆ

ವಿಜ್ಞಾನ-ತಂತ್ರಜ್ಞಾನದ ಅಭಿವೃದ್ಧಿಯ ಮಂತ್ರ ಜಪಿಸುತ್ತಿರುವ ಮಾನವ ಇಡೀ ಮಾನವ, ಪಶು, ಪಕ್ಷಿ, ಜೀವಜಂತು, ಸಸ್ಯರಾಶಿಗಳಿಗೆ ಆಶ್ರಯ ತಾಣವಾಗಿರುವ ಪೃಥ್ವಿ ಮತ್ತು ಪರಿಸರವನ್ನು ನಾಶ ಮಾಡುತ್ತಿದ್ದಾನೆ. ಖಾಸಗೀಕರಣ. ಜಾಗತೀಕರಣ ಮತ್ತು ಉದಾರೀಕರಣಗಳಿಂದ ಅಭಿವೃದ್ಧಿ ಸಾಧಿಸಬೇಕೆಂಬ ಮರೀಚಿಕೆಗೆ ಬೆನ್ನು ಹತ್ತಿರುವ ಮಾನವ ತನ್ನ ಸ್ವಾರ್ಥ ಸಾಧನೆಗಾಗಿ ಅರಣ್ಯ ಸಂಪತ್ತನ್ನು ನಾಶಗೊಳಿಸಿ ತನ್ನ ಬದುಕಿಗೆ ತಾನೇ ಕೈಯಾರೆ ಕೊಡಲಿ ಪೆಟ್ಟು ಹಾಕಿಕೊಳ್ಳುತ್ತಿದ್ದಾನೆ. ಹಣ ಗಳಿಕೆ, ನಗರೀಕರಣ, ಕೈಗಾರಿಕೆ, ಸಂಶೋಧನೆ, ಹೊಸ ಅವಿಷ್ಕಾರ, ಅಣ್ವಸ್ತ್ರ ಪ್ರಯೋಗ, ಐಷಾರಾಮಿ ವಸ್ತುಗಳ ಬಳಕೆ ಮತ್ತು ವಿಜ್ಞಾನ-ತಂತ್ರಜ್ಞಾನದ ಮಿತಿಮೀರಿದ ಉಪಯೋಗದಿಂದ ಭೂಮಿಯ ಮೇಲಿನ ಪರಿಸರವನ್ನು ಹಾಳು ಮಾಡುತ್ತಿದ್ದಾನೆ.
ಇರುವುದೊಂದೆ ಭೂಮಿ, ಉಸಿರಾಡುವುದೋಂದೇ ಗಾಳಿ, ಕುಡಿಯುವುದೊಂದೇ ನೀರು ಹೀಗಿರುವಾಗ ಅವುಗಳನ್ನು ಸುಸ್ಥಿತಿಯಲ್ಲಿಟ್ಟುಕೊಂಡು ಉಳಿಸಬೇಕಾದ ಅಗತ್ಯವಾಗಿದೆ. ಈ ಭೂಮಿಯಲ್ಲಿ ಮನುಷ್ಯ ಮತ್ರವಲ್ಲ ಅದೇಷ್ಟೋ ಜೀವ ಸಂಕುಲಗಳು, ಸೂಕ್ಷ್ಮಾಣುಗಳು & ಸಸ್ಯಗಳು ಹೀಗೆ ಭೂಮಿ ತನ್ನ ಒಡಲಾಳದಲ್ಲಿ ಎಲ್ಲವನ್ನು ತುಂಬಿಕೊಂಡು ಜೀವ ರಾಶಿಗಳನ್ನು ಸಾಕಿ ಸಲುಹುತ್ತಿದೆ. ಅದರೆ ಈ ಭೂಮಿಯಲ್ಲಿ ಇರುವ ಜೀವಿಗಳಲ್ಲಿ ಭೂಮಿಗೆ ಕಂಟಕವಾಗಿರುವುದು ಮನುಷ್ಯ ಮಾತ್ರವೆಂದರೆ ತಪ್ಪಾಗಲಾರದು. ಆಧುನಿಕತೆ ಬೆಳೆದಂತೆ ಭೂಮಿಯ ಮೇಲೆ ಮನುಷ್ಯ ಜನಿಸಿದ್ದಾನೆಯೋ ಅಂದಿನಿಂದಲೇ ಭೂಮಿಯ ಋಣವನ್ನು ಹೊರಲು ಪ್ರಾರಂಭಿಸಿದ್ದೇವೆ. ಭೂಮಿಯ ಈ ಋಣವನ್ನು ತೀರಿಸುವುದಕ್ಕೆ ನಮ್ಮಿಂದ ಸಾಧ್ಯವಾಗದೇ ಹೋದರೂ ಕನಿಷ್ಠ ಅದನ್ನು ಗೌರವಿಸುವ ಸಲುವಾಗಿ ವಿಶ್ವ ಭೂ ದಿನವನ್ನು ಆಚರಿಸಿ ಎಲ್ಲರೂ ಗಿಡ-ಮರಗಳನ್ನು ನೆಟ್ಟು “ ಹಸಿರೇ ನಮ್ಮ ಉಸಿರು” ಎಂಬುದರ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ,
ಆದ್ದರಿಂದ ಮೊಟ್ಟಮೊದಲು ೧೯೬೯ ರಲ್ಲಿ ಸ್ಯಾನ್ ಪ್ರಾನ್ಸಿಸ್ಕೋದಲ್ಲಿ ಜರುಗಿದ ಯುನೆಸ್ಕೊ ಸಮ್ಮೇಳನದ ಸಮಯದಲ್ಲಿ ಸಾಮಾಜಿಕ ಕಾರ್ಯಕರ್ತ ಜಾನ್ ಮೆಕ್ ಕಾನ್ನೆಲ್ ಅವರು ಭೂಮಿ ಮತ್ತು ವಿಶ್ವ ಶಾಂತಿಯ ಪರಿಕಲ್ಪನೆಯನ್ನು ಗೌರವಿಸಲು ವಿಶ್ವ ಭೂ ದಿನವನ್ನು ಆಚರಿಸಬೇಕೆಂಬ ಬಗ್ಗೆ ಪ್ರಸ್ತಾಪಿಸಿದರು. ಮುಂದೆ ವಿಶ್ವಸಂಸ್ಥೆ ಏಪ್ರೀಲ್ ೨೨, ೧೯೭೦ ರಂದು ೧೯೨ ರಾಷ್ಟ್ರಗಳಲ್ಲಿ ವಿಶ್ವ ಭೂ ದಿನವನ್ನು ಆಚರಿಸುವಂತೆ ತೀರ್ಮಾನಿಸಲಾಯಿತು. ಅಂದಿನಿಂದ ಪ್ರತಿವರ್ಷ ಏಪ್ರೀಲ್ ೨೨ ರಂದು ವಿಶ್ವದಾದ್ಯಂತ ಅರ್ಥ ಡೇ ಎಂಬ ಹೆಸರಿನಲ್ಲಿ ಸಕಲ ಜೀವರಾಶಿಗಳಿಗೆ ಆಶ್ರಯ ತಾಣವಾಗಿರುವ ಈ ಭೂಮಿಯ ರಕ್ಷಣೆ, ಪರಿಸರ ಸಂರಕ್ಷಣೆ ಕುರಿತು ಅರಿವು ಮೂಡಿಸುತ್ತ, ನಮ್ಮ ಮುಂದಿನ ಪೀಳಿಗೆಗೆ ಪ್ರಕೃತಿಯ ಪರಿಕರ ಮತ್ತು ಕೊಡುಗೆಗಳನ್ನು ದೊರೆಯುವಂತೆ ನೋಡಿಕೊಳ್ಳಬೇಕಾಗಿರುವದು ನಮ್ಮೆಲ್ಲರ ಹೊಣೆಯಾಗಿದೆ. ೨೦೨೩ ನೇ ವರ್ಷದ ಈ ವಿಶ್ವ ಭೂ ದಿನವನ್ನು “Iಟಿvesಣ iಟಿ ouಡಿ Pಟಚಿಟಿeಣ” ಘೋಷವಾಕ್ಯದೊಂದಿಗೆ ಭೂಮಿಯ ಮೇಲಾಗುತ್ತಿರುವ ಮಣ್ಣು ಕೊರೆತ, ಅರಣ್ಯ ನಾಶ ಮತ್ತು ಪರಿಸರ ಹಾಳು ಮಾಡುವುದು ಇತ್ಯಾದಿ ವಿನಾಶಕಾರಿ ಕಾರ್ಯಗಳನ್ನು ಕೈಬಿಟ್ಟು ಅಭಿವೃದ್ಧಿ, ಸಮತೋಲಿತ ಮತ್ತು ಸುಸ್ಥಿರವಾದ ಪ್ರಕೃತಿ-ನಿಸರ್ಗ ಮತ್ತು ಭೂ ರಕ್ಷಣೆಗೆ ಕಂಕಣಬದ್ಧರಾಗೋಣ ಎಂಬ ಸಂದೇಶ ನೀಡುವುದಾಗಿದೆ.
ಇದರಿಂದ ನಮ್ಮ ಸುತ್ತಮುತ್ತಲಿನ ಪರಿಸರ, ಜಾಗತಿಕ ತಾಪಮಾನದಲ್ಲಿ ಏರುಪೇರು, ಇಂಗಾಲದ ಹೊರಸೂಸುವಿಕೆಯ ಪ್ರಮಾಣದಲ್ಲಿ ಹೆಚ್ಚಳ, ವಾಯು ಮಾಲಿನ್ಯ ಮತ್ತು ಹಸಿರು ಮನೆ ಪರಿಣಾಮಗಳಂತಹ ಸನ್ನಿವೇಶಗಳು ನಿರ್ಮಾಣವಾಗುತ್ತಿರುವದು ತೀರಾ ಕಳವಳಕಾರಿ ಸಂಗತಿ. ಇವೆಲ್ಲವುಗಳಿಂದ ಹಿಮ ಪರ್ವತಗಳು ಕರಗಿ ಸಮುದ್ರ ಮಟ್ಟ ಹೆಚ್ಚಾಗಿ ಹವಾಮಾನದಲ್ಲಿ ವಿಪರೀತ ಏರುಪೇರುಗಳಾಗಿ ಪ್ರಕೃತಿ ವಿಕೋಪಗಳಿಗೆ ಆಹ್ವಾನ ಒಡ್ಡುತ್ತಿದೆ. ಇದು ಹೀಗೆಯೇ ಮುಂದುವರೆದರೆ ಜಾಗತಿಕ ಮಟ್ಟದಲ್ಲಿ ಮುಂದಿನ ದಿನಗಳಲ್ಲಿ ಭೀಕರ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ. ಪರಿಸರವನ್ನು ಹಾಳು ಮಾಡುತ್ತಿರುವದರಿಂದಲೇ ನಾವು ಬರಗಾಲ, ಅತಿವೃಷ್ಟಿ, ಸುನಾಮಿ, ಆಮ್ಲ ಮಳೆ, ಪ್ರವಾಹ, ತಾಪಮಾನ ಏರಿಕೆ, ಹಿಮ ಪರ್ವಗಳು ಕರಗುವುದು ಮತ್ತು ವಾಯು ಮಾಲಿನ್ಯ ಮತ್ತು ಹಸಿರು ಮನೆ ಪರಿಣಾಮಗಳಂತಹ ಎಲ್ಲ ಸಮಸ್ಯೆಗಳು ಎದುರಾಗುತ್ತವೆ. ಇಂದು ಮನುಕುಲಕ್ಕೊಂದು ಎಚ್ಚರಿಕೆಯ ಗಂಟೆಯಾಗಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.
ಪ್ರತಿಯೊಂದು ಶಾಲೆ-ಕಾಲೇಜುಗಳಲ್ಲಿ ಎನ್.ಎಸ್.ಎಸ್. ಹಾಗೂ ಇಕೋ ಕ್ಲಬ್ಲಗಳ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ಸ್ವಚ್ಛತೆ, ಪರಿಸರ ಸಂರಕ್ಷಣೆ, ಪ್ಲಾಸ್ಟಿಕ್ ನಿಷೇಧ, ವಾಹನ ರಹಿತ ದಿನ, ಗಿಡ-ಮರ ಬೆಳೆಸುವುದು, ವೃಕ್ಷ ಮ್ಯಾರಾಥಾನ್ ಗಳಂತಹ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಕಾರ್ಯಕ್ರಮಗಳು, ಜನಜಾಗೃತಿ ಜಾಥಾ ಹಾಗೂ ಅಭಿಯಾನಗಳನ್ನು ಹಮ್ಮಿಕೊಂಡು ಅರಿವು ಮೂಡಿಸಬೇಕಾಗಿದೆ. ಇಂದು ಪ್ರತಿಯೊಂದು ವಿಷಯ ವಸ್ತುಗಳ ರಕ್ಷಣೆಗೆ ಸಂಬಂಧಿಸಿದಂತೆ ಒಂದೊಂದು ದಿನಾಚರಣೆ ಆಚರಿಸುತ್ತಾ ಪೃಥ್ವಿ, ಪರಿಸರ ಮತ್ತು ವನ್ಯ ಜೀವಿಗಳ ರಕ್ಷಣೆಗೆ ಸಮಾಜವು ಗೋಗರೆಯುತ್ತಿರುವದನ್ನು ನೋಡಿದರೆ ಇಡೀ ಮಾನವ ಸಂಕುಲವೇ ತಲೆ ತಗ್ಗಿಸುವಂತಾಗಿದೆ.
ಆದ್ದರಿಂದ ಭೂಮಿಯ ಮೇಲೆ ವಾಸಿಸುವ ಪ್ರತಿಯೊಂದು ಜೀವಿಯು ತನ್ನ ಹಾಗೂ ಮುಂದಿನ ಪೀಳಿಗೆಯ ಬದುಕಿಗೆ ಉತ್ತಮ ಪರಿಸರವನ್ನು ನೀಡಬೇಕಾಗಿರುವದು ಇಂದಿನ ಅವಶ್ಯಕತೆಯಾಗಿದೆ. ಮನುಕುಲದ ಉಳಿವಿಗಾಗಿ ಓಝೋನ್ ರಕ್ಷಣೆ ಅತ್ಯಗತ್ಯವಾಗಿದ್ದು, ಪ್ರಕೃತಿ ಸಂಪತ್ತಿನ ಆಕರಗಳನ್ನು ಮುಂದಿನ ತಲೆಮಾರಿನವರಿಗೂ ಉಳಿಸಿಕೊಡಬೇಕಾದ ಜವಾಬ್ದಾರಿ ನಮ್ಮ-ನಿಮ್ಮೆಲ್ಲರ ಮೇಲಿದೆ. ಖ್ಯಾತ ಪರಿಸರತಜ್ಞರಾದ ಕ್ರೀಸ್ಟೀನ್ ಲಗಾರ್ಡೆ ರವರ ಪ್ರಕಾರ “Iಣ’s ಚಿ ಛಿoಟಟeಛಿಣive eಟಿಜeಚಿvouಡಿ, iಣ’s ಛಿoಟಟeಛಿಣive ಚಿಛಿಛಿouಟಿಣಚಿbiಟiಣಥಿ ಚಿಟಿಜ iಣ mಚಿಥಿ ಟಿoಣ be ಣoo ಟಚಿಣe” ಎನ್ನುವಂತೆ, ಹೀಗೆಯೇ ಪರಿಸ್ಥಿತಿ ಕೈ ಮೀರಿ ಹೋಗುವ ಮುನ್ನವೇ ನಾವೆಲ್ಲ ಪೃಥ್ವಿ, ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳುವದು ಅನಿವಾರ್ಯವಾಗಿದೆ. ಈ ದಿಶೆಯಲ್ಲಿ ಜಾಗತಿಕ ಮಟ್ಟದಲ್ಲಿ ಅನೇಕ ಸಮ್ಮೇಳನ, ಚರ್ಚೆ, ಸಭೆ ಮತ್ತು ಒಪ್ಪಂದಗಳು ಏರ್ಪಟ್ಟು ಪರಿಸರ ರಕ್ಷಣೆ ಮತ್ತು ಹವಾಮಾನದಲ್ಲಾಗುತ್ತಿರುವ ಬದಲಾವಣೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹೊಸ ಪರಿಸರಾತ್ಮಕ ನೀತಿಗಳು, ಕಠಿಣ ನಿರ್ಧಾರಗಳು ಹೊರ ಬಂದಾಗ ಮಾತ್ರ ಪೃಥ್ವಿ, ಪರಿಸರ ಮತ್ತು ಓಝೋನ್ ನಂತಹ ಪ್ರಕೃತಿಯ ಕೊಡುಗೆಗಳು ನಮ್ಮ ಮುಂದಿನ ಜನಾಂಗಕ್ಕೆ ಉಳಿಯಲು ಸಾಧ್ಯ. ಈ ವಿಶ್ವ ಭೂ ದಿನದ ಆಚರಣೆಯು ಕೇವಲ ಕಾಟಾಚಾರಕ್ಕಾಗದೇ ಪ್ರತಿಯೊಬ್ಬರೂ ಒಂದೊಂದು ಗಿಡ-ಮರವನ್ನು ನೆಟ್ಟು ಪರಿಸರವಿದ್ದರೇ ನಾವು ಎಂಬ ಭಾವದೊಂದಿಗೆ ಪರಿಸರಾತ್ಮಕ ಪ್ರಜ್ಞೆ, ಕಾಳಜಿ ವಹಿಸಬೇಕಾಗಿರುವುದು ಇಂದಿನ ಅಗತ್ಯತೆಯಾಗಿದೆ.

Share. Facebook Twitter Pinterest Email Telegram WhatsApp
  • Website

Related Posts

ಬೋರ್ಡ್ ಪರೀಕ್ಷೆಗಳು ಹಾಗೂ ಮಕ್ಕಳ ಮನಸ್ಥಿತಿ

ಉತ್ತಮ ನಿರ್ಧಾರ ಯಶಸ್ಸಿನ ಕೀಲಿ ಕೈ

ಹೂಹಾಸಿಗೆ ಮೇಲೆ ಪ್ರೀತಿಯ ಕವಿತೆ

ಶಿಸ್ತು ಮತ್ತು ಬದ್ಧತೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಗ್ರಾಪಂಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಿ ಆಡಳಿತ ಬಲಪಡಿಸಲು ಕ್ರಮ
    In (ರಾಜ್ಯ ) ಜಿಲ್ಲೆ
  • ಮಾ.08 ರಂದು ಕಬ್ಬು ನುರಿಸುವ ಹಂಗಾಮ ಮುಕ್ತಾಯ ; ರೈತರಿಗೆ ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಕಾರ್ಖಾನೆಯ ಪ್ರಕಟಣೆ
    In (ರಾಜ್ಯ ) ಜಿಲ್ಲೆ
  • ಜೇವೂರ ಗ್ರಾಮದ ಹಠಯೋಗಿ ಶ್ರೀ ರೇವಣಸಿದ್ಧೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ .
    In (ರಾಜ್ಯ ) ಜಿಲ್ಲೆ
  • ಅನ್ನದಾತರ ಸಮೃದ್ಧಿಯಲ್ಲಿ ನಮಗೆ ಸಂತೃಪ್ತಿ ಇದೆ
    In (ರಾಜ್ಯ ) ಜಿಲ್ಲೆ
  • ಸರ್ಕಾರದಿಂದ ಮೈಸೂರು ಜಿಲ್ಲೆಗೆ 5 ಕೋಟಿ 19 ಲಕ್ಷ ಅನುದಾನ
    In (ರಾಜ್ಯ ) ಜಿಲ್ಲೆ
  • ಆಲಮಟ್ಟಿಯಲ್ಲಿ ಭಾವೈಕ್ಯತಾ ದಿನಾಚರಣೆ…
    In (ರಾಜ್ಯ ) ಜಿಲ್ಲೆ
  • ಮಾ.೯ರಂದು ಭೀಮ ಗಾಯನ ಕಾರ್ಯಕ್ರಮ ಯಶಸ್ವಿಗೆ ಕೈಜೋಡಿಸಿ
    In (ರಾಜ್ಯ ) ಜಿಲ್ಲೆ
  • ಮಾ.೯ರಂದು ಪ್ರಧಾನ ಮಂತ್ರಿ ರಾಷ್ಟ್ರೀಯ ಶಿಶುಕ್ಷು ಮೇಳ
    In (ರಾಜ್ಯ ) ಜಿಲ್ಲೆ
  • ಹೋಳಿ ಹಬ್ಬ ಆಚರಣೆ: ವಿಶೇಷ ದಂಡಾಧಿಕಾರಿಗಳ ನೇಮಿಸಿ ಆದೇಶ
    In (ರಾಜ್ಯ ) ಜಿಲ್ಲೆ
  • ಬೇಡಿಕೆಗಳ ಈಡೇರಿಕೆಗೆ ಮಾ.೧೧ ರಿಂದ ೧೫ವರೆಗೆ ಮುಷ್ಕರಕ್ಕೆ ನಿರ್ಧಾರ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.