ಉದಯರಶ್ಮಿ ದಿನಪತ್ರಿಕೆ
ಇಂಡಿ: ರಾಷ್ಟ್ರ ಕಂಡ ಅಪ್ರತಿಮ ಸಮಾಜ ಸುಧಾರಕ ತತ್ವಜ್ಞಾನಿ ಹಾಗೂ ದಾರ್ಶನಿಕ ಭಕ್ತಿ ಭಂಡಾರಿ ಜಗಜ್ಯೋತಿ ಕ್ರಾಂತಿಯೋಗಿ ಬಸವೇಶ್ವರರು ವಿಶ್ವದ ಮೊದಲ ಆಧ್ಯಾತ್ಮಿಕ ಸಂಸತ್ತಿನ ಶಿಲ್ಪಿ ಎಂದು ಕಂದಾಯ ಉಪವಿಬಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಹೇಳಿದರು.
ನಗರದ ತಾಲೂಕಾ ಆಡಳಿತ ವತಿಯಿಂದ ನಡೆದ ಬಸವೇಶ್ವರರ ೮೯೫ ನೆಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾನತೆಯನ್ನು ಎಲ್ಲರಿಗಿಂತ ಮೊದಲು ಪ್ರತಿಪಾದಿಸಿದ ಕ್ರಾಂತಿಕಾರಿ ಬಸವಣ್ಣನವರು ತಮ್ಮ ವಚನಗಳ ಮೂಲಕ ಕಾಯಕದ ಮಹತ್ವ ಆತ್ಮಶುದ್ದಿಯ ಅಗತ್ಯ ನಿರಹಂಕಾರದ ತತ್ವಗಳನ್ನು ಎಲ್ಲರಿಗೂ ತಲುಪಿಸುವ ಮೂಲಕ ಧರ್ಮ ಮತ್ತು ಶ್ರೀಸಾಮಾನ್ಯರ ನಡುವೆ ಇದ್ದ ಅಂತರವನ್ನು ಕರಗಿಸಿದರು ಎಂದರು.
ತಹಸೀಲ್ದಾರ ಬಿ.ಎಸ್.ಕಡಕಬಾವಿ ಮಾತನಾಡಿ, ಜಾತಿ ಮತ್ತು ವರ್ಗಾಧರಿತ ಹರಿದು ಹಂಚಿ ಹೋಗಿದ್ದ ಸಮಾಜವನ್ನು ಜಾತಿ ರಹಿತ ವರ್ಗರಹಿತ ಸಮಾಜವನ್ನಾಗಿಸುವ ನಿಟ್ಟಿನಲ್ಲಿ ಅವರ ಹೋರಾಟ ಕ್ರಾಂತಿಕಾರಿಯಾಗಿತ್ತು. ಬಸವಣ್ಣನವರ ಕಾಯಕವೇ ಕೈಲಾಸ ಮತ್ತು ದಾಸೋಹ ಎಂಬ ತತ್ವಗಳು ಸತ್ಯ ನಿಷ್ಠ ಶ್ರಮವನ್ನು ದೈವ ಪೂಜೆಯಂತಲೂ ಹಾಗೂ ಸಮಾಜದಲ್ಲಿ ಸಮಾನತೆಯ ಬಾಂದವ್ಯದ ಮೂಲ ಸೇತುವೆಯಂತೆ ಬಳಸಿಕೊಂಡರು ಎಂದರು.
ಕಾರ್ಯಕ್ರಮದಲ್ಲಿ ವೀರಶೈವ ಮಹಾಸಭಾ ಉಪಾಧ್ಯಕ್ಷ ಆರ್.ವಿ.ಪಾಟೀಲ, ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ರಾಹೂರ, ಎಸ್.ಆರ್.ಮುಜಗೊಂಡ, ಸಂತೋಷ ಹೊಟಕರ, ಬಸವ ಸಮಿತಿಯ ಭೀಮಾಶಂಕರ ಪ್ರಚಂಡಿ, ನೀಲಪ್ಪಾ ಖಾನಾಪುರ, ಶರಣು ಹೋಳಗಿ, ಶ್ರೀಕಾಂತ ಬಡಿಗೇರ, ಅಂಬರೀಷ ಬಸನಾಳ, ಅವಿನಾಶ ಬಗಲಿ, ಭೀಮನಗೌಡ ಪಾಟೀಲ ತಡವಲಗಾ ಶ್ರೀಮತಿ ಎಸ್.ಎಂ.ಕೊಡತೆ, ಎ.ಜಿ.ಗುನ್ನಾಪುರ, ಸುವರ್ಣಾ ಹಾವಿನಾಳ, ಯು.ಎಸ್.ಕಟ್ಟಿಮನಿ, ಅನೀಲಕುಮಾರ ಮಠ ಮತ್ತಿತರಿದ್ದರು.
ಬಸವೇಶ್ವರ ವೃತ್ತದಲ್ಲಿ ಅನೀಲಗೌಡ ಬಿರಾದಾರ ಇವರಿಂದ ಪೂಜೆ, ಅಪ್ಪು ಪವಾರ, ಸಿದ್ದು ಪ್ರಚಂಡಿ, ಜೆಡಿ ಎಸ್ ಮುಖಂಡ ಬಿ.ಡಿ.ಪಾಟೀಲ, ನಗರಸಭೆ ಪೌರಾಯುಕ್ತ ಶಿವಾನಂದ ಪೂಜಾರಿ, ಪ್ರಶಾಂತ ಗವಳಿ, ಪ್ರಶಾಂತ ಲಾಳಸಂಗಿ, ಉಮೇಶ ಲಚ್ಯಾಣ, ಸುಧೀರ ಕರಕಟ್ಟಿ, ರಾಘು ನಿಚ್ಚಾಳ ಮತ್ತಿತರರಿದ್ದರು.
ಎಕ್ಕಾ ಗಾಡಿ ಸಂಘದ ವತಿಯಿಂದ ಪೂಜೆ ಮತ್ತು ಪ್ರಸಾದ ವಿತರಣೆ ಮಾಡಿದರು. ಸಿದ್ದಪ್ಪ ಕುಂಬಾರ ಸಿದ್ದಣ್ಣ ಪೂಜಾರಿ ಮತ್ತಿತರಿದ್ದರು.

