Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ನಿವೇದಿತಾ ಶಾಲಾವರಣದಲ್ಲಿ 100 ಸಸಿಗಳ ನೆಡುವಿಕೆಗೆ ಚಾಲನೆ

ವಿತರಕರಿಂದ ಎಲ್‌ಪಿಜಿ ಸಿಲಿಂಡರ್‌ಗೆ ಹೆಚ್ಚುವರಿ ಶುಲ್ಕ ವಸೂಲಿ

ಪ್ರಕೃತಿ ಸ್ನೇಹಿ ಜೀವನ ಶೈಲಿ ಅಳವಡಿಸಿಕೊಳ್ಳಿ :ಬೆಳ್ಳುಬ್ಬಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಈ ತಂಪಿನ ಅಂಗಳದಲಿ ನನ್ನ ನಿನ್ನ ನಡುವೆಯಲಿ
ವಿಶೇಷ ಲೇಖನ

ಈ ತಂಪಿನ ಅಂಗಳದಲಿ ನನ್ನ ನಿನ್ನ ನಡುವೆಯಲಿ

By No Comments4 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ.
*- ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨

ಉದಯರಶ್ಮಿ ದಿನಪತ್ರಿಕೆ

ಚೆಂದದ ಚಂದನಾ
ಪೂರ್ಣ ಚಂದಿರನಂತೆ ಹೊಳೆಯುವ ನಿನ್ನ ಮುಖ, ಆ ಮುಖದಲ್ಲಿ ಬೆಳದಿಂಗಳಿನಂತೆ ಬೆಳಗುವ ನಗು ಕಾಣಲು ಕಾದು ಕುಳಿತ ಅದೆಷ್ಟೋ ದಿನಗಳು ಕಣ್ಣ ಮುಂದಿವೆ. ಆ ನಗುಮೊಗದಲ್ಲಿ ಮಲ್ಲಿಗೆಯ ಹೂಗಳು ಅರಳಿದಂತೆ ಕಾಂತಿಯುಕ್ತ ಕಂಗಳು ನನ್ನನ್ನು ಕರೆದಂತೆ ಭಾಸವಾಗುತ್ತದೆ. ಹಂಸದಂತಹ ನಡಿಗೆ ಕಾರ್ಮೋಡದಂತೆ ಕಪ್ಪಾದ ಸೊಂಪಾದ ಕೂದಲು, ಬೆನ್ನ ತುಂಬ ಹರಡಿದ ಕೇಶರಾಶಿ ನೋಡುವುದೇ ಚಂದ. ನಿನ್ನನ್ನು ನೋಡುವುದೆಂದರೆ ಕಣ್ಣಿಗೊಂದು ಹಬ್ಬವೇ ಸರಿ. ನಿನ್ನನ್ನು ಕಂಡ ಅರಸಿಕನೂ ರಸಿಕನಾಗಿ ಬಿಡುತ್ತಾನೆದಿನ್ನು ನಿನ್ನ ಮಾತುಗಳೋ ವೀಣೆಯ ನಾದದಂತೆ ಮಧುರ ಮಧುರ. ಒಂದೇ ಮಾತಿನಲ್ಲಿ ಹೇಳುವುದಾದರೆ ನನಗಾಗಿ ಆಗಸದಿಂದ ಇಳಿದ ರತಿ ನೀನು. ಮೊದಲ ನೋಟದಲ್ಲೇ ನಿನ್ನಲ್ಲಿ ಕಳೆದು ಹೋದೆ ನಾನು.


ಮನದಲ್ಲಿನ ಪ್ರೀತಿ ದಿನೇ ದಿನೇ ಚಿಗುರೊಡೆದಿದೆ. ಪುಟ್ಟ ಪುಟ್ಟ ಎಲೆಗಳಿಂದ ಕೂಡಿದ ಬಳ್ಳಿಯಾಗಿದೆ. ಬೆಳೆಯುತ್ತ ಬೆಳೆಯುತ್ತ ಬಳ್ಳಿಯ ನೆತ್ತಿಯ ಮೇಲಿನ ಮೊಗ್ಗಾಗಿದೆ. ಮೊಗ್ಗು ಹಿಗ್ಗಿ ಹಿಗ್ಗಿ ಈಗ ಹೂವಾಗಿದೆ. ಮನದ ಮೂಲೆಯಲ್ಲಿನ ತರಹ ತರಹದ ಬಯಕೆಗಳು ಚಂದ ಚಂದದ ಹೂಗಳನು ಅರಳಿಸಿವೆ. ಆ ಬಯಕೆಗಳ ಈಡೇರಿಸಲು ಬಾ ಮನದೊಡತಿ ಎಂದು ನಿನ್ನ ಕೈ ಬೀಸಿ ಕರೆಯುತಿವೆ. ಎಲ್ಲಿಯ ಮಾಮರ ಎಲ್ಲಿಯ ಕೋಗಿಲೆ ಎಲ್ಲೆಂದಿಲ್ಲಿಯ ಬಂಧ. ಎಲ್ಲಿಯ ಮಹಲಿನ ನೀನು ಎಲ್ಲಿಯ ಗುಡಸಲಿನ ನಾನು ಪ್ರೇಮಿಗಳ ಹೃದಯಗಳಿಗೆ ಎಲ್ಲೆಂದಿಲ್ಲಿಗೆ ನಂಟುಂಟು. ಪರಸ್ಪರ ಒಪ್ಪಿವೆ ಭಾವಗಳು. ಇನ್ನೆಲ್ಲಿಯದು ಭೇದ ಭಾವಗಳು? ಜಾತಿ ಪ್ರತಿಷ್ಟೆ ಮೇಲೆ ಕೆಳಗೆ ಪ್ರೀತಿಯ ಕಣ್ಣಿಗೆ ಕಾಣದು. ಮನಗಳು ಒಪ್ಪಿದ ಮೇಲೆ ದೇಹಗಳ ಅಪ್ಪುಗೆಗೆ ಯಾರಪ್ಪನ ಅಪ್ಪಣೆ ಬೇಕು? ಪ್ರೇಮಿಗಳ ಮನದ ಬೇಗುದಿಯನು ಹೊರಗಿನವರಿಂದ ಗುರುತಿಸಲೂ ಆಗದು. ಹೃದಯದ ವೇದನೆ ತಿಳಿಯಲೂ ಆಗದು. ಪ್ರೀತಿ ನದಿಯ ನೀರಿನಂತೆ ಯಾವುದನ್ನೂ ಲೆಕ್ಕಿಸದೇ ಮುನ್ನುಗ್ಗುವುದು. ಪ್ರೀತಿಯೆಂಬುದು ನನಗೆ ಬರಿ ಕನಸಲ್ಲ. ನಿದಿರೆಗೆ ಜಾರಲು ಬಿಡದ ಸದಾ ಕನವರಿಸುವ ಕನವರಿಕೆ. ಹೀಗೆ ಒಬ್ಬನೇ ಇರುವಾಗ ಸದಾ ಕನವರಿಸುತ್ತಲೇ ಇರುತ್ತೇನೆ.


ನೀನು ಪರಿಚಯವಾದುದು ಒಂದು ರೋಚಕ ಪ್ರಸಂಗವೇ ಅನ್ನು. ನನ್ನ ಅವಿರತ ಓದಿನ ಫಲವಾಗಿ ಪ್ರತಿಷ್ಠಿತ ವಿವಿಯಲ್ಲಿ ಓದುವ ಅವಕಾಶ ಲಭಿಸಿತು. ವಿವಿಯಲ್ಲಿ ಒಳ್ಳೆಯ ಅಂಕ ಗಳಿಸಿದವರಿಗೆ ಸನ್ಮಾನ ಸಮಾರಂಭದಲ್ಲಿ ನೀನು ನನ್ನ ಕಣ್ಣಿಗೆ ಬಿದ್ದೆ. ಹುಡುಗಿಯರೆಂದರೆ ಮಾರು ದೂರು ಜಿಗಿಯುತ್ತಿದ್ದ ನಾನು ಗೆಳೆಯನಾಗಲು ನಿನ್ನೆದರು ಕೈ ಚಾಚಿದ್ದೆ. ಮೊದಮೊದಲು ಒಳ್ಳೆಯ ಸ್ನೇಹಿತರಾಗಿ ಕಾಲೇಜಿನ ವಿಷಯ ಪರಸ್ಪರ ಇಷ್ಟಾನಿಷ್ಟಗಳನ್ನು ಹಂಚಿಕೊಳ್ಳುತ್ತಿದ್ದೆವು. ಈ ನಡುವೆ ನಿನ್ನನ್ನು ಮನದಲ್ಲೇ ಆರಾಧಿಸತೊಡಗಿದೆ. ಆರಂಭದಲ್ಲಿ ಸ್ವಲ್ಪ ಅಳುಕಿದ್ದರೂ ಸಂಭಾಳಿಸಿಕೊಂಡು ನಿನ್ನ ಮನದ ಭಾವನೆಗಳಿಗೆ ಚೆನ್ನಾಗಿ ಶೃತಿ ಮಿಡಿದೆ. ನನ್ನಲ್ಲಾದ ಬದಲಾವಣೆ ಕಂಡು ನಾನೇ ನಂಬದಾದೆ. ಕೂಲ್ ಆಗಿ ಪಟಪಟನೆ ಅರಳು ಹುರಿದಂತೆ ಮಾತನಾಡತೊಡಗಿದೆ. ಕ್ಲಿಷ್ಟವೆನಿಸಿದ್ದ ಪ್ರೀತಿಯ ನಿವೇದನೆಯನ್ನು ಸರಳವಾಗಿ ಹೇಳಿ ಮುಗಿಸಿದ್ದೆ. ಆಗ ನಿನ್ನಲ್ಲಿ ಅರೆಕ್ಷಣ ಮೌನ, ಮರುಕ್ಷಣ ನಿನ್ನದು ಇಂಟ್ರೆಸ್ಟಿಂಗ್ ಪರ್ಸನಾಲಿಟಿ ಕಣೋ ನೀನಂದ್ರೆ ನನಗಿಷ್ಟ ಎನ್ನುತ್ತ ಲಘುವಾಗಿ ತಬ್ಬಿದೆ. ನಿನ್ನುಸಿರು ನನ್ನೆದೆಗೆ ಸೋಕಿತು ನಿನ್ನೆದೆಗೆ ನನ್ನ ಕೈ ತಾಕಿತು. ನಿನ್ನ ಕೈ ಹಿಡಿದು ಸಂತಸದಿ ಮಾತನಾಡುತ್ತ ಪಾರ್ಕಿನಲ್ಲಿದ್ದ ಬೆಂಚಿನ ಮೇಲೆ ಕುಳಿತಾಗ ಮೊದಲ ಭೇಟಿಯ ನೆನಪುಗಳನ್ನು ಮೆಲಕು ಹಾಕತ್ತಿದ್ದರೆ ಕೊರೆವ ಚಳಿಯಲ್ಲಿ ನಿಗಿನಿಗಿ ಕೆಂಡದ ಬಳಿ ನಿಂತ ಅನುಭವವಾಗಿತ್ತು. ಬೆರಳುಗಳಲ್ಲಿ ಬೆರಳು ಸೇರಿಸಿ ನಾಚುತ್ತ ಐಲವ್ಯೂ ಹೇಳಿದಾಗ ಎದೆಗೆ ಹೂಬಾಣ ಮೆಲ್ಲನೆ ತಾಕಿದಂತಾಯಿತು.
ನೀಲಿ ಕಂಗಳ ಚೆಲುವೆ ಗೌರ ವರ್ಣದ ನಿರಾಭರಣ ಸುಂದರಿ ಓದಿನಲ್ಲಿ ಬುದ್ಧಿವಂತೆ ಬೇರೆ. ರಾಣಿ ಜೇನಿನಂತಿದ್ದ ನಿನ್ನ ಹಿಂದೆ ಹುಡುಗರ ಸಾಲು ಸಾಲು. ಇದರ ಮೇಲೆ ಕಳಶವಿಟ್ಟಂತೆ ಶ್ರೀಮಂತ ಅಪ್ಪನ ಒಬ್ಬಳೇ ಮಗಳು. ಇದೆಲ್ಲ ಸಾಲದೆಂಬಂತೆ ಲಕ್ಷ ಲಕ್ಷ ಸಂಬಳ ತರುವ ಸಾಫ್ಟ್ ವೇರ್ ಇಂಜಿನಿಯರ್ ಬೇರೆ. ಕಾರಣವಿಲ್ಲದೇ ಯಾರೊಂದಿಗೂ ಮಾತನಾಡದ ಸ್ವಭಾವ ನನ್ನದು. ಕೇಳಿದ್ದಕ್ಕಷ್ಟೇ ಉತ್ತರ ಕೊಟ್ಟು ಚುಟುಕಾಗಿ ಮಾತು ಮುಗಿಸುತ್ತಿದ್ದ ಮಿತಭಾಷಿಯಾಗಿದ್ದೆ. ನಿನ್ನ ಗೆಳೆತನದಲ್ಲಿ ಅದಾವಾಗ ನಾನು ಮಾತಿನ ಮಲ್ಲನಾಗಿ ಬದಲಾಗಿದ್ದೆನೋ ತಿಳಿಯದು.
ಅಂದು ಮುಸ್ಸಂಜೆ ನೀನು ಪೇಟೆಗೆ ಹೋಗುವ ನೆಪ ಹೇಳಿ ನನ್ನ ಭೇಟಿಗೆ ಬಂದೆ. ರೂಮಿನ ಬಾಗಿಲು ತೆರೆದೆ. ಹೊಳೆಯುವ ಸೌಂದರ್ಯ ರಾಶಿ ಕಂಡು ರಾತ್ರಿಯಲ್ಲಿ ಕಂಡ ಕನಸುಗಳ ನನಸಾಗಿಸಲು ಮನಸ್ಸು ಹಾತೊರೆಯಿತು. ಹೆದರಿದ ಹರಿಣಿಯಂತೆ ದೂರದಲ್ಲಿ ನಿಂತಿದ್ದೆ. ಸಾವಕಾಶವಾಗಿ ನಿನ್ನನ್ನು ನನ್ನತ್ತ ಎಳೆದು ಮೊಗದತ್ತ ಮೊಗ ತಂದು ಅಧರಗಳಿಂದ ಅಧರಗಳಿಗೆ ಬೀಗ ಹಾಕಲು ಸನ್ನದ್ಧನಾದೆ. ನನ್ನ ಕುರುಚಲು ಗಡ್ಡ ನಿನ್ನ ಮೃದುವಾದ ಗಲ್ಲಕೆ ತಾಕಿತು. ರೋಮಾಂಚಿತಳಾದ ನೀನು ತುಸು ನಾಚಿಕೆಯಿಂದ ಮೆಲ್ಲನೆ ತಳ್ಳಿದೆ. ಜೇನಿನ ಮತ್ತಿನಲ್ಲಿದ್ದ ನಾನು ನಿನ್ನ ಅಧರಗಳತ್ತ ಮತ್ತೆ ಬಾಗಿದೆ. ಈ ಸಲ ನೀನೂ ಸವಿಗೆ ಕಾದವಳಂತೆ ಅಧರಗಳ ಅರಳಿಸಿದೆ. ಅಧರಗಳಿಗೆ ಬೀಗ ಹಾಕುವ ವೇಗ ಇನ್ನೂ ಜಾಸ್ತಿ ಆಯಿತು. ಅದೇ ಮೊದಲ ಸಲದ ಚುಂಬನದ ಅನುಭವ ಈರ್ವರಿಗೂ. ಬಿಸಿಲ ಧಗೆಯಲಿ ಕಾದು ಕುಳಿತ ಭುವಿಗೆ ಮೊದಲ ಸಲದ ಮಳೆರಾಯನ ಹನಿ ಹನಿಗಳ ಚುಂಬನದಂತಿತ್ತು ಆ ಚುಂಬನ. ನಿನ್ನ ಮುಂಗುರುಳುಗಳು ನನ್ನ ಕೆನ್ನೆಯನ್ನು ಪದೇ ಪದೇ ಮುದ್ದಾಡುತ್ತಿದ್ದವು. ಆ ನಡುವೆ ಇಬ್ಬರ ನಡುವಿದ್ದ ಅಂತರ ದೂರವಾಗಿ ದೇಹಗಳು ಅಂಟಿಕೊಂಡಿದ್ದವು. ನಿನ್ನೆರಡು ಕೈಗಳು ನನ್ನ ಹೆಗಲನ್ನು ಗಟ್ಟಿಯಾಗಿ ಹಿಡಿದದ್ದವು. ಇಬ್ಬರ ಹೃದಯಗಳು ಆಗಸದೆತ್ತರಕ್ಕೆ ಬಡಿದುಕೊಳ್ಳುತ್ತಿದ್ದವು. ಒಂದೆರಡು ನಿಮಿಷದ ಬಳಿಕ ನಿನ್ನ ತಲೆಗೆ ಏನು ಹೊಳೆಯಿತೋ ಗೊತ್ತಿಲ್ಲ. ಧ್ವನಿ ಆಚೆ ಬರದಿರುವ ಸ್ಥಿತಿಯಲ್ಲಿ ಸ್ವಲ್ಪ ಸ್ವಲ್ಪ ಸರಿಯುತ್ತ ನನ್ನ ಬಿಗಿಯಾದ ತೋಳ ಬಂಧನದಿಂದ ಬಿಡಿಸಿಕೊಳ್ಳುತ್ತ, ಬಿಡು ಬಿಡು ಸಾಕು ಎನ್ನುವ ಕೈ ಸನ್ನೆ ಮಾಡುತ್ತ ಲಘುವಾಗಿ ತಬ್ಬಿದೆ. ಅಸ್ತವ್ಯಸ್ತವಾಗಿದ್ದ ನನ್ನ ಕ್ರಾಪನ್ನು ಸರಿ ಮಾಡುತ್ತ ಹಣೆಗೆ ಹೂಮುತ್ತನ್ನಿತ್ತೆ. ಆಗ ಮಧುರ ಜೇನಿನ ಸವಿ ಪಾನ ಹೀರುವ ವೇಗ ತಗ್ಗಿತ್ತು. ಒಂದು ಕೈಯಿಂದ ನನ್ನ ಭುಜವನ್ನು ಇನ್ನೊಂದು ಕೈಯಿಂದ ನನ್ನನ್ನು ಗಟ್ಟಿಯಾಗಿ ಹಿಡಿದುಕೊಂಡೆ. ಪ್ರೇಮ ಪಾಠ ಇಂದಿಗಿಷ್ಟೇ ಸಾಕು ಎಂದೆ. ಪ್ರಣಯದ ಮುಂದಿನ ಪಾಠದ ಪಯಣ ಮದುವೆಯ ಮಮತೆಯ ಬಂಧನದ ನಂತರವೆ ಎನ್ನುತ್ತ ಮುತ್ತಿನ ಮತ್ತಿನಲ್ಲಿ ಕಳೆದು ಹೋದ ನನ್ನನ್ನು ಎಚ್ಚರಿಸಿದೆ. ಮನೆಗೆ ಹೋಗಲು ಅವಸರಿಸಿದೆ. ಘಮ ಘಮ ಎದೆಯೆಲ್ಲ ನಿನ್ನ ಮೈ ಗಂಧದ ನಡುವೆ ನನ್ನ ಮಾತು ತೊದಲು ತೊದಲೆನಿಸಿತು. ಅಂಥ ರಸಮಯ ಗಳಿಗೆಯಲ್ಲಿ ಹಾಗೆ ಬಿಟ್ಟು ಬಿಡಲು ಮನಸ್ಸು ಒಪ್ಪಲಿಲ್ಲ. ಮೊದಲೆ ತುಂಟಿ ನೀನು ತುಂಟ ನಗು ಬೀರಿ ಬೈಕ್ ಏರಿ ಕೈ ಬೀಸಿ ಹೊರಟೇ ಬಿಟ್ಟೆ. ಬಹಳ ಕಾಡಿ ಬೇಡಿ ಪ್ರೀತಿಸಿ ಮದುವೆಯಾದೆ ನಿನ್ನ ಬಾಳಿಗೆ ಜೋಡಿಯಾದೆ. ನಮ್ಮಿಬ್ಬರ ಜೋಡಿ ನೋಡಿ ಇತರರಿಗೆ ಸಣ್ಣ ಅಸೂಯೆ ಆಗುವುದು ಸುಳ್ಳಲ್ಲ. ಇಂದು ಮೊದಲ ರಾತ್ರಿ ಸುಂದರ ದಾಂಪತ್ಯ ಪಯಣ ಶುರು ಮಾಡುವ ಶುಭಗಳಿಗೆ. ಈ ರಾತ್ರಿ ಮಾತ್ರವಲ್ಲ ಪ್ರತಿ ರಾತ್ರಿಯೂ ಪ್ರಥಮ ರಾತ್ರಿಯಾಗಲಿದೆ ಎಂಬ ಆಸೆ ನನ್ನಲ್ಲಿದೆ. ತುಂಟ ತುಂಟಿಯ ತುಂಟಾಟ ಮುಗಿಲು ಮುಟ್ಟುವ ಸಮಯ ಸಮೀಪಿಸುತ್ತಿದೆ. ‘ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ ನನ್ನ ನಿನ್ನ ನಡುವೆಯಲಿ.’ ಎಂಬ ನಿನ್ನಿಷ್ಟದ ಹಾಡು ಗುಣುಗುತ್ತ ನಿನಗಾಗಿ ಕಾದಿರುವೆ ಚೆಲುವೆ. ಸನಿಹಕೆ ಬಂದು ಅರ್ಧಕ್ಕೆ ನಿಂತ ಪ್ರಣಯದಾಟದ ಪಯಣ ಜೀವನ ಪೂರ್ತಿ ಮುಂದುವರೆಸು ಜೀವದ ಗೆಳತಿ.
ಇಂತಿ ನಿನ್ನ ಚೆಂದದ ಚಂದ್ರು

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ನಿವೇದಿತಾ ಶಾಲಾವರಣದಲ್ಲಿ 100 ಸಸಿಗಳ ನೆಡುವಿಕೆಗೆ ಚಾಲನೆ

ವಿತರಕರಿಂದ ಎಲ್‌ಪಿಜಿ ಸಿಲಿಂಡರ್‌ಗೆ ಹೆಚ್ಚುವರಿ ಶುಲ್ಕ ವಸೂಲಿ

ಪ್ರಕೃತಿ ಸ್ನೇಹಿ ಜೀವನ ಶೈಲಿ ಅಳವಡಿಸಿಕೊಳ್ಳಿ :ಬೆಳ್ಳುಬ್ಬಿ

ಪರಿಸರ ರಕ್ಷಣೆ ಪ್ರತಿಯೊಬ್ಬರ ಹೊಣೆ :ಹರ್ಷಾನಂದ ಶ್ರೀ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ನಿವೇದಿತಾ ಶಾಲಾವರಣದಲ್ಲಿ 100 ಸಸಿಗಳ ನೆಡುವಿಕೆಗೆ ಚಾಲನೆ
    In (ರಾಜ್ಯ ) ಜಿಲ್ಲೆ
  • ವಿತರಕರಿಂದ ಎಲ್‌ಪಿಜಿ ಸಿಲಿಂಡರ್‌ಗೆ ಹೆಚ್ಚುವರಿ ಶುಲ್ಕ ವಸೂಲಿ
    In (ರಾಜ್ಯ ) ಜಿಲ್ಲೆ
  • ಪ್ರಕೃತಿ ಸ್ನೇಹಿ ಜೀವನ ಶೈಲಿ ಅಳವಡಿಸಿಕೊಳ್ಳಿ :ಬೆಳ್ಳುಬ್ಬಿ
    In (ರಾಜ್ಯ ) ಜಿಲ್ಲೆ
  • ಪರಿಸರ ರಕ್ಷಣೆ ಪ್ರತಿಯೊಬ್ಬರ ಹೊಣೆ :ಹರ್ಷಾನಂದ ಶ್ರೀ
    In (ರಾಜ್ಯ ) ಜಿಲ್ಲೆ
  • ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ: ಪತ್ರಕರ್ತ ಫಿರೋಜ್
    In (ರಾಜ್ಯ ) ಜಿಲ್ಲೆ
  • ಸ್ವಚ್ಚತಾ ಕಾರ್ಯದೊಂದಿಗೆ ಸಸಿ ನೆಟ್ಟು ಪರಿಸರ ರಕ್ಷಣೆಗೆ ಮುಂದಾಗಿ
    In (ರಾಜ್ಯ ) ಜಿಲ್ಲೆ
  • ಪ್ರತಿಯೊಬ್ಬರು ಮನೆಗೊಂದು ಮರ ಬೆಳೆಸಬೇಕು :ರಮೇಶ
    In (ರಾಜ್ಯ ) ಜಿಲ್ಲೆ
  • ಹಸಿರೀಕರಣಕ್ಕೆ ಕೆಬಿಜೆಎನ್‌ಎಲ್ ಕೊಡುಗೆ ಶ್ಲಾಘನೆ
    In (ರಾಜ್ಯ ) ಜಿಲ್ಲೆ
  • ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ :ಪ್ರಾಚಾರ್ಯ ಸಜ್ಜನ
    In (ರಾಜ್ಯ ) ಜಿಲ್ಲೆ
  • ಪರಿಸರ ರಕ್ಷಣೆಗಾಗಿ ಪಣ ತೊಡೋಣ :ನ್ಯಾ.ಕಾಂಬಳೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.