ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಬಸವ ಜಯಂತಿ ಆಚರಿಸಲಾಯಿತು.
ಪಟ್ಟಣದ ಬಸವೇಶ್ವರ ವೃತ್ತ ಹಾಗೂ ತಹಶೀಲ್ದಾರ ಕಾರ್ಯಾಲಯದಲ್ಲಿ ತಾಲ್ಲೂಕು ಜಂಗಮಾಭಿವೃದ್ಧಿ ಸಂಘದ ಅಧ್ಯಕ್ಷ ಸೋಮಶೇಖರ ಹಿರೇಮಠ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಎಸ್.ಎನ್.ಬಸವರೆಡ್ಡಿ ಮಾತನಾಡಿ, ಸಾಮಾಜಿಕ ಸಮಾನತೆ, ಭಾತೃತ್ವ, ಸಾಮರಸ್ಯದ ಕುರಿತಾದ ಚಿಂತನೆಗಳನ್ನು ತಮ್ಮ ವಚನಗಳ ಮೂಲಕ ಸಾದರ ಪಡಿಸಿದ ಬಸವಣ್ಣ ೧೨ನೇ ಶತಮಾನದ ಕ್ರಾಂತಿಯೋಗಿಯೇನಿಸಿದ್ದಾರೆ. ೨೧ನೇ ಶತಮಾನದ ಸಮಾಜದ ಆರ್ಥಿಕ ಅಗತ್ಯತೆಗಳನ್ನು ೯ ಶತಮಾನಗಳ ಹಿಂದೆಯೇ ಕಲ್ಪಿಸಿಕೊಂಡಿದ್ದ ಬಸವಣ್ಣ ಮಹಾನ್ ದಾರ್ಶನಿಕ ಇಂದಿಗೂ ಬಸವಣ್ಣನವರು ಪ್ರತಿಪಾದಿಸಿದ ಶರಣ, ವಚನ ಸಂಸ್ಕೃತಿಗಳು ಇಡೀ ವಿಶ್ವಕ್ಕೆ ನೀಡಿದ ಆದರ್ಶ ಕೊಡುಗೆಗಳಾಗಿವೆ ಎಂದರು.
ನಿವೃತ್ತ ಶಿಕ್ಷಕ ಶಾಂತಪ್ಪ ಪಡನೂರ, ಜೆ.ಆರ್.ಬಿರಾದಾರ, ಶಿವಶರಣ ಪೂಜಾರಿ, ಪಿ.ಸಿ.ತಳಕೇರಿ, ಗೋಲ್ಲಾಳ ಬಿರಾದಾರ, ಪಿ.ಎಸ್.ಮಿಂಚನಾಳ, ಸಂಗನಗೌಡ ಪಾಟೀಲ, ಸೋಮು ದೇವೂರ, ಶಿವನಗೌಡ ಪಾಟೀಲ (ಯರನಾಳ) ಹಾಗೂ ಸಿಬ್ಬಂದಿ ಇದ್ದರು.

