Subscribe to Updates
Get the latest creative news from FooBar about art, design and business.
Author: editor.udayarashmi@gmail.com
ನಿಡಗುಂದಿ: ಸರ್ಕಾರಿ ಪ್ರೌಡಶಾಲೆ ಕಮದಾಳ ಪ್ಲಾಟ್ ದಲ್ಲಿ ಋತು ಚಕ್ರ ಸಮಯದಲ್ಲಿ ಶುಚಿತ್ವ ನಿರ್ವಹಣೆ ಮತ್ತು ಋತು ಬಂಧದ ಕುರಿತು ಅರಿವು ಅವಶ್ಯ ಎಂದು ಹಿರಿಯ ಉಪನ್ಯಾಸಕಿ ಗೀತಾಂಜಲಿ ಹೇಳಿದರು.ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆ ಬೆಂಗಳೂರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಜಯಪೂರ, ತಾಲುಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯ ಬಸವನಬಾಗೇವಾಡಿ, ಸಮುದಾಯ ಆರೋಗ್ಯ ಕೇಂದ್ರ ನಿಡಗುಂದಿ ಹಾಗು ಸರ್ಕಾರಿ ಪ್ರೌಡಶಾಲೆ ಕಮದಾಳ ಪ್ಲಾಟ್ ಇವರ ಸಂಯುಕ್ತ ಆಶ್ರಯದಲ್ಲಿ, ರಾಜ್ಯ ಆರೋಗ್ಯ ಸಂಸ್ಥೆಯ ಪ್ರಶಿಕ್ಷಣಾರ್ಥಿಗಳ ಕ್ಷೇತ್ರ ಅಧ್ಯಯನ ಕಾರ್ಯಕ್ರಮದ ಅಂಗವಾಗಿ ಜರುಗಿದ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡುತ್ತಾ ಅವರು, ಋತು ಚಕ್ರದ ಕಾಲಾವದಿ,ಆ ಅವದಿಯಲ್ಲಿಯ ತೊಂದರೆಗಳು, ಮೂಡನಂಬಿಕೆಗಳಿಂದ ಆಗುವ ದುಷ್ಟ್ಪರಿಣಾಮಗಳು, ಶುಚಿತ್ವ ಕಾಪಾಡುವ ಕುರಿತು ಹಾಗು ಆರೋಗ್ಯ ಸಮಸ್ಯೆ ಕುರಿತು ಮಾಹಿತಿ ನೀಡಿದರು.ತಾಲುಕಾ ಆರೋಗ್ಯ ಶಿಕ್ಷಣಾಧಿಕಾರಿ ಹಾಗು ಪ್ರಶಿಕ್ಷಣಾರ್ಥಿಗಳ ಮಾರ್ಗದರ್ಶಕ ಎಸ್ ಎಸ್ ಮೇಟಿ, ರಾಜ್ಯ ಆರೋಗ್ಯ ಸಂಸ್ಥೆಯ ಕ್ಷೇತ್ರ ಅಧ್ಯಯನವು ನಮ್ಮ ಗ್ರಾಮಿಣ ಹೆಣ್ಣುಮಕ್ಕಳಲ್ಲಿ ಋತು ಚಕ್ರದ ಬಗ್ಗೆ…
ಮೂಲ ಸ್ಥಳದಲ್ಲಿ ಪುನಃ ಪುತ್ಥಳಿ ಸ್ಥಾಪಿಸಲು ಪ್ರತಿಭಟನಾಕಾರರ ಆಗ್ರಹ ವಿಜಯಪುರ: ನವದೆಹಲಿಯ ಐತಿಹಾಸಿಕ ಹಳೆಯ ಸಂಸತ್ ಭವನದ ಮುಂದೆ ಇದ್ದ ಛತ್ರಪತಿ ಶಿವಾಜಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗಳನ್ನು ತೆರುವುಗೊಳಿಸಿದ ಕೇಂದ್ರ ಸರ್ಕಾರದ ಕ್ರಮ ಅತ್ಯಂತ ಖಂಡನೀಯ ಎಂದು ಬುದ್ಧ, ಬಸವ, ಅಂಬೇಡ್ಕರ್ ಸೇವಾ ಸಂಸ್ಥೆಯ ಅಧ್ಯಕ್ಷ ತುಳಸಿರಾಮ ಹರಿಜನ ಹೇಳಿದರು.ಅವರು ವಿಜಯಪುರ ನಗರದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಸೇವಾ ಸಂಸ್ಥೆಯಿಂದ ಛತ್ರಪತಿ ಶಿವಾಜಿ ಮಹಾರಾಜರ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಇತರ ಮಹಾನ್ ನಾಯಕರ ಪುತ್ಥಳಿಗಳನ್ನು ಕೇಂದ್ರ ಸರ್ಕಾರ ತೆರವುಗೊಳಿಸಿರುವುದನ್ನು ಖಂಡಿಸಿ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಜಿಲ್ಲಾಧಿಕಾರಿಗಳ ಕಛೇರಿಯವರೆಗೆ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಉದ್ದೇಶಿಸಿ ಮಾತನಾಡಿದರು.ಭಾರತೀಯ ಚರಿತ್ರೆಯ ಪುಟದಲ್ಲಿ ಅಜರಾಮರವಾಗಿ ಉಳಿದ ವಿಶ್ವಮಾನ್ಯ ಅಮೂಲ್ಯ ರತ್ನಗಳೆಂದರೆ ಛತ್ರಪತಿ ಶಿವಾಜಿ ಮಹಾರಾಜರು ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರು. ಅಂತಹ ಮಹಾನ್ ನಾಯಕರಿಗೆ ಗೌರವ ಸಲ್ಲಿಸುವ ದ್ಯೋತಕವಾಗಿ ಹಿಂದಿನ ನಾಯಕರು ರಾಷ್ಟ್ರದ ಐತಿಹಾಸಿಕ ಸಂಸತ್ ಭವನದ ಮುಂದೆ ಪುತ್ಥಳಿಗಳನ್ನು…
ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮ | ನಾಗೇಂದ್ರ ಅವರ ಮನೆ ಸೇರಿದಂತೆ ೪ ಕಡೆ ಇಡಿ ದಾಳಿ | ರಾಜ್ಯ ಸರ್ಕಾರಕ್ಕೆ ಎದುರಾಗಲಿರುವ ಸಂಕಷ್ಟ ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ರೂಪಾಯಿ ಅಕ್ರಮ ವರ್ಗಾವಣೆ ಹಗರಣದ ಸಂಬಂಧ ವಿಶೇಷ ತನಿಖಾ ತಂಡ(ಎಸ್‌ಐಟಿ) ತನಿಖೆಯನ್ನು ಎದುರಿಸುತ್ತಿರುವ ಮಾಜಿ ಸಚಿವ ಹಾಗೂ ಬಳ್ಳಾರಿ ಗ್ರಾಮೀಣ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಂತರ ವಶಕ್ಕೆ ಪಡೆದಿದ್ದಾರೆ.ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ₹185 ಕೋಟಿಗಳಿಗೂ ಹೆಚ್ಚಿನ ಅವ್ಯವಹಾರದ ಹಿನ್ನೆಲೆಯಲ್ಲಿ, ನಾಗೇಂದ್ರ ಅವರ ಡಾಲರ್ಸ್ ಕಾಲೋನಿಯ ಮನೆ ಸೇರಿದಂತೆ, ಸಂಬಂಧಿಸಿದ ಆಸ್ತಿಗಳಿರುವ ಬಿಇಎಲ್ ರೋಡ್, ಮತ್ತಿಕೆರೆ ಹಾಗೂ ಮಲ್ಲೇಶ್ವರಂ ಸೇರಿದಂತೆ ನಾಲ್ಕು ಕಡೆ ಇಡಿ ದಾಳಿ ನಡೆಸಿತ್ತು.ಬಹುಕೋಟಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಸಂಬಂಧ ಶಾಸಕ ನಾಗೇಂದ್ರ ಹಾಗೂ ಕಾಂಗ್ರೆಸ್ ಶಾಸಕ ಬಸವನಗೌಡ ದದ್ದಲ್ ಅವರ ನಿನ್ನೆಯ ಸುಧೀರ್ಘ ವಿಚಾರಣೆಯ ಬೆನ್ನಲ್ಲೇ ಇಡಿ ಅಧಿಕಾರಿಗಳು ಇಂದು…
ಬಾಗಲಕೋಟ: ಹವಾಮಾನ ವೈಪರೀತ್ಯದಿಂದಾಗಿ ರೈತರು ಪ್ರಕೃತಿಯೊಂದಿಗೆ ಹೊಂದಿಕೊಂಡು ಬೇಸಾಯ ಮಾಡುತ್ತಿದ್ದು, ಅವರ ಕಷ್ಟಕಾರ್ಪಣ್ಯಗಳಿಗೆ ಸೂಕ್ತ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ಅಧಿಕಾರಿಗಳು ಮತ್ತು ವಿಜ್ಞಾನಿಗಳು ನಿರಂತರವಾಗಿ ಸ್ಪಂದಿಸುತ್ತಿದ್ದಾರೆ ಎಂದು ಬಾಗಲಕೋಟ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ.ಲಕ್ಷ್ಮಣ ಕಳ್ಳೆನ್ನವರ ಹೇಳಿದರು.ಅವರಿಂದು ಬಾಗಲಕೋಟ ತಾಲೂಕಿನ ಶಾರದಾಳ ಗ್ರಾಮದ ಪ್ರಗತಿಪರ ರೈತ ನಿಂಗಪ್ಪ ಅರಕೇರಿ ಇವರ ಕ್ಷೇತ್ರದಲ್ಲಿ (೦೯-೦೭-೨೦೨೪ ರಂದು) ಹಮ್ಮಿಕೊಂಡ ದ್ವೈಮಾಸಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ರೈತರಿಗೆ ಇಲಾಖೆಯಿಂದ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುವದು, ಸಕಾಲದಲ್ಲಿ ಪರಿಕರಗಳನ್ನು ಪೂರೈಸುವದು, ವಿವಿಧ ಬೆಳೆಗಳಲ್ಲಿ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲು ಮಿನಿಕಿಟ್ ವಿತರಿಸುವದು, ಸಮಸ್ಯಾತ್ಮಕ ಕ್ಷೇತ್ರಗಳಿಗೆ ವಿಜ್ಞಾನಿಗಳೊಂದಿಗೆ ಭೇಟಿ ನೀಡಿ ಪರಿಹಾರ ಒದಗಿಸುವದು, ಒಟ್ಟಾರೆಯಾಗಿ ಸಂಕಷ್ಟದಲ್ಲಿರುವ ರೈತರ ನೆರವಿಗೆ ಇಲಾಖೆ ಸದಾ ಸನ್ನದ್ದವಾಗಿದೆ ಎಂದರು.ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಮಾತನಾಡಿ, ರೈತರ ಸಮಸ್ಯೆಗಳಿಗೆ ಸೂಕ್ತ ಸಲಹೆಗಳನ್ನು ನೀಡಲು ಪ್ರತಿ ಎರಡು ತಿಂಗಳಿಗೊಮ್ಮೆ ಜಿಲ್ಲೆಯ ಅಧಿಕಾರಿಗಳಿಗೆ ಕೃಷಿಯಲ್ಲಾದ ನೂತನ ತಾಂತ್ರಿಕತೆಗಳ ಕುರಿತು ಪರಸ್ಪರ ಚರ್ಚಿಸಿ ಮಾಹಿತಿ ನೀಡಲಾಗುವದು. ಇದನ್ನು ಆಧರಿಸಿ ಅಧಿಕಾರಿಗಳು ರೈತರ…
ನಿವೃತ್ತಗೊಂಡ ನೆಚ್ಚಿನ ಶಿಕ್ಷಕ ಬಸವರಾಜ ಅನಂತಪುರಗುರುವಿಗೆ ಕಲ್ಪವೃಕ್ಷ ಕಾಣಿಕೆ ಚಿಕ್ಕಪಡಸಲಗಿ (ಜಮಖಂಡಿ): ತಮ್ಮ ಅಚ್ಚುಮೆಚ್ಚಿನ ಗುರುಯೊಬ್ಬರು ಸೇವಾ ನಿವೃತ್ತಿ ಹೊಂದಿದರು. ತನ್ನಿಮಿತ್ಯ ಈ ಶುಭ ಹಾರೈಕೆಯ ಸುಘಳಿಗೆಯಲ್ಲಿ ಹಲವಾರು ಹಿತೈಷಿಗಳು, ಶಾಲಾ ಮಕ್ಕಳು ಗುರುದೇವೋಭವನ ಗುಣಗಾನದೊಂದಿಗೆ ಸಂಪ್ರೀತಿಯ ಕಾಣಿಗಳನ್ನು ಸಮರ್ಪಿಸಿ ಧನ್ಯತಾಭಾವ ಮೆರೆದರು. ಆದರೆ ಕೆಲ ಬಾಲೆಯರು ತಮ್ಮ ಪ್ರೀತಿ ಪಾತ್ರ ಆ ಗುರುವಿಗೆ ವಿಭಿನ್ನ ಸವಿನೆನಪಿನ ಕಾಣಿಕೆಯೊಂದನ್ನು ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿ ಗಮನ ಸೆಳೆದರು. ಹೌದು! ನಿಷ್ಕಲ್ಮಶ ಭಾವದ ಆ ಗುರುಜಿಗೆ ಶಾಲಾ ಬಾಲೆಯರು ನೀಡಿದ ಕಾಣಿಕೆ ಅಂತಿಂಥ ಕಾಣಿಕೆಯಲ್ಲ ! ಅದು ಪರಿಸರ ಕಾಳಜಿಯುತ ಕಳಕಳಿಯ ಕಾಣಿಕೆ. ಗುರುಜಿಯವರ ವಿಶ್ರಾಂತ ಜೀವನವು ಕಲ್ಪವೃಕ್ಷದಂತೆ ಅರಳಲಿ. ಸವಿಸಿಹಿ ಭಾವ ಬಂಧನ ಗಟ್ಟಿಗೊಳ್ಳಲಿ. ಔದಾರ್ಯ ಗುಣದ ಪ್ರೀತಿಭರಿತ ಪುಷ್ಪರಸ ಇನ್ನೂ ಶಿಷ್ಯವೃಂದಕ್ಕೆ ಲಭಿಸಲಿ ಎನ್ನುವ ಉದಾತ್ತ ಚಿಂತನೆ ಸಿಂಚನದೊಂದಿಗೆ ಸವಿನೆನಪಿಗಾಗಿ ಕಲ್ಪವೃಕ್ಷದ ಸಸಿ ನೀಡಿ ಮಹೋನ್ನತ ಪರಿಸರ ಸ್ನೇಹಕ್ಕೆ ಮುಂದಾದರು. ತಮ್ಮ ಅಂತರಂಗದಲ್ಲಿ ಮೊಳಕೆಯೊಡೆದಿದ್ದ ಹಸಿರಿನ ಹಸಿವು ಗುರುವಿಗೆ…
ಸಿಂದಗಿ: ೧೧೦/೧೧ಕೆವಿ ವಿದ್ಯುತ್ ವಿತರಣಾ ಕೇಂದ್ರ ಸಿಂದಗಿಯಿಂದ ಸರಬರಾಜಾಗುವ ೧೧ಕೆವ್ಹಿ ಸಿಂದಗಿ-೧ ಮಾರ್ಗದ ಮೇಲೆ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಸದರಿ ಮಾರ್ಗಗಳ ಮೇಲೆ ಬರುವ ಎಪಿಎಂಸಿ, ವಿವೇಕಾನಂದ ವೃತ್ತ, ಕನಕದಾಸ ವೃತ್ತ, ಮೋರಟಗಿ ನಾಕಾ, ಬಂದಾಳ ರೋಡ್, ಬಸವ ನಗರ, ಬಸ್‌ಸ್ಟ್ಯಾಂಡ್, ಟಿಪ್ಪು ಸುಲ್ತಾನ್ ವೃತ್ತ, ಬಸ್ ಡಿಪೋ, ಸಿಂದಗಿ ತಾಂಡಾ ಹಾಗೂ ಕೈಗಾರಿಕಾ ನಗರ ಪ್ರದೇಶಗಳಿಗೆ ಜು.೧೨ರಂದು ಬೆಳಿಗ್ಗೆ ೧೦ಗಂಟೆಯಿಂದ ಸಾಯಂಕಾಲ ೫ರವರೆಗೆ ವಿದ್ಯುತ್ ವಿತರಣೆ ಇರುವುದಿಲ್ಲ. ಆದ್ದರಿಂದ ಸದರಿ ಪ್ರದೇಶದ ಗ್ರಾಹಕರು ಸಹಕರಿಸಬೇಕು ಎಂದು ಸಿಂದಗಿ ಹೆಸ್ಕಾಂ ಉಪವಿಭಾಗದ ಸಹಾಯಕ ನಿರ್ವಾಹಕ ಅಭಿಯಂತರರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿಂದಗಿ: ಮಕ್ಕಳಿಗೆ ಎರಡನೆಯ ತಾಯಿಯಾಗಿ ಪೂರ್ವ ಪ್ರಾಥಮಿಕ ಶಿಕ್ಷಣ ನೀಡುವ ಅಂಗನವಾಡಿ ಕಾರ್ಯಕರ್ತೆಯರ ಶ್ರಮಕ್ಕೆ ಬೆಲೆ ಕಟ್ಟಲಾಗದು. ಅವರ ಶ್ರಮ ಬಹಳಷ್ಟಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ಎಪಿಎಂಸಿ ಯಾರ್ಡ ಆವರಣದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಮೇಲ್ವಿಚಾಕರಿಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೆ, ಸ್ಮಾರ್ಟ್ ಫೋನ್, ಸಮವಸ್ತç, ಫಲಾಣುಭವಿಗಳಿಗೆ ಔಷಧಿ ಕಿಟ್ ಹಾಗೂ ತೂಕದ ಯಂತ್ರಗಳ ಸಾಮಗ್ರಿ ವಿತರಣಾ ಕಾರ್ಯಕ್ರಮದಲ್ಲಿ ಮಕ್ಕಳ ಪ್ರಪಂಚ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಅಂಗನವಾಡಿ ಕಾರ್ಯಕರ್ತೆಯರು ಪಾರದರ್ಶಕತೆ ಮತ್ತು ಪ್ರಾಮಾಣಿಕವಾಗಿ ಈ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರಕಾರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಮುಖ್ಯವಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಎಂದರೆ ತಾಯಿ ಮಗುವಿನ ಸಂಬAಧ ಸಮಾಜ ಈ ಇಲಾಖೆಯ ಮೇಲೆ ನಿಂತಿದೆ.ಈ ವೇಳೆ ಜಿಲ್ಲಾ ಉಪ-ನಿರ್ದೇಶಕ ಕೆ.ಕೆ.ಚವ್ಹಾಣ ಮಾತನಾಡಿ, ಸರಕಾರ ಅಂಗನವಾಡಿ ಕಾರ್ಯಕತೆಯರಿಗೆ ೩೦೯ ಸ್ಮಾರ್ಟ್ ಫೋನ್,…
ಕ್ಯಾಂಟೀನ್ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಮನಗೂಳಿ ಅಭಿಮತ ಸಿಂದಗಿ: ಇಂದಿರಾ ಕ್ಯಾಂಟಿನ್ ಬಡವರಿಗೆ ಹಸಿವು ನೀಗಿಸಲು ಉಪಯುಕ್ತವಾಗಿದೆ. ತಾಲೂಕು ಆಸ್ಪತ್ರೆ, ರೈತ ಸಂಪರ್ಕ ಕೇಂದ್ರ, ಕೋರ್ಟ್ ಸೇರಿದಂತೆ ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಅವರಿಗೆ ಅನುಕೂಲ ಕಲ್ಪಿಸಲು ನಿಟ್ಟಿನಲ್ಲಿ ಸು.೮೬ಲಕ್ಷ ರೂ. ಅನುದಾನದಲ್ಲಿ ಇಂದಿರಾ ಕ್ಯಾಂಟಿನ್ ನಿರ್ಮಿಸಲಾಗುತ್ತಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಇಂದಿರಾ ಕ್ಯಾಂಟಿನ್ ಭೂಮಿ ಪೂಜಾ ಸಮಾರಂಭವನ್ನು ಬೆಂಗಳೂರ ಪೌರಾಡಳಿ ಇಲಾಖೆ, ಸಿಂದಗಿ ಪುರಸಭೆ ವತಿಯಿಂದ ಹಮ್ಮಿಕೊಂಡ ಇಂದಿರಾ ಕ್ಯಾಂಟಿನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದ ಅವರು, ರಾಜ್ಯ ಸರಕಾರ ಮಹತ್ತರವಾದ ಯೋಜನೆ ಇಂದಿರಾ ಕ್ಯಾಂಟಿನ್. ೨೦೧೩-೧೮ರವರೆಗೆ ಈ ರಾಜ್ಯದ ಸಿಎಂ ಆಗಿದ್ದ ಸಂದರ್ಭದಲ್ಲಿ ಈ ಯೋಜನೆಯನ್ನು ೨೨೪ ಮತಕ್ಷೇತ್ರಘಲ್ಲಿ ಜಾರಿಗೆ ತಂದು ಜನ ಸಾಮಾನ್ಯರಿಗೆ ಊಟ ಉಪಹಾರ ಹೋರೆಯಾಗಬಾರದು ಎಂಬ ಉದ್ದೇಶದಿಂದ ಕಡಿಮೆ ದರದಲ್ಲಿ ಇಂದಿರಾ ಕ್ಯಾಂಟಿನ್‌ಗೆ ಚಾಲನೆ ನೀಡಿದ್ದರು, ಆದರೆ ನಗರದ ತಹಶೀಲ್ದಾರ್…
ಸಿಂದಗಿ: ನಮ್ಮ ಸಂಘ ನೌಕರರ ಕ್ಷೇಮಾಭಿವೃದ್ಧಿಗೆ ಮಾತ್ರ ಸೀಮಿತವಾಗದೆ ರಾಷ್ಟç ಮತ್ತು ರಾಜ್ಯದಲ್ಲಿ ಸಂಭವಿಸುವ ಪ್ರಕೃತಿ ವಿಕೋಪ, ಕೋವಿಡ್ ಸಂಕಷ್ಟದಲ್ಲಿ ಸರ್ಕಾರಕ್ಕೆ ಆರ್ಥಿಕ ಸಹಕಾರ ನೀಡಿ ಸೇವಾ ಕಾರ್ಯ ನಿರ್ವಹಿಸುವ ಮೂಲಕ ದೇಶದಲ್ಲಿಯೇ ಮಾದರಿ ಸಂಘಟನೆ ನಮ್ಮದಾಗಿದೆ ಎಂದು ನೌಕರರ ಸಂಘದ ತಾಲೂಕಾಧ್ಯಕ್ಷ ಅಶೋಕ ತೆಲ್ಲೂರ ಹೇಳಿದರು.ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸರ್ಕಾರಿ ನೌಕರರ ಬಳಗ ಮನವಿ ಸಲ್ಲಿಸಿದ ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಅಶೋಕ ತೆಲ್ಲೂರ, ಆಲಮೇಲ ತಾಲೂಕಾಧ್ಯಕ್ಷ ರವಿ ಬಿರಾದಾರ ಮಾತನಾಡಿ, ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಹಳೆ ಪಿಂಚಣಿ ಯೋಜನೆ, ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಕೂಡಲೇ ಜಾರಿಗೊಳಿಸಬೇಕು. ರಾಜ್ಯ ೭ನೆಯ ವೇತನ ಆಯೋಗದಿಂದ ಶೀಘ್ರ ವರದಿ ಪಡೆದು ರಾಜ್ಯ ಸರಕಾರಿ ನೌಕರರ ವೇತನ ಭತ್ಯಗಳನ್ನು ಪೂರ್ಣ ಪ್ರಮಾಣದಲ್ಲಿ ಪರಿಷ್ಕರಿಸಿ ಆದೇಶ ಹೊರಡಿಸಬೇಕು. ರಾಜ್ಯದ ವಿವಿಧ ಇಲಾಖೆಗಳಲ್ಲಿರುವ ಖಾಲಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಿಕೊಳ್ಳಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.ಇದೇ…
ಮುದ್ದೇಬಿಹಾಳ: ಪಟ್ಟಣದ ನಾಲತವಾಡ ರಸ್ತೆಯಲ್ಲಿರುವ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ೨೦೨೪ -೨೫ ನೇ ಸಾಲಿನ ಶಾಲಾ ಸಂಸತ್ತು ರಚಿಸಲಾಯಿತು.ವಿದ್ಯಾರ್ಥಿಗಳಿಗೆ ಇ.ವಿ.ಎಂ ಮಷೀನ್ ಮುಖಾಂತರ ಮೊಬೈಲ್ ಆಪ್ ಸಹಾಯದಿಂದ ಉಮೇದುವಾರರ ಪಟ್ಟಿ, ಮತದಾನ, ಮತಗಳ ಎಣಿಕೆ ಮತ್ತು ಫಲಿತಾಂಶ ಪ್ರಕಟಿಸಲಾಯಿತು.ಲೋಕಸಭಾ, ವಿಧಾನಸಭಾ, ನಗರ ಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ಚುನಾವಣೆಗಳಂತೆ ಯಾವ ರೀತಿಯಾಗಿ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸುವದು, ದಿನಾಂಕಗಳನ್ನು ಮತ್ತು ಕಾರ್ಯಚಟುವಟಿಕೆ ಯಾವ ರೀತಿ ನಿರ್ವಹಿಸುತ್ತದೆಯೋ ಆ ಕಾರ್ಯರೂಪವನ್ನು ಸಂಪೂರ್ಣವಾಗಿ ವಿವರಣೆಯನ್ನು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಎ.ಸಿ.ಕೆರೂರ ವಿವರಿಸಿದರು.ಶಾಲೆಯ ಮುಖ್ಯ ಗುರು ಎಸ್.ವಿ.ಹಿರೇಮಠ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸುವಂತೆ ದಿನಾಂಕಗಳನ್ನು ತಿಳಿಸಿದರು. ನಾಮಪತ್ರ ಸಲ್ಲಿಕೆ, ಹಿಂಪಡೆಯುವದು, ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸುವುದು ಮತ್ತು ಚಿನ್ನೆಯನ್ನು ನೀಡುವುದು, ಉಮೇದುವಾರದಿಂದ ಮತ ಯಾಚನೆಗಾಗಿ ಪ್ರಚಾರ, ಮತದಾನ, ಮತ ಎಣಿಕೆ ಮತ್ತು ಫಲಿತಾಂಶ ಪ್ರಕಟಣೆ ಈ ಎಲ್ಲದರ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು.ಶಾಲೆಯ ಶಿಕ್ಷಕರಾದ ಕೆ.ಎಸ್.ಚಟ್ಟಿ, ಪ್ರೊಸೈಡಿಂಗ್ ಆಫೀಸರ್ ಆಗಿ ರೇಣುಕವ್ವ ಎಸ್.ಬಿ,…
