ವಿಜಯಪುರ: ಪಿಎಂಕಿಸಾನ್ ಯೋಜನೆಯಡಿ ನೋಂದಾಯಿತ ರೈತರು ಯೋಜನೆಯ ಆರ್ಥಿಕ ನೆರವು ಪಡೆಯಲು ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದ್ದು, ಈಗಾಗಲೇ ಜಿಲ್ಲೆಯ ನೋಂದಾಯಿತ ೨೪೮೬೯೪ ಅರ್ಹ ರೈತರ ಪೈಕಿ ೨೨೮೯೩೩ ರೈತರು ಇ-ಕೆವೈಸಿ ಮಾಡಿಸಿಕೊಂಡಿದ್ದು, ಉಳಿದ ೧೯೭೬೧ ರೈತರು ಕೂಡಲೇ ಇ-ಕೆವೈಸಿ ಮಾಡಿಸಿಕೊಳ್ಳುವಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕರು ಮನವಿ ಮಾಡಿಕೊಂಡಿದ್ದಾರೆ.
ಇ-ಕೆವೈಸಿ ಮಾಡಿಸಿಕೊಳ್ಳದ ನೋಂದಾಯಿತ ರೈತರಿಗೆ ಮುಂದಿನ ಕಂತಿನ ಹಣ ಬಿಡುಗಡೆಯಾಗುವುದಿಲ್ಲ. ಇಕೆವೈಸಿ ಬಾಕಿ ಇರುವ ನೋಂದಾಯಿತ ರೈತರು ತಮ್ಮ ಗ್ರಾಮಕ್ಕೆ ಈಗಾಗಲೇ ನೇಮಿಸಲಾದ ಗ್ರಾಮ ಮಟ್ಟದ ನೋಡಲ್ ಅಧಿಕಾರಿ ಅಥವಾ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಿ ಕೂಡಲೇ ಇ-ಕೆವೈಸಿ ಮಾಡಿಕೊಳ್ಳಬೇಕು. ಒಂದೇ ಕುಟುಂಬ ಸದಸ್ಯರೆ ಎಂಬುದನ್ನು ಪರಿಶೀಲಿಸಿ ಅರ್ಹ – ಅನರ್ಹರೆಂದು ಘೋಷಿಸಬೇಕಾಗಿರುವ ೩೧೧೪೮ ಪ್ರಕರಣಗಳು ಬಾಕಿ ಇದ್ದು, ಈ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಇಬ್ಬರು ಸದಸ್ಯರು ಖುದ್ದಾಗಿ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ನಿಗದಿತ ನಮೂನೆಯಲ್ಲಿ ಘೋಷಣೆಯನ್ನು ಸಲ್ಲಿಸಬೇಕು. ಘೋಷಣೆ ಸಲ್ಲಿಸದೇ ಇದ್ದಲ್ಲಿ ಅಂತಹ ಪ್ರಕರಣಗಳಿಗೆ ಮುಂದಿನ ಕಂತಿನ ಆರ್ಥಿಕ ನೆರವು ಸ್ಥಗಿತಗೊಳ್ಳುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
