Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಡಾ.ಅಂಬೇಡ್ಕರ್ ನಿಗಮ ಜಿಲ್ಲಾ ವ್ಯವಸ್ಥಾಪಕಿ ರೇಣುಕಾ ಪ್ರಕರಣ ಸಿಓಡಿ ತನಿಖೆಗೆ ಒಪ್ಪಿಸಲು ಮನವಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಖೊಟ್ಟಿ ಆಧಾರ ಕಾರ್ಡ್ ಖೊಟ್ಟಿ ಜಾತಿ ಪ್ರಮಾಣ ಪತ್ರ, ಖೊಟ್ಟಿ ಪ್ರಮಾಣ ಪತ್ರ ಫಲಾನುಭವಿಗಳನ್ನು ಸೃಷ್ಟಿಮಾಡಿ ಹಣ ಲೂಟಿಮಾಡಿದ ಇಲಾಖೆಯ ಎಲ್ಲ ನಿಗಮದ ಅಧಿಕಾರಿಗಳನ್ನು ಲೋಕಾಯುಕ್ತ ತನಿಖೆ ಮಾಡುವಂತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ದಲಿತ ಸಂಘರ್ಷ ಸಮಿತಿ (ರಿ) ಭೀಮವಾದ ಜಿಲ್ಲಾ ಘಟಕ ಪದಾಧಿಕಾರಿಗಳು ಮನವಿ ಸಲ್ಲಿಸಿದರು.ಡಾ.ಬಾಬಾಸಾಹೇಬ ಅಂಬೇಡ್ಕರ್ ನಿಗಮ ವಿಜಯಪುರ ಜಿಲ್ಲಾ ವ್ಯವಸ್ಥಾಪಕರಾಗಿದ್ದ ರೇಣುಕಾ ಸಾತರ್ಲೆಯವರ ಪ್ರಕರಣವನ್ನು ಸಿಓಡಿ ತನಿಖೆಗೆ ಒಪ್ಪಿಸಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.ವಿಜಯಪುರ ಜಿಲ್ಲೆಯ ಡಾ ಬಿ.ಆರ್ ಅಂಬೇಡ್ಕರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾಗಿದ್ದ ಶ್ರೀಮತಿ ರೇಣುಕಾ ಸಾತರ್ಲೆ ಫಲಾನುಭವಿಗಳಿಗೆ ಹಂಚಲಾಗಿರುವ ಹಾಗೂ ಸರಕಾರದ ಹಣ ಪಾವತಿಯಲ್ಲಿ ಆಗಿರುವ ಅವ್ಯವಹಾರ ಮಾಡಿದ್ದು ಜಿಲ್ಲೆಯ ಇಂಡಿ ತಾಲೂಕಿನ ಗುಂದವಾನ ಗ್ರಾಮದ ಮಲ್ಲಿಕಾರ್ಜುನ ಶಂಕರ ಬಗಲಿ ಇವರಿಗೆ ಸೇರಿದ ರಿ.ಸ.ನಂ.…
ಕೊಲ್ಹಾರ: ತಾಲೂಕಿನ ಕುಪಕಡ್ಡಿ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ 8 ನೇ ವರ್ಗದ ಮಕ್ಕಳ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಮಗುವಿಗೆ ಬಹುಮಾನ ವಿತರಣೆ ಮಾಡಲು ಸರಕಾರಿ ಪ್ರೌಢಶಾಲೆ ಕುಪಕಡ್ಡಿಯ ನೂತನ SDMC ಸದಸ್ಯ ಚಂದ್ರಶೇಖರ ಅಂಬಿಗೇರ ( ಪೊಟೊಗ್ರಾಫರ) ರವರು ₹21000 ರೂಪಾಯಿಗಳನ್ನು ದೇಣಿಗೆಯಾಗಿ ನೀಡಿರುತ್ತಾರೆ. ಸದರಿ ಹಣವನ್ನು ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಠೇವಣಿ ಇಟ್ಟು ಅದರ ಬಡ್ಡಿ ಹಣದಲ್ಲಿ ಪ್ರತಿಭಾವಂತ ಮಕ್ಕಳಿಗೆ ಪ್ರತಿವರ್ಷ ಬಹುಮಾನ ವಿತರಿಸಲಾಗುವುದು ಎಂದು ಶಿಕ್ಷಕ ಸಿದ್ದು ಕೋಟ್ಯಾಳ ತಿಳಿಸಿದರು. ಗ್ರಾಮದಲ್ಲಿ ಛಾಯಾಗ್ರಾಹಕರಾಗಿ ಪುಟ್ಟ ಉದ್ಯೋಗ ಮಾಡುತ್ತಿದ್ದರೂ ಅವರ ಶಿಕ್ಷಣ ಪ್ರೇಮಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಂದ್ರಶೇಖರ ಅವರಿಗೆ ಗುರನಗೌಡ ಬಿರಾದಾರ, ಉದಯಕುಮಾರ ಹಳ್ಳಿ, ಮುರುಗೇಶ ಹಳ್ಳಿ, ಸಿದ್ದನಗೌಡ ಪಾಟೀಲ, ಸತ್ಯಪ್ಪ ಮದಗುಣಕಿ, ಮಹಾಂತಪ್ಪ ಇಂಡಿ, ಭೀಮಸಿ ಪಾಯಗೊಂಡ ಸೇರಿದಂತೆ ಶಾಲಾ ಸಿಬ್ಬಂದಿ, ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದರು.
ಉದಯರಶ್ಮಿ ದಿನಪತ್ರಿಕೆ ಇಂಡಿ: ಮತಕ್ಷೇತ್ರದಲ್ಲಿ ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ಕಂಡಿರುವ ಬಿಜೆಪಿ ಮುಖಂಡರು ಹಾಗೂ ಸಂಸದರು ಹತಾಶೆಗೊಂಡು ಒಂದೇ ರಾಷ್ಟ್ರೀಯ ಹೆದ್ದಾರಿಯನ್ನು ಪುನಃ ಪುನಃ ಉದ್ಘಾಟನೆ ಮಾಡಿ ಜಿಲ್ಲೆಯಲ್ಲಿ ನಗೆಪಾಟಲಿಗೆ ಈಡಾಗಿದ್ದಾರೆಂದು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಜಾವೀದ್ ಮೋಮಿನ್ ವ್ಯಂಗ್ಯವಾಡಿದರು.ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಸದರ ಬಗ್ಗೆ ಅತ್ಯಂತ ಗೌರವವಿದೆ. ಆದರೆ ಈಗಾಗಲೇ ಬೆಳಗಾವಿಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ರಾಷ್ಟ್ರೀಯ ಹೆದ್ದಾರಿಯನ್ನು ಉದ್ಘಾಟನೆಗೊಳಿಸಿದ್ದು, ಅದೇ ರಾಷ್ಟ್ರೀಯ ಹೆದ್ದಾರಿಯನ್ನು ಪುನಃ ಉದ್ಘಾಟನೆಗೊಳಿಸುವಂತಹ ಅತ್ಯಂತ ದುಸ್ಥಿತಿಗೆ ಬಿಜೆಪಿಗರು ಹಾಗೂ ಸಂಸದರು ತಲುಪಿದ್ದಾರೆ ಎಂದು ಕಿಡಿಕಾರಿದರು.ಇನ್ನು ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆ ಸರಕಾರಿ ಕಾರ್ಯಕ್ರಮದಂತೆ ಪ್ರತಿಬಿಂಬಿಸಿ, ಧ್ವನಿವರ್ಧಕ ಹಾಗೂ ನಗರದ ತುಂಬೆಲ್ಲಾ ಪಕ್ಷದ ಬ್ಯಾನರ್ ಅಳವಡಿಸಿ ಮೈತ್ರಿ ಪಕ್ಷದ ವೇದಿಕೆ ಕಾರ್ಯಕ್ರಮ ಮಾಡಿ ಶಾಸಕರ ಮೇಲೆ ಆರೋಪ ಮಾಡುತ್ತಾರೆ. ಇದು ಎಷ್ಟು ಸರಿ..? ಕಳೆದ 35 ವರ್ಷಗಳಿಂದ ಶಾಸಕ ಯಶವಂತರಾಯಗೌಡ ಪಾಟೀಲ ರಾಜಕಾರಣ ಮಾಡುತ್ತಿದ್ದು, ಮತಕ್ಷೇತ್ರದ ಹಾಗೂ ಜಿಲ್ಲೆಯ ಜನರಿಗೆ…
ಉದಯರಶ್ಮಿ ದಿನಪತ್ರಿಕೆ ತಿಕೋಟಾ: ತಾಲ್ಲೂಕಿನ ಸಿದ್ದಾಪುರ (ಕೆ) ಗ್ರಾಮದ ಸರಕಾರಿ ಪ್ರೌಢಶಾಲೆಯು ಸನ್ 2024-25 ನೇ ಸಾಲಿನ ಟಕ್ಕಳಕಿ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆಯನ್ನು ಮಾಡಿದೆ.ಗುಂಪು ಆಟಗಳಲ್ಲಿ ಬಾಲಕರ ಖೋಖೋ ಪ್ರಥಮ, ಬಾಲಕಿಯರ ಖೋಖೋ ಪ್ರಥಮ, ಬಾಲಕರ ಥ್ರೋಬಾಲ್ ದ್ವಿತೀಯ,ಬಾಲಕಿಯರ ವಾಲಿಬಾಲ್ ದ್ವಿತೀಯ, ಬಾಲಕರ 400 ಮೀ. ರಿಲೇ ಪ್ರಥಮ, ಬಾಲಕಿಯರ 400ಮೀ. ರಿಲೇ ಪ್ರಥಮ, ಬಾಲಕಿಯರ 100 ಮೀ ರಿಲೇ ಪ್ರಥಮ ಸ್ಥಾನ ಪಡೆದಿದ್ದಾರೆ.ವೈಯಕ್ತಿಕ ವಿಭಾಗದಲ್ಲಿ ಅಕ್ಷತಾ ವಾಡೇದ 400 ಮೀ. ಓಟ ಪ್ರಥಮ, ಅಶ್ವಿನಿ ರಾಠೋಡ 800 ಮೀ ಓಟ ದ್ವಿತೀಯ, ಶ್ರದ್ದಾ ಖೋತ 3000 ಮೀ ಓಟ ದ್ವಿತೀಯ, ಸಾಕ್ಷಿ ಅತ್ತಿಗೇರಿ 3 ಕೀಮಿ ನಡಿಗೆ ಪ್ರಥಮ, ಕೀರ್ತಿ ಪೂಜಾರಿ 3ಕೀಮಿ ನಡಿಗೆ ದ್ವಿತೀಯ, ಅಕ್ಷತಾ ವಾಡೇದ ಗುಂಡು ಎಸೆತ ದ್ವಿತೀಯ, ಅಶ್ವಿನಿ ರಾಠೋಡ ಗುಂಡು ಎಸೆತ ತೃತೀಯ, ಸಂಜನಾ ಖೋತ ಚಕ್ರ ಎಸೆತ ಪ್ರಥಮ, ಚನ್ನಮ್ಮ ಚೌಧರಿ…
ಆಲಮೇಲ ಕೋ-ಆಪರೇಟಿವ್ ಬ್ಯಾಂಕಿನ ಬೆಳ್ಳಿ ಮಹೋತ್ಸವ | ಶೇರುದಾರರಿಗೆ ಡಿವಡೆಂಟ್ ಜೊತೆಗೆ ಬೆಳ್ಳಿ ನಾಣ್ಯ ಉದಯರಶ್ಮಿ ದಿನಪತ್ರಿಕೆ ಆಲಮೇಲ: ಶೇರುದಾರರು ನಮ್ಮ ಉದ್ದೇಶಗಳ ಸ್ಪೂರ್ತಿಯ ಸೆಲೆ, ನಮ್ಮ ವ್ಯವಹಾರಗಳಿಗೆ ಅವರು ಹೊರಗಿನವರಲ್ಲ, ಅವರು ನಮ್ಮ ವ್ಯವಹಾರದ ಮುಖ್ಯ ಅಂಗ, ಇದರ ಜೊತೆಗೆ ಗ್ರಾಹಕರು ಕೂಡಾ ನಮ್ಮ ಬ್ಯಾಂಕಿನ ಜೀವಾಳ ಎಂದು ಆಲಮೇಲ ಕೋ-ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಶಿವುಕುಮಾರ ಗುಂದಗಿ ಹೇಳಿದರು.ಪಟ್ಟಣದಲ್ಲಿ ಸೆ.೧೫ ರವಿವಾರ ನಡೆಯಲ್ಲಿರುವ ಆಲಮೇಲ ಕೋ-ಆಪರೇಟಿವ್ ಬ್ಯಾಂಕಿನ ಬೆಳ್ಳಿ ಮಹೋತ್ಸವ ಹಾಗೂ ವಾರ್ಷಿಕ ವರದಿ ಹಾಗೂ ಅಢಾವೆ ಕುರಿತು ಬ್ಯಾಂಕಿನ್ ಸಭಾ ಭವನದಲ್ಲಿ ಗುರುವಾರ ಸಾಯಂಕಾಲ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು. ೧೯೯೭-೯೮ ರಲ್ಲಿ ಗದುಗಿನ ಜಗದ್ಗುರು ಲಿಂಗೈಕ್ಯ ಡಾ,ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರ ಅಮೃತಹಸ್ತದಿಂದ ಸ್ಥಾಪನೆಗೊಂಡ ಈ ಬ್ಯಾಂಕು ನಾವೆಲ್ಲರೂ ಇಂದು ಬೆಳ್ಳಿ ಮಹೋತ್ಸವದ ಸಂಭ್ರಮಕ್ಕೆ ಮುನ್ನಡಿ ಬರೆಯುತ್ತಿದ್ದೇವೆ. ಒಂದು ಸಂತೋಷದ ಸಂಗತಿ ಏನೆಂದರೆ ಪ್ರಾರಂಭದಲ್ಲಿ ೧೦.೨೨ ಲಕ್ಷ ರೂಪಾಯಿ ಶೇರು ಬಂಡವಾಳದೊಂದಿಗೆ ಪ್ರಾರಂಭವಾದ ನಮ್ಮ ಬ್ಯಾಂಕು ಇಂದು ೫೦ಕೋಟಿ…
ಕೇಂದ್ರ ಜಲ ಶಕ್ತಿ ತಂಡದ ನೋಡಲ್ ಅಧಿಕಾರಿ ವಿಕಾಸ ಡೋಗ್ರಾ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯಲ್ಲಿ ನೈಸರ್ಗಿಕ ಸಂಪನ್ಮೂಲ ಕಾಮಗಾರಿಗಳಾದ ಕೆರೆ, ನಾಲಾ, ಕಲ್ಯಾಣಿ ಮತ್ತು ಇನ್ನಿತರ ಕಾಮಗಾರಿಗಳನ್ನು ನಿಯಮಾನುಸಾರ ವೈಜ್ಞಾನಿಕವಾಗಿ ಅನುಷ್ಠಾನಗೊಳಿಸಬೇಕು ಎಂದು ಭಾರತ ಸರ್ಕಾರದ ಬೃಹತ್ ಕೈಗಾರಿಕಾ ಸಚಿವಾಲಯದ ನಿರ್ದೇಶಕರು ಹಾಗೂ ಕೇಂದ್ರ ಜಲ ಶಕ್ತಿ ತಂಡದ ಕೇಂದ್ರ ನೋಡಲ್ ಅಧಿಕಾರಿ ವಿಕಾಸ ಡೋಗ್ರಾ ಸೂಚನೆ ನೀಡಿದರು.ಶುಕ್ರವಾರ ತಾಂತ್ರಿಕ ಅಧಿಕಾರಿಗಳಾದ ಅನಾಮಿಕಾ ಐಚ್ ಅವರೊಂದಿಗೆ ವಿಜಯಪುರ ಜಿಲ್ಲೆಗೆ ಭೇಟಿ ನೀಡಿ, ವಿಜಯಪುರ ಜಿಲ್ಲೆಯ ಜಿಲ್ಲಾ ಪಂಚಾಯತಿ ಸಭಾ ಭವನದಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.ಈ ವೇಳೆ ಮಾತನಾಡಿದ ವಿಕಾಸ ಡೋಗ್ರಾ ಅವರು, ಜಲಾನಯನ ಕಾಮಗಾರಿಗಳನ್ನು ಕಾಲ-ಕಾಲಕ್ಕೆ ಜಿಯೋ ಟ್ಯಾಗ್ ಮಾಡುವುದು, ಜಲ ಶಕ್ತಿ ಅಭಿಯಾನದ ಅಡಿಯಲ್ಲಿ (ಜೆಎಸ್‌ಎ) ಅನುಷ್ಠಾನಗೊಳಿಸುವ ಕಾಮಗಾರಿಗಳನ್ನು ಹಾಗೂ ಮುಕ್ತಾಯಗೊಂಡ ಕಾಮಗಾರಿಗಳನ್ನು ಕಡ್ಡಾಯವಾಗಿ ಜಲ ಶಕ್ತಿ ಅಭಿಯಾನ (ಜೆಎಸ್‌ಎ)ದ ತಂತ್ರಾಂಶದಲ್ಲಿ ಜಿಯೋಟ್ಯಾಗ್ ಮಾಡಬೇಕು. ಜಲ ಸಂರಕ್ಷಣೆ, ಮಳೆ…
ವಿಜಯಪುರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಕ ಬಾಲಕರಿಗಾಗಿ ಹೊಯ್ಸಳ ಮತ್ತು ಬಾಲಕಿಯರಿಗಾಗಿ ಕೆಳದಿ ಚನ್ನಮ್ಮ ಪ್ರಶಸ್ತಿ ಯೋಜನೆಯಡಿ ನಾವೀನ್ಯತೆ, ತಾರ್ಕಿಕ ಸಾಧನೆಗಳು, ಕ್ರೀಡೆ, ಕಲೆ, ಸಾಂಸ್ಕೃತಿಕ ಮತ್ತು ಸಂಗೀತ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿದ ಮಕ್ಕಳಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ ನೀಡುವ ಸಲುವಾಗಿ ಅರ್ಜಿ ಆಹ್ವಾನಿಸಲಾಗಿದೆ.ಈ ಪ್ರಶಸ್ತಿಯು ತಲಾ ೧೦ ಸಾವಿರ ನಗದು ಬಹುಮಾನ ಒಳಗೊಂಡಿದ್ದು, ೫ ರಿಂದ ೧೮ ವರ್ಷದೊಳಗಿನ ಮಕ್ಕಳು ಅಗತ್ಯ ದಾಖಲೆ ಸಹಿತ ಸೆಪ್ಟೆಂಬರ್ ೧೫ ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಕರೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ರಾಜ್ಯ ಸರಕಾರ ಸೆ.15 ರವಿವಾರದಂದು ಬೀದರ ಜಿಲ್ಲೆಯಿಂದ ಚಾಮರಾಜನಗರ ಜಿಲ್ಲೆಯವರೆಗೆ ಬೃಹತ್ ಮಾನವ ಸರಪಳಿ ನಿರ್ಮಿಸುವ ಕಾರ್ಯಕ್ರಮ ಆಯೋಜಿಸಿದೆ. ಇದರ ಭಾಗವಾಗಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ವಿರೇಶನಗರದಿಂದ ನಿಡಗುಂದಿ ತಾಲೂಕಿನ ಆಲಮಟ್ಟಿಯವರೆಗೆ ಒಟ್ಟು 62 ಕಿ. ಮೀ ವರೆಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಕೋರಿದ್ದಾರೆ.ನಮ್ಮ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಡಾ. ಬಿ. ಆರ್. ಅಂಬೇಡ್ಕರ ಅವರ ಸಂವಿಧಾನದ ಆಶಯಗಳ ಕುರಿತು ಜನಜಾಗೃತಿ ಮೂಡಿಸುವ ದಿಕ್ಕಿನಲ್ಲಿ ಸಾಕಷ್ಟು ಕೆಲಸ ಕಾರ್ಯಗಳನ್ನು ಮಾಡುತ್ತಿದೆ. ಈಗಾಗಲೇ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಶಾಲಾ ಕಾಲೇಜುಗಳಲ್ಲಿ ಸಂವಿಧಾನದ ಪ್ರಸ್ತಾವನೆ ಓದುವುದನ್ನು ಕಡ್ಡಾಯಗೊಳಿಸಿದೆ. ಸಂವಿಧಾನ ಜಾಗೃತಿ ಜಾಥಾದ ಮೂಲಕ…
ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಡಿಸಿ ಟಿ.ಭೂಬಾಲನ್ ಕರೆ ವಿಜಯಪುರ: ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಸರ್ಕಾರ ಹಮ್ಮಿಕೊಂಡಿರುವ ಮಾನವ ಸರಪಳಿ ಕಾರ್ಯಕ್ರಮದ ಅಗತ್ಯ ಸಿದ್ಧತೆಗಳನ್ನು ಕೈಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚಿಸಿದರು.ಅವರು ಶುಕ್ರವಾರ ಕೇಸ್ವಾನ ಸಭಾಂಗಣದಲ್ಲಿ ವಿವಿಧ ತಾಲೂಕಿನ ತಹಶೀಲ್ದಾರ್, ತಾಲೂಕ ಪಂಚಾಯತ್ ಅಧಿಕಾರಿ, ಪೊಲೀಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ, ಪುರಸಭೆಯ ಅಧಿಕಾರಿ ಸಿಬ್ಬಂದಿಗಳೊಂದಿಗೆ ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಮಾತನಾಡಿದರು.ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ವಿರೇಶನಗರದಿಂದ ಆಲಮಟ್ಟಿಯವರೆಗೆ ನಡೆಯುವ ಮಾನವ ಸರಪಳಿ ರಚನೆಯ ಮಾರ್ಗದುದ್ದಕ್ಕೂ ಕಿಮೀ ಗುರುತಿಸುವ ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು. ಈ ಕಾರ್ಯಕ್ರಮಕ್ಕಾಗಿ ನಿಯೋಜಿಸಿದ ಅಧಿಕಾರಿ ಸಿಬ್ಬಂದಿಗಳು, ಮಾನವ ಸರಪಳಿ ಮಾರ್ಗದ ಪರಿಶೀಲನೆ ನಡೆಸಬೇಕು. ಶಾಲಾ ಕಾಲೇಜು, ವಸತಿ ನಿಲಯ, ಗ್ರಾಮಗಳ, ಪಟ್ಟಣಗಳ ವಿವರ ಖಚಿತ ಪಡಿಸಿಕೊಂಡು, ಪ್ರತಿ ಒಂದು ಕೀ.ಮಿಗೆ ಯೋಜನೆ ಸಿದ್ಧಪಡಿಸಿ ಮೈಕ್ರೋ ಪ್ಲಾನಿಂಗ್ ಮಾಡಿಕೊಂಡು ಅಚ್ಚುಕಟ್ಟಾಗಿ ಯಾವುದೇ ಸಮಸ್ಯೆ ಬಾರದಂತೆ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.ಮಾನವ ಸರಪಳಿ…
ಆಮ್ ಆದ್ಮಿ ಪಾರ್ಟಿ ವಿಜಯಪುರ ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ್ ಆಗ್ರಹ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ‘ಸತ್ಯಮೇವ ಜಯತೆ’ ಎನ್ನುವುದು ಮತ್ತೆ ಸಾಬೀತಾಗಿದೆ. ಅರವಿಂದ್ ಕೇಜ್ರಿವಾಲ್ ಅವರ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದ್ದು, ಬಿಜೆಪಿಯ ನಿರಂಕುಶ ಆಡಳಿತ, ಸರ್ವಾಧಿಕಾರಿ ವರ್ತನೆಗೆ ಸುಪ್ರೀಂಕೋರ್ಟ್ ಛೀಮಾರಿ ಹಾಕಿದೆ. ಸಿಬಿಐ ಬಳಸಿಕೊಂಡು ಸುಳ್ಳು ಆರೋಪ ಮಾಡಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದ್ದ ಕೇಂದ್ರ ಗೃಹಸಚಿವ ಅಮಿತ್ ಶಾ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಆಮ್ ಆದ್ಮಿ ಪಾರ್ಟಿ ವಿಜಯಪುರ ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ್ ಆಗ್ರಹಿಸಿದ್ದಾರೆ.ಆಮ್ ಆದ್ಮಿ ಪಾರ್ಟಿ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದ ಹಿನ್ನಲೆಯಲ್ಲಿ ಸುಕ್ರವಾರ ನಗರದ ಪಕ್ಷದ ಕಚೇರಿಯಲ್ಲಿ ಸಂಭ್ರಮಾಚರಣೆ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಭೋಗೇಶ್ ಸೋಲಾಪುರ್ ಅವರು, ಸುಪ್ರೀಂ ಕೋರ್ಟ್‌ನಲ್ಲಿ ಸತ್ಯಕ್ಕೆ ಗೆಲುವು ಸಿಕ್ಕಿದೆ. ಪ್ರಾಮಾಣಿಕತೆಗೆ ಎಂದೂ ಸೋಲಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ ಎಂದರು.ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಸಿಬಿಐ ಸಂಸ್ಥೆಯನ್ನು ಪಂಜರದ…
