ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ತಾಲ್ಲೂಕಿನ ಸಿದ್ದಾಪುರ (ಕೆ) ಗ್ರಾಮದ ಸರಕಾರಿ ಪ್ರೌಢಶಾಲೆಯು ಸನ್ 2024-25 ನೇ ಸಾಲಿನ ಟಕ್ಕಳಕಿ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆಯನ್ನು ಮಾಡಿದೆ.
ಗುಂಪು ಆಟಗಳಲ್ಲಿ ಬಾಲಕರ ಖೋಖೋ ಪ್ರಥಮ, ಬಾಲಕಿಯರ ಖೋಖೋ ಪ್ರಥಮ, ಬಾಲಕರ ಥ್ರೋಬಾಲ್ ದ್ವಿತೀಯ,ಬಾಲಕಿಯರ ವಾಲಿಬಾಲ್ ದ್ವಿತೀಯ, ಬಾಲಕರ 400 ಮೀ. ರಿಲೇ ಪ್ರಥಮ, ಬಾಲಕಿಯರ 400ಮೀ. ರಿಲೇ ಪ್ರಥಮ, ಬಾಲಕಿಯರ 100 ಮೀ ರಿಲೇ ಪ್ರಥಮ ಸ್ಥಾನ ಪಡೆದಿದ್ದಾರೆ.
ವೈಯಕ್ತಿಕ ವಿಭಾಗದಲ್ಲಿ ಅಕ್ಷತಾ ವಾಡೇದ 400 ಮೀ. ಓಟ ಪ್ರಥಮ, ಅಶ್ವಿನಿ ರಾಠೋಡ 800 ಮೀ ಓಟ ದ್ವಿತೀಯ, ಶ್ರದ್ದಾ ಖೋತ 3000 ಮೀ ಓಟ ದ್ವಿತೀಯ, ಸಾಕ್ಷಿ ಅತ್ತಿಗೇರಿ 3 ಕೀಮಿ ನಡಿಗೆ ಪ್ರಥಮ, ಕೀರ್ತಿ ಪೂಜಾರಿ 3ಕೀಮಿ ನಡಿಗೆ ದ್ವಿತೀಯ, ಅಕ್ಷತಾ ವಾಡೇದ ಗುಂಡು ಎಸೆತ ದ್ವಿತೀಯ, ಅಶ್ವಿನಿ ರಾಠೋಡ ಗುಂಡು ಎಸೆತ ತೃತೀಯ, ಸಂಜನಾ ಖೋತ ಚಕ್ರ ಎಸೆತ ಪ್ರಥಮ, ಚನ್ನಮ್ಮ ಚೌಧರಿ ಜಾವಲಿನ್ ಎಸೆತ ಪ್ರಥಮ, ಕೀರ್ತಿ ಪೂಜಾರಿ ಜಾವಲಿನ್ ಎಸೆತ ದ್ವಿತೀಯ, ಸಾಕ್ಷಿ ಅತ್ತಿಗೇರಿ ಉದ್ದ ಜಿಗಿತ ಪ್ರಥಮ, ಮೀನಾಕ್ಷಿ ಪೂಜಾರಿ ಉದ್ದ ಜಿಗಿತ ತೃತೀಯ, ಸಂಜನಾ ಖೋತ ತ್ರಿವಿಧ ಜಿಗಿತ ದ್ವಿತೀಯ, ಮೀನಾಕ್ಷಿ ಪೂಜಾರಿ ತ್ರಿವಿಧ ಜಿಗಿತ ತೃತೀಯ,ನಂದೇಶ ಮಠ ತ್ರಿವಿಧ ಜಿಗಿತ ತೃತೀಯ, ಸಾಕ್ಷಿ ಅತ್ತಿಗೇರಿ ಎತ್ತರ ಜಿಗಿತ ಪ್ರಥಮ, ಸಾನಿಕಾ ಖೋತ ಎತ್ತರ ಜಿಗಿತ ತೃತೀಯ ಸ್ಥಾನ ಪಡೆದು ತಾಲ್ಲೂಕು ಮಟ್ಟಕ್ಕೆ ಅಯ್ಕೆಯಾಗಿದ್ದಾರೆ.
ಮೂರು ಕೀ.ಮಿ ನಡಿಗೆ ಪ್ರಥಮ, ಉದ್ದ ಜಿಗಿತ ಪ್ರಥಮ, ಎತ್ತರ ಜಿಗಿತ ಪ್ರಥಮ ಸ್ಥಾನ ಪಡೆದು ಸಾಕ್ಷಿ ಅತ್ತಿಗೇರಿ ವೈಯುಕ್ತಿಕ ವೀರಾಗ್ರಣಿ ಪ್ರಶಸ್ತಿ ಪಡೆದಿದ್ದಾಳೆ.
ವಿಧ್ಯಾರ್ಥಿಗಳಿಗೆ ಹಾಗು ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕ ಬಿ.ಎನ್.ಹಿರೇಮಠ ಅವರಿಗೆ ಮುಖ್ಯೋಪಾಧ್ಯಾಯರು ಎಸ್.ಎಂ.ಅವಟಿ, ಎಸ್.ಬಿರಾದಾರ, ಬಿ.ಎಸ್. ಭೂಶೆಟ್ಟಿ, ಜಿ.ಬಿ.ಗಳವೆ, ಎಚ್. ಎಸ್. ಕಡಗಂಚಿ, ಜೆ.ಸಿ.ಹಿರೇಮಠ, ಎಚ್.ಎಚ್ ವಾಲಿಕಾರ, ಆರ್. ಎಸ್. ಟಕ್ಕಳಕಿ, ಇಮ್ತಿಯಾಜ್ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

