Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದ ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಸಂಪತ್ತಕುಮಾರ ಬಳೂಲಗಿಡದ ರಾಜೀ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿದರು.ಮುದ್ದೇಬಿಹಾಳ: ತಾಲೂಕು ಕಾನೂನು ಸೇವಾ ಸಮಿತಿಯ ವತಿಯಿಂದ ಪಟ್ಟಣದ ನ್ಯಾಯಾಲಯಗಳ ಸಂಕೀರ್ಣದಲ್ಲಿ ಶನಿವಾರ ರಾಷ್ಟ್ರೀಯ ಲೋಕ ಅದಾಲತನ್ನು ಏರ್ಪಡಿಸಲಾಗಿತ್ತು.ಸದರಿ ಲೋಕ ಅದಾಲತ್ ನಲ್ಲಿ ಎರಡು ನ್ಯಾಯಾಲಯಗಳಿಗೆ ಸಂಬAಧಿಸಿದAತೆ ನ್ಯಾಯಾಲಯದಲ್ಲಿ ಒಟ್ಟು ೬೨೯೧ ಬಾಕಿ ಇರುವ ಪ್ರಕರಣಗಳ ಪೈಕಿ ೧೮೬೬ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಅದರಲ್ಲಿ ಅಪರಾಧ ಪ್ರಕರಣಗಳು, ಎಂವಿಸಿ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು, ಮೆಂಟೇನೆನ್ಸ್ ಪ್ರಕರಣಗಳು, ಪಾಲು ವಾಟ್ನಿ ದಾವೆಗಳು, ಎಲ್.ಎ.ಸಿ ಇಪಿ ಪ್ರಕರಣಗಳು, ಎಮ್.ವಿ.ಸಿ, ಇಪಿ ಪ್ರಕರಣಗಳು, ಅಪರಾಧ ದಂಡ ಪ್ರಕರಣಗಳು, ಹಾಗೂ ಅಬಕಾರಿ ಇಲಾಖೆಯ ಪ್ರಕರಣಗಳು ಹೀಗೆ ಒಟ್ಟು ೧೨೬೫ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ.ಅಲ್ಲದೇ ಪೂರ್ವದಾವೆ ಪ್ರಕರಣಗಳಲ್ಲಿ, ಟ್ರಾಫಿಕ್ ಚಲನ್ ಪ್ರಕರಣಗಳು, ಕಂದಾಯ ಇಲಾಖೆಯ ಕಂದಾಯ ಅದಾಲತ್ ಪ್ರಕರಣಗಳು, ಹಾಗೂ ಬ್ಯಾಂಕಿನ ಪ್ರಕರಣಗಳು ಸೇರಿ ಒಟ್ಟು ೪೫೦೧…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಸಾರ್ವಜನಿಕರಲ್ಲಿ ಸ್ವಚ್ಛತೆಯ ಪಾಲುದಾರಿಕೆ ಅರಿವು ಮೂಡಿಸುವ ಅಂಗವಾಗಿ ಸ್ವಭಾವ ಸ್ವಚ್ಛತೆ ಮತ್ತು ಸಂಸ್ಕಾರ ಸ್ವಚ್ಛತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್.ಎಸ್.ಬಾಗಲಕೋಟ ಹೇಳಿದರು.ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಶನಿವಾರ ಸ್ವಚ್ಛ ಭಾರತ ಮಿಷನ್ ಯೋಜನೆಯ ಸ್ವಚ್ಛತೆಯೇ ಸೇವೆ ಕಾರ್ಯಕ್ರಮದ ಅಡಿಯಲ್ಲಿ ಪಟ್ಟಣ ಪಂಚಾಯಿತಿ ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಪೌರಕಾರ್ಮಿಕರೊಂದಿಗೆ ಸ್ವಚ್ಛತಾ ಕಾರ್ಯ ನೆರವೇರಿಸಿ ಮಾತನಾಡಿದರು.ಸ್ವಚ್ಛ ಭಾರತ ಮಿಷನ್ ನಿರ್ದೇಶನದಂತೆ ಪಟ್ಟಣದಾದ್ಯಂತ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುತ್ತಿದೆ. ಪಟ್ಟಣದಲ್ಲಿ ಈಗಾಗಲೇ ಮನೆ ಮನೆ ಕಸ ಸಂಗ್ರಹಣೆ ಮಾಡಿ ಜಾಗೃತಿ ಮೂಡಿಸಲಾಗುತ್ತಿದೆ. ಈ ಕಾರ್ಯದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು, ಯುವಕ, ಸ್ತ್ರೀಶಕ್ತಿ ಸಂಘಗಳು ಕೈಜೋಡಿಸಬೇಕು ಎಂದರು.ನಂತರ ಪೌರಕಾರ್ಮಿಕರೊಂದಿಗೆ ಸೇರಿ ಸ್ವಚ್ಛತಾ ಹೀ ಸೇವಾ ಎಂಬ ರಂಗೋಲಿ ಬಿಡಿಸಿ ಮಹಾತ್ಮ ಗಾಂಧೀಜಿಯವರ ಸ್ವಚ್ಛತಾ ಕನಸನ್ನು ಎಲ್ಲರೂ ಒಂದಾಗಿ ನನಸು ಮಾಡೋಣ ಎಂದು ಕರೆ ನೀಡಿದರು.ಪಟ್ಟಣ ಪಂಚಾಯಿತಿಯ ೧೭ ಹಾಗೂ ೩ ನಾಮನಿರ್ದೇಶಿತ ಸದಸ್ಯರಲ್ಲಿ ಕೇವಲ ೮ನೇ ವಾರ್ಡಿನ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರ ಜಿಲ್ಲೆಗೆ ಕೇಂದ್ರ ಜಲ ಶಕ್ತಿ ತಂಡದ ನೂಡಲ್ ಅಧಿಕಾರಿಗಳಾದ ವಿಕಾಸ್ ಡೋಗ್ರಾ ನಿರ್ದೇಶಕರು, ಬೃಹತ್ ಕೈಗಾರಿಕೆ ಸಚಿವಾಲಯ ಮತ್ತು ಕೇಂದ್ರ ಜಲ ಶಕ್ತಿ ನೋಡಲ್ ಅಧಿಕಾರಿಗಳು, ಅನಾಮಿಕ ಐಚ್ ತಾಂತ್ರಿಕ ಅಧಿಕಾರಿಗಳು ಬೆಂಗಳೂರು ಇವರು ವಿಜಯಪುರ ತಾಲೂಕು ಹಾಗೂ ಇಂಡಿ ತಾಲೂಕುಗಳ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.ವಿಜಯಪುರ ತಾಲೂಕಿನ ಭೂತನಾಳ ಗ್ರಾಮದ ಅರಣ್ಯ ಇಲಾಖೆಯ ನರ್ಸರಿಗೆ ಭೇಟಿ ನೀಡಿ ಸಸಿಗಳ ಪಾಲನೆ ಪೋಷಣೆಗಳ ಬಗ್ಗೆ ಮಾಹಿತಿ ಪಡೆದ ಅವರು, ಸ್ವತಃ ತಾವೇ ಸಸಿಗಳಿಗೆ ನೀರುಣಿಸಿದರು. ತದನಂತರ ತಿಡಗುಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ನಿರ್ಮಿಸಿರುವ ಪ್ರತಿ ಮನೆಗಳಿಗೆ ನಲ್ಲಿಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆಯಾಗುತ್ತಿರುವ ಕುರಿತು ಪರಿಶೀಲನೆ ನಡೆಸಿದರು.ಡೋಮನಾಳ ಗ್ರಾಮದ ಗುಡ್ಡದ ಅರಣ್ಯ ವಲಯಕ್ಕೆ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು. ತೋಟಗಾರಿಕೆ ಇಲಾಖೆಯಡಿ ಅನುಷ್ಠಾನಗೊಂಡಿರುವ ದ್ರಾಕ್ಷಿ ಬೆಳೆ ವೀಕ್ಷಿಸಿದರು. ನಂತರ ಇಂಡಿ ತಾಲೂಕಿನ ಬಸನಾಳ…
ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಪ್ರಜಾಪ್ರಭುತ್ವ ವನ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸೆ.೧೫ರಂದು ಜಿಲ್ಲೆಯಾದ್ಯಂತ ವಿವಿಧ ಕ್ಷೇತ್ರದ ೨೮.೫೦ ಹೆಕ್ಟೇರ್ ಪ್ರದೇಶದಲ್ಲಿ ೩೦,೦೦೦ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ತಿಳಿಸಿದ್ದಾರೆ.ಪ್ರಾದೇಶಿಕ ಅರಣ್ಯ ವಿಭಾಗದಿಂದ ಸಸಿಗಳನ್ನು ನೆಡಲು ಜಿಲ್ಲೆಯ ವಿವಿಧ ಸ್ಥಳಗಳನ್ನು ಆಯ್ಕೆ ಮಾಡಲಾಗಿದ್ದು, ಆಯಾ ಕ್ಷೇತ್ರಗಳಲ್ಲಿ ವಿವಿಧ ವರ್ಗಗಳ ಪ್ರತಿನಿಧಿಗಳಿಂದ ಉದ್ಘಾಟನೆಗೊಳಿಸಿ ಆಯಾ ಕ್ಷೇತ್ರಗಳಿಗೆ ಅರ್ಪಣೆ ಮಾಡಲಾಗುವುದು.ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಮದಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ೧೦ ಹೆಕ್ಟೇರ್ ಪ್ರದೇಶದಲ್ಲಿ ೬೦೦೦ ಸಸಿಗಳನ್ನು ನಾಗರಿಕರಿಂದ ನೆಡುವ ಮೂಲಕ ನಾಗರಿಕರಿಗೆ ಈ ಕ್ಷೇತ್ರವನ್ನು ಅರ್ಪಣೆ ಮಾಡಲಾಗುವುದು.ಚಡಚಣ ತಾಲೂಕಿನ ಬಳ್ಳೊಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ೫ ಹೆಕ್ಟೇರ್ ಪ್ರದೇಶದಲ್ಲಿ ೨೫೦೦ ಸಸಿಗಳನ್ನು ಪತ್ರಿಕಾ ಮಾಧ್ಯಮದವರಿಂದ ನೆಡುವ ಮೂಲಕ ಪತ್ರಿಕಾ ಮಾಧ್ಯಮದವರಿಗೆ ಈ ಕ್ಷೇತ್ರವನ್ನು ಅರ್ಪಣೆ ಮಾಡಲಾಗುವುದು.ಸಿಂದಗಿ ತಾಲೂಕಿನ ಸಿಂದಗಿ ಪಟ್ಟಣ ಪ್ರದೇಶ ವ್ಯಾಪ್ತಿಯಲ್ಲಿ ೪…
ಕ್ರೀಡಾಪಟುಗಳ ಅಮೋಘ ಆಟೋಟಗಳ ಪ್ರದರ್ಶನ | ೨೯ ಸ್ಪರ್ಧೆಗಳಲ್ಲಿ ವೀರೋಚಿತ ಗೆಲುವು | ಮಾಳಪ್ಪಗೆ ಟ್ರಾಕ್ ಆ್ಯಂಡ್ ಫೀಲ್ಡ್ ಚಾಂಪಿಯನ್ ಪಟ್ಟ ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಪ್ರಸಕ್ತ ೨೦೨೪-೨೫ ನೇ ಸಾಲಿನ ನಿಡಗುಂದಿ “ಎ” ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಆಲಮಟ್ಟಿ ಎಂ.ಎಚ್.ಎಂ ಪ್ರೌಢಶಾಲೆಯ ಕ್ರೀಡಾಪಟುಗಳು ಹಲವಾರು ಸ್ಪರ್ಧೆಗಳಲ್ಲಿ ವೀರೋಚಿತ ಅಮೋಘ ಪ್ರದರ್ಶನ ನೀಡುವ ಮೂಲಕ ಪ್ರಶಸ್ತಿ ಪದಕಗಳ ಸರಮಾಲೆ ಬಾಚಿಕೊಂಡು ಕ್ರೀಡಾಪ್ರೇಮಿಗಳ ಗಮನ ಸೆಳೆದಿದ್ದಾರೆ. ನಿಡಗುಂದಿ ಬನಶಂಕರಿ ಪಬ್ಲಿಕ್ ಸ್ಕೂಲ್ ಮತ್ತು ಪಿಯುಸಿ ಕಾಲೇಜು ಆಶ್ರಯದಲ್ಲಿ ಜರುಗಿದ ಈ ಕ್ರೀಡಾಕೂಟದಲ್ಲಿ ಇಲ್ಲಿನ ಎಂ.ಎಚ್.ಎಂ.ಪ್ರೌಢಶಾಲೆಯ ಮಕ್ಕಳು ಬರೋಬ್ಬರಿ ೨೯ ಸ್ಪರ್ಧೆಗಳಲ್ಲಿ ಗೆಲುವು ಸಾಧಿಸಿ ಮಿಂಚಿದ್ದಾರೆ. ಪರಿಣಾಮ ಎಂ.ಎಚ್.ಎಂ. ಪ್ರೌಢಶಾಲೆಗೆ ಸಮಗ್ರ ವೀರಾಗ್ರಣಿ ಪ್ರಶಸ್ತಿ ಲಭಿಸಿದೆ. ಜೊತೆಗೆ ಈ ಶಾಲೆಯ ಮಾಳಪ್ಪ ಇಲ್ಯಾಳ ೧೦೦ ಮೀ, ೪೦೦ ಮೀ ಹಾಗೂ ಉದ್ದ ಜಿಗಿತದ ಸ್ಪರ್ಧೆಗಳಲ್ಲಿ ಜಯ ಸಾಧಿಸಿ ಸಮಗ್ರ ವೀರಾಗ್ರಣಿ ಸ್ಪಧಾ೯ಳು ಪ್ರಶಸ್ತಿ ಪಡೆದು ಮಿನುಗಿದ್ದಾನೆ. ಎಂ.ಎಚ್.ಎಂ.ಶಾಲಾ ಕ್ರೀಡಾಪಟುಗಳು ಬಾಲಕ, ಬಾಲಕಿಯರ…
ಲೇಖಕರು- ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿ – ಗದಗ ಉದಯರಶ್ಮಿ ದಿನಪತ್ರಿಕೆ ಒಂದು ದೇಶದ ಆಡಳಿತವು ಆ ದೇಶದ ಎಲ್ಲಾ ನಾಗರಿಕರ ಸಮಾನ ಸಹಭಾಗಿತ್ವದೊಂದಿಗೆ ಸಾಗುವುದನ್ನು ನಾವು ‘ಪ್ರಜಾಪ್ರಭುತ್ವ’ ಎಂದು ಕರೆಯಬಹುದು. ಅಮೆರಿಕಾದ ಹಿಂದಿನ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ ಅವರು ಹೇಳಿದಂತೆ ‘ಜನರಿಂದ ಜನರಿಗಾಗಿ ಜನರಿಗೋಸ್ಕರ ಇರುವ ಸರ್ಕಾರವೇ ಪ್ರಜಾಪ್ರಭುತ್ವ’.’ ಲೋಕವಾಣಿಯೇ ದೇವವಾಣಿ’ ಎಂಬಂತಹ ಪರಿಕಲ್ಪನೆಯನ್ನು ಹೊಂದಿರುವ ಪ್ರಜಾಪ್ರಭುತ್ವದಲ್ಲಿ ಆಳುವವರು ಮತ್ತು ಆಳಲ್ಪಡುವವರು ಪ್ರಜೆಗಳೇ. ಯಾವುದೇ ಜಾತಿ, ಮತ, ಪಂಥ, ಬಡವ, ಶ್ರೀಮಂತ ಎಂಬ ಭೇದವಿಲ್ಲದೆ ಸರ್ವರಿಗೂ ಸಮಾನವಾದ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಕೊಡ ಮಾಡುವ ವ್ಯವಸ್ಥೆಯನ್ನು ಪ್ರಜಾಪ್ರಭುತ್ವ ಎಂದು ಕರೆಯುತ್ತೇವೆ.ಈ ಮೊದಲು ರಾಜನ ಆಳ್ವಿಕೆಯನ್ನು, ಏಕ ಚಕ್ರಾಧಿಪತ್ಯವನ್ನು ಒಳಗೊಂಡಿದ್ದ ವಿಶ್ವದ ಬಹುತೇಕ ದೇಶಗಳಲ್ಲಿ ಪ್ರಜಾಪ್ರಭುತ್ವದ ಪರಿಕಲ್ಪನೆಯೇ ಇರಲಿಲ್ಲ. 16ನೇ ಶತಮಾನದ ಅಂತ್ಯದ ಸುಮಾರಿಗೆ ಅರಸೊತ್ತಿಗೆಗಳು ತಮ್ಮ ಬಲವನ್ನು ಕಳೆದುಕೊಳ್ಳುತ್ತಾ ಬಂದಂತೆ ಪ್ರಜಾಪ್ರಭುತ್ವದ ಕುರಿತಾದ ಯೋಜನೆಗಳು ರಾಜಕೀಯ ತಂತ್ರಜ್ಞರ, ಜ್ಞಾನಿಗಳ ಮನದಲ್ಲಿ ರೂಪುಗೊಳ್ಳಲಾರಂಭಿಸಿದವು.ಪ್ರಜಾಪ್ರಭುತ್ವದಲ್ಲಿ ಎರಡು ವಿಧಗಳಿದ್ದು ಒಂದು ನೇರ ಪ್ರಜಾಪ್ರಭುತ್ವವಾದರೆ ಮತ್ತೊಂದು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇಲ್ಲಿನ ಗೀತಾಂಜಲಿ ಮಾದರಿ ಶಾಲೆಯಲ್ಲಿ ಸೆ.೧೩ ರಂದು ಹಿಂದಿ ದಿವಸ್ ಆಚರಣೆ ಮಾಡಲಾಯಿತು. ಹಿಂದಿ ರಾಷ್ಟ್ರ ಭಾಷೆಯಾಗಿದ್ದು ಬೇರೆ ರಾಜ್ಯದ ಜನರೊಂದಿಗೆ ಸಂಪರ್ಕ ಸಾಧಿಸಬೇಕಾದರೆ ಅಲ್ಲಿನ ಸಂಸ್ಕೃತಿ, ಪರಿಸರ, ಸಂಪ್ರದಾಯ ತಿಳಿದುಕೊಳ್ಳಬೇಕಾದರೆ ರಾಷ್ಟ್ರೀಯ ಭಾಷೆಯಾದ ಹಿಂದಿ ಕಲಿಯುವದು ಬಹುಳ ಅವಶ್ಯಕತೆಯಿದೆ ಎಂದು ಶ್ರೀಮತಿ ಸುನಂದಾ ಕೊಂಡಗುಳಿ ಮುಖ್ಯೋಪಾಧ್ಯಾಯರು ಹೇಳಿದರು.ವಿದ್ಯಾರ್ಥಿಗಳು ಹಿಂದಿ ದಿವಸ್ ಕುರಿತು ನಾಟಕ ಪ್ರದರ್ಶಿಸಿದರಲ್ಲದೆ, ತುಳಸಿದಾಸರ ದೂಹೆ ಕುರಿತು ಮಾತನಾಡಿದರು.ಹಿಂದಿ ಭಾಷೆ ಶಿಕ್ಷಕಿ ಶ್ರೀಮತಿ ಗಾಯತ್ರಿ ಅಯೂಬ ಹಾಗೂ ಶ್ರೀಮತಿ ವಿಜಯಾ ಆಕಳವಾಡಿ ಗುರುಮಾತೆಯರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.ಎಲ್ಲ ಶಿಕ್ಷಕ ಸಿಬ್ಬಂದಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ನಿರೂಪಿಸಿದರು. ಚಿತ್ರಕಲಾ ಶಿಕ್ಷಕ ಬಿ.ಎಸ್.ಪಾಟೀಲ ವಂದಿಸಿದರು.
ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ಕೇಂದ್ರ ಸರಕಾರ ವಕ್ಫ್ ತಿದ್ದುಪಡಿ ಮಸೂದೆ -2024ರ ಮೂಲಕ ಅಲ್ಪಸಂಖ್ಯಾತ ಸಮುದಾಯದ ಆರ್ಥಿಕ ಸಂಪನ್ಮೂಲಕ್ಕೆ ಕೊಡಲಿ ಪೆಟ್ಟು ಕೊಡಲು ಹೊರಟಿದ್ದು, ಕೂಡಲೇ ಕೇಂದ್ರ ಸರಕಾರ ತಿದ್ದುಪಡಿಯನ್ನು ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸಿ ಅಂಜುಮನ್ ಬೈತುಲ್ ಮಾಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಹಾಗೂ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆ ವತಿಯಿಂದ ಕೆಂಭಾವಿ ಉಪತಹಸೀಲ್ದಾರ್ ಅವರ ಮೂಲಕ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷರು ಮತ್ತು ಇತರ ಸದ್ಯಸರು ಸಂಸತ್ ಭವನ ನವದೆಹಲಿ ಇವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.ಅಂಜುಮನ್ ಬೈತುಲ್ ಮಾಲ್ ಉಪಾಧ್ಯಕ್ಷರಾದ ಅಬ್ದುಲ್ ರಜಾಕ್ ಸಾಸನೂರ್ ಹಾಗೂ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆಯ ಅಧ್ಯಕ್ಷ ಬಂದೇನವಾಜ್ ನಾಲತವಾಡ ಜಂಟಿಯಾಗಿ ಮನವಿ ಸಲ್ಲಿಸಿ ಮಾತನಾಡಿದ ಅವರು, ವಕ್ಫ್ ಮಂಡಳಿ ಸುಧಾರಣೆಯ ನೆಪದಲ್ಲಿ ವಕ್ಫ್ ವ್ಯವಸ್ಥೆಯ ಪ್ರಯೋಜನಗಳನ್ನು ಕಸಿದುಕೊಳ್ಳುವ ಹುನ್ನಾರದೊಂದಿಗೆ ಮುಸ್ಲಿಂ ಸಮುದಾಯದ ಆಸ್ತಿಪಾಸ್ತಿಗೆ ಸರಿಪಡಿಸಲಾಗದ ಹಾನಿಯನ್ನುಂಟುಮಾಡಲು ಬಿಜೆಪಿ ಪಕ್ಷ ಬಯಸಿದೆ. ಇದು ಬಿಜೆಪಿ ಪ್ರಣಾಳಿಕೆ 2019ಕ್ಕೆ ವಿರುದ್ಧವಾಗಿದೆ. ವಕ್ಫ್‌ಗಳು ಜಾತ್ಯತೀತ ಮೌಲ್ಯಗಳಿಗೆ…
ಸಾರ್ವಜನಿಕ ಹಿತಾಸಕ್ತಿಯು ಮಂಡಳಿಗಿಂತ ಮೇಲಿರಬಾರದು | ಸುಪ್ರೀಂ ಕೋರ್ಟ್ ಅಭಿಮತ ನವದೆಹಲಿ: ಕೇಂದ್ರೀಯ ತನಿಖಾ ದಳವು (ಸಿಬಿಐ) ‘ಪಂಜರದ ಗಿಳಿ’ ಎಂಬ ಕಲ್ಪನೆ ಹೋಗಲಾಡಿಸುವುದು ಅನಿವಾರ್ಯ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.ಸಿಬಿಐ ಅನ್ನು “ಪಂಜರದ ಗಿಳಿ” ಎಂದು 2013 ರಲ್ಲಿ ಸುಪ್ರೀಂ ಕೋರ್ಟ್ ಕುಟುಕಿದ್ದ ಪ್ರಸಂಗ ಶುಕ್ರವಾರ ಮರುಕಳಿಸಿತು.ಶುಕ್ರವಾರ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಪೀಠವು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ‘ಅಬಕಾರಿ ನೀತಿ ಹಗರಣ’ಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ದಾಖಲಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡಿತು.ಪ್ರಕರಣದ ಬಗ್ಗೆ ಪ್ರತ್ಯೇಕ ತೀರ್ಪು ಬರೆದ ಜಸ್ಟಿಸ್ ಭುಯಾನ್, ಕಾನೂನಿನ ನಿಯಮ, ಗ್ರಹಿಕೆ ವಿಷಯಗಳ ಆಡಳಿತದ ಕ್ರಿಯಾತ್ಮಕ ಪ್ರಜಾಪ್ರಭುತ್ವದಲ್ಲಿ ಸೀಸರ್ ಅವರ ಪತ್ನಿಯಂತೆ ತನಿಖಾ ಸಂಸ್ಥೆಯು ಮಂಡಳಿಗಿಂತ ಮೇಲಿರಬೇಕು ಎಂದು ಸಲಹೆ ನೀಡಿದರು.“ಈ ನ್ಯಾಯಾಲಯವು ಸಿಬಿಐ ಅನ್ನು ಪಂಜರದ ಗಿಳಿಗೆ ಹೋಲಿಸಿ ದೂಷಿಸಿತು. ಸಿಬಿಐ ಪಂಜರದ ಗಿಳಿ ಎಂಬ ಕಲ್ಪನೆಯನ್ನು ಹೋಗಲಾಡಿಸುವುದು ಅನಿವಾರ್ಯವಾಗಿದೆ. ಬದಲಿಗೆ,…
ಕೊಲ್ಹಾರ: ದಲಿತರ ಮುಸ್ಲಿಂರ ಎಸ್ ಟಿ ಹಾಗೂ ಸಿಖ್ ಸಮುದಾಯದ ಮತಗಳನ್ನು ಕಾಂಗ್ರೆಸ್ ಪಕ್ಷವು ತನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎನ್ನುವ ನಿಜಬಣ್ಣ ದೇಶದ ಜನತೆ ತಿಳಿಯಬೇಕಾಗಿದೆ ಎಂದು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಹೇಳಿದರು.ಕಾಂಗ್ರೇಸ್ ಪಕ್ಷದ ನೇತಾರ ವಿರೋಧ ಪಕ್ಷದ ನಾಯಕ ರಾಹುಲ್ ಗಾಂದಿಯವರು ಅಮೇರಿಕಾ ದೇಶದಲ್ಲಿ ನೀಡಿರುವ ಹೇಳಿಕೆಯನ್ನು ಖಂಡಿಸಿ ಕೊಲ್ಹಾರ ಪಟ್ಟಣದಲ್ಲಿ ನಡೆದ ಪ್ರತಿಭಟನೆಯ ನೇತ್ರತ್ವ ವಹಿಸಿಕೊಂಡು ಅವರು ಮಾತನಾಡುತ್ತಿದ್ದರು.ದೇಶದಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದರೆ ಎಸ್ಸಿ-ಎಸ್ಟಿ ಮೀಸಲಾತಿ ತೆಗೆದುಹಾಕುತ್ತೇವೆ ಎಂದು ಹೇಳಿಕೆ ಕೊಟ್ಟಿರುವುದು ಹಾಸ್ಯಾಸ್ಪದ ಎಂದರು.ಪಟ್ಟಣ ಪಂಚಾಯತ ಸದ್ಯಸ್ಯರಾದ ಶ್ರಿಶೈಲ ಅಥಣಿ, ಅಪ್ಪಸಿ ಮಟ್ಟಿಹಾಳ, ಬಾಬು ಭಜಂತ್ರಿ, ಪ್ರಶಾಂತ ಪವಾರ, ಸಿದ್ರಾಮಪ್ಪ ಕಾಖಂಡಕಿ, ಡೊಂಗ್ರಿ ಸಾಳುಂಕೆ, ಚಿದಾನಂದ ದಳವಾಯಿ ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
