ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇಲ್ಲಿನ ಗೀತಾಂಜಲಿ ಮಾದರಿ ಶಾಲೆಯಲ್ಲಿ ಸೆ.೧೩ ರಂದು ಹಿಂದಿ ದಿವಸ್ ಆಚರಣೆ ಮಾಡಲಾಯಿತು. ಹಿಂದಿ ರಾಷ್ಟ್ರ ಭಾಷೆಯಾಗಿದ್ದು ಬೇರೆ ರಾಜ್ಯದ ಜನರೊಂದಿಗೆ ಸಂಪರ್ಕ ಸಾಧಿಸಬೇಕಾದರೆ ಅಲ್ಲಿನ ಸಂಸ್ಕೃತಿ, ಪರಿಸರ, ಸಂಪ್ರದಾಯ ತಿಳಿದುಕೊಳ್ಳಬೇಕಾದರೆ ರಾಷ್ಟ್ರೀಯ ಭಾಷೆಯಾದ ಹಿಂದಿ ಕಲಿಯುವದು ಬಹುಳ ಅವಶ್ಯಕತೆಯಿದೆ ಎಂದು ಶ್ರೀಮತಿ ಸುನಂದಾ ಕೊಂಡಗುಳಿ ಮುಖ್ಯೋಪಾಧ್ಯಾಯರು ಹೇಳಿದರು.
ವಿದ್ಯಾರ್ಥಿಗಳು ಹಿಂದಿ ದಿವಸ್ ಕುರಿತು ನಾಟಕ ಪ್ರದರ್ಶಿಸಿದರಲ್ಲದೆ, ತುಳಸಿದಾಸರ ದೂಹೆ ಕುರಿತು ಮಾತನಾಡಿದರು.
ಹಿಂದಿ ಭಾಷೆ ಶಿಕ್ಷಕಿ ಶ್ರೀಮತಿ ಗಾಯತ್ರಿ ಅಯೂಬ ಹಾಗೂ ಶ್ರೀಮತಿ ವಿಜಯಾ ಆಕಳವಾಡಿ ಗುರುಮಾತೆಯರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.
ಎಲ್ಲ ಶಿಕ್ಷಕ ಸಿಬ್ಬಂದಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ನಿರೂಪಿಸಿದರು. ಚಿತ್ರಕಲಾ ಶಿಕ್ಷಕ ಬಿ.ಎಸ್.ಪಾಟೀಲ ವಂದಿಸಿದರು.

