ಕೊಲ್ಹಾರ: ದಲಿತರ ಮುಸ್ಲಿಂರ ಎಸ್ ಟಿ ಹಾಗೂ ಸಿಖ್ ಸಮುದಾಯದ ಮತಗಳನ್ನು ಕಾಂಗ್ರೆಸ್ ಪಕ್ಷವು ತನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎನ್ನುವ ನಿಜಬಣ್ಣ ದೇಶದ ಜನತೆ ತಿಳಿಯಬೇಕಾಗಿದೆ ಎಂದು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಹೇಳಿದರು.
ಕಾಂಗ್ರೇಸ್ ಪಕ್ಷದ ನೇತಾರ ವಿರೋಧ ಪಕ್ಷದ ನಾಯಕ ರಾಹುಲ್ ಗಾಂದಿಯವರು ಅಮೇರಿಕಾ ದೇಶದಲ್ಲಿ ನೀಡಿರುವ ಹೇಳಿಕೆಯನ್ನು ಖಂಡಿಸಿ ಕೊಲ್ಹಾರ ಪಟ್ಟಣದಲ್ಲಿ ನಡೆದ ಪ್ರತಿಭಟನೆಯ ನೇತ್ರತ್ವ ವಹಿಸಿಕೊಂಡು ಅವರು ಮಾತನಾಡುತ್ತಿದ್ದರು.
ದೇಶದಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದರೆ ಎಸ್ಸಿ-ಎಸ್ಟಿ ಮೀಸಲಾತಿ ತೆಗೆದುಹಾಕುತ್ತೇವೆ ಎಂದು ಹೇಳಿಕೆ ಕೊಟ್ಟಿರುವುದು ಹಾಸ್ಯಾಸ್ಪದ ಎಂದರು.
ಪಟ್ಟಣ ಪಂಚಾಯತ ಸದ್ಯಸ್ಯರಾದ ಶ್ರಿಶೈಲ ಅಥಣಿ, ಅಪ್ಪಸಿ ಮಟ್ಟಿಹಾಳ, ಬಾಬು ಭಜಂತ್ರಿ, ಪ್ರಶಾಂತ ಪವಾರ, ಸಿದ್ರಾಮಪ್ಪ ಕಾಖಂಡಕಿ, ಡೊಂಗ್ರಿ ಸಾಳುಂಕೆ, ಚಿದಾನಂದ ದಳವಾಯಿ ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

