ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪಟ್ಟಣದ ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಸಂಪತ್ತಕುಮಾರ ಬಳೂಲಗಿಡದ ರಾಜೀ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿದರು.
ಮುದ್ದೇಬಿಹಾಳ: ತಾಲೂಕು ಕಾನೂನು ಸೇವಾ ಸಮಿತಿಯ ವತಿಯಿಂದ ಪಟ್ಟಣದ ನ್ಯಾಯಾಲಯಗಳ ಸಂಕೀರ್ಣದಲ್ಲಿ ಶನಿವಾರ ರಾಷ್ಟ್ರೀಯ ಲೋಕ ಅದಾಲತನ್ನು ಏರ್ಪಡಿಸಲಾಗಿತ್ತು.
ಸದರಿ ಲೋಕ ಅದಾಲತ್ ನಲ್ಲಿ ಎರಡು ನ್ಯಾಯಾಲಯಗಳಿಗೆ ಸಂಬAಧಿಸಿದAತೆ ನ್ಯಾಯಾಲಯದಲ್ಲಿ ಒಟ್ಟು ೬೨೯೧ ಬಾಕಿ ಇರುವ ಪ್ರಕರಣಗಳ ಪೈಕಿ ೧೮೬೬ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಅದರಲ್ಲಿ ಅಪರಾಧ ಪ್ರಕರಣಗಳು, ಎಂವಿಸಿ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು, ಮೆಂಟೇನೆನ್ಸ್ ಪ್ರಕರಣಗಳು, ಪಾಲು ವಾಟ್ನಿ ದಾವೆಗಳು, ಎಲ್.ಎ.ಸಿ ಇಪಿ ಪ್ರಕರಣಗಳು, ಎಮ್.ವಿ.ಸಿ, ಇಪಿ ಪ್ರಕರಣಗಳು, ಅಪರಾಧ ದಂಡ ಪ್ರಕರಣಗಳು, ಹಾಗೂ ಅಬಕಾರಿ ಇಲಾಖೆಯ ಪ್ರಕರಣಗಳು ಹೀಗೆ ಒಟ್ಟು ೧೨೬೫ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ.
ಅಲ್ಲದೇ ಪೂರ್ವದಾವೆ ಪ್ರಕರಣಗಳಲ್ಲಿ, ಟ್ರಾಫಿಕ್ ಚಲನ್ ಪ್ರಕರಣಗಳು, ಕಂದಾಯ ಇಲಾಖೆಯ ಕಂದಾಯ ಅದಾಲತ್ ಪ್ರಕರಣಗಳು, ಹಾಗೂ ಬ್ಯಾಂಕಿನ ಪ್ರಕರಣಗಳು ಸೇರಿ ಒಟ್ಟು ೪೫೦೧ ಪ್ರಕರಣಗಳಲ್ಲಿ ೨೯೯೦ ಪ್ರಕರಣಗಳನ್ನು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರೂ ಹಾಗೂ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ರವೀಂದ್ರಕುಮಾರ ಕಟ್ಟಿಮನಿ ಮತ್ತು ಸಮಿತಿಯ ಸದಸ್ಯ ಕಾರ್ಯದರ್ಶಿಗಳೂ ಹಾಗೂ ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಸಂಪತಕುಮಾರ ಬಳೂಲಗಿಡದ ಇವರುಗಳು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಿದ್ದಾರೆ.
ನ್ಯಾಯಾಂಗ ಸಂಧಾನಕಾರರಾಗಿ ಬಿ.ಪಿ.ಮ್ಯಾಗೇರಿ ಹಾಗೂ ಏನ್.ಬಿ.ಮುದ್ನಾಳ ವಕೀಲರುಗಳು, ಸಹಾಯಕ ಸರ್ಕಾರಿ ಅಭಿಯೋಜಕ ಬಸವರಾಜ ಆಹೇರಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ, ತಾಲೂಕಾ ಕಾನೂನು ಸೇವಾ ಸಮಿತಿಯ ಆಡಳಿತ ಸಹಾಯಕ ಅರವಿಂದ ಕುಂಬಾರ, ಶಿರಸ್ತೇದಾರರುಗಳಾದ ಎಸ್.ಎಸ್.ಚಕ್ರಮನಿ, ಸುರೇಶ ಬಳಗಾನೂರ. ಪ್ರ.ದ.ಸ. ಎ.ಎಸ್.ಮುಜಾವರ, ಸಿಬ್ಬಂದಿಗಳಾದ ಆರ್.ಎಸ್.ಕಮ್ಮಾರ, ಬಸವರಾಜ ಬೂದಿಹಾಳ, ನರ್ಮದಾ ಮರೋಳ, ಗೀತಾ ರಾಂಪೂರ, ರೇಣುಕಾ ಜಾನಮಟ್ಟಿ, ಜ್ಯೋತಿ ಹೆಬ್ಬಾಳ, ನಾಗಮ್ಮ ಹೂಗಾರ, ಮಂಜುಳಾ ಹೊಸಮನಿ, ಎನ್.ಬಿ.ಮದಿಹಳ್ಳಿ, ಆರ್.ಎಸ್.ಮನಗೂಳಿ, ಇಸಾಕ್ ಒಂಟಿ, ಮಹಾಂತೇಶ್ ಹಚರೆಡ್ಡಿ, ಹಿರಿಯ ನ್ಯಾಯವಾದಿಗಳಾದ ವಿ.ಎಂ.ನಾಗಠಾಣ, ಎಸ್.ಆರ್.ಜೋಶಿ, ಜೆ.ಎ.ಚಿನಿವಾರ, ಎಸ್.ಆರ್.ಸಜ್ಜನ, ಏನ್.ಜಿ.ಕುಲಕರ್ಣಿ, ಎನ್.ಆರ್.ಮೊಕಾಶಿ, ಎಮ್.ಆರ್.ಪಾಟೀಲ. ಆಯ್.ಎಸ್.ಹಗಟಗಿ. ನ್ಯಾಯವಾದಿಗಳಾದ ಚೇತನ ಶಿವಶಿಂಪಿ, ಬಸಣ್ಣ ಮುಂದಿನಮನಿ, ಎಮ್.ಎ.ಲಿಂಗಸೂರ, ಎಸ್.ಎಂ.ಕಿಣಗಿ, ಬಸವರಾಜ ಚಿನಿವಾರ, ಎಲ್.ಎಸ್.ಮೇಟಿ, ಎಸ್.ಆರ್.ಜೋಗಿ, ಎಸ್,ಎಚ್.ಚಳ್ಳಗಿ, ಆರ್.ಎಸ್.ತುಪ್ಪದ, ಪಿ.ಎನ್.ಬಿರಾದಾರ, ಎಂ.ಬಿ.ಬಿರಾದಾರ, ಪಿ.ಎ.ಹಿರೇಮಠ, ಪಿ.ಎ.ಹಿರೇಮಠ, ಮಾರುತಿ ಭೋವಿ, ಸಂತೋಷ ನಾಯಕ, ಶ್ರೀದೇವಿ ರಾಜೂರ, ರಶ್ಮಿ ಕುಲಕರ್ಣಿ, ಪಿ.ಬಿ.ಗೌಡರ ಸೇರಿದಂತೆ ಮತ್ತೀತರರು ಇದ್ದರು.
ಮೂರೇ ತಿಂಗಳಲ್ಲಿ ಇತ್ಯರ್ಥವಾದ ವ್ಯಾಜ್ಯ
ಇಲ್ಲಿನ ಹಿರಿಯ ಶ್ರೇಣಿ ನ್ಯಾಯಾಲದಲ್ಲಿ ಸಿವಿಲ್ ದಾವೆಯೊಂದು ದಾಖಲಾಗಿ ಮೂರೇ ತಿಂಗಳಲ್ಲಿ ಇತ್ಯರ್ಥಗೊಂಡಿದ್ದು ಲೋಕ್ ಅದಾಲತ್ ಸಹಾಯಕಾರಿಯಾಗಿದೆ.
ಸೋಮಪ್ಪ ಮಾದರ ಎಂಬುವವರು ತಮ್ಮ ೨೧ ಸಂಬಂಧಿಗಳ ಮೇಲೆ ಪಾಲು ವಾಟ್ನಿ ದಾವೆ ಹಾಕಿದ್ದರು. ದಾವೆಗಳು ಹಲವಾರು ವರ್ಷಗಳ ಕಾಲ ಅಲೆದರೂ ಬೇಗನೆ ಇತ್ಯರ್ಥವಾಗದ ಪರೀಸ್ಥಿಯಲ್ಲಿ ನಮ್ಮ ಪ್ರಕರಣ ದಾಖಲಾಗಿ ಮೂರೇ ತಿಂಗಳಲ್ಲಿ ಇತ್ಯರ್ಥಗೊಂಡಿದ್ದು ಲೋಕ್ ಅದಾಲತ್ ಸಹಕಾರಿಯಾಗಿದೆ ಎಂದು ಪಕ್ಷಗಾರರು ಸಂತಸ ವ್ಯಕ್ತಪಡಿಸಿದರು.

