Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ದೇವರ ದರ್ಶನಕ್ಕೆಂದು ಹೋದವರು ಮನೆಗೆ ಮರಳಿ ಬಾರದೇ ಬಾರದ ಲೋಕಕ್ಕೆ ತೆರಳಿದ ಘಟನೆ ಹುನಗುಂದ ತಾಲೂಕಿನ ಧನ್ನೂರ ಗ್ರಾಮದ ಬಳಿ ನಡೆದಿದೆ.ಮೃತ ದುರ್ದೈವಿಗಳನ್ನು ಮುದ್ದೇಬಿಹಾಳ ಪಟ್ಟಣದ ಮಹಾಂತೇಶ ನಗರದ ನಿವಾಸಿ ರಾಮಣ್ಣ ನಾಯಕಮಕ್ಕಳ(೫೭), ತಾಲೂಕಿನ ಬಿದರಕುಂದಿ ಗ್ರಾಮದ ಲಕ್ಷ್ಮಣ ವಡ್ಡರ(೫೫), ಬೈಲಪ್ಪ ಬಿರಾದಾರ(೪೬), ಮತ್ತು ಗುಡ್ನಾಳ ಗ್ರಾಮದ ಮಹಮ್ಮದ ರಫೀಕ(೨೩) ಎಂದು ಗುರುತಿಸಲಾಗಿದೆ.ಮೃತರು ಹೊಸಪೇಟೆಯ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಕಾರಿನ ಮೂಲಕ ತೆರಳಿ ದೇವರ ದರ್ಶನ ಪಡೆದು ಮರಳುವಾಗ ಹುನಗುಂದ ತಾಲೂಕಿನ ಧನ್ನೂರ ಗ್ರಾಮದ ಟೋಲ್ ಬಳಿ ಮುದ್ದೇಬಿಹಾಳ ಕಡೆಯಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ಗಂಭೀರ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ನಾಲ್ವರೂ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.ವಾಹನಗಳೆರಡೂ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನುಜ್ಜಾಗಿದ್ದು, ಲಾರಿ ರಸ್ತೆ ಬಿಟ್ಟು ಪಕ್ಕದ ಜಮೀನೊಂದರಲ್ಲಿ ಬಿದ್ದಿದೆ. ಮಧ್ಯರಾತ್ರಿ ೨:೧೦ ಕ್ಕೆ ಧನ್ನೂರು ಬಳಿ ಇರುವ ಟೂಲ್ ನಿಂದ ಲಾರಿ ಹೊರಟಿತ್ತು ಎಂದು ತಿಳಿದು ಬಂದಿದೆ. ಘಟನೆಯ ಬಗ್ಗೆ ಸಂಪೂರ್ಣ…

Read More

ಉದಯರಶ್ಮಿ ದಿನಪತ್ರಿಕೆ ತಿಕೋಟಾ: ಲಿ.ಬಸವಂತರಾಯ ಮಹಾರಾಜರು ಹಾಗು ಲಿಂ.ಬಸವರಾಜ ಮೇಲುಪ್ಪರಗಿಮಠ ನಿರಂತರ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣಕ್ಕಾಗಿ ದುಡಿದು ತಮ್ಮ ಜೀವನವನ್ನು ಸಾರ್ಥಕ ಮಾಡಿಕೊಂಡ ಮಹಾನ ಸಾಧಕರು ಎಂದು ಹಿರಿಯ ಪ್ರವಚನಕಾರ ಬಾಬುರಾವ ಮಹಾರಾಜ ಅಭಿಪ್ರಾಯ ವ್ಯಕ್ತಪಡಿಸಿದರು.ತಾಲ್ಲೂಕಿನ ಹೊನವಾಡ ಗ್ರಾಮದ ವಿಠ್ಠಲ ಮಂದಿರದಲ್ಲಿ ಬುಧವಾರ ಲಿಂಗೈಕ್ಯ ಬಸವಂತರಾಯ ಮಹಾರಾಜರ ಹಾಗು ಲಿಂ.ಬಸವರಾಜ ಮೇಲುಪ್ಪರಗಿಮಠ ಅವರ ದತ್ತಿ ನಿಧಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡುತ್ತಾ, ಗ್ರಾಮದ ಈ ಇಬ್ಬರು ಸಾಧಕರಿಂದ ಶೈಕ್ಷಣಿಕ ಹಾಗು ಆಧ್ಯಾತ್ಮಿಕ ಚಿಂತನೆಗಳಿಂದ ಪ್ರಗತಿ ಹೊಂದಲು ಸಾಧ್ಯವಾಗಿದೆ ಎಂದರು.ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ಕನ್ನಡ ಸಾಹಿತ್ಯ ಪರಿಷತ್ತಿಗೆ ಶತಮಾನದ ಇತಿಹಾಸವಿದೆ. ಕನ್ನಡ ನಾಡು ನುಡಿಯು ಅತ್ಯಂತ ಶ್ರೀಮಂತವಾಗಿದೆ. ಸಾಹಿತ್ಯದಿಂದ ಸಾಮಾಜಿಕ ಮೌಲ್ಯ ಕಾಪಾಡಲು ಸಾಧ್ಯವಾಗಿದೆ ಎಂದರು.ಉಪನ್ಯಾಸಕ ಡಿ.ಬಿ.ಡೇಮ್ರಿ ಮಾತನಾಡಿ, ವಚನ ಸಾಹಿತ್ಯ ಹಾಗೂ ಜಾನಪದ ಸಾಹಿತ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದೇವೆ. ಗ್ರಾಮೀಣ ಸಮಾಜದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರಾಧ್ಯಾನತೆ ನೀಡಿ ಹೊನವಾಡದಲ್ಲಿ ಪ್ರೌಢ…

Read More

ಗ್ರಾಮ ಆಡಳಿತ ಅಧಿಕಾರಿಗಳ ಸಂಘದಿಂದ ತಿಕೋಟಾ ತಹಶೀಲ್ದಾರ ಕಛೇರಿ ಎದುರು ಪ್ರತಿಭಟನೆ ಉದಯರಶ್ಮಿ ದಿನಪತ್ರಿಕೆ ತಿಕೋಟಾ: ತಾಲ್ಲೂಕಾ ಗ್ರಾಮ ಆಡಳಿತ ಅಧಿಕಾರಿಗಳ ಸಂಘ ವತಿಯಿಂದ ಗುರುವಾರ ತಹಶೀಲ್ದಾರ ಕಛೇರಿ ಎದುರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರವನ್ನು ಹಮ್ಮಿಕೊಳ್ಳಲಾಯಿತು.ಸಂಘದ ತಾಲ್ಲೂಕ ಅಧ್ಯಕ್ಷ ಪ್ರಭು ಸಾತಿಹಾಳ ಮಾತನಾಡಿ, ಗ್ರಾಮ ಆಡಳಿತ ಅಧಿಕಾರಿಗಳಿಗೆ ಮೂಲಭೂತ ಸೌಲಭ್ಯ, ಸೇವಾ ಸೌಲಭ್ಯ ಮತ್ತು ಮೊಬೈಲ್ ಅಪ್ಲಿಕೇಷನ್ ಗಳಲ್ಲಿ ನಿರಂತರವಾಗಿ ಕೆಲಸ ಮಾಡುವಂತೆ ಹೇರಲಾಗುತ್ತಿರುವ ಒತ್ತಡವನ್ನು ನಿಲ್ಲಿಸಲು ಇಂದು ಮುಷ್ಕರ ಕೈಗೊಂಡಿದ್ದು, ಅನಿರ್ದಿಷ್ಟಾವಧಿ ವರೆಗೆ ಕೆಲಸ ಸ್ಥಗಿತಗೊಳಿಸಿದ್ದೇವೆ.ಇಲಾಖೆಯ ಹದಿನೇಳಕ್ಕಿಂತ ಹೆಚ್ಚು ಆ್ಯಪ್ ಗಳಲ್ಲಿ ಕೆಲಸ ಮಾಡಬೇಕಾಗಿರುವದರಿಂದ ಮೊಬೈಲ್, ಲ್ಯಾಪಟಾಪ್, ನೆಟ್ ಸೌಲಭ್ಯ ಒದಗಿಸಬೇಕು. ಇವುಗಳ ಒತ್ತಡದಿಂದ ಗ್ರಾಮ ಅಧಿಕಾರಿಗಳ ಸಾವು ಸಂಭವಿಸುತ್ತಿವೆ. ನಮ್ಮ ಬೇಡಿಕೆ ಈಡೇರುವವರೆಗೂ ಆಧಾರ ಸೀಡ್, ಲ್ಯಾಂಡ್ ಬಿಟ್, ಬಗೈರ ಹುಕುಂ, ನಮೂನೆ ಒಂದರಿಂದ ಐದು ವೆಬ್ ಅರ್ಜಿ, ಪೌತಿ ಅಂದೋಲನ ಆ್ಯಪ್ ಕಾರ್ಯ ಮಾಡುವದಿಲ್ಲ. ಅಂತರ ಜಿಲ್ಲಾ ವರ್ಗಾವಣೆ ಸಮಸ್ಯೆ ಇತ್ಯರ್ಥ ಸೇರಿದಂತೆ…

Read More

ವಿಶ್ರಾಂತ ದೈಹಿಕ ಶಿಕ್ಷಕ ಅನಂತಪೂರ ದಂಪತಿಗೆ ಹೃದಯಸ್ಪರ್ಶಿ ಸನ್ಮಾನ ಉದಯರಶ್ಮಿ ದಿನಪತ್ರಿಕೆ ಚಿಕ್ಕಪಡಸಲಗಿ: ಸಮೀಪದ ಚಿಕ್ಕಪಡಸಲಗಿ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಹಲ ದಶಕಗಳ ಕಾಲ ಅಮೋಘ ಸೇವೆ ಸಲ್ಲಿಸಿ ನಿವೃತ್ತರಾದ ಹಿನ್ನೆಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜ ಅನಂತಪೂರ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಲಕ್ಷ್ಮೀ ಅನಂತಪೂರ ದಂಪತಿಗಳಿಗೆ ಹೃದಯಸ್ಪರ್ಶಿ ಸನ್ಮಾನಿಸಿ ಗೌರವಿಸಲಾಯಿತು.ಶಾಲೆಯ ಹಳೆ ವಿದ್ಯಾರ್ಥಿಗಳಾದ ಚಿಕ್ಕಪಡಸಲಗಿ ಮಡಿವಾಳ ಮಾಚಿದೇವ ಕೈಗಾರಿಕಾ ತರಬೇತಿ ಕೇಂದ್ರದ ಶಿಕ್ಷಕಿ ಶ್ರೀಮತಿ ಶಾಂತಾ ರೋಣಿಹಾಳ ಹಾಗೂ ಅವರ ಸಹೋದರಿ ಶ್ರೀಮತಿ ಕಲಾವತಿ ಕರ್ಜಗಿ, ಪುತ್ರ ತರುಣ, ಮೊಮ್ಮಗಳು ದಿಯಾ ಸೇರಿದಂತೆ ಅಪ್ತರು ಜಮಖಂಡಿ ನಿವಾಸಕ್ಕೆ ತೆರಳಿ ಅನಂತಪೂರ ದಂಪತಿಗಳಿಗೆ ಆತ್ಮೀಯವಾಗಿ ಶಾಲು ಹೊದಿಸಿ ಸತ್ಕರಿಸಿ ಗೌರವ ನಮನ ಸಲ್ಲಿಸಿದರು.ಈ ವೇಳೆ ಮಾತನಾಡಿದ ಶ್ರೀಮತಿ ಶಾಂತಾ ರೋಣಿಹಾಳ, ತಾವು ಅನಂತಪೂರ ಗುರುಗಳ ಕೈಯಲ್ಲಿ ಕಲಿತು ಅಕ್ಷರ ಜ್ಞಾನ ಪಡೆದಿರುವುದು ನನ್ನ ಸೌಭಾಗ್ಯ. ಅವರ ಶಿಸ್ತುಬದ್ಧ ಚಾಕಚಕ್ಕತೆಯ ನಡೆನುಡಿಗಳಿಂದ ಪ್ರೇರಿತಳಾಗಿ ಆದರ್ಶಪ್ರಾಯವಾದ ಗುಣಸ್ವಭಾವ ಮೈಗೂಡಿಸಿಕೊಂಡಿರುವೆ. ಅನಂತಪೂರ ಗುರುಗಳು…

Read More

ಲೇಖಕರು-ಜಯಶ್ರೀ.ಜೆ. ಅಬ್ಬಿಗೇರಿ ಉಪನ್ಯಾಸಕರು, ಬೆಳಗಾವಿ, ಮೊ.೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ‘ಯಾರೊಂದಿಗೆ ಹೇಗೆ ಮಾತನಾಡಬೇಕು ಅಂತ ತಿಳಿಯದೇ ಎಷ್ಟೋ ಸಲ ಅಪಾರ್ಥಗಳು ಸೃಷ್ಟಿಯಾಗಿ ಬಿಡುತ್ತವೆ. ಮಾತನಾಡಿದರೆ ರಗಳೆ ಅಂತ ಮಾತನಾಡಲೇಬೇಕಾದ ಸಂದರ್ಭ ಬಂದಾಗಲೂ ಮೌನ ವಹಿಸುತ್ತೇನೆ. ಆಗಲೂ ಬೈಸಿಕೊಳ್ಳುತ್ತೇನೆ. ಮಾತನಾಡದೇ ಇದ್ದುದಕ್ಕೆ. ಬಾಯಿ ಬಿಟ್ಟರೂ ತೊಂದರೆ ಮುಚ್ಚಿಕೊಂಡಿದ್ದರೂ ತೊಂದರೆ ಯಾವಾಗ, ಎಲ್ಲಿ, ಎಷ್ಟು, ಹೇಗೆ ಮಾತನಾಡುವುದು ತಿಳಿಯದೇ ತಲೆ ಗಿರಗಿಟ್ಲೆ ಆಡಿಸುತ್ತದೆ. ಅಪರಿಚಿತರನ್ನು ಕಂಡಾಗಲಂತೂ ಮೈ ಮೇಲೆ ಮುಳ್ಳು ಬಿದ್ದವರ ತರ ಆಡ್ತಿನಿ. ಗೆಳೆಯರೊಂದಿಗೆ ಕೊಂಚ ಸಲುಗೆಯಿಂದ ಮಾತನಾಡಿದರೆ ನಿನ್ನ ಮಾತು ಮನಸ್ಸಿಗೆ ನೋವು ತಂತು ಅಂತಾರೆ. ಮೌನ ವಹಿಸಿದರೆ ಆತ್ಮೀಯತೆಯೇ ಇಲ್ಲ ಅಂತ ಬೈತಾರೆ. ಅಬ್ಬಬ್ಬಾ! ಎಷ್ಟೊಂದು ಕಠಿಣ ಈ ಸಂವಹನ. ನಾವಾಡುವ ಮಾತುಗಳು ಕೇವಲ ನಮ್ಮ ಮನದ ಅಭಿಪ್ರಾಯಗಳನ್ನು ಸೂಚಿಸುತ್ತವೆ ಅಂತ ತಿಳಿದಿದ್ದೆ. ಹಲವು ಬಾರಿ ನಾನು ಬಳಸುವ ಪದಗಳು ನಿಜ ಸಂದೇಶವನ್ನು ತಲುಪಿಸದೇ ತಪ್ಪು ಕಲ್ಪನೆಯನ್ನು ಮೂಡಿಸುತ್ತವೆ. ವಿಸ್ಮಯಕಾರಿ ಪರಿಣಾಮ ಬೀರುತ್ತವೆ. ಅದಕ್ಕೆ ಬಲ್ಲವರು ಹೇಳಿದ್ದು ಸರಿಯಾಗಿಯೇ ಇದೆ.…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಈ ಸಂಸ್ಥೆಯ ಶ್ರೀ ಸಂಗನ ಬಸವ ಫಾರ್ಮಸಿ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಎನ್ ಎಸ್ ಎಸ್ ಘಟಕ ಮತ್ತು ರಾಜ್ಯ ಏಡ್ಸ್ ನಿಯಂತ್ರಣ ಮಂಡಳಿ ವತಿಯಿಂದ ನಗರದದಲ್ಲಿ ಮೂರು ಕಡೆಗಳಲ್ಲಿ ಜನಜಾಗೃತಿ ಅಭಿಯಾನದ ಅಂಗವಾಗಿ ಬೀದಿ ನಾಟಕ ಪ್ರದರ್ಶನ ನಡೆಯಿತು.ಮಂಗಳವಾರ ಶ್ರೀ ಸಿದ್ಧೇಶ್ವರ ದೇವಸ್ಥಾನ, ಗಾಂಧಿ ಚೌಕ ಮತ್ತು ಕೇಂದ್ರ ಬಸ್ ನಿಲ್ದಾಣದ ಎದುರು ಫಾರ್ಮಸಿ ಕಾಲೇಜಿನ ಡಿ. ಫಾರ್ಮ್ ವಿದ್ಯಾರ್ಥಿಗಳು ಏಡ್ಸ್ ರೋಗ ತಡೆಗಟ್ಟುವ ವಿಧಾನಗಳು ಮತ್ತು ಮುಂಜಾಗೃತೆ ಕ್ರಮಗಳ ಕುರಿತು ಬೀದಿ ನಾಟಕ ಪ್ರದರ್ಶನದ ಮೂಲಕ ಜನಜಾಗೃತಿ ಮೂಡಿಸಿದರು.ಈ ಸಂದರ್ಭದಲ್ಲಿ ವಿಜಯಪುರದ ಜಿಲ್ಲಾ ಏಡ್ಸ್ ಪ್ರೆವೆನ್ಶನ್ ಅಂಡ್ ಕಂಟ್ರೋಲ್ ಯುನಿಟ್ ಸಿಬ್ಬಂದಿ ಬಾಬುರಾವ ತಳವಾರ, ರವಿ ಕಿತ್ತೂರ ಮತ್ತು ಅರ್ಚನಾ ವಲಕೋಟಿ, ಬಿ.ಎಲ್.ಡಿ.ಈ ಫಾರ್ಮಸಿ ಕಾಲೇಜಿನ ಸಿಬ್ಬಂದಿ ಪ್ರಶಾಂತ್ ಜೋರಾಪೂರ, ಸಂದೀಪ್ ಉಮರಾಣಿ, ಅಜಯ ಶಹಾಪುರ, ಶಿವರಾಜ್ ಕಾಪಸೆ, ಡಾ. ಮಲ್ಲಿನಾಥ, ಡಾ. ಚೇತನಕುಮಾರ ಮುಂತಾದವರು ಉಪಸ್ಥಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ಗೋಲಗೇರಿ: ಸಿಂದಗಿಯ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ಎಂ.ಬಿ.ಯಡ್ರಾಮಿ ಅವರಿಗೆ ಸಾಹಿತಿ, ವ್ಯಂಗ್ಯ ಚಿತ್ರಕಾರ, ಗೋಲಗೇರಿ ಸಮೂಹ ಸಂಪನ್ಮೂಲ ವ್ಯಕ್ತಿ ಶರಣು ಚಟ್ಟಿ ಅವರು ರಚಿಸಿದ ’ತುಂಟಮಕ್ಕಳು’ ಪುಸ್ತಕ ನೀಡಿ ಸ್ನೇಹಿತರ ಬಳಗದಿಂದ ಗೌರವಿಸಿ ಅಭಿನಂದಿಸಲಾಯಿತು.ಈ ಸಂದರ್ಭದಲ್ಲಿ ಮಡಿವಾಳ ನಾಯ್ಕೋಡಿ, ಸಾಸಾಬಾಳ ಸಿದ್ಧಾಪುರ ವಸ್ತಿ ಶಾಲೆಯ SDMC ಅಧ್ಯಕ್ಷ ಕುತುಬುದ್ದೀನ್ ಕೋರಬು, ಕಲ್ಪತರು ಶಿಕ್ಷಣ ಸಂಸ್ಥೆಯ ಮುಖ್ಯ ಗುರು ಮಹಾಂತೇಶ ಗೊಂದಳಿ, ಸಂಜೀವಕುಮಾರ ಯಂಕಂಚಿ, ಲಕ್ಷ್ಮಣ ಕಲಾಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Read More

ಚಿಮ್ಮಡದಲ್ಲಿ ಚರ್ಮ ಅಭಿವೃದ್ದಿ ತರಬೇತಿ ಕಾರ್ಯಕ್ರಮ ಸಮಾರೋಪ ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಸರಕಾರ ಹಾಗೂ ನಿಗಮದ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಂಡು ಸ್ವಯಂ ಉದ್ಯೋಗ ನಡೆಸುವುದರ ಮೂಲಕ ಸ್ವಾವಲಂಭಿಗಳಾಗಿ ಬದುಕಬೇಕೆಂದು ಬಾಬು ಜಗಜೀವನರಾಮ್ ಚರ್ಮ ಕೈಗಾರಿಕೆ ಅಭಿವೃದ್ದಿ ನಿಗಮದ ರಾಜ್ಯಾಧ್ಯಕ್ಷ ನಾಗರಾಜ ಮುಂಡರಗಿ ಹೇಳಿದರು.ಗ್ರಾಮದ ಜನತಾ ಪ್ಲಾಟ್ ಆವರಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ೬೦ ದಿನಗಳ ತರಬೇತಿ ಸಮಾರೋಪ ಹಾಗೂ ಫಲಾನುಭಿಗಳ ಸೌಲಭ್ಯ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ತರಬೇತುದಾರರು ನಿಗಮದಿಂದ ದೊರೆಯುವ ಸಾಲ ಸೌಲಭ್ಯ ಪಡೆಯುವ ಮೂಲಕ ಸ್ವಯಂ ಉದ್ಯೋಗ ಪ್ರಾರಂಭಿಸಿ ಆರ್ಥಿಕವಾಗಿ ಸಬಲರಾಗಿ ತಮ್ಮ ಮಕ್ಕಳನ್ನು ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳುವಂತೆ ಬೆಳೆಸಬೇಕೆಂದರು.ಜಿಲ್ಲಾ ಸಂಯೋಜಕ ಎನ್.ಎ. ಗಂಗಾಧರ ಮಾತನಾಡಿ, ಬಾಬು ಜಗಜೀವನರಾಮ್ ಚರ್ಮ ಕೈಗಾರಿಕೆ ಅಭಿವೃದ್ದಿ ನಿಗಮದಿಂದ ಇದುವರೆಗೆ ಗ್ರಾಮ ವ್ಯಾಪ್ತಿಯಲ್ಲಿಯೇ ನೂರಾರು ಜನ ಫಲಾನುಭವಿಗಳು ವ್ಯಾನಿಟಿ ಬ್ಯಾಗ್, ಪರ್ಸ್, ಪೌಚ್ ಸೇರಿದಂತೆ ಹಲವಾರು ವಸ್ತುಗಳನ್ನು ತಯಾರಿಸುವ ತರಬೇತಿ ಪಡೆದುಕೊಂಡಿದ್ದು ಪ್ರತಿಯೊಬ್ಬರು ಈ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ವಿದ್ಯಾರ್ಥಿಗಳಿಗೆ ಅಪೌಷ್ಠಿಕತೆ ಮತ್ತು ರಕ್ತ ಹೀನತೆ ನಿವಾರಿಸಲು ಮಧ್ಯಾಹ್ನದ ಬಿಸಿಯೂಟದೊಂದಿಗೆ ವಾರದ ಎಲ್ಲಾ 6 ದಿನಗಳಲ್ಲಿ ಪೂರಕ ಪೌಷ್ಠಿಕ ಆಹಾರವಾಗಿ ಮೊಟ್ಟೆ ವಿತರಿಸುವ ಯೋಜನೆ ಇಂದು ರಾಜ್ಯದಾದ್ಯಂತ ಅನುಷ್ಠಾನಗೊಳ್ಳುತ್ತಿದೆ.ಈ ನಿಮಿತ್ತ ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಯ ವತಿಯಿಂದ ಅಕ್ಷರ ದಾಸೋಹ ಮಧ್ಯಾನ್ಹದ ಉಪಹಾರ ಯೋಜನೆಯಡಿ ವಾರದ 6 ದಿನಗಳ ಪೂರಕ ಪೌಷ್ಟಿಕ ಆಹಾರವಾಗಿ ಮೊಟ್ಟೆ ಹಾಗೂ ಬಾಳೆಹಣ್ಣನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಮಾಳಪ್ಪ ಪೂಜಾರಿ,ಉಪಾಧ್ಯಕ್ಷ ರಮೇಶ ಮಠಪತಿ, ಪರಶುರಾಮ ಹೊಸಮನಿ, ಸದಸ್ಯರಾದ ಹನಮಂತ ಝಳಕಿ, ಸಂತೋಷ ಸಾಲೋಟಗಿ, ಪಡೆವ್ವ ನಡುವಿನಮನಿ, ಶಾಲುಬಾಯಿ ಸೈನಸಾಕಳೆ, ಮುಖ್ಯ ಶಿಕ್ಷಕರಾದ ಅನಿಲ ಪತಂಗಿ, ವ್ಹಿ ವೈ ಪತ್ತಾರ, ಎಸ್ ಎಸ್ ಅರಬ ಹಾಗೂ ಶಿಕ್ಷಕರಾದ ಸಂತೋಷ ಬಂಡೆ, ಎಸ್ ಆರ್ ಚಾಳೇಕರ, ಎಸ್ ಎಂ ಪಂಚಮುಖಿ, ಸಾವಿತ್ರಿ ಸಂಗಮದ, ಎಫ್ ಎ ಹೊರ್ತಿ, ಎಸ್ ಬಿ ಕುಲಕರ್ಣಿ, ಎಸ್ ವ್ಹಿ ಬೇನೂರ,…

Read More