ಉದಯರಶ್ಮಿ ದಿನಪತ್ರಿಕೆ
ಗೋಲಗೇರಿ: ಸಿಂದಗಿಯ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ಎಂ.ಬಿ.ಯಡ್ರಾಮಿ ಅವರಿಗೆ ಸಾಹಿತಿ, ವ್ಯಂಗ್ಯ ಚಿತ್ರಕಾರ, ಗೋಲಗೇರಿ ಸಮೂಹ ಸಂಪನ್ಮೂಲ ವ್ಯಕ್ತಿ ಶರಣು ಚಟ್ಟಿ ಅವರು ರಚಿಸಿದ ’ತುಂಟಮಕ್ಕಳು’ ಪುಸ್ತಕ ನೀಡಿ ಸ್ನೇಹಿತರ ಬಳಗದಿಂದ ಗೌರವಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಮಡಿವಾಳ ನಾಯ್ಕೋಡಿ, ಸಾಸಾಬಾಳ ಸಿದ್ಧಾಪುರ ವಸ್ತಿ ಶಾಲೆಯ SDMC ಅಧ್ಯಕ್ಷ ಕುತುಬುದ್ದೀನ್ ಕೋರಬು, ಕಲ್ಪತರು ಶಿಕ್ಷಣ ಸಂಸ್ಥೆಯ ಮುಖ್ಯ ಗುರು ಮಹಾಂತೇಶ ಗೊಂದಳಿ, ಸಂಜೀವಕುಮಾರ ಯಂಕಂಚಿ, ಲಕ್ಷ್ಮಣ ಕಲಾಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.

