Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಚಡಚಣ: ಚಡಚಣ ಪಟ್ಟಣದ ಮರಡಿಯ ಬಸವೇಶ್ವರ ಕಾಲೋನಿಯಲ್ಲಿ ಶ್ರೀ ಮಹಾಶರಣ ಹರಳಯ್ಯ ಗಜಾನನ ಯುವಕ ಸಂಘ ಹಾಗೂ ಶ್ರೀ ಅಂಬಾಭವಾನಿ ನವರಾತ್ರಿ ಉತ್ಸವ ಮಂಡಳಿ ವತಿಯಿಂದ ಈ ವರ್ಷದಿಂದ ನೂತನವಾಗಿ 03 ಅಕ್ಟೋಬರ್ 2024 ರಿಂದ 12 ಅಕ್ಟೋಬರ್ 2024ರ ವರೆಗೆ ದಸರಾ ಹಬ್ಬದ ಪ್ರಯುಕ್ತ ‘ನವರಾತ್ರಿ ಉತ್ಸವ’ವನ್ನು ಆಯೋಜಿಸಲಾಗಿದೆ.ಒಂಬತ್ತು ದಿನಗಳ ಕಾಲ ನವದುರ್ಗೆಯರ ಆರಾಧನೆ ಹಾಗೂ ವಿವಿಧ ಸಾಂಸ್ಕೃತಿಕಗಳು ಸೇರಿ ಮನರಂಜನಾ ಕಾರ್ಯಕ್ರಮಗಳು ಜರುಗಲಿವೆ. ಅಕ್ಟೋಬರ್ 12 ರ ‘ವಿಜಯದಶಮಿ ದಿನ’ದಂದು ಕಾಲೋನಿಯ ನೂರಾರು ಜನರು ಒಂದೆಡೆ ಸೇರಿ ವಾದ್ಯ ಮೇಳದ ವೈಭವದೊಂದಿಗೆ ‘ಸಾಮೂಹಿಕವಾಗಿ ಬನ್ನಿ ಮುಡಿಯುವ ಕಾರ್ಯಕ್ರಮ’ ನಡೆಯಲಿದೆ ಎಂದು ಶ್ರೀ ಅಂಬಾಭವಾನಿ ನವರಾತ್ರಿ ಉತ್ಸವ ಮಂಡಳಿ ಬಸವೇಶ್ವರ ಕಾಲೋನಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರೈತರ ಕೃಷಿ ಪಂಪಸೆಟ್‌ಗಳಿಗೆ ಸೋಲಾರ ಮುಖಾಂತರ ವಿದ್ಯುತ್ ಸರಬರಾಜು ಮಾಡುವ ಪಿಎಂ ಕುಸುಮ್ ಪೀಡರ್ ಲೇವಲ್ ಸೋಲರೈಸೆಷನ್ ಯೋಜನೆಯಡಿ ಸೌರ ಘಟಕಗಳನ್ನು ಸ್ಥಾಪಿಸಲು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಸೋಲವಾಡಗಿ ಗ್ರಾಮದ ರಿಸನಂ.೧೫೯ರ ೧೯ ಎಕರೆ ೧೪ ಗುಂಟೆ ಪೈಕಿ ೧೧ ಎಕರೆ ಸರಕಾರಿ ಮುಫತ್ ಗಾಯರಾಣ ಜಮೀನು ಕಂದಾಯ ಇಲಾಖೆಯಿಂದ ಇಂಧನ ಇಲಾಖೆಗೆ ಕಾಯ್ದಿರಿಸಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಸಾರ್ವಜನಿಕರು ಆಕ್ಷೇಪಣೆಗಳಿದ್ದಲ್ಲಿ ಈ ಅಧಿಸೂಚನೆ ಹೊರಡಿಸಿದ ೩೦ ದಿನಗಳೊಳಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಲಿಖಿತವಾಗಿ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

Read More

ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ತೃತೀಯ ಸ್ಥಾನ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಜ್ಯ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ಪದವಿ / ಸ್ನಾತಕೋತ್ತರ ಪದವಿ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದ ವಿಜಯಪುರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ನಸೀಮಾ ಇ.ಚಪ್ಪರಬಂದ ಅವರಿಗೆ ಅಕ್ಟೋಬರ್ ೨ ರಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ವಾರ್ತಾ ಸೌಧದ ಸುಲೋಚನಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ – ೨೦೨೪, ಟೀಯೆಸ್ಸಾರ್ ಹಾಗೂ ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ರಾಜ್ಯ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬಹುಮಾನ ವಿತರಿಸಿದರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ೧೧ ಪರೀಕ್ಷಾ ಕೇಂದ್ರಗಳಲ್ಲಿ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳಿಗೆ ನಡೆಯುತ್ತಿರುವ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ನಗರದ ಗಾಂಧಿ ವೃತ್ತದಲ್ಲಿರುವ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜ್, ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು, ಪಿಡಿಜೆ ಕಾಲೇಜು ಹಾಗೂ ವಿ.ಬಿ.ದರಬಾರ್ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಮಂಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಪರೀಕ್ಷೆಗಳು ಅತ್ಯಂತ ಸುಗಮ ಹಾಗೂ ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸುವಂತೆ ಸಂಬಂಧಿಸಿದವರಿಗೆ ಅವರು ಸೂಚನೆ ನೀಡಿದರು.ಈ ಸಂದರ್ಭದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ.ಕೆ ಹೊಸಮನಿ ಇದ್ದರು.ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಹುದ್ದೆಯ ಪರೀಕ್ಷೆಗೆ ಜಿಲ್ಲೆಯಲ್ಲಿ ೪,೯೨೦ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಈ ಪರೀಕ್ಷೆಗೆ ೧,೪೪೯ ಅಭ್ಯರ್ಥಿಗಳು ಗೈರಾಗಿದ್ದು, ೩,೪೭೧ ಅಭ್ಯರ್ಥಿಗಳು ಹಾಜರಾಗಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಅಕ್ಕಮಹಾದೇವಿ ವಿವಿ ದಲ್ಲಿ ‘ಹಿಂದಿ ಭಾಷೆ ಮತ್ತು ಉದ್ಯೋಗದ ನಿರೀಕ್ಷೆಗಳು’ ವಿಷಯದ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹಿಂದಿ ಭಾಷೆಯು ದೇಶದಲ್ಲಿ ಪ್ರಮುಖ ಸ್ಥಾನವನ್ನು ಸಾಧಿಸಿದ್ದು, ಹಲವಾರು ಉದ್ಯೋಗಾವಕಾಶಗಳ ದಾರಿ ತೆರೆದಿದೆ. ಅನುವಾದ, ಮಾಧ್ಯಮ, ಶಿಕ್ಷಣ, ತಂತ್ರಜ್ಞಾನ, ಮತ್ತು ಬಾಹ್ಯ ಸಂಬಂಧಗಳ ಕ್ಷೇತ್ರದಲ್ಲಿ ಹಿಂದಿಯ ಜಾಗತಿಕ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ಕುಲಸಚಿವ ಶಂಕರಗೌಡ ಸೋಮನಾಳ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಹಿಂದಿ ದಿನಾಚರಣೆಯ ಅಂಗವಾಗಿ ಸೋಮವಾರ ಆಯೋಜಿಸಿದ್ದ ‘ಹಿಂದಿ ಭಾಷೆ ಮತ್ತು ಉದ್ಯೋಗದ ನಿರೀಕ್ಷೆಗಳು’ ಎಂಬ ವಿಷಯದ ಕುರಿತು ಒಂದು ದಿನದ ರಾಷ್ಟ್ರಮಟ್ಟದ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಷ್ಟಭಾಷೆಯಾದ ಹಿಂದಿ ಮತ್ತು ಇತರ ಭಾಷೆಗಳನ್ನೂ ಗೌರವಿಸುವುದು ಅತಿ ಮುಖ್ಯ. ಭಾಷೆಯೇ ನಮ್ಮ ಸಂಸ್ಕೃತಿ ಮತ್ತು ಸಾಂಸ್ಕೃತಿಕ ಐಕ್ಯತೆಯನ್ನು ಪ್ರತಿನಿಧಿಸುವುದು, ಹೀಗಾಗಿ ಇವುಗಳ ಮಹತ್ವವನ್ನು ಅರಿತುಕೊಳ್ಳಕೊಳ್ಳಬೇಕು ಎಂದರು.ವಿಚಾರ ಸಂಕಿರಣ ಉದ್ಘಾಟಿಸಿದ ಮಹಾರಾಷ್ಟ್ರದ ಔರಂಗಬಾದನ ನಲದುರ್ಗಾ ವಿಶ್ವವಿದ್ಯಾಲಯದ ಪ್ರೊ.…

Read More

ರೂ.೧೪೫ ಕೋಟಿ ರೂ. ಪ್ರಸ್ಥಾವನೆ | ಮೊದಲ ಹಂತದಲ್ಲಿ ರೂ.೪೦ ಕೋಟಿ ಮಂಜೂರಾಗಿ ರೂ.೧೦ ಕೋಟಿ ಬಿಡುಗಡೆ B* ಉದಯರಶ್ಮಿ ದಿನಪತ್ರಿಕೆ ಆಲಮೇಲ: ಪಟ್ಟಣದಲ್ಲಿ ಮಂಜೂರಾಗಿರುವ ತೋಟಗಾರಿಕೆ ಕಾಲೇಜು ಆರಂಭಕ್ಕೆ ೧೪೫ ಕೋಟಿ ರೂ. ಸರ್ಕಾರಕ್ಕೆ ಪ್ರಸ್ಥಾವನೆ ಮಾಡಿದ್ದು, ಮೊದಲ ಹಂತದಲ್ಲಿ ರೂ.೪೦ ಕೋಟಿ ಮಂಜೂರಾಗಿ ರೂ.೧೦ ಕೋಟಿ ಬಿಡುಗಡೆಗೊಳಿಸಿದ್ದಾರೆ, ಆದಷ್ಟು ಬೇಗ ಕಾಮಗಾರಿ ಆರಂಭಿಸಲಾಗುವುದು ಎಂದು ಬಾಗಲಕೋಟ ತೋಟಗಾರಿಕೆ ವಿಶ್ವ ವಿದ್ಯಾಲಯದ ಉಪ ಕುಲಪತಿ ವಿಷ್ಟುವರ್ಧನ ಹೇಳಿದರು.ಬುಧವಾರ ತೋಟಗಾರಿಕೆ ವಿಶ್ವ ವಿದ್ಯಾಲಯದ ಉಪ ಕುಲಪತಿ ಹಾಗೂ ಅಧಿಕಾರಿಗಳು ಆಲಮೇಲದಲ್ಲಿ ಸ್ಥಳ ಪರಿಶೀಲಿಸಿ ನಂತರ ಮಾತನಾಡುತ್ತ ಹೇಳಿದರು.ಕಾಲೇಜು ಆರಂಭಿಸಲು ಸರ್ಕಾರ ಅವಕಾಶ ನೀಡಿದ್ದರಿಂದ ತಾತ್ಕಾಲಿಕವಾಗಿ ಆಲಮೇಲ ತೋಟಗಾರಿಕೆ ಕಾಲೇಜಿನ ಹೆಸರಿನಲ್ಲಿ ಇದೆ ತಿಂಗಳು ಅಕ್ಟೋಬರ ೨೧ ರಂದು ಬಾಗಲಕೋಟ ತೋಟಗಾರಿಕೆ ಕಾಲೇಜಿನಲ್ಲಿ ತರಗತಿ ಆರಂಭವಾಗಲಿದೆ. ಅದಕ್ಕೆ ಮೊದಲ ವರ್ಷದಲ್ಲಿ ೨೫ ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ನೀಡಿದ್ದು ವಿದ್ಯಾರ್ಥಿಗಳನ್ನು ಮೆರಿಟ್ ಮೇಲೆ ಪ್ರವೇಶ ಪಡೆದುಕೊಳ್ಳಲಿದ್ದಾರೆ ಎಂದರು.ಆಲಮೇಲದಲ್ಲಿ ತೋಟಗಾರಿಕೆ ಕಾಲೇಜು ನಿರ್ಮಾಣಕ್ಕೆ ಸ್ಥಳಿಯ ಕೃಷಿ…

Read More

ಡಾ. ಎಚ್.ಎಸ್.ಸಿದ್ದಗಂಗಪ್ಪ ಇವರ ’ಕರ್ನಾಟಕದ ಸಾಧನೆ ಸಂಪನ್ನರು’ ಕೃತಿ ಆಯ್ಕೆ ಉದಯರಶ್ಮಿ ದಿನಪತ್ರಿಕೆ ಗದಗ: ಬೆಂಗಳೂರಿನ ಡಾ. ಎಚ್. ಎಸ್. ಸಿದ್ದಗಂಗಪ್ಪ ಇವರ ಕರ್ನಾಟಕದ ಸಾಧನೆ ಸಂಪನ್ನರು ಸಾಹಿತ್ಯ ಕೃತಿಯು ಡಾ. ಪಂ. ಪುಟ್ಟರಾಜ ಸಾಹಿತ್ಯ ಪುರಸ್ಕಾರ ರಾಜ್ಯ ಪ್ರಶಸ್ತಿಗೆ, ಆಯ್ಕೆಯಾಗಿದೆ. ಈ ಪ್ರಶಸ್ತಿಯು ೫೦೦೦ ನಗದು ಬಹುಮಾನ ಮಾನಪತ್ರ ನೆನಪಿನ ಕಾಣಿಕೆ ಸಾಲು ಸತ್ಕಾರವನ್ನು ಒಳಗೊಂಡಿರುತ್ತದೆ. ೨೦ ಅಕ್ಟೋಬರ್ ೨೦೨೪ ತಿಂಗಳಿನಲ್ಲಿ ಸೇವಾ ಸಮಿತಿಯು ಹಮ್ಮಿಕೊಳ್ಳುವ ಪಂ. ಪುಟ್ಟರಾಜ ಸಾಹಿತ್ಯೋತ್ಸವ-೨೦೨೪ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರಧಾನ ಮಾಡಲಾಗುವುದು.ಈ ಪ್ರಶಸ್ತಿಗಾಗಿ ಬಂದ ೧೩೦ ಕ್ಕೂ ಹೆಚ್ಚು ಸಾಹಿತ್ಯ ಕೃತಿಗಳಲ್ಲಿ ಪ್ರಥಮ ಸ್ಥಾನ ಪಡೆದ ಕೃತಿಗಳಾದ ಹುಬ್ಬಳ್ಳಿಯ ಪದ್ಮಜಾ ಜಯತೀರ್ಥ ಉಮರ್ಜಿ ಇವರ ಬೃಂಗದ ಬೆನ್ನೇರಿ (ಕಥಾ ಸಂಕಲನ), ಬಾದಾಮಿಯ ಸುರೇಶ್ ಅರಳಿಮರದರವರ ಹೀಗೇ ಒಂದಿಷ್ಟು (ಕವನ ಸಂಕಲನ) ಧಾರವಾಡದ ಡಾ. ಈರಣ್ಣ ಇಂಜಗನೇರಿ ಇವರ ಫ್ರೀಡಮ್ (ಕಾದಂಬರಿ) ಕೊಪ್ಪಳ ಜಿಲ್ಲೆಯ ಬೈರಾಪುರದ ಎಲ್ಲಪ್ಪ ಮ. ಹರ್ನಾಳಗಿ ಇವರ ತಿರುವು (ಲೇಖನಗಳ ಸಂಗ್ರಹ),…

Read More

ಉದಯರಶ್ಮಿ’ ವರದಿ ಪರಿಣಾಮ | ಅಧಿಕಾರಿಗಳಿಂದ ಸಮಸ್ಯೆ ಆಲಿಕೆ | ಮೊಟ್ಟೆ ಪೂರೈಕೆಗೆ ಕ್ರಮ ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ತಾಲೂಕಿನ ಗುಡಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಮೊಟ್ಟೆ ಕೊಟ್ಟಿಲ್ಲ ಅಂತಾ ಸೋಮುವಾರ ಪ್ರತಿಭಟಿಸಿದ್ದರು. ಈ ಬಗ್ಗೆ ’ಉದಯರಶ್ಮಿ’ ಪತ್ರಿಕೆ ಸುದ್ದಿ ಬಿತ್ತರಿಸಿ ಅಧಿಕಾರಿಗಳ ಗಮನ ಸೆಳೆದಿತ್ತು.ಸುದ್ದಿ ಗಮನಿಸಿದ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎಂ.ಎಂ.ಬೆಳಗಲ್ಲ ಮತ್ತು ಸಿಆರ್‌ಪಿ ಎಸ್.ಎಸ್.ಬಾಬಣ್ಣವರ ಮಂಗಳವಾರ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು. ವಿದ್ಯಾರ್ಥಿಗಳಿಗೆ ಪ್ರತಿದಿನ ಮೊಟ್ಟೆ ಅಥವಾ ಶೇಂಗಾಚಿಕ್ಕಿ ನೀಡುವ ಬಗ್ಗೆ ಇರುವ ನಿಯಮಗಳನ್ನು ವಿವರಿಸಿದರು. ವಿದ್ಯಾರ್ಥಿಗಳು ಅಧಿಕಾರಿಗಳ ಎದುರು ಪ್ರಭಾರ ಮುಖ್ಯ ಶಿಕ್ಷಕ ಸಂಗಮೇಶ ನವಲಿ ಅವರು ವಿದ್ಯಾರ್ಥಿಗಳು ಮೊಟ್ಟೆ ಕೊಡದ ಬಗ್ಗೆ, ಶಾಲೆಗೆ ತಡವಾಗಿ ಬರುವ ಮತ್ತು ಬೇಗನೆ ಹೋಗುವ ಬಗ್ಗೆ ದೂರಿದರೆ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಈ ಮುಖ್ಯ ಶಿಕ್ಷಕ ನಮ್ಮೂರಿಗೆ ಅಗತ್ಯವಿಲ್ಲ ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದರು.ಈ ಎಲ್ಲ ಅಂಶಗಳನ್ನು ಕ್ರೋಢೀಕರಿಸಿದ ಅಧಿಕಾರಿಗಳು ಯಾವ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಾರ್ವಜನಿಕರು ಹಾಗೂ ಪ್ರಯಾಣಿಕರ ಕುಂದುಕೊರತೆಯನ್ನು ಆಲಿಸಲು ವಿಜಯಪುರದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ಅಕ್ಟೋಬರ್ ೭ರಂದು ಮಧ್ಯಾಹ್ನ ೩.೩೦ ರಿಂದ ೪.೩೦ರವರೆಗೆ ಫೋನ್-ಇನ್ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾರ್ವಜನಿಕರು ಮೊಬೈಲ್ ಸಂಖ್ಯೆ ೬೩೬೬೪೨೮೮೭ ಕರೆ ಮಾಡಿ ತಮ್ಮ ಕುಂದುಕೊರತೆಗಳನ್ನು ಪರಿಹರಿಸಿಕೊಳ್ಳಬಹುದು ಎಂದು ವಿಜಯಪುರ ಕಲ್ಯಾಣ ಕನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಂಯಂತ್ರಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೨೨೦ ಕೆ.ವಿ ಆಹೇರಿಯಲ್ಲಿ ಟರ್ಮಿನಲ್ ಬೇ ನಿರ್ಮಾಣ ಕಾಮಗಾರಿ ಕೈಗೊಂಡಿದೆ. ಈ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ೧೧೦ಕೆವಿ ಸಿಂದಗಿ, ೧೧೦ಕೆವಿ ಮೋರಟಗಿ, ೧೧೦ಕೆವಿ ಮಲಘಾಣ, ೧೧೦ಕೆವಿ ಚಾಂದಕವಟೆ, ೧೧೦ ಕೆವಿ ಆಲಮೇಲ ಹಾಗೂ ೧೧೦ ಕೆವಿ ದೇವಣಗಾಂವ ಸದರಿ ವಿದ್ಯುತ್ ವಿತರಣಾ ಕೇಂದ್ರದ ಎಲ್ಲಾ ೩೩ ಕೆ.ವಿ ಹಾಗೂ ೧೧ ಕೆ.ವಿ ಮಾರ್ಗಗಳಲ್ಲಿ ಅಕ್ಟೋಬರ್ ೦೪ ರಂದು ಬೆಳಿಗ್ಗೆ ೧೦ ಗಂಟೆಯಿಂದ ಮಧ್ಯಾಹ್ನ ೦೩ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸುವಂತೆ ಇಂಡಿ ಹೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More