ಉದಯರಶ್ಮಿ’ ವರದಿ ಪರಿಣಾಮ | ಅಧಿಕಾರಿಗಳಿಂದ ಸಮಸ್ಯೆ ಆಲಿಕೆ | ಮೊಟ್ಟೆ ಪೂರೈಕೆಗೆ ಕ್ರಮ
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ತಾಲೂಕಿನ ಗುಡಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಮೊಟ್ಟೆ ಕೊಟ್ಟಿಲ್ಲ ಅಂತಾ ಸೋಮುವಾರ ಪ್ರತಿಭಟಿಸಿದ್ದರು. ಈ ಬಗ್ಗೆ ’ಉದಯರಶ್ಮಿ’ ಪತ್ರಿಕೆ ಸುದ್ದಿ ಬಿತ್ತರಿಸಿ ಅಧಿಕಾರಿಗಳ ಗಮನ ಸೆಳೆದಿತ್ತು.
ಸುದ್ದಿ ಗಮನಿಸಿದ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎಂ.ಎಂ.ಬೆಳಗಲ್ಲ ಮತ್ತು ಸಿಆರ್‌ಪಿ ಎಸ್.ಎಸ್.ಬಾಬಣ್ಣವರ ಮಂಗಳವಾರ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು. ವಿದ್ಯಾರ್ಥಿಗಳಿಗೆ ಪ್ರತಿದಿನ ಮೊಟ್ಟೆ ಅಥವಾ ಶೇಂಗಾಚಿಕ್ಕಿ ನೀಡುವ ಬಗ್ಗೆ ಇರುವ ನಿಯಮಗಳನ್ನು ವಿವರಿಸಿದರು. ವಿದ್ಯಾರ್ಥಿಗಳು ಅಧಿಕಾರಿಗಳ ಎದುರು ಪ್ರಭಾರ ಮುಖ್ಯ ಶಿಕ್ಷಕ ಸಂಗಮೇಶ ನವಲಿ ಅವರು ವಿದ್ಯಾರ್ಥಿಗಳು ಮೊಟ್ಟೆ ಕೊಡದ ಬಗ್ಗೆ, ಶಾಲೆಗೆ ತಡವಾಗಿ ಬರುವ ಮತ್ತು ಬೇಗನೆ ಹೋಗುವ ಬಗ್ಗೆ ದೂರಿದರೆ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಈ ಮುಖ್ಯ ಶಿಕ್ಷಕ ನಮ್ಮೂರಿಗೆ ಅಗತ್ಯವಿಲ್ಲ ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದರು.
ಈ ಎಲ್ಲ ಅಂಶಗಳನ್ನು ಕ್ರೋಢೀಕರಿಸಿದ ಅಧಿಕಾರಿಗಳು ಯಾವ ದಿನ ಮೊಟ್ಟೆ ಕೊಡಲಾಗಿತ್ತು ಯಾವ ದಿನ ಕೊಡಲಾಗಿಲ್ಲ, ಯಾವ ದಿನ ಸೇಂಗಾ ಚಿಕ್ಕಿ ನೀಡಿದರು ಎಂಬ ಬಗ್ಗೆ ವಿವರಗಳನ್ನು ಸೇರಿದಂತೆ ಪ್ರಬಾರ ಮುಖ್ಯ ಶಿಕ್ಷಕ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ನಿರ್ಲಕ್ಷವಹಿಸಿರುವದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ವರದಿ ನೀಡಿರುತ್ತಾರೆ.
ವರದಿ ಬಳಿಕ ’ಉದಯರಶ್ಮಿ’ ಪತ್ರಿಕೆ ಯೊಂದಿಗೆ ಮಾತನಾಡಿದ ಗ್ರಾಮಸ್ಥರು ಸುದ್ದಿ ಬಿತ್ತರಿಸಿ ಅಧಿಕಾರಿಗಳ ಗಮನಸೆಳೆದಿರುವ ಪತ್ರಿಕೆ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿ ಸದರ ವರದಿಯ ಆಧಾರದ ಮೇಲೆ ಪ್ರಭಾರ ಮುಖ್ಯ ಶಿಕ್ಷಕನ ಕ್ರಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

