ಉದಯರಶ್ಮಿ ದಿನಪತ್ರಿಕೆ
ಚಡಚಣ: ಚಡಚಣ ಪಟ್ಟಣದ ಮರಡಿಯ ಬಸವೇಶ್ವರ ಕಾಲೋನಿಯಲ್ಲಿ ಶ್ರೀ ಮಹಾಶರಣ ಹರಳಯ್ಯ ಗಜಾನನ ಯುವಕ ಸಂಘ ಹಾಗೂ ಶ್ರೀ ಅಂಬಾಭವಾನಿ ನವರಾತ್ರಿ ಉತ್ಸವ ಮಂಡಳಿ ವತಿಯಿಂದ ಈ ವರ್ಷದಿಂದ ನೂತನವಾಗಿ 03 ಅಕ್ಟೋಬರ್ 2024 ರಿಂದ 12 ಅಕ್ಟೋಬರ್ 2024ರ ವರೆಗೆ ದಸರಾ ಹಬ್ಬದ ಪ್ರಯುಕ್ತ ‘ನವರಾತ್ರಿ ಉತ್ಸವ’ವನ್ನು ಆಯೋಜಿಸಲಾಗಿದೆ.
ಒಂಬತ್ತು ದಿನಗಳ ಕಾಲ ನವದುರ್ಗೆಯರ ಆರಾಧನೆ ಹಾಗೂ ವಿವಿಧ ಸಾಂಸ್ಕೃತಿಕಗಳು ಸೇರಿ ಮನರಂಜನಾ ಕಾರ್ಯಕ್ರಮಗಳು ಜರುಗಲಿವೆ. ಅಕ್ಟೋಬರ್ 12 ರ ‘ವಿಜಯದಶಮಿ ದಿನ’ದಂದು ಕಾಲೋನಿಯ ನೂರಾರು ಜನರು ಒಂದೆಡೆ ಸೇರಿ ವಾದ್ಯ ಮೇಳದ ವೈಭವದೊಂದಿಗೆ ‘ಸಾಮೂಹಿಕವಾಗಿ ಬನ್ನಿ ಮುಡಿಯುವ ಕಾರ್ಯಕ್ರಮ’ ನಡೆಯಲಿದೆ ಎಂದು ಶ್ರೀ ಅಂಬಾಭವಾನಿ ನವರಾತ್ರಿ ಉತ್ಸವ ಮಂಡಳಿ ಬಸವೇಶ್ವರ ಕಾಲೋನಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
