Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಲ, ವೃಕ್ಷ, ಶಿಕ್ಷಣ, ಆರೋಗ್ಯ ಹಾಗೂ ಉದ್ಯೋಗ ಪಂಚ ತತ್ವಗಳಡಿ ಸರ್ವಾಂಗೀಣ ಅಭಿವೃದ್ಧಿಗೆ ಸಚಿವ ಎಂ.ಬಿ.ಪಾಟೀಲ ಶ್ರಮಿಸುತ್ತಿದ್ದಾರೆ ಎಂದು ಬಿ.ಎಲ್.ಡಿ.ಇ ಸಂಸ್ಥೆ ಆಡಳಿತಾಧಿಕಾರಿ ಐ.ಎಸ್. ಕಾಳಪ್ಪನವರ ಹೇಳಿದ್ದಾರೆ.ಸೋಮವಾರ ಸಂಸ್ಥೆಯ ಶ್ರೀಮತಿ ಬಂಗಾರಮ್ಮ ಸಜ್ಜನ ಮಹಿಳಾ ಮಹಾವಿದ್ಯಾಲಯದ ಆವರಣದಲ್ಲಿ ಸಚಿವ ಎಂ.ಬಿ.ಪಾಟೀಲರ ಜನ್ಮದಿನದ ಅಂಗವಾಗಿ ಸಸಿ ನೆಡುವ ಮತ್ತು ಸಸಿ ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಜಲಕ್ರಾಂತಿಯ ಮೂಲಕ ಅರಣ್ಯೀಕರಣಕ್ಕೂ ಮುನ್ನುಡಿ ಬರೆದಿರುವ ಸಚಿವರು, ಶಿಕ್ಷಣ, ಆರೋಗ್ಯ ಹಾಗೂ ಉದ್ಯೋಗ ಸೃಷ್ಟಿಗೆ ಒತ್ತು ನೀಡಿದ್ದಾರೆ. ಅಲ್ಲದೇ, ರಾಜ್ಯದಲ್ಲಿ ಕೈಗಾರಿಕೆ ಕ್ರಾಂತಿಯ ಕಡೆಗೆ ದೃಷ್ಟಿಯನ್ನು ಕೇಂದ್ರೀಕರಿಸಿದ್ದಾರೆ ಎಂದು ಹೇಳಿದರು.ಕಾಲೇಜಿನ ಪ್ರಾಚಾರ್ಯ ಡಾ. ವೈ. ತಮ್ಮಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು.ಜೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಬಿ. ವೈ. ಖಾಸನಿಸ್, ಎಸ್.ಎಸ್.ಹೈಸ್ಕೂಲ್ ಬ ಶಾಲೆಯ ಪ್ರಾಚಾರ್ಯ ವೀರಣ್ಣ ಪಾಟೀಲ, ಸಿಪಿಇಡಿ ಕಾಲೇಜಿನ ಪ್ರಾಚಾರ್ಯ ಮಲ್ಲನಗೌಡ ಕುಪ್ಪಿ, ಬಾಲಕಿಯರ ಪ್ರೌಢ ಶಾಲೆ ಮುಖ್ಯಾಧ್ಯಾಪಕಿ ವಿ.ಪಿ.ನಿಡೋಣಿ, ಸಮನ್ವಯ ಶಾಲೆ ಮುಖ್ಯೋಪಾಧ್ಯಾಯ ಸಿದ್ದು ಬಿರಾದಾರ, ಸಿ. ಟಿ.…

Read More

ಮುತವಲ್ಲಿಗಳ ಸಮ್ಮೇಳನ-ವಕ್ಫ್ ಅದಾಲತ್ ಕಾರ್ಯಕ್ರಮ | ಸಚಿವ ಜಮೀರ ಅಹ್ಮದ್‌ಖಾನ್ ಭರವಸೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ನಮಗೆ ಒದಗಿಸಿದ ಸಂವಿಧಾನದಿಂದಲೇ ಇಂದು ನಾವು ಅತ್ಯಂತ ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ. ಪ್ರತಿಯೊಬ್ಬರಿಗೂ ತಮ್ಮ ಹಕ್ಕು ಪ್ರತಿಪಾದನೆಗೆ ಸಂವಿಧಾನ ಅವಕಾಶ ಒದಗಿಸಿದ್ದು, ವಕ್ಫ್ ಆಸ್ತಿ ಯಾವುದೇ ವೈಯಕ್ತಿಕ ಸ್ವತ್ತಲ್ಲ, ಇದು ದೇವರ ಆಸ್ತಿ ಇದರ ಸಂರಕ್ಷಣೆ ನಮ್ಮ ಹಕ್ಕು ಹಾಗೂ ಜವಾಬ್ದಾರಿಯಾಗಿದೆ ಎಂದು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಬಿ.ಜೆಡ್.ಜಮೀರ್‌ಅಹ್ಮದ ಖಾನ್ ಹೇಳಿದರು.ಸೋಮವಾರ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ವಕ್ಫ್ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಸಹಯೋಗದಲ್ಲಿ ಜಿಲ್ಲೆಯ ಮುತ್ತವಲ್ಲಿಗಳ ಸಮ್ಮೇಳನ ಹಾಗೂ ವಕ್ಫ್ ಅದಾಲತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ವಕ್ಫ ಆಸ್ತಿ ಸಂರಕ್ಷಣೆ ಹಾಗೂ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಈವರೆಗೆ ರಾಜ್ಯದಾದ್ಯಂತೆ ೧೦ ಜಿಲ್ಲೆಗಳಲ್ಲಿ ವಕ್ಫ್ ಅದಾಲತ್ ಹಮ್ಮಿಕೊಳ್ಳಲಾಗಿದ್ದು, ಇಂದು…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಪ್ರತಿ ವರ್ಷ ದಂತೆ ಈ ವರ್ಷವೂ ಕೂಡಾ ಅ.೧೩ ರಂದು ಭಾನುವಾರ ದಿನ ವಿಜಯಪುರ ನಗರದ ಜಮಖಂಡಿ ರಸ್ತೆಯ ರಿಂಗ ರೋಡನಲ್ಲಿರುವ ತಮ್ಮ ತೋಟದ ಮನೆಯಲ್ಲಿ ಸಾರ್ವಜನಿಕ ಬನ್ನಿ ವಿನಿಮಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಆದ್ದರಿಂದ ಬಸವನಬಾಗೇವಾಡಿ ಮತಕ್ಷೇತ್ರದ ಜನತೆ ಹಾಗೂ ಎಲ್ಲ ಹಿತೈಷಿಗಳು ಈ ಬನ್ನಿ ವಿನಿಮಯ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಜವಳಿ, ಸಕ್ಕರೆ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಹುಟ್ಟು-ಸಾವುಗಳ ಮಧ್ಯೆ ನಾವು ಹೇಗೆ ಜೀವನ ಮಾಡುತ್ತೇವೆ ಎಂಬುವದು ಬಹಳ ಮುಖ್ಯವಾಗಿದೆ. ಜೀವನದಲ್ಲಿ ಉತ್ತಮ ಜೀವನ ಮಾಡಿದರೆ ಸಮಾಜದಲ್ಲಿ ಶಾಶ್ವತವಾಗಿ ಇರಲು ಸಾಧ್ಯ. ಈ ನಿಟ್ಟಿನಲ್ಲಿ ಸಮಾಜಪರ ಕಳಕಳಿ ಹೊಂದಿರುವ ಭೂತಲ-ಪಾಟೀಲ ಉಭಯ ಶಿಕ್ಷಕ ದಂಪತಿಗಳು ತಮ್ಮ ನಿವೃತ್ತ ಜೀವನದ ನಂತರವೂ ಸಾಮಾಜಿಕ ಸೇವೆಯಲ್ಲಿ ತೊಡಗುವಂತಾಗಿ ಅವರ ನಿವೃತ್ತಿ ಜೀವನ ಸುಖಕರವಾಗಲೆಂದು ದೇವರಹಿಪ್ಪರಗಿ ಶಾಸಕ ಭೀಮನಗೌಡ(ರಾಜುಗೌಡ) ಪಾಟೀಲ ಕುದರಿಸಾಲವಾಡಗಿ ಹೇಳಿದರು.ಪಟ್ಟಣದ ವೀರಭದ್ರೇಶ್ವರ ನಗರದಲ್ಲಿರುವ ಸಿದ್ರಾಮೇಶ್ವರ ನಿವಾಸದ ಮುಂಭಾಗ ಶನಿವಾರ ಹಮ್ಮಿಕೊಂಡಿದ್ದ ಉಮಾದೇವಿ ಭೂತಲ (ಪಾಟೀಲ) ಅವರ ನಿವೃತ್ತಿ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉಮಾದೇವಿ ಭೂತಲ ಅವರ ಪತಿ ನಿವೃತ್ತ ಶಿಕ್ಷಕ ಎಸ್.ಜಿ.ಪಾಟೀಲ ಅವರು ಸಮಾಜದಲ್ಲಿ ಹೇಗೆ ಬದುಕಬೇಕೆಂಬದನ್ನು ತೋರಿಸಿಕೊಟ್ಟಿದ್ದಾರೆ. ಅವರು ತಮ್ಮ ಪತ್ನಿ ಉಮಾದೇವಿ ಅವರನ್ನು ಸಹ ಸಮಾಜಪರ ಚಟುವಟಿಕೆಯಲ್ಲಿ ಭಾಗವಹಿಸುವಂತೆ ಮಾಡುವ ಮೂಲಕ ಅವರಿಂದ ಸಮಾಜಕ್ಕೆ ಸೇವೆ ಸಲ್ಲಿಸುವಂತೆ ಮಾಡಿದ್ದಾರೆ. ಇರ್ವರು ಶಿಕ್ಷಕ ವೃತ್ತಿಯಲ್ಲಿ ಉತ್ತಮ ಸೇವೆ ಮಾಡುವ ಮೂಲಕ ಮಕ್ಕಳಿಗೆ ಜ್ಞಾನರ್ಜನೆ…

Read More

ವಿಜಯಪುರ ಮಹಾನಗರ ಪಾಲಿಕೆ ಸದಸ್ಯರಿಂದ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ರಿಗೆ ಮನವಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಭಾರತೀಯ ಪುರಾತತ್ವ ಇಲಾಖೆಗೆ, ಮಹಾನಗರ ಪಾಲಿಕೆ ಹಾಗೂ ಕಂದಾಯ ಇಲಾಖೆಗೆ ಸೇರಿರುವ ಆಸ್ತಿಗಳನ್ನು ಕಂದಾಯ ದಾಖಲೆಗಳಲ್ಲಿ ಕಾನೂನು ಬಾಹಿರವಾಗಿ ವಕ್ಫ್ ಸೊತ್ತು ಎಂದು ದಾಖಲಿಸಿದ್ದನ್ನು ತೆರವುಗೊಳಿಸಲು ಒತ್ತಾಯಿಸಿ ವಿಜಯಪುರ ಮಹಾನಗರ ಪಾಲಿಕೆ ಸದಸ್ಯರು ಸೋಮವಾರ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾದ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಅವರಿಗೆ ಮನವಿ ಸಲ್ಲಿಸಿದರು.ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆದ ವಿಜಯಪುರ ಜಿಲ್ಲೆಯ ಮುತ್ತಾವಲ್ಲಿಗಳ ಸಮ್ಮೇಳನ ಮತ್ತು ವಕ್ಫ್ ಅದಾಲತ್ ದಲ್ಲಿ ಭಾಗವಹಿಸಿದ್ದ ಸಚಿವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿ, ನಗರ ಮತ್ತು ವಿಜಯಪುರ ತಾಲ್ಲೂಕು ವ್ಯಾಪ್ತಿಯಲ್ಲಿ ಕಾನೂನು ಬಾಹಿರವಾಗಿ ವಕ್ಫ್ ಆಸ್ತಿಯನ್ನಾಗಿ ದಾಖಲು ಮಾಡಿರುವುದನ್ನು ದಾಖಲೆ ಸಹಿತ ಮನವರಿಕೆ ಮಾಡಿ, ವಕ್ಫ್ ಸೊತ್ತು ಮಾಡಿರುವುದನ್ನು ತೆರವುಗೊಳಿಸಲು ಒತ್ತಾಯಿಸಿದರು.ಅಲ್ಲದೆ, ಇದೀಗ ಜಿಲ್ಲಾಡಳಿತ ತಯಾರಿಸಿದ ಯಾದಿ ಪ್ರಕಾರ ವಿಜಯಪುರ…

Read More

ಅ.18 ರಂದು ಸಚಿವ ಸಂಪುಟದಲ್ಲಿ ಚರ್ಚಿಸಿದ ನಂತರ ಸೂಕ್ತ ತೀರ್ಮಾನ ಎಂದ ಸಿಎಂ ಸಿದ್ದರಾಮಯ್ಯ ಬೆಂಗಳೂರು: ಜಾತಿ ಗಣತಿ ಎಂದು ಜನಪ್ರಿಯವಾಗಿರುವ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿ ಜಾರಿಗೊಳಿಸುವ ಬಗ್ಗೆ ಅ.18 ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಹೇಳಿದ್ದಾರೆ.ಜಾತಿ ಗಣತಿ ವರದಿ ಕುರಿತು ಇಂದು ಹಿಂದುಳಿದ ವರ್ಗಗಳ ಸಚಿವರು ಮತ್ತು ಶಾಸಕರೊಂದಿಗೆ ಸಭೆ ನಡೆಸಿದ ನಂತರ ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸಂಸದರಿಗೂ ಈ ಸಭೆಗೆ ಆಹ್ವಾನಿಸಲಾಗಿತ್ತು. ಆದರೆ ಯಾರೂ ಬಂದಿಲ್ಲ. ಬಿಜೆಪಿ ಎಂಎಲ್ ಸಿ ಎನ್ ರವಿಕುಮಾರ್ ಸೇರಿದಂತೆ ಸುಮಾರು 30 ಶಾಸಕರು ಸಭೆಯಲ್ಲಿ ಪಾಲ್ಗೊಂಡಿದ್ದರು ಮತ್ತು ಸಾಮಾಜಿಕ ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯನ್ನು ಅಂಗೀಕಾರ ಮಾಡಿ, ಜಾರಿಗೆ ತರಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದ್ದಾರೆ ಎಂದರು.ಇಡೀ ದೇಶದಲ್ಲಿ ಇಂತಹ ಸಮೀಕ್ಷೆ ನಡೆಸಿದ ಪ್ರಥಮ ರಾಜ್ಯ ಕರ್ನಾಟಕ. ಅಕ್ಟೋಬರ್ 18 ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿದ…

Read More

ದಿ.ವಿಜಯ ಸಿಂಧೂರ ರವರಿಗೆ ನಾಡಿನ ಕಲಾವಿದರಿಂದ “ಚಿತ್ರ ನಮನ ಕಲಾಶಿಬಿರ & ಕಲಾಕೃತಿಗಳ ಪ್ರದರ್ಶನ” ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರದ ಕ್ಯಾನವಾಸ್ ಆರ್ಟ್ ಫೌಂಡೇಷನ್ ಹಾಗೂ ಸಿದ್ದಲಿಂಗ ಫೈನ್ ಆರ್ಟ್ ಸೊಸೈಟಿ ಆಯೋಜಿಸಿದ ಇತ್ತೀಚಿಗೆ ನಿಧನರಾದ ಜಮಖಂಡಿಯ ಹೆಸರಾಂತ ಹಿರಿಯ ಕಲಾವಿದರಾಗಿದ್ದ ದಿ.ವಿಜಯ ಸಿಂಧೂರ ರವರಿಗೆ ನಾಡಿನ ಕಲಾವಿದರಿಂದ “ಚಿತ್ರ ನಮನ ಕಲಾಶಿಬಿರ ಹಾಗೂ ದಿ. ಶ್ರೀ ವಿಜಯ ಸಿಂಧೂರ ಅವರ ಮೂಲ ಕಲಾಕೃತಿಗಳ ಪ್ರದರ್ಶನ” ರವಿವಾರ ನಗರದ ಪ್ರವಾಸೋಧ್ಯಮ ಇಲಾಖೆಯ ಸರಕಾರಿ ಆರ್ಟಗ್ಯಾಲರಿಯಲ್ಲಿ ನಡೆಯಿತು.ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿದ ಮಹಿಳಾ ವಿ.ವಿ. ಪ್ರಾಧ್ಯಾಪಕ ಡಾ.ವಿಷ್ಣು ಎಂ. ಶಿಂದೆ ಅವರು, ಕಲಾವಿದರು ನಾಡಿನ ಸಂಪತ್ತು. ಕಲಾವಿದರು ಹೋದರು ಕಲೆ ಅಜರಾಮರವಾಗಿರುತ್ತದೆ ವಿಜಯ ಸಿಂಧೂರ ಜಮಖಂಡಿಯ ಸಣ್ಣ ಊರಿನಲ್ಲೇ ಇದ್ದು ಇಡಿ ದೇಶದ ಕಲಾಸಕ್ತರ ಗಮನ ಸೆಳೆದವರು. ಜಮಖಂಡಿಯು ವಿಜಯ ಸಿಂಧೂರರ ಮೂಲಕ ದೃಶ್ಯಕಲಾ ಲೋಕದಲ್ಲಿ ತನ್ನ ಛಾಪು ಮೂಡಿಸಿದೆ. ಹಾಗೆ ನಾಡಿನ ಬಹುತೇಕ ಎಲ್ಲ ಪ್ರಶಸ್ತಿ ಗೌರವಗಳಿಗೆ ಭಾಜನರಾದ ಸಿಂಧೂರರವರು ಉತ್ತರ ಕರ್ನಾಟಕದ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಉತ್ತರ ವಲಯ ಬೆಳಗಾವಿಯಲ್ಲಿ ಜರುಗಿದ ವಲಯ ಮಟ್ಟದ ಪೋಲಿಸ ಕರ್ತವ್ಯ ಕೂಟದಲ್ಲಿ ಇಂಡಿ ಸಿ.ಪಿ.ಐ ಗ್ರಾಮಾಂತರ ಮಲ್ಲಿಕಾರ್ಜುನ ಡಪ್ಪಿನ ರವರಿಗೆ ಆರು ಚಿನ್ನದ ಪದಕಗಳು ಲಭಿಸಿವೆ.ಸ್ಪರ್ಧೇಯಲ್ಲಿ ವಿಜಯಪುರ, ಬಾಗಲಕೋಟ, ಧಾರವಾರ ಗದಗ ಮತ್ತು ಬೆಳಗಾವಿ ಜಿಲ್ಲೆ ಪೋಲಿಸ ಅಧಿಕಾರಿಗಳು ಭಾಗವಹಿಸಿದ್ದರು.ಕಳೆದ ವರ್ಷವೂ ಕೂಡ ಡಪ್ಪಿನ ರವರು ಆರು ಚಿನ್ನದ ಪಡೆದಿದ್ದರು. ಇದು ಎರಡನೆಯ ಬಾರಿ ಅವರಿಗೆ ಆರು ಚಿನ್ನದ ಪದಕ ಪಡೆದಿದ್ದಾರೆ.ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಪೋಲಿಸ್ ಡ್ಯೂಟಿ ಮೀಟ್ ಪೋಲಿಸರ ಶ್ರೇಷ್ಠತೆಗೆ ವೇಗವರ್ಧಕ, ಮತ್ತು ಪ್ರತಿಷ್ಠಿತ ಸ್ಪರ್ಧೇಯಾಗಿದೆ. ಈ ಸ್ಪರ್ಧೆ ಪೋಲಿಸ ಸಿಬ್ಬಂದಿಯನ್ನು ಒಟ್ಟುಗೂಡಿಸುತ್ತದೆ. ಮತ್ತು ಈ ವಾರ್ಷೀಕ ಕಾರ್ಯಕ್ರಮವು ಅಧಿಕಾರಿಗಳಿಗೆ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ಜ್ಞಾನ ವಿನಿಮಯ ಮತ್ತು ಸೌಹಾರ್ಧತೆ ಯನ್ನು ಬೆಳೆಸಲು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಸ್ಪರ್ಧೇ ಕಾರ್ಯಾಚರಣೆ ಹೆಚ್ಚಿಸುವದಲ್ಲದೆ ಭಾರತೀಯ ಪೋಲಿಸ ಪಡೆಯೊಳಗೆಗ ಬಾಂದವ್ಯ ಹೆಚ್ಚಿಸುತ್ತದೆ.ದೈಹಿಕ ಸಾಮರ್ಥ್ಯ, ಮಾಕ್ಸಮನ್ ಶೀಫ್,ಅಡೆತಡೆ ಕೋರ್ಸು, ಜ್ಞಾನ ವಿನಿಮಯ,ವೃತ್ತಿಪರ ಅಭಿವೃದ್ದಿ, ಸ್ಥೈರ್ಯ ವರ್ಧಕ, ಸಾರ್ವಜನಿಕ ಇಮೇಜ ವರ್ಧನೆ,…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಗಣಪತಿ ಚೌಕ್ ದಲ್ಲಿರುವ ಗಣೇಶ ದೇವಸ್ಥಾನದ ಗಾಜಿಗೆ ಕಲ್ಲೆಸೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಧಿತ ಆರೋಪಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಿ, ಈ ಕೃತ್ಯದ ಹಿಂದಿರುವ ಶಕ್ತಿಗಳನ್ನು ಬಯಲಿಗೆ ಎಳೆಯಬೇಕು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಒತ್ತಾಯಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಶಾಂತವಾಗಿರುವ ನಮ್ಮ ವಿಜಯಪುರ ನಗರದಲ್ಲಿ ಶಾಂತಿ ಕದಡಬೇಕು, ಕೋಮು ಗಲಭೆ ಸೃಷ್ಟಿಸಲೆಂದೆ ನಗರದ ಗಣಪತಿ ಚೌಕ್ ದಲ್ಲಿರುವ ಹಿಂದೂಗಳ ಆರಾಧ್ಯದೈವ ಗಣೇಶ ದೇವಸ್ಥಾನಕ್ಕೆ ಕಲ್ಲೆಸೆದು, ಗಾಜು ಒಡೆದು ಹಾಕುವ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೆಲಸ ಮಾಡಿರುವುದು ಖಂಡನೀಯ.ದೇವಸ್ಥಾನಕ್ಕೆ ಕಲ್ಲೆಸೆದ ಆರೋಪಿಗಳು ಅಪ್ರಾಪ್ತರಾಗಿದ್ದರೆ, ಇವರ ಹಿಂದಿನ ಶಕ್ತಿಗಳು ಯಾವವು? ರಾಜಕೀಯ ವ್ಯಕ್ತಿಗಳ ಕೈವಾಡವಿದೆಯೇ? ಗಲಭೆ ಸೃಷ್ಟಿಸುವ ಸಂಘಟನೆಗಳ ಕುಮ್ಮಕ್ಕು ಇದೆಯೇ? ಸತ್ಯ ಹೊರ ಬರಬೇಕೆಂದರೆ, ಬಂಧಿತ ಆರೋಪಿಗಳನ್ನು ಮಂಪರು ಪರೀಕ್ಷೆ ನಡೆಸಬೇಕು. ಇವರ, ಇವರ ಸಂಬಂಧಿಗಳು, ಗೆಳೆಯರು ಮತ್ತು ಇವರು ವಾಸಿಸುವ ಟಕ್ಕೆಯಲ್ಲಿ ಯಾರ ಯಾರ ಜೊತೆ ಸಂಪರ್ಕ…

Read More