Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಜಯದ ಮೊದಲ ಹೆಜ್ಜೆ ಧೈರ್ಯ

ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 15, 2026

ಜು.೧೮ ರಂದು “ಅಂಕುರ” ಸ್ವಾಗತ ಕಾರ್ಯಕ್ರಮ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಕಲಾವಿದರು ನಾಡಿನ ಸಂಪತ್ತು :ಡಾ.ವಿಷ್ಣು ಶಿಂದೆ
(ರಾಜ್ಯ ) ಜಿಲ್ಲೆ

ಕಲಾವಿದರು ನಾಡಿನ ಸಂಪತ್ತು :ಡಾ.ವಿಷ್ಣು ಶಿಂದೆ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ದಿ.ವಿಜಯ ಸಿಂಧೂರ ರವರಿಗೆ ನಾಡಿನ ಕಲಾವಿದರಿಂದ “ಚಿತ್ರ ನಮನ ಕಲಾಶಿಬಿರ & ಕಲಾಕೃತಿಗಳ ಪ್ರದರ್ಶನ”

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ವಿಜಯಪುರದ ಕ್ಯಾನವಾಸ್ ಆರ್ಟ್ ಫೌಂಡೇಷನ್ ಹಾಗೂ ಸಿದ್ದಲಿಂಗ ಫೈನ್ ಆರ್ಟ್ ಸೊಸೈಟಿ ಆಯೋಜಿಸಿದ ಇತ್ತೀಚಿಗೆ ನಿಧನರಾದ ಜಮಖಂಡಿಯ ಹೆಸರಾಂತ ಹಿರಿಯ ಕಲಾವಿದರಾಗಿದ್ದ ದಿ.ವಿಜಯ ಸಿಂಧೂರ ರವರಿಗೆ ನಾಡಿನ ಕಲಾವಿದರಿಂದ “ಚಿತ್ರ ನಮನ ಕಲಾಶಿಬಿರ ಹಾಗೂ ದಿ. ಶ್ರೀ ವಿಜಯ ಸಿಂಧೂರ ಅವರ ಮೂಲ ಕಲಾಕೃತಿಗಳ ಪ್ರದರ್ಶನ” ರವಿವಾರ ನಗರದ ಪ್ರವಾಸೋಧ್ಯಮ ಇಲಾಖೆಯ ಸರಕಾರಿ ಆರ್ಟಗ್ಯಾಲರಿಯಲ್ಲಿ ನಡೆಯಿತು.
ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿದ ಮಹಿಳಾ ವಿ.ವಿ. ಪ್ರಾಧ್ಯಾಪಕ ಡಾ.ವಿಷ್ಣು ಎಂ. ಶಿಂದೆ ಅವರು, ಕಲಾವಿದರು ನಾಡಿನ ಸಂಪತ್ತು. ಕಲಾವಿದರು ಹೋದರು ಕಲೆ ಅಜರಾಮರವಾಗಿರುತ್ತದೆ ವಿಜಯ ಸಿಂಧೂರ ಜಮಖಂಡಿಯ ಸಣ್ಣ ಊರಿನಲ್ಲೇ ಇದ್ದು ಇಡಿ ದೇಶದ ಕಲಾಸಕ್ತರ ಗಮನ ಸೆಳೆದವರು. ಜಮಖಂಡಿಯು ವಿಜಯ ಸಿಂಧೂರರ ಮೂಲಕ ದೃಶ್ಯಕಲಾ ಲೋಕದಲ್ಲಿ ತನ್ನ ಛಾಪು ಮೂಡಿಸಿದೆ. ಹಾಗೆ ನಾಡಿನ ಬಹುತೇಕ ಎಲ್ಲ ಪ್ರಶಸ್ತಿ ಗೌರವಗಳಿಗೆ ಭಾಜನರಾದ ಸಿಂಧೂರರವರು ಉತ್ತರ ಕರ್ನಾಟಕದ ಮೊದಲ ರಾಷ್ಟ್ರೀಯ ಪ್ರಶಸ್ತಿ ಪಡೆದ ಚಿತ್ರಕಲಾವಿದರಾಗಿದ್ದರು ಎಂದು ಸ್ಮರಿಸಿದರು.
ವಿಜಯಪುರದ ಹಿರಿಯ ಕಲಾವಿದ ಪಿ.ಎಸ್. ಕಡೇಮನಿ ಅವರು ತಮ್ಮ ಮತ್ತು ಸಿಂಧೂರ ಅವರ ಒಡನಾಟದ ಬಗ್ಗೆ ಮತ್ತು ಅವರ ಕಲಾಕೃತಿಗಳ ಬಗ್ಗೆ ಭಾವಚಿತ್ರ ರಚನೆಯ ತಂತ್ರಗಾರಿಗೆಯ ಅವರ ಕೌಶಲ್ಯದ ಬಗ್ಗೆ ವಿವರವಾಗಿ ಮಾತನಾಡಿದರು.
ಕ್ಯಾನವಾಸ್ ಆರ್ಟ ಫೌಂಡೇಶನ್ ಕಾರ್ಯದರ್ಶಿ ಮತ್ತು ಕಲಾವಿದ ರಮೇಶ ಚವ್ಹಾಣ, ಸಿಂಧೂರ ಮತ್ತು ತಮ್ಮ ಕಲಾ ಬದುಕಿನ ಬಾಂಧವ್ಯ ಕಳೆದ 25 ಕ್ಕೂ ಹೆಚ್ಚು ವರ್ಷಗಳಿಂದ ಇತ್ತು, ನನ್ನ ಕಲಾಕೃತಿಗಳಿಗೆ ಮಾರ್ಗದರ್ಶನ ಮಾಡುತ್ತ ಯುವ ಕಲಾವಿದರು ಬೆಳೆದರೆ ತಮಗೆ ಅತ್ಯಂತ ಖುಷಿಯ ಸಂಗತಿ, ನೀವೆಲ್ಲ ಪ್ರಾಮಾಣಿಕವಾಗಿ ಕಲಾ ಸೇವೆ ಮಾಡಿ ಎಂದು ನಮ್ಮನ್ನು ಹುರುದುಂಬಿಸಿ ತಾವು ಕಲಾಕೃತಿ ರಚಿಸುತ್ತಿದ್ದರು ಎಂದು ತಮ್ಮ ಮನದಾಳದ ಮಾತುಗಳ ಮೂಲಕ ನುಡಿ ನಮನ ಸಲ್ಲಿಸಿದರು.
ಹಿರಿಯ ಕಲಾವಿದ ವಿದ್ಯಾಧರ ಸಾಲಿ ವಿಜಯ ಸಿಂಧೂರ ಅವರ ಕುರಿತು ರಚಿಸಿದ ಕವನ ವಾಚಿಸಿದರು.
ಹಲವಾರು ಕಲಾವಿದರು ತಮ್ಮ ಮಾತುಗಳ ಮೂಲಕ ನುಡಿ ನಮನ ಸಲಿಸಿದರು.
ವೇದಿಕೆಯಲ್ಲಿ ಕಲಾ ಪೋಷಕರಾದ ವಿಶ್ವನಾಧ ಬೀಳಗಿ, ಬೆಂಗಳೂರಿನ ಬಾಲಾಜಿ ಫ್ರೇಮ್ ಮಾಲಿಕರಾದ ಪ್ರಶಾಂತ ಹೆಗಡೆ, ಜಮಖಂಡಿಯ ರಾಜು ವಿಜಯ ಸಿಂಧೂರ, ಸೋಮನಾಥ ಸಿಂಧೂರ, ಪಿ.ಎಸ್.ಕಡೇಮನಿ, ಡಾ ವಿಷ್ಣು ಎಂ ಶಿಂದೆ, ರಮೇಶ ಚವ್ಹಾಣ, ಲಿಂಗರಾಜ ಕಾಚಾಪೂರ ಇದ್ದರು.
ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರಾದ ಎಂ.ಕೆ.ಪತ್ತಾರ. ಎಂ.ಆರ್. ಸೌದಾಗರ, ಡಾ.ಶಶಿಕಲಾ ಹೂಗಾರ ಯಾಮಿನಿ ಶಹಾ, ಮಹಾದೇವಿ ಪಾಟೀಲ, ರಾಜೇಶ್ವರಿ ಮೋಪಗಾರ, ಶ್ರೀಶೈಲ ಹೂಗಾರ, ನಿಂಗಣ್ಣ ಕೇರಿ, ಮಹಾಂತೇಶ ಸ್ವಾಮಿ, ವಿ.ವಿ.ಹಿರೆಮಠ, ಉಪಸ್ಥಿತರಿದ್ದರು.

ಕಲಾಕೃತಿಗಳ ಮೂಲಕ ಗೌರವ ನಮನ

ಇದಕ್ಕೂ ಮೊದಲು ನಡೆದ ಚಿತ್ರ ನಮನ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಕಲಾವಿದರುಗಳಾದ ವಿಜಯಪುರದ ಪಿ.ಎಸ್.ಕಡೇಮನಿ, ವಿದ್ಯಾಧರ ಸಾಲಿ, ರಮೇಶ ಚವ್ಹಾಣ, ಬಿ.ಎಸ್.ಪಾಟೀಲ, ಎ.ಜಿ.ನೆಲ್ಲಗಿ, ಶಿವಣ್ಣ ಗೊಳಸಂಗಿ, ರಾಘವೇಂದ್ರ ಪಾಟೀಲ, ಎಸ್. ಟಿ. ಕೆಂಭಾವಿ. ಶಿವಾನಂಧ ಅಥಣಿ, ಹಂಪಿಯ ಕೆ. ಕೆ. ಮಕಾಳಿ, ಜಮಖಂಡಿಯ ಜಿ. ವಿ. ಹಂಪಣ್ಣವರ, ಎಚ್. ಎಂ.ವಿಶ್ವನಾಥ ಧಾರವಾಡದ ಎನ್. ಆರ್. ನಾಯ್ಕರ್, ಕುಮಾರ ಕಾಟೆನಹಳ್ಳಿ, ಕಲಬುರಗಿಯ ಬಸವರಾಜ ಕಮಾಜಿ, ಬಾಗಲಕೋಟೆಯ ಶಿವು ಹೂಗಾರ ಇಲಕಲ್ಲಿನ ಚಂದ್ರಕಾಂತ ಸರೋದೆ, ಶ್ರೀಶೈಲ್ ಧೋತ್ರೆ, ಎಸ್. ಎನ್.ಪೋಚಗುಂಡಿ ತಮ್ಮ ಕಲಾಕೃತಿಗಳನ್ನು ರಚಿಸುವ ಮೂಲಕ ವಿಜಯ ಸಿಂಧೂರರವರಿಗೆ ಕಲಾಕೃತಿಗಳ ಮೂಲಕ ಗೌರವ ನಮನಗಳನ್ನು ಸಲ್ಲಿಸಿದರು.

ರಮೇಶ ಚವ್ಹಾಣ
ಕಾರ್ಯದರ್ಶಿ ಕ್ಯಾನವಾಸ್ ಆರ್ಟ್ ಫೌಂಡೇಷನ್, ವಿಜಯಪುರ

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಜಯದ ಮೊದಲ ಹೆಜ್ಜೆ ಧೈರ್ಯ

ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 15, 2026

ಜು.೧೮ ರಂದು “ಅಂಕುರ” ಸ್ವಾಗತ ಕಾರ್ಯಕ್ರಮ

ವಿಜಯಪುರ ಜಿಲ್ಲೆಯಲ್ಲಿ ೧೯,೦೭,೫೮೩ ಗಣತಿ ನಮೂನೆ ವಿತರಣೆ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಜಯದ ಮೊದಲ ಹೆಜ್ಜೆ ಧೈರ್ಯ
    In ವಿಶೇಷ ಲೇಖನ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 15, 2026
    In ದಿನಪತ್ರಿಕೆ
  • ಜು.೧೮ ರಂದು “ಅಂಕುರ” ಸ್ವಾಗತ ಕಾರ್ಯಕ್ರಮ
    In (ರಾಜ್ಯ ) ಜಿಲ್ಲೆ
  • ವಿಜಯಪುರ ಜಿಲ್ಲೆಯಲ್ಲಿ ೧೯,೦೭,೫೮೩ ಗಣತಿ ನಮೂನೆ ವಿತರಣೆ
    In (ರಾಜ್ಯ ) ಜಿಲ್ಲೆ
  • ಯೋಜಿತ ಕುಟುಂಬ ಯೋಜನೆಯಿಂದ ಸುಂದರ ಭವಿಷ್ಯ
    In (ರಾಜ್ಯ ) ಜಿಲ್ಲೆ
  • ಜು.೧೬ ರಂದು ರೈತ ಸಂಘದಿಂದ ಬೃಹತ್ ಪ್ರತಿಭಟನೆ
    In (ರಾಜ್ಯ ) ಜಿಲ್ಲೆ
  • ಸಂಪೂರ್ಣ ನಿಷ್ಕ್ರೀಯವಾಗಿರುವ ಕಾಂಗ್ರೆಸ್ ಸರ್ಕಾರ
    In (ರಾಜ್ಯ ) ಜಿಲ್ಲೆ
  • ಏತ ನೀರಾವರಿ ಯೋಜನೆಗಳಿಗೆ ನೀರು ಬಿಡಲು ವಿಳಂಬ :ಬೆಳ್ಳುಬ್ಬಿ
    In (ರಾಜ್ಯ ) ಜಿಲ್ಲೆ
  • ವಿಶಿಷ್ಟವಾಗಿ ಜರುಗಿದ ಪಂಡರಪುರ ಸೈಕಲ್ ವಾರಿ ಕಾರ್ಯಕ್ರಮ
    In (ರಾಜ್ಯ ) ಜಿಲ್ಲೆ
  • ಮೋಹನ್ ಬಾಗವತ್ ರನ್ನು ಬರಮಾಡಿಕೊಂಡ ಉಮೇಶ ಕಾರಜೋಳ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.